Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ರೆಸ್ಟೋರೆಂಟ್ ಶೈಲಿಯ ರುಚಿಕರ ಚಿಕನ್ ನೂಡಲ್ಸ್ ರೆಸಿಪಿ
ನೀವು ಉಪಹಾರಮಂದಿರಕ್ಕೆ ಹೋದಾಗಲೆಲ್ಲ ಮೊದಲು ನೀವು ಮಾಡುವ ಕೆಲಸ ಮೆನು ಕಾರ್ಡ್ ತೆಗೆದುಕೊಳ್ಳುತ್ತಿರಲ್ಲವೆ? ಒಂದು ವೇಳೆ ನೀವು ಚೈನೀಸ್ ಆಹಾರ ಪ್ರಿಯರಾಗಿದ್ದಲ್ಲಿ ಮತ್ತು ನಿಮಗೆ ರೆಸ್ಟೋರೆಂಟ್ ಶೈಲಿಯು ಇಷ್ಟವಾಗಿದ್ದಲ್ಲಿ, ನಾವು ನಿಮಗಾಗಿ ಒಂದು ಸರ್‌ಪ್ರೈಸ್ ನೀಡುತ್ತಿದ್ದೇವೆ. ನಾವು ಇಂದು ನಿಮ್ಮೊಂದಿಗೆ ಒಂದು ಸುಲಭವಾದ ಚಿಕನ್ ನೂಡಲ್ ರೆಸಿಪಿಯನ್ನು ಹಂಚಿಕೊಳ್ಳುತ್ತಿದ್ದೇವೆ.
ಇದು ಸಂಪೂರ್ಣವಾಗಿ ಹೊಟೇಲ್ ಶೈಲಿಯಲ್ಲಿರುತ್ತದೆ. ಇದನ್ನು ಮಾಡಿ ಅದರ ರುಚಿ ನೋಡಿದಾಗ ನೀವೇ ವಿಸ್ಮಯಗೊಳ್ಳುತ್ತೀರಿ. ಒಂದು ವಿಚಾರ ನೆನಪಿನಲ್ಲಿಡಬೇಕು.ಈ ಚಿಕನ್ ನೂಡಲ್ಸ್ ಮಾಡುವಾಗ ಎಲ್ಲಾ ಮಸಾಲೆ ಪದಾರ್ಥಗಳನ್ನು ಸರಿಯಾದ ಪ್ರಮಾಣದಲ್ಲಿ ಬಳಸಬೇಕು. ಒಂದು ವೇಳೆ ನೀವು ಇವುಗಳನ್ನು ಸರಿಯಾದ ಪ್ರಮಾಣದಲ್ಲಿ ಬಳಸಿಕೊಳ್ಳದಿದ್ದಲ್ಲಿ, ನಿಮಗೆ ನೀವು ಬಯಸುವ ಹೊಟೇಲ್ ರುಚಿಯು ಸಿಗುವುದಿಲ್ಲ.
ಈ ಸುಲಭವಾದ ನೂಡಲ್ಸ್ ರೆಸಿಪಿಯನ್ನು ನಾವು ನಿಮಗೆ ತಿಳಿಸಿದ ಕೂಡಲೆ ನಿಮ್ಮ ಬಾಯಿಯಲ್ಲಿ ನೀರೂರುವುದು ಸತ್ಯ ಎಂದು ನಾವು ಭಾವಿಸುತ್ತೇವೆ. ಬನ್ನಿ ಇನ್ನು ತಡಮಾಡದೆ ಈ ಹೊಟೇಲ್ ಶೈಲಿಯ ಚಿಕನ್ ನೂಡಲ್ಸ್ ರೆಸಿಪಿಯನ್ನು ತಿಳಿದುಕೊಳ್ಳೋಣ. ರುಚಿಯಾದ ಅಣಬೆ ನೂಡಲ್ಸ್ ಫ್ರೈ

ಪ್ರಮಾಣ: 4 ಜನರಿಗೆ ಬಡಿಸಬಹುದು
ತಯಾರಿಕೆಗೆ ತಗುಲುವ ಸಮಯ: 15 ನಿಮಿಷಗಳು
ಅಡುಗೆ ಮಾಡಲು ತಗುಲುವ ಸಮಯ: 10 ನಿಮಿಷಗಳು
ಬೇಕಾಗುವ ಪದಾರ್ಥಗಳು
*ಬೋನ್‍ಲೆಸ್ ಚಿಕನ್ - 1 ಕಪ್ (ಎರಡು ಭಾಗಗಳಾಗಿ ಕತ್ತರಿಸಿ)
*ಚಿಕನ್ ಹಕ್ಕಾ ನೂಡಲ್ಸ್ - 2 ಕಪ್‍ಗಳು
*ಕ್ಯಾರೆಟ್‍ಗಳು - 1 ಕಪ್ (ಕತ್ತರಿಸಿದಂತಹುದು)
*ಪೆಪ್ಪರ್ - ಒಂದು ಚಿಟಿಕೆಯಷ್ಟು
*ಹಸಿರು ಸ್ಪ್ರಿಂಗ್ ಈರುಳ್ಳಿ - 1 ಕಪ್ (ಕತ್ತರಿಸಿದಂತಹುದು)
*ಲವಂಗ - 1 ಕಪ್ (ಕತ್ತರಿಸಿದಂತಹುದು)
*ಹಸಿ ಮೆಣಸಿನಕಾಯಿ - 1 ಕಪ್ (ಉದ್ದಕ್ಕೆ ಕತ್ತರಿಸಿದಂತಹುದು)
*ಸೋಯಾ ಸಾಸ್ - 1/2 ಟೀ.ಚಮಚ
*ರೆಡ್ ಚಿಲ್ಲಿ ಸಾಸ್ - 1/4 ಟೀ.ಚಮಚ
*ವಿನೇಗರ್ - 1 ಟೀ.ಚಮಚ
*ಟೊಮೇಟೊ ಸಾಸ್ - 1 ಟೀ.ಚಮಚ
*ಒಂದು ಚಿಟಿಕೆ ಮೆಣಸು ಪುಡಿ
*ರುಚಿಗೆ ತಕ್ಕಷ್ಟು ಉಪ್ಪು
*ಎಣ್ಣೆ - 2 ಟೀ.ಚಮಚ
ಹಕ್ಕಾ ರೈಸ್ ನೂಡಲ್ಸ್: ಚೈನೀಸ್ ರೆಸಿಪಿ
ತಯಾರಿಸುವ ವಿಧಾನ
1. ಮೊದಲು ಕೋಳಿ ಮಾಂಸವನ್ನು ಚೆನ್ನಾಗಿ ತೊಳೆದುಕೊಳ್ಳಿ. ಅದು ಮುಗಿದ ಮೇಲೆ ಇದನ್ನು ಅಗತ್ಯವಾದಷ್ಟು ನೀರು ಹಾಕಿ 6-7 ನಿಮಿಷಗಳ ಕಾಲ ಬೇಯಿಸಿ.
2. ಇನ್ನು ನಂತರ ನೀರನ್ನು ಬಸಿದು ಪಕ್ಕದಲ್ಲಿಡಿ.
3. ಈಗ ನೂಡಲ್ಸ್ ಅನ್ನು ನೀರಿನಲ್ಲಿ ಬೇಯಿಸಿ, ನೋಡಲ್ಸ್ ಬೆಂದನಂತರ ನೀರನ್ನು ಬಸಿದು ಪಕ್ಕದಲ್ಲಿಡಿ.
4. ಈಗ ಒಂದು ದೊಡ್ಡ ನಾನ್-ಸ್ಟಿಕ್ ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಕಾಯಿಸಿ.
5. ಕಾದ ಎಣ್ಣೆಗೆ ಕತ್ತರಿಸಿದ ಬೆಳ್ಳುಳ್ಳಿ ಮತ್ತು ಹಸಿ ಮೆಣಸಿನಕಾಯಿಗಳನ್ನು ಹಾಕಿ. ಕೆಲವು ಕ್ಷಣದವರೆಗೆ ಇವುಗಳನ್ನು ಚೆನ್ನಾಗಿ ತಿರುವಿಕೊಡಿ.
6. ಇದಕ್ಕೆ ಈರುಳ್ಳಿ, ಕ್ಯಾರೆಟ್ ಮತ್ತು ಮೆಣಸನ್ನು ಹಾಕಿ ಉರಿಯಿರಿ.
7. ಈಗ ಈ ಪದಾರ್ಥಗಳನ್ನು ಮಧ್ಯಮ ಗಾತ್ರದ ಉರಿಯಲ್ಲಿ ಚೆನ್ನಾಗಿ ಫ್ರೈ ಮಾಡಿ.
8. ಇದಾದ ಮೇಲೆ ಈ ಪದಾರ್ಥಗಳಿಗೆ ಉಪ್ಪು ಮತ್ತು ವೈಟ್ ಪೆಪ್ಪರ್ ಪುಡಿಯನ್ನು ಹಾಕಿ. ಚೆನ್ನಾಗಿ ಕಲೆಸಿ ಕೊಡಿ.
9. ನಂತರ ಇದಕ್ಕೆ ಬೆಂದ ಕೋಳಿ ಮಾಂಸ, ಸೋಯಾ ಸಾಸ್, ಚಿಲ್ಲಿ ಸಾಸ್ ಮತ್ತು ಟೊಮೇಟೊ ಸಾಸ್ ಹಾಕಿ ಚೆನ್ನಾಗಿ ಕಲೆಸಿಕೊಡಿ.
10. ಕೋಳಿ ಮಾಂಸವನ್ನು ತರಕಾರಿಗಳ ಜೊತೆಗೆ ಬೆರೆಸಿ.
11. ಯಾವಾಗ ತರಕಾರಿಗಳು ಅರ್ಧ ಬೆಂದಿವೆ ಎಂದು ತೋರುತ್ತದೆಯೋ, ಆಗ ಅದಕ್ಕೆ ಬೆಂದ ನೂಡಲ್ಸ್ ಬೆರೆಸಿ.
12. ಚೆನ್ನಾಗಿ ಕಲೆಸಿ ಕೊಡಿ. ಕೊನೆಯದಾಗಿ ಇದಕ್ಕೆ ಹಸಿರು ಸ್ಪ್ರಿಂಗ್ ಈರುಳ್ಳಿಗಳನ್ನು ಬೆರೆಸಿ, ನಂತರ ನೂಡಲ್ಸ್ ಅನ್ನು ಬೆರೆಸಿ



Click it and Unblock the Notifications
