Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಚಿಕನ್ ಭಟ್ಟಿ-ಚಾಟ್ಸ್ ರೆಸಿಪಿ
ಈ ವೀಕೆಂಡ್ ಗೆ ಏನಾದರೂ ನಾನ್ ವೆಜ್ ಸ್ಪೆಷೆಲ್ ತಯಾರಿಸಬೇಕೆಂದು ಅಂದುಕೊಂಡಿದ್ದರೆ ಈ ಚಾಟ್ ರೆಸಿಪಿ ಟ್ರೈ ಮಾಡಬಹುದು. ಈ ಚಾಟ್ ರೆಸಿಪಿಯಲ್ಲಿ ಮೊದಲು ಚಿಕನ್ ಮಸಾಲೆ ಜೊತೆ ಬೇಯಿಸಿ, ನಂತರ ಚಾಟ್ ತಯಾರಿಸಲಾಗುವುದು.
ಈ ರೆಸಿಪಿಗೆ ಬಳಸುವ ಮಸಾಲೆ ಹಾಗೂ ಚಾಟ್ ಸಾಮಾಗ್ರಿಗಳಿಂದ ಇದು ತಿನ್ನಲು ತುಂಬಾ ರಚಿಕರವಾಗಿರುತ್ತದೆ. ಇದನ್ನು ಟ್ರೈ ಮಾಡಬೇಕೆಂದು ಅನಿಸಿದರೆ ರೆಸಿಪಿ ನೋಡಿ ಇಲ್ಲಿದೆ:

ಮಸಾಲೆ ಸಾಮಾಗ್ರಿಗಳು:
* ಕೊತ್ತಂಬರಿ ಬೀಜ ಅರ್ಧ ಚಮಚ
* ಮೆಂತೆ ಬೀಜ ಅರ್ಧ ಚಮಚ
* ಕರಿಮೆಣಸಿನ ಪುಡಿ ಅರ್ಧ ಚಮಚ
* ಗರಂ ಮಸಾಲ ಅರ್ಧ ಚಮಚ
* ದುಂಡು ಮೆಣಸು 1
* ಜೀರಿಗೆ ಅರ್ಧ ಚಮಚ
* ಕೆಂಪು ಮೆಣಸಿನ ಪುಡಿ 1 ಚಮಚ
ಚಾಟ್ಸ್ ಸಾಮಾಗ್ರಿಗಳು:
* ಮೂಳೆಯಿಲ್ಲದ ಸಾಮಾನ್ಯ ಗಾತ್ರದ ಚಿಕನ್ ತುಂಡು 10
* ನಿಂಬೆ ಹಣ್ಣು 1
* ಶುಂಠಿ ಪೇಸ್ಟ್ 1 ಚಮಚ
* ಈರುಳ್ಳಿ 1
* ಟೊಮೆಟೊ 1
* ಸೌತೆಕಾಯಿ 1 (ಕತ್ತರಿಸಿದ್ದು)
* ಪುದೀನಾ 2 ಎಲೆ
* ಕರಿಮೆಣಸಿನ ಪುಡಿ ಅರ್ಧ ಚಮಚ
* ಬ್ಲ್ಯಾಕ್ ಸಾಲ್ಟ್
* ಎಣ್ಣೆ
ತಯಾರಿಸುವ ವಿಧಾನ:
1. ಮಸಾಲೆ ಸಾಮಾಗ್ರಿಗಳಲ್ಲಿ ಹೇಳಿರುವ ಎಲ್ಲಾ ವಸ್ತುಗಳನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣನೆ ರುಬ್ಬಿಕೊಳ್ಳಬೇಕು.
2. ನಂತರ ಚಿಕನ್ ತುಂಡುಗಳನ್ನು ಈ ಮಸಾಲೆಯನ್ನು ಮಿಶ್ರಣ ಮಾಡಿ ಸ್ವಲ್ಪ ಉಪ್ಪು ಹಾಕಿ, ನಿಂಬೆ ರಸ ಹಿಂಡಿ ಅರ್ಧ ಗಂಟೆ ಕಾಲ ಇಡಬೇಕು.
3. ಈಗ ಪಾತ್ರೆಯಲ್ಲಿ ಎಣ್ಣೆಯನ್ನು ಬಿಸಿಮಾಡಿ ಅದರಲ್ಲಿ ಚಿಕನ್ ತುಂಡುಗಳನ್ನು ಹಾಕಿ ಕಡಿಮೆ ಉರಿಯಲ್ಲಿ 10-15 ನಿಮಿಷ ಬೇಯಿಸಿ.
4. ಚಿಕನ್ ಬೆಂದ ನಂತರ ಅದನ್ನು ತಟ್ಟೆಯಲ್ಲಿ ಹಾಕಿ ತರಕಾರಿಗಳನ್ನು ಸ್ಟೈಲಾಗಿ ಕತ್ತರಿಸಿ ತಟ್ಟೆಯಲ್ಲಿಟ್ಟು ಚಾಟ್ ಮಸಾಲ, ಕರಿ ಮೆಣಸಿನ ಪುಡಿ ಹಾಗೂ ಬ್ಲ್ಯಾಕ್ ಸಾಲ್ಟ್ ಅನ್ನು ಅದರ ಮೇಲೆ ಉದುರಿಸಿದರೆ ಸರ್ವ್ ಮಾಡಲು ಚಿಕನ್ ಬಾಟಿ ಚಾಟ್ ರೆಡಿ.



Click it and Unblock the Notifications
