Latest Updates
-
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ!
ಎಗ್ ಫ್ರೆೃಡ್ ರೈಸ್‌ಎಲ್ಲರಿಗೂ ಪ್ರಿಯ!
ದಿನಕ್ಕೊಂದು ಮೊಟ್ಟೆ ತುಂಬುವುದು ನಿಮ್ ಹೊಟ್ಟೆ! ಮೊಟ್ಟೆ ಪ್ರಿಯರಿಗಾಗಿ...
- ಉಮಾ ರಾವ್
ಬೇಕಾಗುವ ಸಾಮಗ್ರಿಗಳು : ಬೇಯಿಸಿದ ಮೊಟ್ಟೆಗಳು -5
ತುರಿದ ಹಸಿ ಕೊಬ್ಬರಿ -ಅರ್ಧ ಕಪ್
ಈರುಳ್ಳಿ-1
ಹಸಿ ಶುಂಠಿ ಮತ್ತು ಬೆಳ್ಳುಳ್ಳಿ
ಬಾಸುಮತಿ ಅಕ್ಕಿ -2 ಕಪ್
ಚೆಕ್ಕೆ, ಲವಂಗ, ಗಸಗಸೆ
ಹಸಿ ಮೆಣಸಿನಕಾಯಿ -5
ಯಾಲಕ್ಕಿ
ಧನಿಯಾ ಪುಡಿ
ಜೀರಿಗೆ ಪುಡಿ
ಅರಿಶಿಣನ ಪುಡಿ 1/4 ಟೀ ಚಮಚ
ಮಾಡುವ ವಿಧಾನ:
1.ಒಲೆಯ ಮೇಲೆ ಬಾಣಲೆಯಿಟ್ಟು ಅದರಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ. ಮೊದಲೇ ಹೆಚ್ಚಿಕೊಂಡಿದ್ದ ಈರುಳ್ಳಿ ಮತ್ತು ಹಸಿ ಮೆಣಸಿನಕಾಯಿಗಳನ್ನು ಅದರಲ್ಲಿ ಹುರಿಯಿರಿ.
2.ಹುರಿದ ಮೇಣಸಿನಕಾಯಿ, ಈರುಳ್ಳಿ, ತುರಿದ ಹಸಿ ಕೊಬ್ಬರಿ, ಶುಂಠಿ, ಬೆಳ್ಳುಳ್ಳಿ, ಅರಿಶಿಣ ಪುಡಿ, ಧನಿಯಾ ಪುಡಿಯನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ರುಬ್ಬಿ. ರುಬ್ಬುವಾಗ ಅಗತ್ಯವೆನ್ನಿಸಿದರೇ ಸ್ವಲ್ಪ ನೀರು ಸೇರಿಸಬಹುದು.
3.ಬಾಣಲೆಗೆ ಎರಡು ಟೀ ಚಮಚ ಎಣ್ಣೆಯನ್ನು ಹಾಕಿ. ಸ್ವಲ್ಪ ಕಾದ ನಂತರ ಜೀರಿಗೆ, ಯಾಲಕ್ಕಿ(ಸಿಪ್ಪೆ ತೆಗೆಯಬೇಡಿ), ಚಕ್ಕೆ, ಸುವಾಸನಾ ಪತ್ರೆಯನ್ನು ಸೇರಿಸಿ. ಕೆಲವು ನಿಮಿಷಗಳ ಕಾಲ ಎಲ್ಲವನ್ನು ಹುರಿದುಕೊಳ್ಳಿ. ಮೊದಲೇ ರುಬ್ಬಿಟ್ಟಿದ್ದ ಮಸಾಲೆ ಪದಾರ್ಥಗಳಿಗೆ ಇದನ್ನು ಸೇರಿಸಿ.
4.ಪಾತ್ರೆಯಾಂದಕ್ಕೆ ಬಾಸುಮತಿ ಅಕ್ಕಿಗೆ ಮತ್ತು ನೀರನ್ನು ಹಾಕಿ ಅನ್ನವನ್ನು ಸಿದ್ಧಪಡಿಸಿ. ಎಲ್ಲಾ ಮಸಾಲೆಯನ್ನು ಅದಕ್ಕೆ ಸೇರಿಸಿ ಹದಿನೈದು ನಿಮಿಷ ಒಲೆಯ ಮೇಲಿಡಿ. ಮೊದಲೇ ಬೇಯಿಸಿಟ್ಟಿದ್ದ ಮೊಟ್ಟೆಯನ್ನು ಚಿಕ್ಕಚಿಕ್ಕ ಹೋಳುಗಳಾಗಿ ಕತ್ತರಿಸಿ ಪಾತ್ರೆಗೆ ಸೇರಿಸಿ. ಆಮೇಲೆ ತಟ್ಟೆಗೆ ಎಗ್ ಫ್ರೆೃಡ್ ರೈಸ್ ಬಡಿಸಿಕೊಂಡು ರುಚಿ ನೋಡಿ!



Click it and Unblock the Notifications
