Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ವೀಕ್ ಎಂಡ್ ಸ್ಪೆಷಲ್ -ಎಗ್ ರೋಲ್

ಬೇಕಾಗುವ ಸಾಮಾಗ್ರಿಗಳು
1. 4 ಮೊಟ್ಟೆ
2. ಹೆಚ್ಚಿಟ್ಟುಕೊಂಡ ಈರುಳ್ಳಿ 2
3. ಬೆಳ್ಳುಳ್ಳಿ ಮತ್ತು ಶುಂಠಿ ಪೇಸ್ಟ್ ಒಂದೊಂದು ಚಮಚ
4. ಕತ್ತರಿಸಿದ ಟೊಮೆಟೋ 1
5. ಜೀರಿಗೆ ಪುಡಿ 1 ಚಮಚ
6. ಪುಡಿ ಮೆಣಸು 1 ಚಮಚ
7. ಕತ್ತರಿಸಿದ ಹಸಿ ಮೆಣಸು 3
8. ಚಕ್ರ ಮೊಗ್ಗು 2
9. ಲವಂಗ 4
10. ಚಕ್ಕೆ 4
11. ಏಲಕ್ಕಿ 4
12. ಕೊತ್ತಂಬರಿ ಸೊಪ್ಪು
13. ಎಣ್ಣೆ 2 ಚಮಚ
14. ತುಪ್ಪ ಅಥವಾ ಬೆಣ್ಣೆ 1 ಚಮಚ
14. ಮೈದಾ ಹಿಟ್ಟು 2 ಕಪ್
15 .ನೀರು 1/2 ಕಪ್
ಮಾಡುವ ವಿಧಾನ
1 ಮೊದಲು ರೊಟ್ಟಿ ಅಥವಾ ಪರೋಟ ಮಾಡಿ ಇಡಿ.
2 ಹಿಟ್ಟನ್ನು ನೀರಿನಲ್ಲಿ ಕಲಸಿ ತೆಳುವಾದ ರೊಟ್ಟಿ ಮಾಡಿ
3 ತುಪ್ಪ ಅಥವಾ ಬೆಣ್ಣೆಯನ್ನು ಬಾಣಲೆಗೆ ಹಾಕಿ ಅದರಲ್ಲಿ ರೊಟ್ಟಿಯನ್ನು ಬಿಸಿ ಮಾಡಿ.
4 ಒಂದು ಬಟ್ಟಲುನಲ್ಲಿ ಮೊಟ್ಟೆ ಹಾಕಿ ಅದಕ್ಕೆ ರುಚಿಗೆ ತಕ್ಕ ಉಪ್ಪು , ಸ್ವಲ್ಪ ಮೆಣಸಿನ ಪುಡಿ, 1/2ದಷ್ಟು ಕತ್ತರಿಸಿದ ಹಸಿ ಮೆಣಸಿನ ಕಾಯಿ ಹಾಕಿ ಚೆನ್ನಾಗಿ ಕದಡಿ
5 ನಂತರ ಬಾಣಲೆಗೆ ಎಣ್ಣೆ ಹಾಕಿ ಅದು ಬಿಸಿಯಾದಾಗ ಚಕ್ಕೆ, ಲವಂಗ, ಚಕ್ರಮೊಗ್ಗು, ಏಲಕ್ಕಿ, ಜೀರಿಗೆ ಹಾಕಿ 1/2 ನಿಮಿಷ ಬಿಸಿ ಮಾಡಿ.
6 ಅದಕ್ಕೆ ಈರುಳ್ಳಿ ಹಾಕಿ ಕಂದು ಬಣ್ಣ ಬರುವರೆಗೂ ಉರಿಯಿರಿ. ನಂತರ ಅದಕ್ಕೆ ಬೆಳ್ಳುಳ್ಳಿ ಮತ್ತು ಶುಂಠಿಯ ಪೇಸ್ಟ್ ಹಾಕಿ ಸ್ವಲ್ಪ ಹೊತ್ತು ಬೇಯಿಸಿ
7 ಅದಕ್ಕೆ ಟೊಮೆಟೋವನ್ನು ಹಾಕಿ ಅದಕ್ಕೆ ಹಸಿಮೆಣಸನ್ನು ಹಾಕಿ ಉರಿಯಿರಿ
8 ಈಗ ಅದಕ್ಕೆ ಕದಡಿದ ಮೊಟ್ಟೆಯನ್ನು ಹಾಕಿ 1-2 ನಿಮಿಷ ಬೇಯಿಸಿ, ಅದಕ್ಕಿಂತ ಹೆಚ್ಚು ಹೊತ್ತು ಬೇಯಿಸ ಬೇಡಿ.
9 ಅದನ್ನು ಪರೋಟ ಅಥವಾ ರೊಟ್ಟಿಯ ಮಧ್ಯೆದಲ್ಲಿ ಇಟ್ಟು ರೋಲ್ ಮಾಡಿದರೆ ರುಚಿಕಟ್ಟಾದ ಎಗ್ ರೋಲ್ ರೆಡಿ.



Click it and Unblock the Notifications
