Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಎಗ್ ಬುರ್ಜಿ ಹೀಗೆ ಮಾಡೋದು ಹೇಗೆ ಗೊತ್ತಾ !
ಮೊಟ್ಟೆಯಿಂದ ಅನೇಕ ಖಾದ್ಯಗಳನ್ನು ತಯಾರಿಸಲಾಗುತ್ತೆ. ಆದರೆ ಈ ಎಗ್ ಬುರ್ಜಿ ರೆಸಿಪಿ ಅದರಲ್ಲಿ ವಿಶೇಷ. ನಿಮಿಷಗಳಲ್ಲಿ ತಯಾರಿಸಬಹುದಾದ ಈ ಎಗ್ ಬುರ್ಜಿ ಒಳ್ಳೆಯ ಬ್ರೇಕ್ ಫಾಸ್ಟ್ ಕೂಡ ಹೌದು. ಎಗ್ ಬುರ್ಜಿ ಮಾಡೋದು ಕೂಡ ತುಂಬಾ ಸುಲಭ ಮತ್ತು ಇದಕ್ಕೆ ವಿಶೇಷ ಪದಾರ್ಥಗಳೇನೂ ಬೇಕಾಗಿಲ್ಲ. ಮನೆಯಲ್ಲೇ ಸಿಗುವ ಅಡುಗೆ ಪದಾರ್ಥಗಳಿಂದ ಎಗ್ ಬುರ್ಜಿ ಬೇಗನೆ ರೆಡಿಯಾಗುತ್ತೆ.
ಎಗ್ ಬುರ್ಜಿ ಮಾಡಲು ಬೇಕಾಗುವ ಪದಾರ್ಥಗಳು:
* 4 ಮೊಟ್ಟೆ
* 1 ಕತ್ತರಿಸಿದ ಈರುಳ್ಳಿ ಮತ್ತು 1 ಟೊಮೊಟೊ
* 4 ಎಸಳು ಬೆಳ್ಳುಳ್ಳಿ (ಬೇಕಿದ್ದರೆ)
* 1\2 ಕತ್ತರಿಸಿದ ದುಂಡು ಮೆಣಸಿನ ಕಾಯಿ (ಬೇಕಿದ್ದರೆ)
* 2 ಹಸಿರು ಮೆಣಸಿನ ಕಾಯಿ
* 1 ಚಮಚ ಕೆಂಪು ಮೆಣಸಿನ ಪುಡಿ
* 1 ಚಮಚ ಜೀರಿಗೆ ಪುಡಿ
* ಒಂದು ಚಮಚ ಗರಂ ಮಸಾಲ (ಮೆಣಸು,ಚೆಕ್ಕೆ, ಲವಂಗ, ಏಲಕ್ಕಿ ಪುಡಿ ಇದ್ದರೆ ಚೆಂದ)
* ಉಪ್ಪು, ಎಣ್ಣೆ, ಕೊತ್ತಂಬರಿ
ಎಗ್ ಬುರ್ಜಿ ತಯಾರಿಸುವ ವಿಧಾನ:
ಒಂದು ಬಟ್ಟಲಿನಲ್ಲಿ ಮೊಟ್ಟೆಗಳನ್ನು ಒಡೆದು ಚೆನ್ನಾಗಿ ಕದಡಬೇಕು. ಅದಕ್ಕೆ ಉಪ್ಪು, ಕೆಂಪು ಮೆಣಸಿನ ಪುಡಿ, ಕತ್ತರಿಸಿದ ಮೆಣಸಿನಕಾಯಿ, ಕೊತ್ತಂಬರಿ, ಜೀರಿಗೆ (ಮೆಣಸು, ಚೆಕ್ಕೆ, ಲವಂಗ, ಯಾಲಕ್ಕಿ) ಪುಡಿಹಾಕಿ ಮತ್ತೊಮ್ಮೆ ಚೆನ್ನಾಗಿ ಕದಡಬೇಕು. ಅಗಲವಾದ ಬಾಣಲೆಯಲ್ಲಿ ಎಣ್ಣೆ ಹಾಕಿ ಈರುಳ್ಳಿಯನ್ನು ಕೆಂಪಗೆ ಹುರಿದುಕೊಳ್ಳಬೇಕು. ನಂತರ ಬೆಳ್ಳುಳ್ಳಿ ಹಾಕಿ, ಕತ್ತರಿಸಿದ ಟೊಮೊಟೊ ಮತ್ತು ದುಂಡು ಮೆಣಸಿನ ಕಾಯಿಯನ್ನು ಬೆರೆಸಿ ತಿರುಗಿಸಬೇಕು.
ಸ್ವಲ್ಪವೇ ಉಪ್ಪು ಬೆರೆಸಿ 3 ನಿಮಿಷ ಬೇಯಿಸಬೇಕು. ಈಗ ಕದಡಿಕೊಂಡಿದ್ದ ಮೊಟ್ಟೆಯನ್ನು ಈ ಮಿಶ್ರಣಕ್ಕೆ ಬೆರೆಸಿ ನಿರಂತರವಾಗಿ ತಿರುಗಿಸುತ್ತಲೇ ಇರಬೇಕು. ಇದನ್ನು ತುಂಬಾ ಹೊತ್ತು ಹುರಿದರೆ ರುಚಿ ಕೆಡಬಹುದು. ಆದ್ದರಿಂದ ಬೇಕಾದಷ್ಟು ಬೇಯಿಸಿ ಕೆಳಗಿಳಿಸಬೇಕು. ಈಗ ರುಚಿಕರವಾದ ಎಗ್ ಬುರ್ಜಿ ತಿನ್ನಲು ರೆಡಿಯಾಗಿದೆ.
ಬಿಸಿ ಬಿಸಿಯಾದ ಎಗ್ ಬುರ್ಜಿ ಎಲ್ಲದಕ್ಕೂ ಒಳ್ಳೆ ಕಾಂಬಿನೇಶನ್. ರೋಟಿ, ಚಪಾತಿ, ಬ್ರೆಡ್ ಮಾತ್ರವಲ್ಲ, ಅನ್ನಕ್ಕೂ ಇದು ಡಬಲ್ ಸ್ವಾದ ನೀಡುತ್ತದೆ.



Click it and Unblock the Notifications
