Latest Updates
-
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ
ಆರೋಗ್ಯಕರ ಮತ್ತು ರುಚಿಯಾದ ಮೀನಿನ ಟಿಕ್ಕಾ
ಮೀನಿಂದ ತಯಾರಿಸಿದ ಆಹಾರ ರುಚಿ ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು. ಮೀನಿನಲ್ಲಿ ಒಳ್ಳೆಯ ಕೊಬ್ಬಿನಂಶ ಮತ್ತು ಅಧಿಕ ಪೋಷಕಾಂಶ ಇರುವುದರಿಂದ ವೈದ್ಯರು ಕೂಡ ಇದನ್ನು ತಿನ್ನುವಂತೆ ಸಲಹೆ ನೀಡುತ್ತಾರೆ. ಮೀನಿನ ಆಹಾರವನ್ನು ನಾನಾ ಬಗೆಯ ರುಚಿಯಲ್ಲಿ ತಯಾರಿಸಬಹುದು. ಇವತ್ತು ನಾವು ಮೀನು ಟಿಕ್ಕಾ ತಯಾರಿಸುವ ವಿಧಾನ ತಿಳಿಯೋಣ:

ತಯಾರಿಸಲು ಬೇಕಾಗುವ ಸಾಮಾಗ್ರಿಗಳು:
* 1/2 ಕೆಜಿ ಮೀನಿನ ತುಂಡುಗಳು (ಯಾವ ಮೀನು ಬೇಕಾದರೂ ಆಗಬಹುದು)
* 150 ಗ್ರಾಂ ವನಸ್ಪತಿ
* 1 ಚಮಚ ಅಜ್ವೈನ್
* 2 ಚಮಚ ಜೀರಿಗೆ ಪುಡಿ
* 2ಚಮಚ ಗರಂ ಮಸಾಲ
* 1 ಚಮಚ ಬೆಳ್ಳುಳ್ಳಿ ಪೇಸ್ಟ್
* 2 ಚಮಚ ಮೈದಾ
* ನಿಂಬೆರಸ
* 5 ಚಮಚ ಪುದೀನಾ ಅಥವಾ ಕೊತ್ತಂಬರಿ ಪೇಸ್ಟ್
* 1/2 ಚಮಚ ಕರಿಮೆಣಸಿನ ಪುಡಿ
* ಕತ್ತರಿಸಿದ ಈರುಳ್ಳಿ 1
* 60 ಗ್ರಾಂ ಮೊಸರು
* 1/4 ಚಮಚ ಅರಿಶಿಣ ಪುಡಿ
* ಖಾರಕ್ಕೆ ತಕ್ಕ ಕೆಂಪು ಮೆಣಸಿನ ಪುಡಿ
* ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನ:
1. ಬೆಳ್ಳುಳ್ಳಿ ಪೇಸ್ಟ್, ಅಜ್ವೈನ್, ಜೀರಿಗೆ ಪುಡಿ, ಗರಂ ಮಸಾಲ ಪುಡಿ, ಸ್ವಲ್ಪ ನಿಂಬೆ ರಸ, ಪುದೀನಾ ಅಥವಾ ಕೊತ್ತಂಬರಿ ಪೇಸ್ಟ್, ಉಪ್ಪು, ಕೆಂಪು ಮೆಣಸಿನ ಪುಡಿ,ಮ ಕರಿಮೆಣಸಿನ ಪುಡಿ, ಅರಿಶಿಣ ಪುಡಿಯನ್ನು ಮೊಸರಿನಲ್ಲಿ ಹಾಕಿ ಮಿಶ್ರ ಮಾಡಬೇಕು.
2. ಈ ಮಿಶ್ರಣಕ್ಕೆ ಮೀನಿನ ತುಂಡುಗಳನ್ನು ಹಾಕಿ ಮಿಶ್ರ ಮಾಡಿ 3 ಗಂಟೆ ಕಾಲ ಇಡಬೇಕು.
3. ಈಗ ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಿಸಿ ಅದರಲ್ಲಿ ಮೀನಿನ ತುಂಡುಗಳನ್ನು ಹಾಕಿ ಕರಿದು ತೆಗೆಯಬೇಕು.
4. ಈಗ ತಯಾರಿಸಿದ ಟಿಕ್ಕಾವನ್ನು ತಟ್ಟೆಗೆ ಹಾಕಿ, ಕತ್ತರಿಸಿದ ಈರುಳ್ಳಿ ಮತ್ತು ನಿಂಬೆ ಹಣ್ಣಿನ ತುಂಡುಗಳನ್ನು ಇಟ್ಟು ಬಡಿಸಬೇಕು.



Click it and Unblock the Notifications
