Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಮನೆಯಲ್ಲಿಯೇ ಮಾಡಿ ಎಗ್ ಫ್ರೈಡ್ ರೈಸ್, ಆರೋಗ್ಯವಾಗಿರಿ!

ಬೇಕಾಗುವ ಸಾಮಾಗ್ರಿಗಳು:
* ಮೊಟ್ಟೆ 3
* ಬಾಸುಮತಿ ಅಕ್ಕಿ 2 ಕಪ್
* ಈರುಳ್ಳಿ 1( ಕತ್ತರಿಸಿದ್ದು)
* ಬೆಳ್ಳುಳ್ಳಿ 4 ಎಸಳು
* ಒಂದು ಇಂಚಿನಷ್ಟು ಶುಂಠಿ ( ಜಜ್ಜಿರಬೇಕು)
* ಕ್ಯಾರೆಟ್ 2 ( ಚಿಕ್ಕ ತುಂಡುಗಲಾಗಿ ಕತ್ತರಿಸಿದ್ದು)
* ಬೀನ್ಸ್ 3-4 ( ಕತ್ತರಿಸಿದ್ದು)
* ಅಣಬೆ 3-4 ( ಬೇಕಾದರೆ ಸೇರಿಸಬಹುದು)
* ಹಸಿ ಮಣಸು 3 ( ಕತ್ತರಿಸಿದ್ದು )
* ಕರಿಮೆಣಸಿನ ಪೊಡಿ 1/2 ಚಮಚ
* ಚಕ್ಕೆ 2
* ಜಾಕಾಯಿ ಪತ್ರಿ ಅಥವಾ ಜಾಪತ್ರೆ 1 ಚಮಚ
* ಕೆಂಪು ಮೆಣಸಿನ ಪುಡಿ 1 ಚಮಚ
* ರುಚಿಗೆ ತಕ್ಕ ಉಪ್ಪು
* ಬೆಣ್ಣೆ 1 ಚಮಚ
ತಯಾರಿಸುವ ವಿಧಾನ:
* ತರಕಾರಿಗಳನ್ನು ಕತ್ತರಿಸಿ ಇಡಬೇಕು. ಬಾಸುಮತಿ ಅಕ್ಕಿಯನ್ನು ತೊಳೆದು ಪ್ರತ್ಯೇಕ ಬಟ್ಟಲಿನಲ್ಲಿ ಇಡಬೇಕು.
* ಮೊಟ್ಟೆಗೆ ಸ್ವಲ್ಪ ಉಪ್ಪು ಮತ್ತು ಕರಿಮೆಣಸಿನ ಪುಡಿ ಹಾಕಿ ಚೆನ್ನಾಗಿ ಬೆರೆಸಿ ಅದನ್ನು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಬೇಕು. ಇದನ್ನು ಬಾಸುಮತಿ ಅನ್ನದ ಜೊತೆ ಪುನಃ ಬೇಯಿಸುವುದರಿಂದ ಈಗ ಹೆಚ್ಚಾಗಿ ಬೇಯಿಸಬೇಕಾಗಿಲ್ಲ.
* ಬೆಣ್ಣೆ ಅಥವಾ 1 ಚಮಚ ಎಣ್ಣೆಯನ್ನು ಕುಕ್ಕರಿನಲ್ಲಿ ಹಾಕಬೇಕು. ಅದಕ್ಕೆ ಕರಿಮೆಣಸಿನ ಪುಡಿ, ಚಕ್ಕೆ, ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು.
* ಕತ್ತರಿಸಿದ ತರಕಾರಿಗಳನ್ನು ಮಿಶ್ರ ಮಾಡಿ ಅದನ್ನು ಪ್ರೆಶರ್ ಕುಕ್ಕರಿನಲ್ಲಿರುವ ಈರುಳ್ಳಿ ಜೊತೆ ಬೆರೆಸಿ 3-4 ನಿಮಿಷ ಬೇಯಿಸಬೇಕು. ನಂತರ ಈ ತರಕಾರಿ ಮಿಶ್ರಣಕ್ಕೆ ಕೆಂಪು ಮೆಣಸಿನ ಪುಡಿಯಬ್ಬಯ ಸೇರಿಸಿ ಪುನಃ 2 ನಿಮಿಷ ಬೇಯಿಸಬೇಕು.
* ಈಗ ಬಾಣಲೆಯಲ್ಲಿ ಸ್ವಲ್ಪ ಬಿಸಿಮಾಡಿದ ಮೊಟ್ಟೆಯನ್ನು ಈ ಮಿಶ್ರಣದೊಂದಿಗೆ ಹಾಕಿ ತಿರುಗಿಸಬೇಕು. ಮೊಟ್ಟೆ ಪುಡಿಪುಡಿಯಾದ ಮೇಲೆ ಅದಕ್ಕೆ ಅಕ್ಕಿಯನ್ನು ಹಾಕಿ 4 ಕಪ್ ನೀರು ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ 2 ವಿಶಲ್ ಬರುವವರೆಗೆ ಬೇಯಿಸಿದರೆ ರುಚಿಕರವಾದ ಎಗ್ ಫ್ರೈಡ್ ರೈಸ್ ರೆಡಿ.



Click it and Unblock the Notifications
