For Quick Alerts
ALLOW NOTIFICATIONS  
For Daily Alerts

ನವರಾತ್ರಿ ಉಪವಾಸ ಮಾಡುವವರಿಗಾಗಿ ನವಣೆ ಉಪ್ಪಿಟ್ಟಿನ ರೆಸಿಪಿ

Posted By:
|

ನವರಾತ್ರಿ ಉಪವಾಸ ಮಾಡುವವರು ಅಕ್ಕಿಯಿಂದ ತಯಾರಿಸಿದ ಯಾವುದೇ ಆಹಾರ ಪದಾರ್ಥಗಳನ್ನು ತಿನ್ನಬಾರದು. ಹಣ್ಣುಗಳು ಹಾಗೂ ವ್ರತದ ಆಹಾರಗಳನ್ನಷ್ಟೇ ಸೇವಿಸಬೇಕು. ನವರಾತ್ರಿ ಉಪವಾಸ ಮಾಡುವುದರಿಂದ ದೇವಿಯ ಕೃಪೆಗೆ ಪಾತ್ರರಾಗುವುದು ಮಾತ್ರವಲ್ಲ ಆರೋಗ್ಯಕ್ಕೂ ಪ್ರಯೋಜನಗಳಿವೆ.

millet upma recipe

ನವರಾತ್ರಿ ವ್ರತದ ಸಮಯದಲ್ಲಿ ದೇಹಕ್ಕೆ ಶಕ್ತಿ ದೊರೆಯುವ ಆರೋಗ್ಯಕರ ಆಹಾರ ಸೇವಿಸಬೇಕು. ನಾವಿಲ್ಲಿ ನವಣೆ ಉಪ್ಪಿಟ್ಟು ರೆಸಿಪಿ ನೀಡಿದ್ದೇವೆ, ಇದನ್ನು ವ್ರತ ಪಾಲಿಸುವವರು ಮಾಡಿ ತಿನ್ನಬಹುದಾಗಿದೆ.

ಈ ಉಪ್ಪಿಟ್ಟು ವ್ರತದ ಸಮಯದಲ್ಲಿ ಮಾತ್ರವಲ್ಲ , ತೂಕ ನಿಯಂತ್ರಣಕ್ಕೆ ಡಯಟ್‌ ಮಾಡುವವರೂ ಸೇವಿಸಬಹುದಾಗಿದೆ. ಇದನ್ನು ತಿನ್ನುವುದರಿಂದ ದೇಹಕ್ಕೆ ಒಳ್ಳೆಯ ಪೌಷ್ಠಿಕಾಂಶದ ಆಹಾರ ದೊರೆಯುವುದು, ಮೈ ಫಿಟ್ನೆಸ್‌ ಕೂಡ ಕಾಪಾಡಬಹುದು.

Navaratri Recipe Millet Upma, ನವಣೆ ಉಪ್ಪಿಟ್ಟಿನ ರೆಸಿಪಿ
Navaratri Recipe Millet Upma, ನವಣೆ ಉಪ್ಪಿಟ್ಟಿನ ರೆಸಿಪಿ
Prep Time
30 Mins
Cook Time
30M
Total Time
1 Hours0 Mins

Recipe By: Reena TK

Recipe Type: breakfast

Serves: 2

Ingredients
  • ಬೇಕಾಗುವ ಸಾಮಗ್ರಿ

    * ನವಣೆ 1 ಕಪ್‌

    * ತುಪ್ಪ 2 ಚಮಚ

    * ಜೀರಿಗೆ 1 ಚಮಚ

    * 2 ಲವಂಗ

    * ಏಲಕ್ಕಿ 1

    * ಗೋಡಂಬಿ4-5

    * ಒಣದ್ರಾಕ್ಷಿ 8-10

    ಹಸಿ ಮೆಣಸಿನಕಾಯಿ 1

    * ನೀರು 2 ಕಪ್‌

    ಬಟಾಣಿ 1/4 ಕಪ್

    ನಿಂಬೆರಸ 2 ಚಮಚ

    ಸ್ವಲ್ಪ ಕೊತ್ತಂಬರಿ ಸೊಪ್ಪು

Red Rice Kanda Poha
How to Prepare
  • ಮಾಡುವ ವಿಧಾನ

    * ನವಣೆಯನ್ನು 2-3 ಗಂಟೆಗಳ ನೀರಿನಲ್ಲಿ ನೆನೆ ಹಾಕಿ.

    * ತುಪ್ಪವನ್ನು ಬಿಸಿ ಮಾಡಿ, ಜೀರಿಗೆ , ಲವಂಗ, ಏಲಕ್ಕಿ ಹಾಕಿ.

    * ಈಗ ಗೋಡಂಬಿ, ಬಾದಾಮಿ, ಒಣ ದ್ರಾಕ್ಷಿ ಹಾಕಿ 10 ಸೆಕೆಂಡ್ ಫ್ರೈ ಮಾಡಿ.

    * ಈಗ ಹಸಿ ಮೆಣಸಿನ ಕಾಯಿ ಸೇರಿಸಿ 2-3 ಸೆಕೆಂಡ್ ಫ್ರೈ ಮಾಡಿ, ನೀರು ಹಾಕಿ, ಬಟಾಣಿ (ಹಸಿ ಬಟಾಣಿ) ಹಾಕಿ. ರುಚಿಗೆ ತಕ್ಕ ಉಪ್ಪು ಸೇರಿಸಿ.

    * ನೀರು ಕುದಿಯಲಾರಂಭಿಸಿದಾಗ ನವಣೆ ಸೇರಿಸಿ ಕಡಿಮೆ ಉರಿಯಲ್ಲಿ ಬೇಯಿಸಿ.

    * ಬೆಂದ ಮೇಲೆ ಉರಿಯಿಂದ ಇಳಿಸಿ ನಿಂಬೆರಸ ಸೇರಿಸಿ ಮಿಕ್ಸ್ ಮಾಡಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ನವಣೆ ಉಪ್ಪಿಟ್ಟು ರೆಡಿ.

Instructions
  • ಇದು ತೂಕ ಇಳಿಕೆಗೆ ಪ್ರಯತ್ನಿಸುವವರಿಗೆ ಅತ್ಯುತ್ತಮವಾದ ಬ್ರೇಕ್‌ಫಾಸ್ಟ್‌ ಆಗಿದೆ
Nutritional Information
[ 4.5 of 5 - 15 Users]
Story first published: Saturday, October 9, 2021, 15:16 [IST]
X
Desktop Bottom Promotion