For Quick Alerts
ALLOW NOTIFICATIONS  
For Daily Alerts

ರೆಸಿಪಿ: ಕೀಲುಗಳ ಶಕ್ತಿಗೆ ಸವಿಯಿರಿ ಮಟನ್ ಕಾಲು ಸೂಪ್‌

|

ಅಪ್ಪಟ ಹಳ್ಳಿ ಸೊಗಡಿನ ಮಾಂಸಾಹಾರಿ ಅಡುಗೆಗಳಲ್ಲಿ ಮಟನ್‌ ಕಾಲು ಸೂಪ್‌ ಸಹ ಒಂದು. ಬಾಣಂತಿಯರಿಗೆ ಸೊಂಟ ಭದ್ರವಾಗಲು, ಧನುರ್‌ವಾಯು ಇರುವವರಿಗೆ, ಮಂಡಿನೋವು, ಕೀಲುಗಳ ನೋವು ಇರುವ ಶಾಖಾಹಾರಿಗಳು ತಪ್ಪದೇ ಸೇವಿಸಬೇಕಾದ ರೆಸಿಪಿ ಮಟಲ್‌ ಕಾಲು ಸೂಪ್‌.

ಕ್ಯಾಲ್ಸಿಯಂ, ಪ್ರೋಟಿನ್‌, ಮಿನರಲ್ಸ್‌, ಅಮೀನೋ ಆಸಿಡ್ಸ್‌ ಅಂಶಗಳುಳ್ಳ, ಉರಿಯೂತ, ಅಲರ್ಜಿ ನಿವಾರಕ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ, ಆರೋಗ್ಯಕರ ಕೀಲುಗಳ ಬೆಳವಣಿಗೆಗೆ ಸಹಕಾರಿಯಾದ ಹೀಗೆ ಹಲವಾರು ಆರೋಗ್ಯಕರ ಅಂಶಗಳನ್ನು ಹೊಂದಿರುವ ಮಟನ್‌ ಕಾಲು ಸೂಪು ವಾರಕ್ಕೊಮ್ಮೆ ಸೇವಿಸುವುದು ಉತ್ತಮ.
ಚೆನ್ನಾಗಿ ಬೆಂದ ಕುರಿಯ ಕಾಲಿನಿಂದ ಬರುವ ಅಂಶಗಳು ಆರೋಗ್ಯಕ್ಕೆ ಅತ್ಯುತ್ತಮ ಮದ್ದಿನ ಮೂಲವಾಗಿದೆ.

Mutton Paya Soup

ರುಚಿಯಾದ ಮಟನ್‌ ಕಾಲು ಸೂಪು ಮಾಡುವ ವಿಧಾನ ಹೇಗೆ ಮುಂದೆ ನೋಡಿ:

Mutton Paya Soup/ಮಟನ್ ಕಾಲು ಸೂಪ್‌ ರೆಸಿಪಿ
Mutton Paya Soup/ಮಟನ್ ಕಾಲು ಸೂಪ್‌ ರೆಸಿಪಿ
Prep Time
10 Mins
Cook Time
30M
Total Time
40 Mins

Recipe By: Meghashre Devaraju

Recipe Type: Soup

Serves: 6

Ingredients
  • ಬೇಕಾಗುವ ಪದಾರ್ಥಗಳು

    ಕುರಿಮರಿಯ ಕಾಲುಗಳು 8

    ನುಣ್ಣಗೆ ಕತ್ತರಿಸಿದ ಈರುಳ್ಳಿ 3

    ನುಣ್ಣಗೆ ಕತ್ತರಿಸಿದ ಟೊಮೆಟೊ 1

    ಶುಂಠಿ ಪೇಸ್ಟ್ 1/2 ಚಮಚ

    ಬೆಳ್ಳುಳ್ಳಿ ಪೇಸ್ಟ್ 1/2 ಚಮಚ

    ಗರಂ ಮಸಾಲ ಪುಡಿ 1/2 ಚಮಚ

    ಏಲಕ್ಕಿ 2

    ಅರಿಶಿನ 1/2 ಚಮಚ

    ಕರಿಮೆಣಸು 1 ಚಮಚ

    ಎಣ್ಣೆ 2 ಚಮಚ

    ಹಸಿರು ಮೆಣಸಿನಕಾಯಿ 2

    ಕೆಂಪು ಮೆಣಸಿನ ಪುಡಿ 1 ಚಮಚ

    ಕೊತ್ತಂಬರಿ ಸೊಪ್ಪು 1 ಬಟ್ಟಲು

    ಕಡಲೆಪಪ್ಪು/ಹುರಿಗಡಲೆ 1 1/2 ಚಮಚ

    ತೆಂಗಿನ ಕಾಯಿ 2 ಚಮಚ

    ರುಚಿಗೆ ತಕ್ಕಷ್ಟು ಉಪ್ಪು

    ಅಗತ್ಯವಿರುವಂತೆ ನೀರು

Red Rice Kanda Poha
How to Prepare
  • ಮಟನ್ ಕಾಲು ಸೂಪ್ ತಯಾರಿಸುವ ವಿಧಾನ

    * ಮಟನ್‌ ಕಾಲನ್ನು ಚೆನ್ನಾಗಿ ನೀರಿನಲ್ಲಿ ತೊಳೆದು ಪ್ರೆಶರ್‌ ಕುಕ್ಕರ್‌ಗೆ ಹಾಕಿ ಇದಕ್ಕೆ ಅರಿಶಿನ ಪುಡಿ, ಏಲಕ್ಕಿ, ಉಪ್ಪು ಮತ್ತು ಕರಿಮೆಣಸನ್ನು ಸೇರಿಸಿ. 5 ಕಪ್ ನೀರು ಸುರಿಯಿರಿ ಮತ್ತು ಮಿಶ್ರಣವನ್ನು ಸುಮಾರು 10 ನಿಮಿಷಗಳ ಕಾಲ ಕುಕ್ಕರ್ನಲ್ಲಿ ಬೇಯಿಸಿ. ಕನಿಷ್ಠ 2 ವಿಷಲ್‌.

    * ಹುರಿಗಡಲೆ ಮತ್ತು ತುರಿದ ತೆಂಗಿನಕಾಯಿ ಪೇಸ್ಟ್ ತಯಾರಿಸಿ ಎರಡನ್ನೂ ಒಟ್ಟಿಗೆ ಪುಡಿ ಮಾಡಿ. ಅವುಗಳ ನಯವಾದ ಪೇಸ್ಟ್ ತಯಾರಿಸಿ.

    * ಪ್ಯಾನ್‌ನಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಕತ್ತರಿಸಿದ ಈರುಳ್ಳಿ ಮತ್ತು ಹಸಿ ಮೆಣಸಿನಕಾಯಿ ಸೇರಿಸಿ. ಈರುಳ್ಳಿ ಅರೆ ಪಾರದರ್ಶಕವಾಗುವವರೆಗೆ ಬೇಯಿಸಿ.

    * ನಂತರ ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್‌ ಬೆರೆಸಿ. ಮಿಶ್ರಣವನ್ನು 30 ಸೆಕೆಂಡುಗಳ ಕಾಲ ಹುರಿಯಿರಿ.

    * ಟೊಮ್ಯಾಟೊ, ಕೆಂಪು ಮೆಣಸಿನ ಪುಡಿ ಮತ್ತು ನೆಲದ ತೆಂಗಿನಕಾಯಿ, ಹುರಿಗಡಲೆ ಪೇಸ್ಟ್ ಅನ್ನು ಹಾಕಿ ಎಣ್ಣೆ ಬಿಡುವವರೆಗೂ ಮಿಶ್ರಣವನ್ನು ಬೇಯಿಸಿ.

    * ಈಗ, ಪ್ರೆಶರ್ ಕುಕ್ಕರ್ ತೆರೆಯಿರಿ ಮತ್ತು ಅದಕ್ಕೆ ಸಿದ್ಧವಾದ ಮಸಾಲಾ ಜತೆ ಗರಂ ಮಸಾಲ ಪುಡಿ ಅನ್ನು ಹಾಕಿ.

    * ಇದರ ನಂತರ, ಮತ್ತೆ ಮಿಶ್ರಣವನ್ನು ಸುಮಾರು 10 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಕುಕ್ಕರ್‌ನಲ್ಲಿ ಬೇಯಿಸಿ.

    * ಕುಕ್ಕರ್‌ ತಣ್ಣಗಾದ ನಂತರ ಕೊನೆಯದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಈಗ ಬಿಸಿ, ರುಚಿಯಾದ ಹಾಗೂ ಆರೋಗ್ಯಕರ ಮಟನ್‌ ಕಾಲು ಸೂಪ್‌ ಸವಿಯಲು ಸಿದ್ಧ.

Instructions
  • ಮಟನ್‌ ಕಾಲು ಸೂಪನ್ನು ಬೆಳಗಿನ ಹೊಸತ್ತು ಕಾಫಿ/ಟೀ ಬದಲಿಗೆ ಸೇವಿದರೆ ಹೆಚ್ಚು ಪರಿಣಾಮಕಾರಿ. ಇದನ್ನು ಬಿಸಿಬಿಸಿ ಇಡ್ಲಿ, ದೋಸೆ ಜತೆ ಸವಿದರೆ ಅದ್ಭುತ ರುಚಿಯನ್ನು ನೀಡುತ್ತದೆ.
Nutritional Information
[ 4.5 of 5 - 27 Users]
X
Desktop Bottom Promotion