Just In
Don't Miss
- News
‘ನಕಲಿ ವ್ಯಾಕ್ಸಿನೇಷನ್’ ವಿಡಿಯೋ ವೈರಲ್: ಸ್ಪಷ್ಟನೆ ನೀಡಿದ ಆರೋಗ್ಯ ಸಚಿವ ಸುಧಾಕರ್
- Education
Karnataka SSLC Exam 2021: ಈ ವರ್ಷ ಎಸ್ಎಸ್ಎಲ್ಸಿ ಪರೀಕ್ಷೆಗೆ ಹಾಜರಾತಿ ಕಡ್ಡಾಯ ಇಲ್ಲ
- Finance
ಬಜೆಟ್ 2021: ಜ. 23ರಂದು ಹಲ್ವಾ ಕಾರ್ಯಕ್ರಮ- ಇದೇನು, ಎತ್ತ?
- Movies
ಶಾರುಖ್ ಖಾನ್ ಬಂಗಲೆಯಲ್ಲಿ ವರುಣ್ ಧವನ್ ಮದುವೆ ಸಂಭ್ರಮ
- Sports
ಭಾರತ vs ಆಸೀಸ್: ಕಾಕತಾಳೀಯ, ಕುತೂಹಲಕಾರಿ ಅಂಕಿ-ಅಂಶಗಳು!
- Automobiles
ಕೋವಿಡ್ ವ್ಯಾಕ್ಸಿನ್ ಸಾಗಾಣಿಕೆಗಾಗಿ ಹೊಸ ಮಾದರಿಯ ಟ್ರಕ್ ಸಿದ್ದಪಡಿಸಿದ ಭಾರತ್ ಬೆಂಝ್
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ರೆಸಿಪಿ: ಬಾಯಿ ಚಪ್ಪರಿಸುವಂತೆ ಮಾಡುವ ಮಶ್ರೂಮ್ ಪೆಪ್ಪರ್ ಫ್ರೈ
ನೀವು ಅಣಬೆ ಪ್ರಿಯರಾಗಿದ್ದರೆ ಇಲ್ಲಿದೆ ನೋಡಿ ನೀವು ತುಂಬಾ ಇಷ್ಟಪಡುವ ಮಶ್ರೂಮ್ ಫ್ರೈ ರೆಸಿಪಿ. ಈ ಅಣಬೆ ಫ್ರೈ ತಿನ್ನುತ್ತಿದ್ದರೆ ಎಲ್ಲವನ್ನೂ ಮರೆತು ತಿನ್ನುವುದರಲ್ಲಿ ಬ್ಯುಸಿ ಆಗುವಿರಿ, ಅಷ್ಟೊಂದು ರುಚಿಯಾಗಿರುತ್ತೆ.
ಮಶ್ರೂಮ್ ಪೆಪ್ಪರ್ ಫ್ರೈ ಮಾಡಲು ಭಿನ್ನವಾದ ಮಸಾಲೆಯೇನು ಬೇಕಾಗಿಲ್ಲ, ಸಾಮಾನ್ಯವಾಗಿ ನಮ್ಮೆಲ್ಲರ ಮನೆಯಲ್ಲಿರುವ ಮಸಾಲೆ ಸಾಮಗ್ರಿಗಳೇ ಸಾಕು. ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ.
Recipe By: Reena TK
Recipe Type: Side Dish
Serves: 4
-
ಬೇಕಾಗುವ ಸಾಮಗ್ರಿ
2 ಚಮಚ ತೆಂಗಿನೆಣ್ಣೆ
1 ಚಮಚ ಸಾಸಿವೆ
ಒಂದೂವರೆ ಚಮಚ ಚಿಕ್ಕದಾಗಿ ಕತ್ತರಿಸಿದ ಶುಂಠಿ
ಸ್ವಲ್ಪ ಕರಿಬೇವು
2-3 ಒಣ ಮೆಣಸು
1 ಸಾಧಾರಣ ಗಾತ್ರದ ಈರುಳ್ಳಿ
2 ಚಮಚ ಟೊಮೆಟೊ ಪೇಸ್ಟ್
1 ಚಮಚ ಕೊತ್ತಂಬರಿ ಪುಡಿ
ಅರ್ಧ ಚಮಚ ಜೀರಿಗೆ ಪುಡಿ.
ಅರ್ಧ ಚಮಚ ಖಾರದ ಪುಡಿ
1/4 ಚಮಚ ಗರಂ ಮಸಾಲ
3/4 ಚಮಚ ಕಾಳು ಮೆಣಸಿನ ಪುಡಿ
1 ಚಮಚ ಉಪ್ಪು
500ಗ್ರಾಂ ಅಣಬೆ
-
ಮಾಡುವ ವಿಧಾನ
* ಅಗಲ ಬಾಯಿಯ ದಪ್ಪ ತಳವಿರುವ ದೊಡ್ಡ ಪಾತ್ರೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿಯಾದಾಗ ಸಾಸಿವೆ, ಶುಂಠಿ, ಬೆಳ್ಳುಳ್ಳಿ, ಕರಿಬೇವು, ಒಣ ಮೆಣಸು ಹಾಕಿ 2 ನಿಮಿಷ ಸೌಟ್‌ನಿಂದ ಆಡಿಸಿ. ಆಗ ಪಾತ್ರೆಯಿಂದ ಮಸಾಲೆ ಸುವಾಸನೆ ಬೀರಲಾರಂಭಿಸುತ್ತದೆ.
* ಈಗ ಈರುಳ್ಳಿ ಹಾಕಿ ಅದು ಮೆತ್ತಗಾಗುವವರೆಗೆ ಫ್ರೈ ಮಾಡಿ. ನಂತರ ಟೊಮೆಟೊ ಪೇಸ್ಟ್, ಕೊತ್ತಂಬರಿ ಪುಡಿ, ಗರಂ ಮಸಾಲ ಹಾಕಿ 2-3 ನಿಮಿಷ ಬೇಯಿಸಿ.
*ಈಗ ಅಣಬೆ ಹಾಕಿ 2 ನಿಮಿಷ ಫ್ರೈ ಮಾಡಿ. ನಂತರ ಕಾಳು ಮೆಣಸಿನ ಪುಡಿ, ಉಪ್ಪು ಸೇರಿಸಿ ಅಧಿಕ ಉರಿಯಲ್ಲಿ ಫ್ರೈ ಮಾಡಿ. ಸೌಟ್‌ನಲ್ಲಿ ಆಗಾಗ ಆಡಿಸುತ್ತಲೇ ಇರಬೇಕು. ಅಣಬೆ ಚೆನ್ನಾಗಿ ಬೆಂದ ಮೇಲೆ ಉರಿಯಿಂದ ಇಳಿಸಿ ಸರ್ವ್ ಮಾಡಿ.
- ನೀವು ಬೇಕಿದ್ದರೆ ಸಿಪ್ಪೆ ಸುಲಿದ ಕಾಳು ಮೆಣಸಿನ ಪುಡಿ ಹಾಕಿ ಮಾಡಬಹುದು, ಕಾಳು ಮೆಣಸಿನ ಪುಡಿ ಕೊನೆಗೆ ಹಾಕಿ.
- Calories: - 82kcal
- Protein: - 4g |
- Carbohydrates: - 7g