For Quick Alerts
ALLOW NOTIFICATIONS  
For Daily Alerts

2021ರಲ್ಲಿ ಅತೀ ಹೆಚ್ಚು ಗೂಗಲ್‌ ಮಾಡಿ ನೋಡಿದ ರೆಸಿಪಿಗಳಿವು

Posted By:
|

ನಾವೆಲ್ಲಾ 2021ರ ಕೊನೆಯ ತಿಂಗಳಿನಲ್ಲಿ ಇದ್ದೇವೆ, ವರ್ಷ ಕೊನೆಯ ತಿಂಗಳಿನಲ್ಲಿರುವಾಗ ಅಯ್ಯೋ... ಎಷ್ಟು ಬೇಗ ಒಂದು ವರ್ಷ ಕಳೆದು ಹೋಯ್ತು ಅಂತ ಅಂದುಕೊಳ್ಳುತ್ತೇವೆ ಅಲ್ವಾ? ಈ ಒಂದು ವರ್ಷದಲ್ಲಿ ಹಲವಾರು ಘಟನೆಗಳು ನಡೆದಿರುತ್ತವೆ, ಅವುಗಳಲ್ಲಿ ಕೆಲವೊಂದು ಆಸಕ್ತಿಕರ ವಿಷಯಗಳಿರುತ್ತೇವೆ, ಇನ್ನು ಕೆಲವೊಂದು ವಿಷಯಗಳು ಸಕತ್‌ ಟ್ರೆಂಡ್‌ ಆಗಿರುತ್ತೆ, ಗೂಗಲ್‌ ಕೂಡ ಜನರು 2021ರಲ್ಲಿ ಯಾವ ವಿಷಯದ ಬಗ್ಗೆ ಹೆಚ್ಚು ಸರ್ಚ್ ಮಾಡಿದೆ ಎಂಬ ಮಾಹಿತಿಗಳನ್ನು ಬಿಡುಗಡೆ ಮಾಡಿದೆ.

most searched recipe in google

ಅವುಗಳಲ್ಲಿ ಈ ಲೇಖನದಲ್ಲಿ ಈ ವರ್ಷ ಭಾರತದಲ್ಲಿ ಜನರು ಆಹಾರಗಳಲ್ಲಿ ಯಾವ ಆಹಾರಗಳ ಬಗ್ಗೆ ಹೆಚ್ಚು ಸರ್ಚ್‌ ಮಾಡಿದ್ದಾರೆ ಎಂಬ ಮಾಹಿತಿ ನೀಡಿದೆ, ಆ ಆಹಾರಗಳಾವುವು ಎಂದು ನೋಡೋಣ ಬನ್ನಿ:

1. ಎನೋಕಿ ಮಶ್ರೂಮ್ (ಅಣಬೆ)

1. ಎನೋಕಿ ಮಶ್ರೂಮ್ (ಅಣಬೆ)

ಈ ವರ್ಷ ಸಕತ್‌ ಟ್ರೆಂಡ್ ಸೃಷ್ಟಿಸಿದ ಆಹಾರಗಳಲ್ಲಿ ನಂ.1 ಪಟ್ಟಿಯಲ್ಲಿರುವುದು ಎನೋಕಿ ಮಶ್ರೂಮ್. ಚೈನಾ ಎನೋಕಿ ಮಶ್ರೂಮ್‌ ಭಾರತದಲ್ಲಿಯೂ ಸಾವಯವ ರೀತಿಯಲ್ಲಿ ಬೆಳೆಸಿ ಮಾರಾಟ ಮಾಡುತ್ತಿದ್ದು ಕೆಜಿಗೆ ರೂ 500ರಷ್ಟಿದೆ.

2. ಮೋದಕ

2. ಮೋದಕ

ಲಂಬೋದರನಿಗೆ ಪ್ರಿಯವಾದ ಮೋದಕ ಈ ವರ್ಷ ಅತೀ ಹೆಚ್ಚು ಸರ್ಚ್‌ ಮಾಡಿದ ಆಹಾರಗಳಲ್ಲಿ 2ನೇ ಸ್ಥಾನದಲ್ಲಿದೆ.

 3. ಮೇತಿ ಮಟರ್ ಮಲೈ (ಮೆಂತೆ ಬಟಾಣಿ ಮಲೈ)

3. ಮೇತಿ ಮಟರ್ ಮಲೈ (ಮೆಂತೆ ಬಟಾಣಿ ಮಲೈ)

ಮೇತಿ ಬಟರ್ ಮಲೈ ಹೆಸರು ಕೇಳಿದರೆ ಸಾಕು ಬಾಯಲ್ಲಿ ನೀರೂತ್ತೆ ಅಷ್ಟು ರುಚಿಯಾಗಿರುತ್ತೆ. ಚಪಾತಿ, ಚಾನ್‌ ಜೊತೆ ತಿನ್ನಲು ತುಂಬಾನೇ ರುಚಿಯಾಗಿರುತ್ತೆ, ಜನರು ಈ ರೆಸಿಪಿ ಬಗ್ಗೆ ಅತೀ ಹೆಚ್ಚು ಸರ್ಚ್ ಮಾಡಿದ್ದಾರಂತೆ.

4. ಪಾಲಾಕ್‌

4. ಪಾಲಾಕ್‌

ಇನ್ನು ಜನರು ಅತೀ ಹೆಚ್ಚು ಸರ್ಚ್‌ ಮಾಡಿರುವ ಮತ್ತೊಂದು ಆಹಾರವೆಂದರೆ ಪಾಲಾಕ್‌. ಪಾಲಾಕ್‌ ರೆಸಿಪಿಗಳ ಕುರಿತು ತುಂಬಾ ಜನರು ಸರ್ಚ್‌ ಮಾಡಿದ್ದಾರೆ. ಪಾಲಾಕ್‌ ಬಳಸಿ ನೀವು ನೂರಕ್ಕೂ ಅಧಿಕ ವೆರೈಟಿ ತಯಾರಿಸಬಹುದು.

5. ಚಿಕನ್‌ ಸೂಪ್‌

5. ಚಿಕನ್‌ ಸೂಪ್‌

ಚಿಕನ್ ಸೂಪ್‌ ಕಾಯಿಲೆಯಿಂದ ಬೇಗನೆ ಚೇತರಿಸಿಕೊಳ್ಳಲು ಸಹಕಾರಿ. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ, ಕೊರೊನಾ ಬಂದ ಮೇಲೆ ಜನರು ಆರೋಗ್ಯಕರ ಆಹಾರದತ್ತ ಹೆಚ್ಚು ಗಮನ ನೀಡುತ್ತಿದ್ದಾರೆ. ಆದ್ದರಿಂದ ಏನೋ ಚಿಕನ್‌ ಸೂಪ್‌ ಕುರಿತು ಜನರು ಹೆಚ್ಚು ಸರ್ಚ್‌ ಮಾಡಿದ್ದಾರೆ.

6. ಪೋರ್ನ್‌ ಸ್ಟಾರ್ ಮಾರ್ಟಿನ್‌

6. ಪೋರ್ನ್‌ ಸ್ಟಾರ್ ಮಾರ್ಟಿನ್‌

ಹೆಸರೇ ಏನೋ ಒಂಥರಾ ಭಿನ್ನವಾಗಿದೆ ಅಲ್ವಾ? ಹೌದು ಇಂಥದ್ದೊಂದು ರೆಸಿಪಿ ಇದೆ , ಅಲ್ಲದೆ ಇದು ಸಕತ್‌ ಟ್ರೆಂಡ್‌ ಕೂಡ ಉಂಟು ಮಾಡಿತ್ತು. ಇದೊಂದು ಬಗೆಯ ಕಾಕ್‌ಟೇಲ್‌ ರೆಸಿಪಿಯಾಗಿದೆ. ಫ್ಯಾಷನ್‌ ಫ್ರೂಟ್‌ನ ಪೀಸ್‌ ಈ ಕಾಕ್‌ಟೇಲ್‌ನ ಪ್ರಮುಖ ಆಕರ್ಷಣೆ.

7. ಲಸಗ್ನಾ

7. ಲಸಗ್ನಾ

ಇದನ್ನು ಮೀಟ್‌ ಸಾಸ್‌ ಬಳಸಿ ತಯಾರಿಸಲಾಗುವುದು. ಸಾಸ್‌ನ ಲೇಯರ್‌ನಲ್ಲಿ ನೂಡಲ್ಸ್ ಮತ್ತು ಚೀಸ್ ಇದ್ದು ಸಕತ್‌ ಟೆಸ್ಟಿಯಾಗಿರುತ್ತೆ. ಮನೆಯವರೆಲ್ಲಾ ಸೇರಿದಾಗ ಇದನ್ನು ತಯಾರಿಸಿ ಸೆಲೆಬ್ರೇಟ್ ಮಾಡಬಹುದು ನೋಡಿ.

8. ಕುಕ್ಕೀಸ್

8. ಕುಕ್ಕೀಸ್

ಇನ್ನು ಜನರು ಕುಕ್ಕೀಸ್ ಹೇಗೆ ತಯಾರಿಸುವುದು ಹೇಗೆ ಎಂದು ಕೂಡ ಸರ್ಚ್ ಮಾಡಿದ್ದಾರೆ. ಈ ವರ್ಷ ಲಾಕ್‌ಡೌನ್‌ ಸಮಯದಲ್ಲಿ ಮಕ್ಕಳಿಗೆ ಏನಾದರೂ ಸ್ಪೆಷಲ್‌ ಮಾಡಿಕೊಡಲು ಈ ರೆಸಿಪಿ ಸರ್ಚ್ ಮಾಡಿರಬಹುದು ಅಲ್ವಾ?

9. ಮಟರ್ ಪನ್ನೀರ್

9. ಮಟರ್ ಪನ್ನೀರ್

ಬಟಾಣಿ , ಪನ್ನೀರ್ ಬಳಸಿ ಮಾಡುವ ಈ ಅಡುಗೆ ತುಂಬಾನೇ ರುಚಿಯಾಗಿರುತ್ತೆ ಜೊತೆಗೆ ಇದನ್ನು ಬಿಸಿ ಅನ್ನ, ಚಪಾತಿ , ನಾನ್‌ ರೊಟ್ಟಿ ಇವುಗಳ ಜೊತೆ ಸವಿಯಬಹುದು.

10. ಕಷಾಯ

10. ಕಷಾಯ

ಜನರು ಅತೀ ಹೆಚ್ಚು ಸರ್ಚ್ ಮಾಡಿರುವ ರೆಸಿಪಿಗಳಲ್ಲಿ ಕಷಾಯ ಕೂಡ ಒಂದು. ಹೌದು ಜನರು ರೋಗ ನಿರೋಧಕ ಶಕ್ತಿ ಹೆಚ್ಚಿಸಲು, ಕೆಮ್ಮು-ಶೀತ ಇವುಗಳನ್ನು ತಡೆಗಟ್ಟಲು ಕಷಾಯ ರೆಸಿಪಿ ಹುಡುಕಿದ್ದಾರೆ.

[ of 5 - Users]
X
Desktop Bottom Promotion