Just In
Don't Miss
- Sports
Union Budget 2023: ಕಳೆದ ಬಾರಿಗಿಂತ 700 ಕೋಟಿ ರೂ. ಅಧಿಕ ಪಡೆದ ಕ್ರೀಡಾ ಸಚಿವಾಲಯ
- Movies
Katheyondu Shuruvagide: ಮಾತಂಗಿ ಕೆನ್ನೆಗೆ ಬಿತ್ತು ಏಟು.. ಯುವರಾಜನ ಅವಮಾನ ಸಹಿಸಲ್ಲ ಕೃತಿ!
- Technology
ಈ ಅತ್ಯುತ್ತಮ ಸ್ಮಾರ್ಟ್ಫೋನ್ಗಳು 15,000 ಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- News
Budget 2023; ಅಮೀರ್ ಕೆ ಸಾಥ್, ಗರೀಬ್ ಕಾ ವಿನಾಶ್: ಸಿದ್ದರಾಮಯ್ಯ
- Automobiles
ಸೇನೆಗೆ ಮಾರುತಿ ಜಿಪ್ಸಿ ಬದಲಿಗೆ ಅತ್ಯಾಧುನಿಕ ಹೊಸ ಜಿಮ್ನಿ ಸೇರ್ಪಡೆ ಹೇಗಿರಬಹುದು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮೆಂತೆ ಬಾತ್ ರೆಸಿಪಿ: ಮಾಡುವುದು ಸುಲಭ, ರುಚಿಯೂ ಬೊಂಬಾಟ್
ಕೆಲವೊಮ್ಮೆ ಬೆಳಗ್ಗೆ ಎದ್ದಾಗ ಏನಪ್ಪಾ ಬ್ರೇಕ್‌ಫಾಸ್ಟ್ ಮಾಡುವುದು ಎಂಬುವುದೇ ಅನೇಕರ ಸಮಸ್ಯೆ. ಬೇಗನೆ ಟಿಫಿನ್ ರೆಡಿಯಾಗಬೇಕು, ಅದು ರುಚಿಯಾಗಿರಬೇಕು ಎಂದು ನೀವು ಬಯಸುವುದಾದರೆ ಮೆಂತೆ ಬಾತ್ ಏಕೆ ಮಾಡಬಾರದು. ಹೌದು ಮೆಂತೆ ಸೊಪ್ಪಿನ ಬಾತ್ ರುಚಿಯಲ್ಲಿ ಪಲಾವ್‌ಗಿಂತ ಒಂದು ಕೈ ಮೇಲೇ ... ತುಪ್ಪದ ಸ್ವಾದದ ಜೊತೆ ಇದನ್ನು ಸವಿಯುವುದೇ ಚೆಂದ.
ಮಕ್ಕಳಿಗೂ ಇದು ಖಂಡಿತ ಇಷ್ಟವಾಗುತ್ತದೆ, ಇದನ್ನು ಮಾಡಿದರೆ ಬ್ರೇಕ್‌ಫಾಸ್ಟ್ ಹಾಗೂ ಲಂಚ್ ಬಾಕ್ಸ್ ಎರಡಕ್ಕೂ ಆಗುತ್ತೆ, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:
Recipe By: Reena TK
Recipe Type: Breakfast
Serves: 3
-
ಬೇಕಾಗುವ ಸಾಮಗ್ರಿ
1 ಕಟ್ಟು ಮೆಂತೆ ಸೊಪ್ಪು
1 ಗ್ಲಾಸ್ ಅಕ್ಕಿ
3-4 ಟೊಮೆಟೊ(ಸಾಧಾರಣ ಗಾತ್ರದ್ದು)
2 ಹಸ ಮೆಣಸಿನಕಾಯಿ (ಖಾರ ಇಷ್ಟ ಪಡುವುದಾದರೆ ನಿಮ್ಮ ರುಚಿಗೆ ತಕ್ಕಷ್ಟು)
2 ಚಕ್ಕೆ
4 ಲವಂಗ
1 ಏಲಕ್ಕಿ
ತುಪ್ಪ 2 ಚಮಚ
ಈರುಳ್ಳಿ 2
ಅರ್ಧ ಚಮಚ ಅರಿಶಿಣ ಪುಡಿ
* ಬೆಳ್ಳುಳ್ಳಿ 10-12 ಎಸಲು
* ಒಂದು ಇಂಚಿನಷ್ಟು ದೊಡ್ಡದಿರುವ ಶುಂಠಿ
* ಸ್ವಲ್ಪ ಪುದೀನಾ
* ಸ್ವಲ್ಪ ಕೊತ್ತಂಬರಿ ಸೊಪ್ಪು
-
ಮಾಡುವ ವಿಧಾನ
* ಮೆಂತೆ ಸೊಪ್ಪು ಬಿಡಿಸಿ ತೊಳೆದು ಇಡಿ
* ಈರುಳ್ಳಿ, ಟೊಮೆಟೊ ಕತ್ತರಿಸಿ ಇಡಿ
* ಈಗ ಶುಂಠಿ, ಕೊತ್ತಂಬರಿ ಸೊಪ್ಪು, ಪುದೀನಾ, ಹಸಿ ಮೆಣಸು ಪೇಸ್ಟ್ ಮಾಡಿ ಇಡಿ.
* ಕುಕ್ಕರ್ ಬಿಸಿ ಮಾಡಿ ಅದಕ್ಕೆ 2 ಚಮಚ ತುಪ್ಪ ಹಾಕಿ (ಎಣ್ಣೆ ಬಳಸಬಹುದು, ತುಪ್ಪ ಬಳಸಿದರೆ ರುಚಿ).
* ತುಪ್ಪ ಬಿಸಿಯಾದಾಗ ಚಕ್ಕೆ, ಲವಂಗ, ಏಲಕ್ಕಿ ಹಾಕಿ ನಂತರ ಈರುಳ್ಳಿ ಹಾಕಿ 1 ನಿಮಿಷ ಸೌಟ್‌ನಿಂದ ಆಡಿಸಿ ನಂತರ ಟೊಮೆಟೊ ಹಾಕಿ 2-3 ನಿಮಿಷ ಬಿಡಿ (ಆಗಾಗ ಸೌಟ್‌ನಿಂದ ಆಡಿಸುತ್ತಾ ಇರಬೇಕು) ಟೊಮೆಟೊ ಮೆತ್ತಗಾದ ಮೇಲೆ ಅಕ್ಕಿ ತೊಳೆದು ಹಾಕಿ, ನಂತರ ಮೆಂತೆ ಸೊಪ್ಪು ಸೇರಿಸಿ, ಸ್ವಲ್ಪ ಅರಿಶಿಣ, ರುಚಿಗೆ ತಕ್ಕ ಉಪ್ಪು ಸೇರಿಸಿ, 2 ಲೋಟ ನೀರು ಹಾಕಿ 2 ಸೀಟಿ ಹೊಡೆಸಿದರೆ ರುಚಿ-ರುಚಿಯಾದ ಮೆಂತೆ ಬಾತ್ ರೆಡಿ.
- ನೀವು ಬೇಕಿದ್ದರೆ ಇದಕ್ಕೆ ಗೋಡಂಬಿ ದ್ರಾಕ್ಷಿ ಸೇರಿಸಿದರೆ ಸವಿಯಲು ಮತ್ತಷ್ಟು ರುಚಿ.