For Quick Alerts
ALLOW NOTIFICATIONS  
For Daily Alerts

ಮಟರ್-ಮಶ್ರೂಮ್‌: ಹೆಚ್ಚು ಟೇಸ್ಟಿಯಾಗಿಸುವ ಸಿಂಪಲ್ ರೆಸಿಪಿ

Posted By:
|

ಅಣಬೆ ಮತ್ತು ಬಟಾಣಿ ಕಾಂಬಿನೇಷನ್‌ ಸಾರಿನ ಟೇಸ್ಟ್ ಪ್ರತಿಯೊಬ್ಬರಿಗೂ ಇಷ್ಟವಾಗುವುದು. ಅದರಲ್ಲೂ ರೊಟ್ಟಿ, ಚಪಾತಿ, ನಾನ್ ಈ ರೀತಿಯ ಅಡುಗೆ ಮಾಡಿದಾಗ ನೆಚ್ಚಿಕೊಂಡು ತಿನ್ನಲು ಈ ಮಟರ್‌-ಮಶ್ರೂಮ್ ಗ್ರೇವಿ ಸೂಪರ್‌ ಕಾಂಬಿನೇಷನ್.

Matar Mushroom Recipe

ಇಲ್ಲಿ ನಾವು ಮಟರ್-ಮಶ್ರೂಮ್‌ನ ಹೆಚ್ಚು ಟೇಸ್ಟಿಯಾಗಿ ತಯಾರಿಸುವ ಸಿಂಪಲ್ ರೆಸಿಪಿ ನೀಡಿದ್ದೇವೆ ನೋಡಿ:

Matar Mushroom Recipe, ಮಟರ್-ಮಶ್ರೂಮ್ ರೆಸಿಪಿ
Matar Mushroom Recipe, ಮಟರ್-ಮಶ್ರೂಮ್ ರೆಸಿಪಿ
Prep Time
10 Mins
Cook Time
30M
Total Time
40 Mins

Recipe By: Reena TK

Recipe Type: curry

Serves: 4

Ingredients
  • ಬೇಕಾಗುವ ಸಾಮಗ್ರಿ

    2 ಚಮಚ ಎಣ್ಣೆ

    1/2 ಚಮಚ ಜೀರಿಗೆ

    ಈರುಳ್ಳಿ1-2

    ಟೊಮೆಟೊ 3-4

    ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಚಮಚ

    ಖಾರದ ಪುಡಿ 1 ಚಮಚ

    ಗರಂ ಮಸಾಲ 1/2 ಚಮಚ / ಮೀಟ್ ಮಸಾಲ

    ಅರಿಶಿಣ ಪುಡಿ ಅರ್ಧ ಚಮಚ

    ಅಣಬೆ 100ಗ್ರಾಂ

    ಬಟಾಣಿ 1 ಕಪ್

    ರುಚಿಗೆ ತಕ್ಕ ಉಪ್ಪು

Red Rice Kanda Poha
How to Prepare
  • ಮಾಡುವ ವಿಧಾನ

    * ಪ್ಯಾನ್‌ಗೆ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಜೀರಿಗೆ ಹಾಕಿ.

    * ಜೀರಿಗೆ ಚಟ್‌ಪಟ್ ಶಬ್ದ ಮಾಡುವಾಗ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.

    * ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ.

    * ಅದರ ಹಸಿ ವಾಸನೆ ಹೋಗುವವರೆಗೆ ಫ್ರೈ ಮಾಡಿ.

    * ಈಗ ಟೊಮೆಟೊ ಹಾಕಿ ಅದರ ಮೇಲೆ ಉಪ್ಪನ್ನು ಉದುರಿಸಿ. ಟೊಮೆಟೊ ಮೆತ್ತಗಾಗುವವರೆಗೆ ಬೇಯಿಸಿ.

    * ಅದರ ಮೇಲೆ ಖಾರದ ಪುಡಿ, ಗರಂ ಮಸಾಲ ಅಥವಾ ಮೀಟ್ ಮಸಾಲ ಹಾಕಿ.

    * ಮಿಶ್ರಣದಿಂದ ಎಣ್ಣೆ ಬಿಟ್ಟು ಮೇಲ್ಭಾಗದಲ್ಲಿ ತೇಲುವಷ್ಟು ಹೊತ್ತು ಸೌಟ್‌ನಿಂದ ಆಡಿಸುತ್ತಾ ಇರಿ.

    * ಈಗ ಬಟಾಣಿ, ಅಣಬೆ, ಅರಿಶಿಣ ಹಾಕಿ.

    *ಈಗ ಸಾಧಾರಣ ಉರಿಯಲ್ಲಿ 3-4 ನಿಮಿಷ ಬೇಯಿಸಿ.

    *ನಂತರ ಸ್ವಲ್ಪ ನೀರು ಸೇರಿಸಿ, ಪಾತ್ರೆಯ ಬಾಯಿ ಮುಚ್ಚಿ ಬೇಯಿಸಿ.

    * ಸೌಟ್‌ನಿಂದ ತಳ ಹಿಡಿಯದಂತೆ ಆಗಾಗ ಆಡಿಸುತ್ತಾ ಇರಿ.

    * ಈಗ ಮಿಶ್ರಣ ಬೆಂದ ಮೇಲೆ ಪಾತ್ರೆಯ ಮುಚ್ಚಳ ತೆಗೆದು ಮಿಶ್ರಣ ಸ್ವಲ್ಪ ಗಟ್ಟಿ ಗ್ರೇವಿಯಾಗುವವರೆಗೆ ಬೇಯಿಸಿ. ನಂತರ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದ ಬಟಾಣಿ-ಅಣಬೆಯ ಗ್ರೇವಿ ರೆಡಿ.

Instructions
  • ನೀವು ಅಣಬೆ ಬದಲಿಗೆ ಬಟಾಣಿ ಜೊತೆ ಪನ್ನೀರ್ ಕೂಡ ಹಾಕಿ ಇದೇ ವಿಧಾನದಲ್ಲಿ ಅಡುಗೆ ಮಾಡಬಹುದು. ಇದನ್ನು ಡ್ರೈಯಾಗಿ ಮಾಡಬಯಸುವುದಾದರೆ ನೀರು ಹಾಕದೆ ಬೇಯಿಸಿ.
Nutritional Information
  • ಸರ್ವ್ -
  • ಕೊಬ್ಬು - 2 ಗ್ರಾಂ
  • ಕಾರ್ಬ್ಸ್ - 18ಗ್ರಾಂ
  • ನಾರಿನಂಶ - 5 ಗ್ರಾಂ
[ 4 of 5 - 85 Users]
X
Desktop Bottom Promotion