ನವರಾತ್ರಿ ಸ್ಪೆಷಲ್: ಲುಚಿ ಅಲ್ಲೂರ್ ದಮ್ ರೆಸಿಪಿ

Posted By: Lekhaka
Subscribe to Boldsky

ನಿಯಮಿತ ದಿನಗಳಲ್ಲಿ ಮುಖ್ಯವಾದ ಭಕ್ಷ್ಯವನ್ನಾಗಿ ಲುಚಿ ಅಲ್ಲೂರ್ ದಮ್‌ನ್ನು ತಯಾರಿಸಲಾಗುತ್ತದೆ. ರುಚಿಕರವಾದ ಈ ಭಕ್ಷ್ಯ ಬೆಂಗಾಲಿಯಲ್ಲಿ ವಿಶೇಷವಾದದ್ದು. ಪೂರಿಯನ್ನು ಸಾಮಾನ್ಯವಾಗಿ ಮೈದಾದಿಂದ ತಯಾರಿಸುತ್ತಾರೆ. ಇದಕ್ಕೆ ಸಾಥ್ ನೀಡುವ ಲುಚಿ ಅಲ್ಲೂರ್ ದಮ್ ರೆಸಿಪಿ ವಿಶಿಷ್ಟವಾದ ಮಸಾಲೆಯ ಮಿಶ್ರಣ ಹಾಗೂ ಆಲೂಗಡ್ಡೆಯಿಂದ ತಯಾರಿಸಲಾಗುತ್ತದೆ. ಇದರ ರುಚಿ ಹಾಗೂ ಪರಿಮಳ ಎಲ್ಲರಿಗೂ ಇಷ್ಟವಾಗುವಂತೆ ಮಾಡುತ್ತವೆ.

ಆರೋಗ್ಯಕ್ಕೆ ಪೂರಕವಾದ ಪೋಷಕಾಂಶವನ್ನು ನೀಡುವ ಈ ಭಕ್ಷ್ಯವನ್ನು ಬೆಂಗಾಲಿ ಹಾಗೂ ಭಾರತದ ಕೆಲವು ಪ್ರದೇಶದಲ್ಲಿ ಸಾಮಾನ್ಯವಾಗಿ ತಯಾರಿಸುತ್ತಾರೆ. ಗರಿಗರಿಯಾದ ಪೂರಿಯ ಜೊತೆ ರುಚಿಕರವಾದ ಅಲ್ಲೂರ್ ದಮ್ಹೆಚ್ಚು ಆಹ್ಲಾದವನ್ನು ನೀಡುತ್ತದೆ. ನೀವು ನಿಮ್ಮ ಮನೆಯಲ್ಲಿ ಈ ಹೊಸ ರುಚಿಯನ್ನು ತಯಾರಿಸಬೇಕೆಂಬ ಹವಣಿಕೆಯಲ್ಲಿದ್ದರೆ ಇಲ್ಲಿರುವ ವೀಡಿಯೋ ಹಾಗೂ ಹಂತ ಹಂತವಾದ ಚಿತ್ರವಿವರಣೆಯನ್ನು ಪರಿಶೀಲಿಸಬಹುದು.

luchi aloor dum recipe
ಲುಚಿ ಅಲ್ಲೂರ್ ದಮ್ ರೆಸಿಪಿ| ಬೆಂಗಾಳಿ ಶೈಲಿಯ ಪೂರಿ ಹಾಗೂ ದಮ್ ಆಲೂ ರೆಸಿಪಿ ಮಾಡುವುದು ಹೇಗೆ| ಮೈದಾ ಪೂರೈ ಹಾಗೂ ದಮ್ ಆಲೂ ರೆಸಿಪಿ
ಲುಚಿ ಅಲ್ಲೂರ್ ದಮ್ ರೆಸಿಪಿ| ಬೆಂಗಾಳಿ ಶೈಲಿಯ ಪೂರಿ ಹಾಗೂ ದಮ್ ಆಲೂ ರೆಸಿಪಿ ಮಾಡುವುದು ಹೇಗೆ| ಮೈದಾ ಪೂರೈ ಹಾಗೂ ದಮ್ ಆಲೂ ರೆಸಿಪಿ
Prep Time
30 Mins
Cook Time
1H
Total Time
2 Hours

Recipe By: ಮೀನಾ ಭಂಡಾರಿ

Recipe Type: ಪ್ರಧಾನ ತಿನಿಸು

Serves: 2 ಮಂದಿಗೆ

Ingredients
 • ಬೆಂಗಾಲಿ ಗರಮ್ ಮಸಾಲ (ಗೋರೋಮ್ ಮಶ್ಲಾ)

  ದಾಲ್ಚಿನ್ನಿ ಚೆಕ್ಕೆ -3

  ಏಲಕ್ಕಿ - 4

  ಲವಂಗ -5

  ಲುಚಿ ತಯಾರಿಸಲು:

  ಮೈದಾ -1 ಕಪ್

  ತುಪ್ಪ - 1 ಟೇಬಲ್ ಚಮಚ

  ಉಪ್ಪು - 1 ಟೀ ಚಮಚ

  ನೀರು 1/6 ಕಪ್

  ಎಣ್ಣೆ - ಕರಿಯಲು

  ಅಲ್ಲೂರ್ ದಮ್ತಯಾರಿಸಲು:

  ಬೇಯಿಸಿ ಸಿಪ್ಪೆ ತೆಗೆದ ಚಿಕ್ಕ ಚಿಕ್ಕ ಆಲೂಗಡ್ಡೆ -20 (350 ಗ್ರಾಂ)

  ಎಣ್ಣೆ -2 ಟೇಬಲ್ ಚಮಚ

  ಬೇ ಎಲೆ/ಪರಿಮಳದ ಎಲೆ- 2

  ಜೀರಿಗೆ - 1 ಟೀ ಚಮಚ

  ಹೆಚ್ಚಿಕೊಂಡ ಹಸಿಮೆಣಸಿನ ಕಾಯಿ - 1 ಟೀ ಚಮಚ

  ಸಕ್ಕರೆ - 1 ಟೇಬಲ್ ಚಮಚ

  ಈರುಳ್ಳಿ ಪೇಸ್ಟ್ - 1 ಈರುಳ್ಳಿ

  ತುರಿದುಕೊಂಡ ಶುಂಠಿ - 1 ಟೇಬಲ್ ಚಮಚ

  ಬೆಳ್ಳುಳ್ಳಿ ಪೇಸ್ಟ್ -1 ಟೇಬಲ್ ಚಮಚ

  ಟೊಮ್ಯಾಟೋ ಪೇಸ್ಟ್ - 2 ಟೊಮ್ಯಾಟೋ

  ರುಚಿಗೆ ತಕ್ಕಷ್ಟು ಉಪ್ಪು

  ಖಾರದ ಪುಡಿ -1 ಟೀ ಚಮಚ

  ಅರಿಶಿನ ಪುಡಿ- 1/2 ಟೀ ಚಮಚ

  ಜೀರಿಗೆ ಪುಡಿ - 1 ಟೀ ಚಮಚ

  ಧನಿಯಾ ಪುಡಿ -1 ಟೀ ಚಮಚ

  ನೀರು- 1/2 ಕಪ್

  ತುಪ್ಪ -1/2 ಟೇಬಲ್ ಚಮಚ

Red Rice Kanda Poha
How to Prepare
 • 1. ಒಂದು ಪಾತ್ರೆಯಲ್ಲಿ ದಾಲ್ಚಿನ್ನಿ ಚೆಕ್ಕೆಯನ್ನು ಹಾಕಿ ಹುರಿಯಿರಿ.

  2. ಏಲಕ್ಕಿ ಮತ್ತು ಲವಂಗವನ್ನು ಸೇರಿಸಿ.

  3. ಬಣ್ಣ ಬದಲಾಗುವವರೆಗೂ ಡ್ರೈ ರೋಸ್ಟ್ (ಒಣದಾಗಿಯೇ) ಮಾಡಿ.

  4. ಮಿಕ್ಸರ್ ಪಾತ್ರೆಗೆ ವರ್ಗಾಯಿಸಿ.

  5. ನುಣುಪಾದ ಪುಡಿಯಂತೆ ರುಬ್ಬಿಕೊಂಡು, ಬೆಂಗಾಲಿ ಗರಮ್ ಮಸಾಲವನ್ನಾಗಿ ತಯಾರಿಸಿ.

  6. ಮಿಶ್ರಣದ ಪಾತ್ರೆಯಲ್ಲಿ ಮೈದಾವನ್ನು ಹಾಕಿ.

  7. ಟೀ ಚಮಚ ಉಪ್ಪನ್ನು ಸೇರಿಸಿ.

  8. ಅರ್ಧ ಟೇಬಲ್ ಚಮಚ ತುಪ್ಪವನ್ನು ಬೆರೆಸಿ, ಚೆನ್ನಾಗಿ ಮಿಶ್ರಗೊಳಿಸಿ.

  9. ಸ್ವಲ್ಪ ನೀರನ್ನು ಸೇರಿಸಿ (ನಿರ್ದಿಷ್ಟ ಅಳತೆಯ ಪ್ರಕಾರ 1/6 ಕಪ್) ಗಟ್ಟಿಯಾದ ಹಿಟ್ಟಿನಂತೆ ಮಾಡಿಕೊಳ್ಳಬೇಕು.

  10. ಮುಚ್ಚಳವನ್ನು ಮುಚ್ಚಿ 15-20 ನಿಮಿಷಗಳ ಕಾಲ ಬಿಡಿ.

  11. ಈ ಮಧ್ಯೆ, ಬೇಯಿಸಿಕೊಂಡ ಆಲೂಗಡ್ಡೆಗೆ ಚಮಚದ ಸಹಾಯದಿಂದ ಒಂದು ರಂಧ್ರವನ್ನು ಮಾಡಿ ಒಂದೆಡೆ ಇಡಿ.

  12. ಪಾತ್ರೆಯೊಂದಕ್ಕೆ 2 ಟೇಬಲ್ ಚಮಚ ಎಣ್ಣೆಯನ್ನು ಹಾಕಿ ಬಿಸಿ ಮಾಡಿ.

  13. ಬೇ ಎಲೆ/ಪರಿಮಳದ ಎಲೆ ಮತ್ತು ಜೀರಿಗೆಯನ್ನು ಸೇರಿಸಿ.

  14. ಹೆಚ್ಚಿಕೊಂಡ ಹಸಿಮೆಣಸಿನ ಕಾಯಿಯನ್ನು ಸೇರಿಸಿ ಹುರಿಯಿರಿ.

  15. ಸಕ್ಕರೆಯನ್ನು ಸೇರಿಸಿ, ಕರಗುವ ತನಕ ಚೆನ್ನಾಗಿ ಕಲುಕುತ್ತಿರಿ.

  16. ಈರುಳ್ಳಿ ಪೇಸ್ಟ್ ಅನ್ನು ಸೇರಿಸಿ, ಕಂದು ಬಣ್ಣಕ್ಕೆ ತಿರುಗುವ ತನಕ ಚೆನ್ನಾಗಿ ಹುರಿಯಿರಿ.

  17. ನಂತರ ಶುಂಠಿ, ಬೆಳ್ಳುಳ್ಳಿ ಮತ್ತು ಟೊಮ್ಯಾಟೋ ಪೇಸ್ಟ್‍ಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ.

  18. ಇದಕ್ಕೆ ಮುಚ್ಚಳವನ್ನು ಮುಚ್ಚಿ 5-6 ನಿಮಿಷ ಬೇಯಲು ಬಿಡಿ.

  19. ಮುಚ್ಚಳವನ್ನು ತೆರೆದು, ಉಪ್ಪು ಮತ್ತು ಖಾರದ ಪುಡಿಯನ್ನು ಸೇರಿಸಿ.

  20. ಜೀರಿಗೆ ಪುಡಿ ಮತ್ತು ಧನಿಯಾ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ.

  21. ಪುನಃ ಮುಚ್ಚಳವನ್ನು ಮುಚ್ಚಿ 4-5 ನಿಮಿಷಗಳ ಕಾಲ ಬೇಯಲು ಬಿಡಿ.

  22. ಮುಚ್ಚಳವನ್ನು ತೆರೆದು ಬೇಯಿಸಿಕೊಂಡ ಚಿಕ್ಕ ಚಿಕ್ಕ ಆಲೂಗಡ್ಡೆಯನ್ನು ಸೇರಿಸಿ.

  23. ಅರ್ಧ ಕಪ್ ನೀರನ್ನು ಸೇರಿಸಿ.

  24. ಪುನಃ ಮುಚ್ಚಳವನ್ನು ಮುಚ್ಚಿ, ದೊಡ್ಡ ಉರಿಯಲ್ಲಿ 5 ನಿಮಿಷಗಳಕಾಲ ಬೇಯಲು ಬಿಡಿ.

  25. ಮುಚ್ಚಳವನ್ನು ತೆರೆದು ರುಬ್ಬಿಕೊಂಡ ಬೆಂಗಾಲಿ ಗರಮ್ ಮಸಾಲವನ್ನು 1 ಟೀ ಚಮಚ ಸೇರಿಸಿ.

  26. ಅರ್ಧ ಟೇಬಲ್ ಚಮಚ ತುಪ್ಪವನ್ನು ಬೆರೆಸಿ, ಚೆನ್ನಾಗಿ ಮಿಶ್ರಗೊಳಿಸಿ, ಪಕ್ಕಕ್ಕಿಡಿ.

  27. ಮೈದಾ ಹಿಟ್ಟಿನ ಮುದ್ದೆಯನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಚಿಕ್ಕ ಚಿಕ್ಕ ಉಂಡೆಯನ್ನಾಗಿ ಮಾಡಿಕೊಳ್ಳಿ.

  28. ಲಟ್ಟಣಿಗೆಗೆ ಅರ್ಧ ಟೇಬಲ್ ಚಮಚ ತುಪ್ಪವನ್ನು ಅನ್ವಯಿಸಿ/ಹಚ್ಚಿ.

  29. ಲಟ್ಟಣಿಗೆಯಿಂದ ಪೂರಿಯ ಆಕಾರದಲ್ಲಿ ಲಟ್ಟಿಸಿ.

  30. ಕರಿಯುವ ಪಾತ್ರೆಗೆ ಎಣ್ಣೆಯನ್ನು ಬೆರೆಸಿ ಬಿಸಿ ಮಾಡಿ.

  31. ಕಾದಿರುವ ಎಣ್ಣೆಯಲ್ಲಿ ಪೂರಿಯನ್ನು ಬಿಡಿ.

  32. ಒಮ್ಮೆ ಇದು ಹುರಿದು, ಉಬ್ಬಿ ಬಂದಾಗ ಅದನ್ನು ತಿರುಗಿಸಿ.

  33. ಎರಡು ಬದಿಯಲ್ಲೂ ತಿಳಿ ಹೊಂಬಣ್ಣ ಬರುವ ಹಾಗೆ ಬೇಯಿಸಿ.

  34. ಬಿಸಿ ಬಿಸಿಯಾದ ಪೂರಿಯ ಜೊತೆ ಆಲೂ ದಮ್‍ಅನ್ನು ಸವಿಯಲು ನೀಡಿ.

Instructions
 • 1. ಆಲೂಗಡ್ಡೆಯನ್ನು ಕುಕ್ಕರ್‍ನಲ್ಲಿ ಬೇಯಿಸಿ. ಅತಿಯಾಗಿ ಬೆಂದಿರುವಂತೆ ಆಗಬಾರದು.
 • 2. ಮಸಾಲೆಯೊಂದಿಗೆ ಆರಂಭದಲ್ಲಿ ಸಕ್ಕರೆಯನ್ನು ಬೆರೆಸಲಾಗುತ್ತದೆ. ಇದು ಗ್ರೇವಿಯನ್ನು ಮೃದುವಾಗಿಸುವಂತೆ ಮಾಡುತ್ತದೆ.
Nutritional Information
 • ಸರ್ವಿಂಗ್ ಸೈಜ್ - ಒಬ್ಬರಿಗೆ
 • ಕ್ಯಾಲೋರಿ - 568 ಕ್ಯಾಲ್
 • ಫ್ಯಾಟ್ - 18.6 ಗ್ರಾಂ.
 • ಪ್ರೋಟೀನ್ - 18.3 ಗ್ರಾಂ.
 • ಕಾರ್ಬೋಹೈಡ್ರೇಟ್ - 75.2 ಗ್ರಾಂ.
 • ಫೈಬರ್ - 5.6 ಗ್ರಾಂ.

ಹಂತ ಹಂತವಾದ ಚಿತ್ರ ವಿವರಣೆ

1. ಒಂದು ಪಾತ್ರೆಯಲ್ಲಿ ದಾಲ್ಚಿನ್ನಿ ಚೆಕ್ಕೆಯನ್ನು ಹಾಕಿ ಹುರಿಯಿರಿ.

luchi aloor dum recipe

2. ಏಲಕ್ಕಿ ಮತ್ತು ಲವಂಗವನ್ನು ಸೇರಿಸಿ.

luchi aloor dum recipe
luchi aloor dum recipe

3. ಬಣ್ಣ ಬದಲಾಗುವವರೆಗೂ ಡ್ರೈ ರೋಸ್ಟ್ (ಒಣದಾಗಿಯೇ) ಮಾಡಿ.

luchi aloor dum recipe

4. ಮಿಕ್ಸರ್ ಪಾತ್ರೆಗೆ ವರ್ಗಾಯಿಸಿ.

luchi aloor dum recipe

5. ನುಣುಪಾದ ಪುಡಿಯಂತೆ ರುಬ್ಬಿಕೊಂಡು, ಬೆಂಗಾಲಿ ಗರಮ್ ಮಸಾಲವನ್ನಾಗಿ ತಯಾರಿಸಿ.

luchi aloor dum recipe

6. ಮಿಶ್ರಣದ ಪಾತ್ರೆಯಲ್ಲಿ ಮೈದಾವನ್ನು ಹಾಕಿ.

luchi aloor dum recipe

7. ಟೀ ಚಮಚ ಉಪ್ಪನ್ನು ಸೇರಿಸಿ.

luchi aloor dum recipe

8. ಅರ್ಧ ಟೇಬಲ್ ಚಮಚ ತುಪ್ಪವನ್ನು ಬೆರೆಸಿ, ಚೆನ್ನಾಗಿ ಮಿಶ್ರಗೊಳಿಸಿ.

luchi aloor dum recipe
luchi aloor dum recipe

9. ಸ್ವಲ್ಪ ನೀರನ್ನು ಸೇರಿಸಿ (ನಿರ್ದಿಷ್ಟ ಅಳತೆಯ ಪ್ರಕಾರ 1/6 ಕಪ್) ಗಟ್ಟಿಯಾದ ಹಿಟ್ಟಿನಂತೆ ಮಾಡಿಕೊಳ್ಳಬೇಕು.

luchi aloor dum recipe
luchi aloor dum recipe

10. ಮುಚ್ಚಳವನ್ನು ಮುಚ್ಚಿ 15-20 ನಿಮಿಷಗಳ ಕಾಲ ಬಿಡಿ.

luchi aloor dum recipe

11. ಈ ಮಧ್ಯೆ, ಬೇಯಿಸಿಕೊಂಡ ಆಲೂಗಡ್ಡೆಗೆ ಚಮಚದ ಸಹಾಯದಿಂದ ಒಂದು ರಂಧ್ರವನ್ನು ಮಾಡಿ ಒಂದೆಡೆ ಇಡಿ.

luchi aloor dum recipe
luchi aloor dum recipe

12. ಪಾತ್ರೆಯೊಂದಕ್ಕೆ 2 ಟೇಬಲ್ ಚಮಚ ಎಣ್ಣೆಯನ್ನು ಹಾಕಿ ಬಿಸಿ ಮಾಡಿ.

luchi aloor dum recipe

13. ಬೇ ಎಲೆ/ಪರಿಮಳದ ಎಲೆ ಮತ್ತು ಜೀರಿಗೆಯನ್ನು ಸೇರಿಸಿ.

luchi aloor dum recipe
luchi aloor dum recipe

14. ಹೆಚ್ಚಿಕೊಂಡ ಹಸಿಮೆಣಸಿನ ಕಾಯಿಯನ್ನು ಸೇರಿಸಿ ಹುರಿಯಿರಿ.

luchi aloor dum recipe
luchi aloor dum recipe

15. ಸಕ್ಕರೆಯನ್ನು ಸೇರಿಸಿ, ಕರಗುವ ತನಕ ಚೆನ್ನಾಗಿ ಕಲುಕುತ್ತಿರಿ.

luchi aloor dum recipe
luchi aloor dum recipe

16. ಈರುಳ್ಳಿ ಪೇಸ್ಟ್ ಅನ್ನು ಸೇರಿಸಿ, ಕಂದು ಬಣ್ಣಕ್ಕೆ ತಿರುಗುವ ತನಕ ಚೆನ್ನಾಗಿ ಹುರಿಯಿರಿ.

luchi aloor dum recipe
luchi aloor dum recipe

17. ನಂತರ ಶುಂಠಿ, ಬೆಳ್ಳುಳ್ಳಿ ಮತ್ತು ಟೊಮ್ಯಾಟೋ ಪೇಸ್ಟ್‍ಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ.

luchi aloor dum recipe
luchi aloor dum recipe
luchi aloor dum recipe
luchi aloor dum recipe

18. ಇದಕ್ಕೆ ಮುಚ್ಚಳವನ್ನು ಮುಚ್ಚಿ 5-6 ನಿಮಿಷ ಬೇಯಲು ಬಿಡಿ.

luchi aloor dum recipe

19. ಮುಚ್ಚಳವನ್ನು ತೆರೆದು, ಉಪ್ಪು ಮತ್ತು ಖಾರದ ಪುಡಿಯನ್ನು ಸೇರಿಸಿ.

luchi aloor dum recipe
luchi aloor dum recipe

20. ಜೀರಿಗೆ ಪುಡಿ ಮತ್ತು ಧನಿಯಾ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ.

luchi aloor dum recipe

21. ಪುನಃ ಮುಚ್ಚಳವನ್ನು ಮುಚ್ಚಿ 4-5 ನಿಮಿಷಗಳ ಕಾಲ ಬೇಯಲು ಬಿಡಿ.

luchi aloor dum recipe

22. ಮುಚ್ಚಳವನ್ನು ತೆರೆದು ಬೇಯಿಸಿಕೊಂಡ ಚಿಕ್ಕ ಚಿಕ್ಕ ಆಲೂಗಡ್ಡೆಯನ್ನು ಸೇರಿಸಿ.

luchi aloor dum recipe
luchi aloor dum recipe

23. ಅರ್ಧ ಕಪ್ ನೀರನ್ನು ಸೇರಿಸಿ.

luchi aloor dum recipe

24. ಪುನಃ ಮುಚ್ಚಳವನ್ನು ಮುಚ್ಚಿ, ದೊಡ್ಡ ಉರಿಯಲ್ಲಿ 5 ನಿಮಿಷಗಳಕಾಲ ಬೇಯಲು ಬಿಡಿ.

luchi aloor dum recipe

25. ಮುಚ್ಚಳವನ್ನು ತೆರೆದು ರುಬ್ಬಿಕೊಂಡ ಬೆಂಗಾಲಿ ಗರಮ್ ಮಸಾಲವನ್ನು 1 ಟೀ ಚಮಚ ಸೇರಿಸಿ.

luchi aloor dum recipe

26. ಅರ್ಧ ಟೇಬಲ್ ಚಮಚ ತುಪ್ಪವನ್ನು ಬೆರೆಸಿ, ಚೆನ್ನಾಗಿ ಮಿಶ್ರಗೊಳಿಸಿ, ಪಕ್ಕಕ್ಕಿಡಿ.

luchi aloor dum recipe
luchi aloor dum recipe

27. ಮೈದಾ ಹಿಟ್ಟಿನ ಮುದ್ದೆಯನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಚಿಕ್ಕ ಚಿಕ್ಕ ಉಂಡೆಯನ್ನಾಗಿ ಮಾಡಿಕೊಳ್ಳಿ.

luchi aloor dum recipe

28. ಲಟ್ಟಣಿಗೆಗೆ ಅರ್ಧ ಟೇಬಲ್ ಚಮಚ ತುಪ್ಪವನ್ನು ಅನ್ವಯಿಸಿ/ಹಚ್ಚಿ.

luchi aloor dum recipe

29. ಲಟ್ಟಣಿಗೆಯಿಂದ ಪೂರಿಯ ಆಕಾರದಲ್ಲಿ ಲಟ್ಟಿಸಿ.

luchi aloor dum recipe

30. ಕರಿಯುವ ಪಾತ್ರೆಗೆ ಎಣ್ಣೆಯನ್ನು ಬೆರೆಸಿ ಬಿಸಿ ಮಾಡಿ.

luchi aloor dum recipe

31. ಕಾದಿರುವ ಎಣ್ಣೆಯಲ್ಲಿ ಪೂರಿಯನ್ನು ಬಿಡಿ.

luchi aloor dum recipe

32. ಒಮ್ಮೆ ಇದು ಹುರಿದು, ಉಬ್ಬಿ ಬಂದಾಗ ಅದನ್ನು ತಿರುಗಿಸಿ.

luchi aloor dum recipe

33. ಎರಡು ಬದಿಯಲ್ಲೂ ತಿಳಿ ಹೊಂಬಣ್ಣ ಬರುವ ಹಾಗೆ ಬೇಯಿಸಿ.

luchi aloor dum recipe

34. ಬಿಸಿ ಬಿಸಿಯಾದ ಪೂರಿಯ ಜೊತೆ ಆಲೂ ದಮ್‍ಅನ್ನು ಸವಿಯಲು ನೀಡಿ.

luchi aloor dum recipe
[ 3.5 of 5 - 89 Users]
Read more about: recipes
Subscribe Newsletter