For Quick Alerts
ALLOW NOTIFICATIONS  
For Daily Alerts

ಕಿಚನ್ ಟಿಪ್ಸ್: ಗರಿ-ಗರಿ ದೋಸೆ ಬೇಕೆಂದರೆ ಹಿಟ್ಟು ಹೀಗೆ ತಯಾರಿಸಬೇಕು

Posted By:
|

ದೋಸೆ ಮಾಡೋಕೆ ಸಾಮಾನ್ಯವಾಗಿ ಎಲ್ಲರಿಗೆ ಬರುತ್ತೆ, ಆದರೆ ಗರಿ-ಗರಿಯಾದ, ತುಂಬಾ ರುಚಿಯಾದ ದೋಸೆ ಮಾಡಲು ಕೆಲವರಿಗಷ್ಟೇ ಬರುತ್ತೆ. ಮಕ್ಕಳು ಬೇರೆ ಕಡೆ ದೋಸೆ ಸವಿದು ಬಂದು ಅಮ್ಮಾ... ಅವರು ಮಾಡುವ ದೋಸೆ ಎಷ್ಟೊಂದು ಗರಿ-ಗರಿಯಾಗಿತ್ತೋ ಗೊತ್ತಾ, ನೀನು ಹಾಗೇ ಮಾಡು ಅಥವಾ ನಾನು ತಿಂದ ದೋಸೆ ತುಂಬಾ ಮೃದುವಾಗಿ, ರುಚಿಯಾಗಿತ್ತು ಹಾಗೆ ಮಾಡಮ್ಮಾ ಎಂದು ಹೇಳುತ್ತಾರೆ ..

Kitchen Tips: How To Make Crispy Dosa

'ಹೌದು ನಾನು ಮಾಡುವುದು ಬಿಟ್ಟು ಬೇರೆ ಎಲ್ಲಾ ಕಡೆ ಅಡುಗೆ ರುಚಿಯಾಗಿಯೇ ಇರುತ್ತದೆ' ಎಂದು ಗದರಿಸಿ ಸುಮ್ಮನೆ ಆಗುವವರೇ ಹೆಚ್ಚು. ಅದಕ್ಕಿಂತ ಪರ್ಫೆಕ್ಟ್ ದೋಸೆ ಮಾಡುವ ಟಿಪ್ಸ್ ತಿಳಿದುಕೊಂಡರೆ, ನಿಮ್ಮ ಫೇವರೆಟ್‌ ಹೋಟೆಲ್‌ಗಿಂತಲೂ ರುಚಿಯಾದ ದೋಸೆಯನ್ನು ನೀವೇ ಮನೆಯಲ್ಲಿ ತಯಾರಿಸಬಹುದು.

ಇಲ್ಲಿ ನಾವು ಕೆಲವೊಂದು ಟಿಪ್ಸ್ ನೀಡಿದ್ದೇವೆ, ಅವು ನೀವು ಮಾಡುವ ದೋಸೆ ಮತ್ತಷ್ಟು ರುಚಿಕರವಾಗಿ ಬರಲು ಸಹಕಾರಿಯಾದೀತು ನೋಡಿ:

ಗರಿಗರಿ ದೋಸೆಗೆ ಟಿಪ್ಸ್

1. ಗುಣಮಟ್ಟದ ಸಾಮಗ್ರಿ ಬಳಸಿ
ನೀವು ಬಳಸುವ ಅಕ್ಕಿ, ಉದ್ದಿನ ಬೇಳೆ, ಮೆಂತೆಕಾಳು, ಬೇಳೆ ಎಲ್ಲವೂ ಗುಣಮಟ್ಟದಾಗಿರಬೇಕು.

2. ಅಳತೆ ಸರಿಯಾಗಿರಬೇಕು
ಅಂದರೆ 2 ಕಪ್ ಅಕ್ಕಿ ನೆನೆ ಹಾಕಿದರೆ ಅದಕ್ಕೆ 1/2 ಕಪ್ ಉದ್ದಿನಬೇಳೆ, 1/3 ಕಪ್‌ ಉದ್ದಿನ ಬೇಳೆ, 1 ಚಮಚ ಕಡಲೆ ಬೇಳೆ, ಅರ್ಧ ಚಮಚ ಮೆಂತೆ ನೆನೆ ಹಾಕಿರಬೇಕು. ಸಾಮಗ್ರಿ ಸಂಪೂರ್ಣ ನೀರಿನಲ್ಲಿ ಮುಳುಗಿರುವಂತೆ ನೆನೆ ಹಾಕಿ. ಅವಲಕ್ಕಿಯನ್ನು ಹಾಕಬೇಡಿ, ರುಬ್ಬುವ ಸ್ವಲ್ಪ ಮುಂಚೆ ನೆನೆ ಹಾಕಿ ರುಬ್ಬಿದರೆ ಆಯ್ತು.

3. ರುಬ್ಬುವ ಮುನ್ನ ಚೆನ್ನಾಗಿ ತೊಳೆಯಬೇಕು.

4. ದೋಸೆ ಇಟ್ಟು ರುಬ್ಬಿ ಬಳಿಕ 8 ಗಂಟೆ ಹುದುಗು ಬರಲು ಇಡಬೇಕು. ಬೆಳಗ್ಗೆ ನೋಡಿದರೆ ಹಿಟ್ಟು ತುಂಬಾ ಚೆನ್ನಾಗಿ ಹುದುಗು ಬಂದಿರುತ್ತದೆ, ರುಚಿಗೆ ತಕ್ಕ ಉಪ್ಪು ಸೇರಿಸಿ ಮಿಕ್ಸ್ ಮಾಡಿ. ಉಪ್ಪನ್ನು ಬೇಕಾದರೆ ರುಬ್ಬುವಾಗಲೂ ಹಾಕಬಹುದು.
ಈಗ ರೆಡಿಯಾದ ಹಿಟ್ಟಿನಿಂದ ಗರಿ-ಗರಿ ದೋಸೆ ಅಥವಾ ಉತ್ತಪ್ಪ ತಯಾರಿಸಿ.

ಸೂಚನೆ:

* ದೋಸೆಗೆ ರುಬ್ಬುವಾಗ ತುಂಬಾ ನೀರು ಬಳಸಬೇಡಿ, ಬೇಕಾದರೆ ನಂತರ ಸ್ವಲ್ಪ ಸೇರಿಸಬಹುದು. ದೋಸೆ ಹಿಟ್ಟು ತುಂಬಾ ನೀರು ನೀರಾದರೆ ದೋಸೆ ಚೆನ್ನಾಗಿ ಬರಲ್ಲ.
* ದೋಸೆ ಅವಲಕ್ಕಿ ನೀವು ಯಾವ ಬಗೆಯಾದರೂ ಬಳಸಬಹುದು. ಗಟ್ಟಿ ಅವಲಕ್ಕಿ 10 ನಿಮಿಷ ನೆನೆಹಾಕಿ ರುಬ್ಬಿ, ಪೇಪರ್‌ ಅವಲಕ್ಕಿ ಆದರೆ 2 ನಿಮಿಷ ನೆನೆಸಿ ನಂತರ ರುಬ್ಬಬಹುದು.

[ of 5 - Users]
X
Desktop Bottom Promotion