Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಬೆಳಗ್ಗಿನ ತಿಂಡಿಗೆ ರುಚಿ ರುಚಿಯ ಖಾರಾಭಾತ್ ಮಾಡಿ..! ಇಲ್ಲಿದೆ ಸುಲಭ ವಿಧಾನ
ಬೆಳಗ್ಗೆಯ ತಿಂಡಿಗೆ ವಿಶೇಷವಾಗಿರುವುದೇನಾದರೂ ಮಾಡಲು ನೀವು ಇಚ್ಛಿಸಿದ್ದರೆ ಈ ಖಾರಾಭಾತ್ ಇಲ್ಲವೆ ಟೊಮೆಟೋ ಬಾತ್ ಅಂತಲೂ ಕರೆಯುವ ತಿಂಡಿಯನ್ನು ಮಾಡಿ. ಏಕೆಂದರೆ ಇದು ಮಾಡಲು ತುಂಬ ಸುಲಭ ಜೊತೆಗೆ ಕಡಿಮೆ ಸಮಯದಲ್ಲಿ ಹೆಚ್ಚು ರುಚಿಕರ ತಿಂಡಿಯಾಗಿದೆ. ಎಲ್ಲರು ಇದನ್ನು ಇಷ್ಟಪಟ್ಟು ಸವಿಯುತ್ತಾರೆ.
ಸಿಹಿ ಹಾಗೂ ಖಾರ ಸ್ವಾದಗಳ ಮಿಶ್ರಣವಾಗಿರುವ ಈ ರೆಸಿಪಿಯು ಸರಳವಾಗಿದ್ದು, ಸುಲಭವಾಗಿ ಹಾಗೂ ತ್ವರಿತವಾಗಿ ಇದನ್ನು ಸಿದ್ಧಗೊಳಿಸಬಹುದು. ಹಾಗಾದರೆ ಈ ಖಾರಾಬಾತ್ ಮಾಡುವುದು ಹೇಗೆ? ಯಾವೆಲ್ಲಾ ಪದಾರ್ಥಗಳು ಬೇಕು? ಅದರ ಪಾಕವಿಧಾನವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಬೇಕಾಗುವ ಅಗತ್ಯ ಪದಾರ್ಥಗಳು
- 1 ಕಪ್ - ರವೆ
- 1 - ಈರುಳ್ಳಿ, ಸಣ್ಣದಾಗಿ ಹೆಚ್ಚಿರುವ
- 1 - ಟೊಮ್ಯಾಟೋ
- 1 - ಕತ್ತರಿಸಿದ ಹಸಿರು ಬೆಲ್ ಪೆಪರ್ (ಕ್ಯಾಪ್ಸಿಕಂ)
- 3/4 ಕಪ್ - ಮಿಶ್ರ ತರಕಾರಿಗಳು, (ಬೀನ್ಸ್, ಕ್ಯಾರೆಟ್, ಟೊಮೆಟೋ, ಬದನೆ)
- 1 ಇಂಚು - ಶುಂಠಿ, ಸಣ್ಣದಾಗಿ ಕೊಚ್ಚಿದ
- 2 - ಹಸಿರು ಮೆಣಸಿನಕಾಯಿಗಳು (ಸೀಳಿರುವುದು)
- 3 ಟೀಸ್ಪೂನ್ - ವಾಂಗಿ ಭಾತ್ ಪುಡಿ (ಬದನೆ ಭಾತ್ ಪುಡಿ)
- 3 ಕಪ್ - ನೀರು
- 1/2 - ನಿಂಬೆ
- ಕೊತ್ತಂಬರಿ (ದನಿಯಾ) ಎಲೆಗಳು, ಅಲಂಕರಿಸಲು (ಅಗತ್ಯವಿರುವಷ್ಟು)
- ತುರಿದ ತೆಂಗಿನಕಾಯಿ, ಅಲಂಕರಿಸಲು
- ಉಪ್ಪು, ರುಚಿಗೆ ತಕ್ಕಷ್ಟು
ಒಗ್ಗರಣೆಗೆ ಬೇಕಾದ ಪದಾರ್ಥಗಳು
- 1 ಟೀಸ್ಪೂನ್ - ಸಾಸಿವೆ
- 1 ಟೀಸ್ಪೂನ್ - ಉದ್ದು
- 1/2 ಟೀಸ್ಪೂನ್ - ಹುರಿಗಡಲೆ
- ಗೋಡಂಬಿ
- ಕರಿಬೇವಿನ ಎಲೆಗಳು
- 1 -ಕೆಂಪು ಮೆಣಸಿನಕಾಯಿ
- 1 ಚಿಟಿಕೆ - ಅರಿಶಿನ ಪುಡಿ
- ಎಣ್ಣೆ
- 1 ಚಮಚ - ತುಪ್ಪ
ಪಾಕ ವಿಧಾನ
ಮಧ್ಯಮ ಉರಿಯಲ್ಲಿ ಪಾತ್ರಯ ಇಟ್ಟು ರವೆಯನ್ನು ಹಾಕಿ. ರವೆ ಬಣ್ಣ ಗೋಲ್ಡನ್ ಕಲರ್‌ಗೆ ತಿರುಗೆ ಸುವಾಸನೆ ಹರಡುವವರೆಗೂ ಹುರಿಯಿರಿ. ಈ ವೇಳೆ ರವೆ ಕಪ್ಪಾಗದಂತೆ ನೋಡಿಕೊಳ್ಳಿ.
ಬಾಣಲೆಯಲ್ಲಿ ಎಣ್ಣೆ ಮತ್ತು ತುಪ್ಪವನ್ನು ಸೇರಿಸಿ ಮತ್ತು ಒಗ್ಗರಣೆಯ ಪದಾರ್ಥಗಳನ್ನು ಸೇರಿಸುತ್ತಾ ಬನ್ನಿ. ಆದರೆ ಎಣ್ಣೆ ಬಿಸಿಯಾದ ನಂತರ ಸಾಸಿವೆ ಹಾಕಿ. ಬಳಿಕ ಉದ್ದಿನಬೇಳೆ ಮತ್ತು ಹುರಿಗಡಲೆ ಸೇರಿಸಿ.
ಒಮ್ಮೆ ಅವು ಗರಿಗರಿಯಾದ ಮತ್ತು ಲಘುವಾಗಿ ಕಂದುಬಣ್ಣಕ್ಕೆ ತಿರುಗಿದಾಗ, ಕತ್ತರಿಸಿದ ಈರುಳ್ಳಿ ಮತ್ತು ಕ್ಯಾಪ್ಸಿಕಂ ಸೇರಿಸಿ. ಇದು 5ರಿಂದ 10 ನಿಮಿಷ ಹುರಿಯಿರಿ ಮತ್ತು ಈರುಳ್ಳಿ ಕೆಂಪಾಗುವವರೆಗೂ ಹುರಿದರೆ ಒಳಿತು.
ಕತ್ತರಿಸಿದ ತರಕಾರಿಗಳು, ಉಪ್ಪು, ಅರಿಶಿನ ಸೇರಿಸಿ ಮತ್ತು ತರಕಾರಿಗಳು ಹದ ಆಗುವವರೆಗೆ ಹುರಿಯಿರಿ. ವಾಂಗಿಭಾತ್ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಮೂರು ಕಪ್ ನೀರು ಸೇರಿಸಿ. ಮಿಶ್ರಣವು ಕುದಿಯಲು ಪ್ರಾರಂಭಿಸಿದ ನಂತರ, ಉರಿ ಕಡಿಮೆ ಮಾಡಿಕೊಳ್ಳಿ ಬಳಿಕ ರವೆಯನ್ನು ನಿಧಾನವಾಗಿ ಸೇರಿಸಿ. ರವರ ಗಟ್ಟಿಯಾಗುವುದು ಇಲ್ಲದೆ ಉಂಡೆಯಾಗುವುದನ್ನು ತಪ್ಪಿಸಲು ಚೆನ್ನಾಗಿ ತಿರುಗಿಸಿ.
ಎಲ್ಲ ರವೆ ಸೇರಿಸಿ ಮಿಕ್ಸ್ ಆದ ನಂತರ ಮುಚ್ಚಳ ಮುಚ್ಚಿ 2-3 ನಿಮಿಷ ಬೇಯಿಸಿ.
ಉರಿಯನ್ನು ಆಫ್ ಮಾಡಿ, ಖಾರಾ ಭಾತ್ ಮುಚ್ಚಳ ತೆಗೆದು ಅದಕ್ಕೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಮತ್ತು ಕೊಬ್ಬರಿ ಇಲ್ಲವೆ ತೆಂಗಿನಕಾಯಿ ಪುಡಿಯನ್ನು ಅಲಂಕಾರಕ್ಕಾಗಿ ಸೇರಿಸಿ. ಈಗ ನಿಮ್ಮ ಮುಂದೆ ರುಚಿರುಚಿಯಾದ ಖಾರಾ ಭಾತ್ ಸವಿಯಲು ಸಿದ್ಧವಾಗಿದೆ.



Click it and Unblock the Notifications
