Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಮಳೆಗಾಲದಲ್ಲಿ ಆಗಾಗ ಕಾಡುವ ಕೆಮ್ಮು-ಶೀತ ತಡೆಗಟ್ಟಲು ಬೆಸ್ಟ್ ಈ ಕಷಾಯ
ಮಳೆಗಾಲದಲ್ಲಿ ಶೀತ, ಕೆಮ್ಮು ಈ ಬಗೆಯ ಸಮಸ್ಯೆ ಸಾಮಾನ್ಯ, ಅದರಲ್ಲಿಯೂ ಶಾಲೆಗೆ ಹೋಗುವ ಮಕ್ಕಳಿದ್ದರೆ ವಾರದಲ್ಲಿ ಒಂದು ಬಾರಿಯಾದರೂ ಈ ಬಗೆಯ ಸಮಸ್ಯೆ ಕಾಡುವುದು, ನೀವು ಈ ಸಮಯದಲ್ಲಿ ಮನೆಯಲ್ಲಿ ಕಷಾಯ ಮಾಡಿಡುವುದು ಒಳ್ಳೆಯದು. ಈ ಕಷಾಯ ಪುಡಿಯನ್ನು ಹಾಲಿನಲ್ಲಿ ಹಾಕಿ ಕೊಡುವುದರಿಂದ ಶೀತ, ಕೆಮ್ಮು, ಗಂಟಲು ಕೆರೆತ ಈ ಬಗೆಯ ಸಮಸ್ಯೆಗಳನ್ನು ತಡೆಗಟ್ಟಬಹುದು.

ಬೇಕಾಗುವ ಸಾಮಗ್ರಿ
1/2 ಕಪ್ ಕೊತ್ತಂಬರಿ ಬೀಜ
1/4 ಕಪ್ ಜೀರಿಗೆ
2 ಚಮಚ ಕಾಳು ಮೆಣಸು
1 ಚಮಚ ಸೋಂಪು
5-6 ಏಲಕ್ಕಿ
10 ಲವಂಗ
1/2 ಚಮಚ ಅರಿಶಿಣ ಪುಡಿ
1/2 ಚಮಚ ಶುಂಠಿ ಪುಡಿ
ಸರ್ವ್ ಮಾಡುವಾಗ
ಎರಡೂವರೆ ಕಪ್ ನೀರು
2 ಚಮಚ ಬೆಲ್ಲದ ಪುಡಿ
1/4 ಕಪ್ ಹಾಲು
ಮಾಡುವ ವಿಧಾನ
ಒಂದು ಪ್ಯಾನ್ ತೆಗೆದು 1/2 ಕಪ್ ಕೊತ್ತಂಬರಿ ಬೀಜ, 1/4 ಕಪ್ ಜೀರಿಗೆ, 2 ಚಮಚ
ಕಾಳು ಮೆಣಸು, 1 ಚಮಚ ಸೋಂಪು , ಏಲಕ್ಕಿ, ಲವಂಗ ಸೇರಿಸಿ ಕಡಿಮೆ ಉರಿಯಲ್ಲಿ
ಹುರಿಯಿರಿ.
ಈ ಮಸಾಲೆ ಸಾಮಗ್ರಿಯನ್ನು ಉರಿದಾಗ ತುಂಬಾ ಒಳ್ಳೆಯ ಸುವಾಸನೆ ಬರುತ್ತದೆ, ರೋಸ್ಟ್
ಮಾಡಿ ಆದರೆ ಅದು ಮಸಿಯಾಗುವಂತೆ ರೋಸ್ಟ್ ಮಾಡಬೇಡಿ.
ನಂತರ ಅವುಗಳನ್ನು ಒಂದು ತಟ್ಟೆಗೆ ಹಾಕಿ
ಸ್ವಲ್ಪ ತಣ್ಣಗಾದ ಮೇ ಅರಿಶಿಣ ಪುಡಿ, ಸ್ವಲ್ಪ ಶುಂಠಿ ಪುಡಿ ಸೇರಿಸಿ ಪುಡಿ ಮಾಡಿ,
ಯಾವುದೇ ನೀರು ಸೇರಿಸಬಾರದು, ಅಲ್ಲದೆ ಬ್ಲೆಂಡರ್ಗೆ ಹಾಕುವಾಗ ಅದರಲ್ಲಿ ಸ್ವಲ್ಪವೂ
ನೀರಿನಂಶ ಇರಬಾರದು, ಬ್ಲೆಂಡರ್ ಒರೆಸಿ ನಂತರ ರೋಸ್ಟ್ ಮಾಡಿದ ಸಾಮಗ್ರಿ ಹಾಕಿ
ಪುಡಿ ಮಾಡಿ.
ಈ ಪುಡಿಯನ್ನು ಗಾಜಿನ ಡಬ್ಬದಲ್ಲಿ ಹಾಕಿ ಗಾಳಿಯಾಡದಂತೆ ಮುಚ್ಚಳ ಹಾಕಿಡಿ.
ಕಷಾಯ ಮಾಡುವಾಗ
ನೀವು ನೀರು, ಹಾಲು, ಬೆಲ್ಲ ಹಾಕಿ ಕುದಿಸಿ, ನಂತರ ಈ ಮಿಶ್ರಣ ಕುದಿ ಬರುವಾಗ
ಒಂದೂವರೆ ಚಮಚ ಕಷಾಯ ಪುಡಿ ಹಾಕಿ ಮಿಕ್ಸ್ ಮಾಡಿ, ಮತ್ತೆ ಎರಡು ನಿಮಿಷ ಕುದಿಸಿ,
ಉರಿಯಿಂದ ಇಳಿಸಿ ಸ್ವಲ್ಪ ತಣ್ಣಗಾದ ಮೇಲೆ ಕುಡಿಯಿರಿ.
ಮಳೆಗಾಲ ಮತ್ತು ಚಳಿಗಾಲದಲ್ಲಿ ನೀವು ಇದನ್ನು ಟೀ, ಕಾಫಿ ಬದಲಿಗೆ ಒಂದು ಹೊತ್ತು ಕುಡಿಯುವುದರಿಂದ ಸಾಮಾನ್ಯ ಶೀತ, ಕೆಮ್ಮು ಈ ಬಗೆಯ ಸಮಸ್ಯೆಗಳನ್ನು ತಡೆಗಟ್ಟಬಹುದು.



Click it and Unblock the Notifications
