Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಈ ಹವಾಮಾನದಿಂದಾಗಿ ಕಾಡುವ ಶೀತ-ಗಂಟಲು ನೋವಿಗೆ ರಾಮಬಾಣ ಈ ಕಷಾಯ
ಚಳಿಗಾಲದಲ್ಲಿ ಚಂಡಾಮಾರುತ ಪ್ರಭಾವದಿಂದಾಗಿ ಮಳೆಗಾಲದಲ್ಲಿ ಸುರಿಯುವಂತೆ ಮಳೆ ಬೀಳಲಾರಂಭಿಸಿದೆ, ರಾಜ್ಯದ ಹಲವು ಜಿಲ್ಲೆಗಳ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ವಾತಾವರಣದಲ್ಲಿನ ಬದಲಾವಣೆ ನಮ್ಮನ್ನು ಬೇಗನೆ ಕಾಯಿಲೆ ಬೀಳಿಸುತ್ತದೆ, ಶೀತ,ಕೆಮ್ಮು, ಜ್ವರ ಈ ಬಗೆಯ ಸಮಸ್ಯೆ ಕಾಡುವುದು ಹಾಗಾಗಿ ಈ ಸಮಯದಲ್ಲಿ ಆರೋಗ್ಯದ ಕಡೆಗೆ ಗಮನಹರಿಸಬೇಕು. ಕಷಾಯ ಈ ಬಗೆಯ ಸಾಮಾನ್ಯ ಆರೋಗ್ಯ ಸಮಸ್ಯೆ ತಡೆಗಟ್ಟಲು ಸಹಕಾರಿಯಾಗಿದೆ.
ಇದು ಚಳಿಗಾಲ ಕೂಡ ಹೌದು, ಈ ಕಷಾಯ ಚಳಿಯಿಂದಲೂ ನಿಮ್ಮ ಆರೋಗ್ಯ ರಕ್ಷಣೆ ಮಾಡುತ್ತದೆ, ಬನ್ನಿ ಆ ಕಷಾಯ ಮಾಡುವುದು ಹೇಗೆ ಎಂದು ನೋಡೋಣ:

2 ಚಮಚ ಕೊತ್ತಂಬರಿ ಬೀಜ
1/4 ಚಮಚ ಜೀರಿಗೆ
8-10 ಕಾಳು ಮೆಣಸು
1/ 2 ಚಮಚ ಸೋಂಪು
5-6 ಎಸಳು ಬೆಳ್ಳುಳ್ಳಿ
ಸ್ವಲ್ಪ ಶುಂಠಿ 1/ 2 ಚಮಚ ಅರಿಶಿಣ
ತುಳಸಿ ಎಲೆ 3-4
ಸ್ವಲ್ಪ ಬೆಲ್ಲ
1 ಲೋಟ ಹಾಲು ಅಥವಾ ನೀರು
ಮಾಡುವ ವಿಧಾನ
ನೀವು ಮೊದಲಿಗೆ ಕಷಾಯ ಪುಡಿ ರೆಡಿ ಮಾಡಿ
ಸೋಂಪು, ಜೀರಿಗೆ , ಕಾಳು ಮೆಣಸು, ಕೊತ್ತಂಬರಿ ಬೀಜ ಎಲ್ಲವನ್ನು ರೋಸ್ಟ್ ಮಾಡಿ
ಈಗ ಅವುಗಳನ್ನು ಪುಡಿ ಮಾಡಿ
ಬಳಿಕ ಇದನ್ನು ಹಾಲು ಅಥವಾ ನೀರಿಗೆ ಸೇರಿಸಿ, ಹಾಲಾದಾದರೆ 1 ಲೋಟ ಹಾಲು,
ಒಂದೂವರೆಲೋಟ ನೀರು ಸೇರಿಸಿ, ಇಲ್ಲದಿದ್ದರೆ 2-3 ಲೋಟ ನೀರು ಹಾಕಬಹುದು
ಈಗ ತುಳಸಿ, ಬೆಳ್ಳುಳ್ಳ, ಶುಂಠಿ, ಬೆಲ್ಲ ಸೇರಿಸಿ ಚೆನ್ನಾಗಿ ಕುದಿಸಿ.
ನೀವು ಹಾಲು ಸೇರಿಸುವುದಾದರೆ ಕಡಿಮೆ ಉರಿಯಲ್ಲಿ ಕುದಿಸಿ
ನಂತರ ಕಷಾಯವನ್ನು ಬಿಸಿ ಬಿಸಿಯಾಗಿ ಸವಿಯಿರಿ
ಈಕಷಾಯ ಕೆಮ್ಮು, ಶೀತ, ಜ್ವರ ಈ ಬಗೆಯ ಸಮಸ್ಯೆ ತಡೆಗಟ್ಟುತ್ತದೆ. ಇದನ್ನು
ದಿನದಲ್ಲಿ ಎರಡು ಹೊತ್ತು ಸೇವಿಸಬಹುದು. '
ಚಳಿಗಾಲದಲ್ಲಿ ಆಗಾಗ ಮಾಡಿ ಕುಡಿಯುವುದು ಒಳ್ಳೆಯದು.
ಈ ಕಷಾಯ ಕೂಡ ಟ್ರೈ ಮಾಡಬಹುದು
ಬೇಕಾಗುವ ಸಾಮಗ್ರಿ
1/2ಕಪ್ ಕೊತ್ತಂಬರಿ ಬೀಜ
1/4 ಕಪ್ ಜೀರಿಗೆ
1 ಚಮಚ ಮೆಂತೆ
2 ಚಮಚ ಕಾಳುಮೆಣಸು
1 ನಟ್ಮಗ್
ಸ್ವಲ್ಪ ಶುಂಠಿ (ಒಣ ಶುಂಠಿ)
3-4 ಏಲಕ್ಕಿ
2 ಲವಂಗ
ಮಾಡುವ ವಿಧಾನ
- ನೀವು ಕೊತ್ತಂಬರಿ ಬೀಜವನ್ನು ರೋಸ್ಟ್ ಮಾಡಿ
- ಅದೇ ರೀತಿ ಜೀರಿಗೆ , ಕಾಳು ಮೆಣಸು, ಸೋಂಪು
- ಏಲಕ್ಕಿ, ಲವಂಗ, ಚಕ್ಕೆ ಇವುಗಳನ್ನು ಸ್ವಲ್ಪ ರೋಸ್ಟ್ ಮಾಡಿ
- ಈಗ ಈ ಮಿಶ್ರಣವನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿಡಿ
- ಈಗ ಈ ಕಷಾಯ ಪುಡಿಯನ್ನು 1/ 2 ಚಮಚ ತೆಗೆದು ಬಿಸಿ ನೀರು ಅಥವಾ ಹಾಲಿನ ಜೊತೆ ಮಿಕ್ಸ್ ಮಾಡಿ ಸವಿಯಿರಿ
ಕಷಾಯವನ್ನು ನೀವು ಮಲಗುವ ಅರ್ಧ ಗಂಟೆಯ ಮುನ್ನ ತೆಗೆದುಕೊಳ್ಳಿ
ಬೆಳಗ್ಗೆ ಟೀ ಬದಲಿಗೆ ಇದನ್ನು ಸೇವಿಸಬಹುದು.
ಸೂಚನೆ: ಕಷಾಯವನ್ನು ಹೆಚ್ಚು ಬಳಸಬೇಡಿ, ದಿನದಲ್ಲಿ ಒಂದು ಅಥವಾ ಎರಡು ಲೋಟ ಸೇವಿಸಿ.



Click it and Unblock the Notifications
