Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಸಿಹಿ ಅಲ್ಲ, ಸ್ಪೈಸಿ ಕರಿಗಡುಬು! ಹಸಿ ಬಟಾಣಿಯಿಂದ ಮಾಡಿ ಈ ಸೂಪರ್ ಗುಜಿಯಾ.. ಎಲ್ಲರೂ ಫಿದಾ ಆಗ್ತಾರೆ
ಸಂಕ್ರಾಂತಿ ಹಬ್ಬಕ್ಕೆ ಹೊಸ ಟ್ವಿಸ್ಟ್! ಸಿಹಿಯ ನಡುವೆ ಸವಿಯಿರಿ ಗರಿಗರಿಯಾದ 'ಮಟರ್ ಗುಜಿಯಾ'. ಹೌದು, ಮಕರ ಸಂಕ್ರಾಂತಿ ಮತ್ತು ಲೋಹ್ರಿ ಹಬ್ಬಗಳೆಂದರೆ ಸಿಹಿ ತಿಂಡಿಗಳದ್ದೇ ಕಾರುಬಾರು. ಆದರೆ, ಈ ಬಾರಿ ಸಾಂಪ್ರದಾಯಿಕ ಸಿಹಿ ಜೊತೆಗೊಂದು ಹೊಸ ಪ್ರಯೋಗ ಮಾಡುವ ಮನಸ್ಸಿದ್ದರೆ, ಗರಿಗರಿಯಾದ 'ಮಟರ್ ಗುಜಿಯಾ ಅಥವಾ ಕರಿಗಡುಬು' (Matar Gujiya) ಪ್ರಯತ್ನಿಸಬಹುದು.
ಹಸಿರು ಬಟಾಣಿಯ ಹೂರಣದಿಂದ ತಯಾರಿಸುವ ಈ ಖಾರವಾದ ಗುಜಿಯಾ, ನಿಮ್ಮ ಹಬ್ಬದ ಮೆನುಗೆ ವಿಶಿಷ್ಟ ಮೆರುಗು ನೀಡುತ್ತದೆ. ಈ ಲೇಖನದಲ್ಲಿ ಹೋಟೆಲ್ ಶೈಲಿಯ ರುಚಿ ನೀಡುವ ಮಟರ್ ಗುಜಿಯಾಗೆ ಬೇಕಾಗುವ ಪದಾರ್ಥಗಳು, ತಯಾರಿಸುವ ವಿಧಾನ (Matar Gujiya Recipe) ಮತ್ತು ವಿಶೇಷ ಸಲಹೆಗಳನ್ನು ತಿಳಿಸಲಾಗಿದೆ.
ಪರ್ವಕಾಲದಲ್ಲಿ ಹೆಚ್ಚಾಗಿ ಸಿದ್ಧಪಡಿಸುವ ಎಳ್ಳು-ಬೆಲ್ಲ ಹಾಗೂ ವಿವಿಧ ಸಿಹಿ ತಿನಿಸುಗಳ ನಡುವೆ, ಭಿನ್ನವಾಗಿ ಏನನ್ನಾದರೂ ಸವಿಯಲು ಬಯಸುವವರಿಗೆ 'ಮಟರ್ ಗುಜಿಯಾ' ಅತ್ಯುತ್ತಮ ಆಯ್ಕೆ. ತಾಜಾ ಹಸಿ ಬಟಾಣಿ ಹೂರಣದಿಂದ ತುಂಬಿದ, ಬಾಯಲ್ಲಿ ನೀರೂರಿಸುವ ಈ ಗರಿಗರಿ ತಿಂಡಿ ಸಂಜೆಯ ಚಹಾದೊಂದಿಗೆ ಲಘು ಉಪಾಹಾರವಾಗಿಯೂ ಸೂಕ್ತವಾಗಿದೆ. ಒಂದೇ ರೀತಿಯ ಸಿಹಿ ಕರಿಗಡುಬು ಮಾಡಿ ಅಭ್ಯಾಸವಾದವರಿಗೆ ಇದು ಖಂಡಿತ ಹೊಸತನ ನೀಡಲಿದೆ.
ಮಟರ್ ಕರಿಗಡುಬುಗೆ ಬೇಕಾಗುವ ಪದಾರ್ಥಗಳು
• ಮೈದಾ ಹಿಟ್ಟು
• ತುಪ್ಪ
• ರುಚಿಗೆ ತಕ್ಕಷ್ಟು ಉಪ್ಪು
• ನೀರು
ಹೂರಣಕ್ಕೆ (ಸ್ಟಫಿಂಗ್)
• ಹಸಿರು ಬಟಾಣಿ (ಬಲಿತ ಬಟಾಣಿಯಾಗಿದ್ದರೆ ತರಿತರಿಯಾಗಿ ರುಬ್ಬಿಕೊಳ್ಳಿ, ಎಳೆ
ಬಟಾಣಿಯಾದರೆ ಹಾಗೆಯೇ ಉಪಯೋಗಿಸಬಹುದು)
• ಜೀರಿಗೆ
• ಶುಂಠಿ-ಹಸಿಮೆಣಸಿನಕಾಯಿ ಪೇಸ್ಟ್
• ಧನಿಯಾ ಪುಡಿ
• ಗರಂ ಮಸಾಲ
• ಆಮ್ಚೂರ್ ಪುಡಿ (ಮಾವಿನಕಾಯಿ ಪುಡಿ)
• ರುಚಿಗೆ ತಕ್ಕಷ್ಟು ಉಪ್ಪು
• ಎಣ್ಣೆ (ಕರಿಯಲು ಬೇಕಾದಷ್ಟು)
ಮಟರ್ ಕರಿಗಡುಬು ತಯಾರಿಸುವ ವಿಧಾನ
- ಒಂದು ದೊಡ್ಡ ಪಾತ್ರೆಯಲ್ಲಿ ಮೈದಾ ಹಿಟ್ಟು, ಉಪ್ಪು ಹಾಗೂ ತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದು ಗುಜಿಯಾ ಗರಿಗರಿಯಾಗಿ ಬರಲು ಸಹಾಯ ಮಾಡುತ್ತದೆ.
- ನಂತರ, ಸ್ವಲ್ಪ ಸ್ವಲ್ಪ ನೀರು ಹಾಕಿ ಗಟ್ಟಿಯಾದ ಹಿಟ್ಟನ್ನು ಕಲಸಿ. ಈ ಹಿಟ್ಟನ್ನು ಒದ್ದೆ ಬಟ್ಟೆಯಿಂದ ಮುಚ್ಚಿ ಸುಮಾರು 15 ನಿಮಿಷಗಳ ಕಾಲ ನೆನೆಯಲು ಬಿಡಿ.
- ಈಗ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ ಜೀರಿಗೆ ಹಾಕಿ. ಅದು ಸಿಡಿದ ನಂತರ ಶುಂಠಿ-ಹಸಿಮೆಣಸಿನಕಾಯಿ ಪೇಸ್ಟ್, ಬಟಾಣಿ ಸೇರಿಸಿ ಮೂರರಿಂದ ನಾಲ್ಕು ನಿಮಿಷಗಳ ಕಾಲ ಬಾಡಿಸಿ.
- ನಂತರ ಧನಿಯಾ ಪುಡಿ, ಗರಂ ಮಸಾಲ, ಆಮ್ಚೂರ್ ಪುಡಿ ಮತ್ತು ಉಪ್ಪು ಹಾಕಿ, ಹೂರಣದಲ್ಲಿನ ತೇವಾಂಶ ಸಂಪೂರ್ಣವಾಗಿ ಆವಿಯಾಗುವವರೆಗೆ ಬೇಯಿಸಿ. ಬಳಿಕ ಹೂರಣವನ್ನು ಆರಲು ಬಿಡಿ.
- ಈಗ ನೆನೆದ ಹಿಟ್ಟಿನ ಕಣಕವನ್ನು ಚಿಕ್ಕ ಚಿಕ್ಕ ಉಂಡೆಗಳಾಗಿ ಮಾಡಿ ಪೂರಿಯಂತೆ ಲಟ್ಟಿಸಿಕೊಳ್ಳಿ. ತಯಾರಿಸಿದ ಬಟಾಣಿ ಹೂರಣವನ್ನು ಲಟ್ಟಿಸಿದ ಪದರದ ಮಧ್ಯದಲ್ಲಿಟ್ಟು, ಹಿಟ್ಟನ್ನು ಅರ್ಧಕ್ಕೆ ಮಡಚಿ. ಅಂಚುಗಳಿಗೆ ನೀರು ಹಚ್ಚಿ ದೃಢವಾಗಿ ಅಂಟಿಸಿ (ಗುಜಿಯಾ ಮೋಲ್ಡ್ ಸಹ ಬಳಸಬಹುದು).
- ನಂತರ, ಕಡಾಯಿಯಲ್ಲಿ ಎಣ್ಣೆಯನ್ನು ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಎಣ್ಣೆ ಬಿಸಿಯಾದ ನಂತರ ಈ ಗುಜಿಯಾಗಳನ್ನು ಹಾಕಿ ಹೊಂಬಣ್ಣ ಬರುವವರೆಗೆ ಮತ್ತು ಗರಿಗರಿಯಾಗುವವರೆಗೆ ಕರಿಯಿರಿ.
ಈ ಟ್ರಿಕ್ ಫಾಲೋ ಮಾಡಿ
ಗರಿಗರಿಯಾಗಲು ಮತ್ತು ಅಂಚುಗಳ ಎಚ್ಚರಿಕೆ. ಗುಜಿಯಾ ಹೆಚ್ಚು ಗರಿಗರಿಯಾಗಿ ಬರಲು, ಹಿಟ್ಟು ಕಲಸುವಾಗ ಬಿಸಿ ಮಾಡಿದ ತುಪ್ಪ ಬಳಸುತ್ತಾರೆ. ಜೊತೆಗೆ, ಗುಜಿಯಾದ ಅಂಚುಗಳನ್ನು ದೃಢವಾಗಿ ಅಂಟಿಸುವುದು ಮುಖ್ಯ. ಇಲ್ಲವಾದರೆ, ಎಣ್ಣೆಯಲ್ಲಿ ಕರಿಯುವಾಗ ಹೂರಣ ಹೊರಬಂದು ಹಾಳಾಗುವ ಸಾಧ್ಯತೆ ಇರುತ್ತದೆ.
ಸಿದ್ಧವಾದ ಮಟರ್ ಕರಿಗಡುಬನ್ನು ಹಸಿರು ಚಟ್ನಿ ಅಥವಾ ಟೊಮೆಟೊ ಸಾಸ್ನೊಂದಿಗೆ ಬಿಸಿಬಿಸಿಯಾಗಿ ಸವಿಯಬಹುದು ಅಥವಾ ಬಡಿಸಬಹುದು. ಈ ಬಾರಿಯ ಮಕರ ಸಂಕ್ರಾಂತಿ ಹಬ್ಬದ ಸಮಯದಲ್ಲಿ ಬರೀ ಸಿಹಿ ತಿಂಡಿಗಳ ಬದಲು, ಈ ಮಸಾಲೆಯುಕ್ತ ಗುಜಿಯಾ (Sankranti Special Kargadubu Recipe) ಸಿದ್ಧಪಡಿಸಿ, ಮನೆಯವರ ಮತ್ತು ಅತಿಥಿಗಳ ಮನ ಗೆಲ್ಲಲು ಟ್ರೈ ಮಾಡಿ.



Click it and Unblock the Notifications
