Just In
- 10 hrs ago
ವಾರ ಭವಿಷ್ಯ- ಡಿಸೆಂಬರ್ 15ರಿಂದ ಡಿಸೆಂಬರ್ 21ರ ತನಕ
- 12 hrs ago
ಭಾನುವಾರದ ದಿನ ಭವಿಷ್ಯ (15-12-2019)
- 22 hrs ago
ಮನೆ ನವೀಕರಣ ಮಾಡುತ್ತಿದ್ದೀರಾ? ತಪ್ಪದೇ ಲೇಖನ ಓದಿ
- 24 hrs ago
ಆರು ಬೆರಳಿಗೆ ಕಾರಣ ಹಾಗೂ ಚಿಕಿತ್ಸೆ
Don't Miss
- News
ಜನರಲ್ಲಿ ಹೊಸ ಕನಸು ಬಿತ್ತಿದ ಮಲ್ಲಿಪಟ್ಟಣ ಏತ ನೀರಾವರಿ ಯೋಜನೆ
- Finance
ಅಸ್ಸಾಂನಲ್ಲಿ ಚಿಕನ್ ಕೇಜಿಗೆ 500 ರುಪಾಯಿ, ಈರುಳ್ಳಿಗೆ 250 ರುಪಾಯಿ
- Technology
ಎಂಆಧಾರ್ ಆಪ್ ಅಪ್ಡೇಟ್ ಮಾಡಿ, ಹೆಚ್ಚಿನ ಸೇವೆ ಆನಂದಿಸಿ..!
- Movies
'ಎಲ್ಲಿಗೆ ಪಯಣ ಯಾವುದೋ ದಾರಿ' ಸಿನಿಮಾ ಶುಭಾರಂಭ
- Sports
ಏಕದಿನ ಸರಣಿ; ಭಾರತದ ಟಾಪ್ ಆರ್ಡರ್ ವಿಕೆಟ್ ಕಿತ್ತು ಸಂಭ್ರಮಿಸಿದ ವಿಂಡೀಸ್ ಬೌಲರ್ಸ್; live ಸ್ಕೋರ್
- Automobiles
ನೆಚ್ಚಿನ ವಾಹನದ 50ನೇ ಹುಟ್ಟುಹಬ್ಬವನ್ನು ಆಚರಿಸಿದ ಅಪ್ಪ-ಮಗ
- Education
KSP: ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಇಟಿ- ಪಿಎಸ್ಟಿ ಪ್ರವೇಶ ಪತ್ರ ಬಿಡುಗಡೆ
- Travel
ಹಳ್ಳಿಗಾಡಿನ ಸೊಗಡನ್ನು ಅನುಭವಿಸಲು ಬೆಂಗಳೂರಿನ ಸುತ್ತಮುತ್ತ ಇರುವ ಈ ಸುಂದರ ಗ್ರಾಮಗಳಿಗೆ ಹೋಗಿ ಬನ್ನಿ
ದೀಪಾವಳಿ 2019 ವಿಶೇಷ ಗರಿಗರಿ ಜಿಲೇಬಿ ರೆಸಿಪಿ
ಇನ್ನೇನು ದೀಪಾವಳಿ ಸಂಭ್ರಮ ಎಲ್ಲೆಲ್ಲೂ ಕಳೆಗಟ್ಟುತ್ತಿದೆ. ಮನೆಗಳಲ್ಲಿ ಹಬ್ಬಕ್ಕೆ ತಯಾರಿ ಭರದಿಂದ ನಡೆದಿರುತ್ತದೆ. ಸಿಹಿ ತಿಂಡಿಗಳ ಹಬ್ಬ ಎಂದೇ ಚಿರಪರಿಚಿತ ದೀಪಾವಳಿಯಂದು ಯಾವ ವಿಶೇಷ ಸಿಹಿ ಖಾದ್ಯವನ್ನು ತಯಾರಿಸುವುದು ಎಂಬ ಗೊಂದಲವಿದೆಯೇ?. ಹಾಗಿದ್ದರೆ ಈ ಬಾರಿ ವಿಶೇಷವಾಗಿ ಗರಿಗರಿಯಾದ ಜಿಲೇಬಿ ಮಾಡುವ ಮೂಲಕ ಹಬ್ಬದ ಸಿಹಿಯನ್ನು ಮತ್ತಷ್ಟು ಹೆಚ್ಚಿಸಿ.
ಸಕ್ಕರೆ ಪಾಕದಿಂದ ತುಂಬಿಕೊಂಡಿರುವ ರುಚಿಕರವಾದ ಸಿಹಿ ತಿಂಡಿ ಎಂದರೆ ಜಿಲೇಬಿ. ಇದರ ಒಂದು ತುಂಡನ್ನು ಬಾಯಲ್ಲಿ ಇರಿಸಿಕೊಂಡರೆ ಸಾಕು ನಾಲಿಗೆ ಮತ್ತೆ ಮತ್ತೆ ಬೇಕು ಎನ್ನುವ ಬಯಕೆಯನ್ನು ಹೆಚ್ಚಿಸುತ್ತದೆ. ಮೂಲತಃ ಉತ್ತರ ಭಾರತದ ಸಿಹಿ ತಿಂಡಿಯಾದ ಇದು ವಿಶ್ವದಾದ್ಯಂತ ಪ್ರಸಿದ್ಧಿ ಪಡೆದುಕೊಂಡಿದೆ. ಭಾರತದೆಲ್ಲೆಡೆ ಇದನ್ನು ತಯಾರಿಸುತ್ತಾರೆ. ಉತ್ಸವ ಹಾಗೂ ಹಬ್ಬದ ಸಂದರ್ಭದಲ್ಲಿ ವಿಶೇಷವಾಗಿ ತಯಾರಿಸುವ ಈ ತಿಂಡಿಯನ್ನು ಮೊದಲು ಎಣ್ಣೆಯಲ್ಲಿ ಕರಿದು ನಂತರ ಸಕ್ಕರೆ ಪಾಕದಲ್ಲಿ ಅದ್ದಲಾಗುತ್ತದೆ.
ಸಿಹಿ ಅಂಗಡಿಗಳಲ್ಲಿ ವ್ಯಾಪಾರ ದೃಷ್ಟಿಯಿಂದ ತಯಾರಿಸುವುದರಿಂದ ಹಿಟ್ಟನ್ನು ಕಲಸಿ 6-7 ಗಂಟೆ ಬಿಡುತ್ತಾರೆ. ಹಾಗಾಗಿ ಸ್ವಲ್ಪ ಹುಳಿ ಅಂಶ ಇರುವುದನ್ನು ಕಾಣಬಹುದು. ಮನೆಯಲ್ಲಿ ತಯಾರಿಸುವ ಜಿಲೇಬಿ ಹೆಚ್ಚು ರುಚಿ ಹಾಗೂ ಶುಚಿಯಾಗಿ ತಯಾರಿಸಬಹುದು. ಜಿಲೇಬಿಯ ಸಿಹಿಯ ಜೊತೆ ಸ್ವಲ್ಪ ಹುಳಿ ಬೇಕು ಎಂದುಕೊಂಡವರು ಸ್ವಲ್ಪ ನಿಂಬೆ ಹುಳಿಯನ್ನು ಸೇರಿಸಿಕೊಳ್ಳಬಹುದು.
ಸರಳ ಮತ್ತು ತ್ವರಿತವಾದ ಈ ಪಾಕವಿಧಾನವನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಹಬ್ಬದ ಸಮಯದಲ್ಲಿ ನೀವೂ ಈ ಪಾಕವಿಧಾನವನ್ನು ಮಾಡಬೇಕು ಎನ್ನುವ ಉತ್ಸಾಹದಲ್ಲಿದ್ದರೆ ನಾವಿಲ್ಲಿ ನೀಡಿರುವ ವೀಡಿಯೋ ಹಾಗೂ ಹಂತ ಹಂತವಾದ ಚಿತ್ರವಿವರಣೆಯನ್ನು ಪರಿಶೀಲಿಸಬಹುದು.
Recipe By: ಮೀನಾ ಭಂಡಾರಿ
Recipe Type: ಸಿಹಿ ತಿಂಡಿ
Serves: 10-12 ಜಿಲೇಬಿ
-
ಮೈದಾ -1 ಕಪ್
ಕಡ್ಲೆ ಹಿಟ್ಟು -1 ಟೇಬಲ್ ಚಮಚ
ತಾಜಾ ಮೊಸರು -1 ಕಪ್
ಸಕ್ಕರೆ -1 ಕಪ್
ನೀರು - 4 ಕಪ್
ಕೇಸರಿ ಎಳೆ - ಒಂದು ಚಿಟಕಿ
ಕೇಸರಿ ಬಣ್ಣ - ಒಂದು ಚಿಟಕಿ
ತುಪ್ಪ- 1 ಕಪ್
-
1. ಮಿಶ್ರಣದ ಪಾತ್ರೆಯಲ್ಲಿ ಮೈದಾವನ್ನು ಹಾಕಿ.
2. ಕಡ್ಲೆ ಹಿಟ್ಟು ಮತ್ತು ತಾಜಾ ಮೊಸರನ್ನು ಸೇರಿಸಿ.
3. ಚೆನ್ನಾಗಿ ಮಿಶ್ರಗೊಳಿಸಿ, ಮೃದುವಾದ ಬೆಣ್ಣೆಯ ಹದಕ್ಕೆ ತನ್ನಿ.
4. 10 ನಿಮಿಷಗಳಕಾಲ ವಿಶ್ರಮಿಸಲು ಒಂದೆಡೆ ಇಡಿ.
5. ಈ ಮಧ್ಯೆ, ಒಂದು ಪಾತ್ರೆಯಲ್ಲಿ ಸಕ್ಕರೆಯನ್ನು ಹಾಕಿ, ಬಿಸಿಮಾಡಿ.
6. ತಕ್ಷಣವೇ ನೀರನ್ನು ಸೇರಿಸಿ, ತಳ ಹಿಡಿಯುವುದನ್ನು ತಪ್ಪಿಸಿ.
7. ಸಕ್ಕರೆ ಸಂಪೂರ್ಣವಾಗಿ ಕರಗಿದ ಮೇಲೆ 3-5 ನಿಮಿಷಗಳ ಕಾಲ ಕುದಿಯಲು ಬಿಡಿ.
8. ಕೇಸರಿ ಎಳೆ ಮತ್ತು ಚಿಟಕಿ ಆಹಾರದ ಬಣ್ಣವನ್ನು ಸೇರಿಸಿ.
9. ಚೆನ್ನಾಗಿ ಮಿಶ್ರಗೊಳಿಸಿ, ಒಂದೆಡೆ ಸಣ್ಣ ಉರಿಯಲ್ಲಿ ಇಡಿ.
10. ಹಿಟ್ಟಿನ ಮಿಶ್ರಣಕ್ಕೆ ಒಂದು ಚಿಟಕಿ ಫ್ರೂಟ್ ಸಾಲ್ಟ್ ಸೇರಿಸಿ ಚೆನ್ನಾಗಿ ಕಲಸಿ.
11. ಜಿಲೇಬಿ ಬಿಡುವ ಬಾಟಲಿಯನ್ನು ತೆಗೆದುಕೊಳ್ಳಿ. ಮುಚ್ಚಳವನ್ನು ತೆಗೆಯಿರಿ.
12. ಮಿಶ್ರಣವನ್ನು ಪುನ್ನೆಲ್ ಸಹಾಯದಿಂದ ತುಂಬಿ, ಕೊಳವೆ ಮುಚ್ಚಳವನ್ನು ಮುಚ್ಚಿ.
13. ಒಂದು ಪಾತ್ರೆಯಲ್ಲಿ ತುಪ್ಪವನ್ನು ಹಾಕಿ, 1-2 ನಿಮಿಷಗಳ ಕಾಲ ಬಿಸಿ ಮಾಡಿ.
14. ಬಿಸಿಯಾದ ತುಪ್ಪದ ಮೇಲೆ, ಮಿಶ್ರಣದ ಬಾಟಲಿಯನ್ನು ತೆಗೆದುಕೊಂಡು, ಮುಚ್ಚಳದ ಭಾಗ ಕೆಳಮುಖವಾಗಿ ಹಿಡಿದು ಹಿಂಡಿ.
15. ಬೇಕಾದ ಗಾತ್ರಕ್ಕೆ ವೃತ್ತಾಕಾರದಲ್ಲಿ ಸುತ್ತಿ, ಒಂದಕ್ಕೊಂದು ಅಂಟಿಕೊಳ್ಳದಂತೆ ನೋಡಿಕೊಳ್ಳಿ.
16. ಜಿಲೇಬಿಯ ಎರಡು ಭಾಗದಲ್ಲೂ ಸರಿಯಾಗಿ ಬೆಂದು, ಹೊಂಬಣ್ಣಕ್ಕೆ ಬರುವ ಹಾಗೆ ತಿರುವಿ.
17. ಬೆಂದ ತಕ್ಷಣ ಒಂದು ತಟ್ಟೆಯಲ್ಲಿ ತೆಗೆದಿಡಿ.
18. ನಂತರ ಸಕ್ಕರೆ ಪಾಕದಲ್ಲಿ ಹಾಕಿ, 30 ಸೆಕೆಂಡುಗಳ ಕಾಲ ನೆನೆಯಲು ಬಿಡಿ.
19. ಬಳಿಕ ತೆಗೆದು, ಬಿಸಿಯಿರುವಾಗಲೇ ಸವಿಯಲು ನೀಡಿ.
- 1. ಹುಳಿ ಮೊಸರನ್ನು ಬಳಸದೆ, ತಾಜಾ ಮೊಸರನ್ನೇ ಬಳಸಿ.
- 2. ಜಿಲೇಬಿಯಲ್ಲಿ ಹುಳಿಯ ರುಚಿ ಬೇಕೆಂದಿದ್ದರೆ ಮಿಶ್ರಣದ ಹಿಟ್ಟನ್ನು 6-7 ಗಂಟೆಗಳ ಕಾಲ ಒಂದೆಡೆ ಇಡಬಹುದು.
- 3. ತಕ್ಷಣದಲ್ಲಿಯೇ ಜಿಲೇಬಿ ಹುಳಿಯಂಶ ಬರಬೇಕೆಂದರೆ ಜಿಲೇಬಿ ಮಿಶ್ರಣಕ್ಕೆ ಒಂದು ಟೀ ಚಮಚ ನಿಂಬೆ ರಸವನ್ನು ಸೇರಿಸಬಹುದು.
- 4. ಜಿಲೇಬಿ ಮಿಶ್ರಣಕ್ಕೆ ಸೇರಿಸಿದ ಮೈದಾ ಹಿಟ್ಟಿನ ಅಳತೆಯಷ್ಟೇ ಸಕ್ಕರೆಯನ್ನು ಬಳಸಿ ಪಾಕ ಮಾಡಿಕೊಳ್ಳಬೇಕು. ಇವೆರಡರ ಅಳತೆ ಸಮಾನವಾಗಿರಬೇಕು.
- 5. ಜಿಲೇಬಿ ಉಬ್ಬಿ ಬರಲು ಕರಿಯುವ ಸಂದರ್ಭದಲ್ಲಿ ಫ್ರೂಟ್ ಸಾಲ್ಟ್ ಸೇರಿಸಿಕೊಳ್ಳಬಹುದು.
- ಸರ್ವಿಂಗ್ ಸೈಜ್ - 1 ಜಿಲೇಬಿ
- ಕ್ಯಾಲೋರಿ - 310 ಕ್ಯಾಲ್
- ಫ್ಯಾಟ್ - 10 ಗ್ರಾಂ.
- ಪ್ರೋಟೀನ್ - 2 ಗ್ರಾಂ.
- ಕಾರ್ಬೋಹೈಡ್ರೇಟ್ - 54 ಗ್ರಾಂ.
- ಸಕ್ಕರೆ - 20 ಗ್ರಾಂ.
ಹಂತ ಹಂತವಾದ ಜಿಲೇಬಿ ಪಾಕವಿಧಾನ