For Quick Alerts
ALLOW NOTIFICATIONS  
For Daily Alerts

ದೀಪಾವಳಿ ಸ್ಪೆಷಲ್: ಜಿಲೇಬಿ ರೆಸಿಪಿ

Posted By:
|

ಬಿಸಿ-ಬಿಸಿ ದೀಪಾವಳಿ ಸವಿಯಲು ಎಷ್ಟೊಂದು ರುಚಿ ಅಲ್ವಾ? ದೀಪಾವಳಿಯಂದು ಲಕ್ಷ್ಮಿ ಪೂಜೆ ಮಾಡಿದ ಮೇಲೆ ರಾತ್ರಿ ಬಿಸಿ-ಬಿಸಿಯಾದ ಜಿಲೇಬಿ ಸರ್ವ್ ಮಾಡಲು ಬಯಸುವುದಾದರೆ ಇಲ್ಲಿದೆ ನೋಡಿ ರೆಸಿಪಿ.

Jalebi recipe

ಜಿಲೇಬಿ ಮಾಡುವುದು ತುಂಬಾ ಕಷ್ಟವಾದ ಕೆಲಸವಲ್ಲ, ಆದರೆ ಮಾಡುವಾಗ ಅದರ ಹದ ಸರಿಯಾಗಿರಬೇಕು ಅಷ್ಟೇ, ಹ ಹಿಟ್ಟಿದ ಹದ ಹೇಗಿರಬೇಕು, ಜಿಲೇಬಿ ಮಾಡುವುದು ಹೇಗೆ ಎಂದು ನೋಡೋಣ:

Jalebi Recipe, ಜಿಲೇಬಿ ರೆಸಿಪಿ
Jalebi Recipe, ಜಿಲೇಬಿ ರೆಸಿಪಿ
Prep Time
30 Mins
Cook Time
30M
Total Time
1 Hours0 Mins

Recipe By: Reena TK

Recipe Type: Sweet

Serves: depends

Ingredients
  • ಬೇಕಾಗುವ ಸಾಮಗ್ರಿ

    3 ಕಪ್ ಮೈದಾ ಹಿಟ್ಟು

    2 ಕಪ್ ಹುಳಿ ಮೊಸರು

    1/2 ಚಮಚ ತುಪ್ಪ

    3 ಕಪ್ ಸಕ್ಕರೆ

    ಸ್ವಲ್ಪ ಸಕ್ಕರೆ

    1/2 ಕಪ್ ಜೋಳದ ಹಿಟ್ಟು

    ಚಿಟಿಕೆಯಷ್ಟು ಸೋಡಾ

    2 ಕಪ್ ಎಣ್ಣೆ

    3 ಕಪ್ ನೀರು

    4 ಡ್ರಾಪ್ಸ್ ರೋಸ್‌ ಎಸೆನ್ಸ್

    ಅರ್ಧ ಚಮಚ ಫುಡ್ ಕಲರ್

Red Rice Kanda Poha
How to Prepare
  • ಮಾಡುವುದು ಹೇಗೆ?

    ಸ್ಟೆಪ್ 1

    ಮೈದಾ ಹಿಟ್ಟು, ಜೋಳದ ಹಿಟ್ಟು, ಅಡುಗೆ ಸೋಡಾ ಇವೆಲ್ಲವನ್ನೂ ಒಂದು ಬೌಲ್‌ನಲ್ಲಿ ಹಾಕಿ. ಈಗ ತುಪ್ಪ ಹಾಗೂ ಫುಡ್ ಕಲರ್‌ ಮಿಕ್ಸ್ ಮಾಡಿ. ನಂತರ ಹುಳಿ ಮೊಸರು, ನೀರು ಹಾಕಿ ಮಿಶ್ರ ಮಾಡಿ, ಮಿಶ್ರಣ ತುಂಬಾ ತೆಳುವಾಗಬಾರದು. ಈಗ ಈ ಮಿಶ್ರಣವನ್ನು 7-8 ಗಂಟೆ ಇಡಿ. ಆಗ ಮಿಶ್ರಣ ಹುಳಿ ಬರುತ್ತದೆ.

    ಸಕ್ಕರೆ ಪಾಕ ಮಾಡಲು ನೀರನ್ನು ಬಿಸಿ ಮಾಡಿ. ನಂತರ ಸಕ್ಕರೆ ಹಾಕಿ ಕರಗಿಸಿ, ಕಡಿಮೆ ಉರಿಯಲ್ಲಿ ಕುದಿಸಿ, ಸಕ್ಕರೆ ಪಾಕ ಗಟ್ಟಿಯಾಗಿರಲಿ, ಇದಕ್ಕೆ ಕೇಸರಿ, ಏಲಕ್ಕಿ ಪುಡಿ, ರೋಸ್‌ ಎಸೆನ್ಸ್ ಸೇರಿ, ಚೆನ್ನಾಗಿ ತಿರುಗಿಸಿ, ಉರಿಯಿಂದ ಇಳಿಸಿ ಇಡಿ.

    ಸ್ಟೆಪ್ 2: ಜಿಲೇಬಿಯನ್ನು ಎಣ್ಣೆಯಲ್ಲಿ ಕರಿಯಿರಿ

    ಈಗ ಅಗಲ ಬಾಯಿಯ ಕಬ್ಬಿಣದ ಪ್ಯಾನ್‌ ಬಿಸಿ ಮಾಡಿ, ಎಣ್ಣೆ ಕುದಿಯಲ್ಲಿ ಆರಂಭಿಸಿದಾಗ ಮಸ್ಲಿನ್ ಬಟ್ಟೆಯಲ್ಲಿ ಹಿಟ್ಟು ಹಾಕಿ ಜಿಲೇಬಿ ರೀತಿ ಸುತ್ತಿ-ಸುತ್ತಿ ಇಡಿ. ಜಿಲೇಬಿ ಕ್ರಿಸ್ಪಿ ಬಣ್ಣಕ್ಕೆ ತಿರುಗಲಿ.

    ಸ್ಟೆಪ್ 3: ಈಗ ಜಿಲೇಬಿಯನ್ನು ಸಕ್ಕರೆ ಪಾಕದಲ್ಲಿ ಹಾಕಿ ಬಿಸಿ-ಬಿಸಿಯಾಗಿ ಸರ್ವ್ ಮಾಡಿ.

Instructions
  • ಸಲಹೆ: * ಜಿಲೇಬಿ ಮಾಡುವಾಗ ಗಮನಿಸಬೇಕಾದ ಮುಖ್ಯವಾದ ಅಂಶವೆಂದರೆ ಮಿಶ್ರಣದ ಹದ ಸರಿಯಾದ ರೀತಿಯಲ್ಲಿ ಇರಬೇಕು, ತುಂಬಾ ಗಟ್ಟಿಯಾಗಬಾರದು. ನೀರು-ನೀರಾಗಿಯೂ ಇರಬಾರದು. * ಜಿಲೇಬಿಗೆ ಕಲೆಸಿದ ಹಿಟ್ಟು ಸಾಧಾರಣ ಉಷ್ಣತೆಯಲ್ಲಿ10-12 ಗಂಟೆ ಇಟ್ಟರೆ ಒಳ್ಳೆಯದು, ತುಂಬಾ ತಂಪಾದ ವಾತಾವರಣ ಆದರೆ 24 ಗಂಟೆ ಇಡಬೇಕು. * ಜಿಲೇಬಿ ಮಾಡುವಾಗ ಗ್ಯಾಸ್‌ ಉರಿ ಕಡಿಮೆ ಮಾಡಬೇಕು. ಇಲ್ಲದಿದ್ದರೆ ಜಿಲೇಬಿ ಹೊರಗೆ ಸೀದು ಒಳಗೆ ಬೇಯುವುದಿಲ್ಲ. * ಜಿಲೇಬಿ ಮಾಡುವಾಗ ಚೆನ್ನಾಗಿ ಕದಡಬೇಕು.
Nutritional Information
  • ಕ್ಯಾಲೋರಿ - 44ಕ್ಯಾ
  • ಪ್ರೊಟೀನ್ - 0.2 ಗ್ರಾಂ
  • ಕಾರ್ಬ್ಸ್ - 7ಗ್ರಾಂ
[ 4 of 5 - 86 Users]
Story first published: Wednesday, November 11, 2020, 12:56 [IST]
X
Desktop Bottom Promotion