For Quick Alerts
ALLOW NOTIFICATIONS  
For Daily Alerts

ಇನ್ಸ್‌ಟಂಟ್‌ ಜೋಳದ ದೋಸೆ ರೆಸಿಪಿ

|

ಪ್ರತಿದಿನ ಆರೋಗ್ಯಕರ ಮತ್ತು ವಿಭಿನ್ನ ವೈವಿಧ್ಯಮಯ ಉಪಹಾರವನ್ನು ತಯಾರಿಸುವುದು ಒಂದು ಕಷ್ಟಕರ ಕೆಲಸವೇ. ಅದರಲ್ಲೂ ಹಿಂದಿನ ದಿನವೇ ಬೆಳಗಿನ ತಿಂಡಿಯ ಪ್ಲಾನ್‌ ಇಲ್ಲದೆ ಇದ್ದರೆ ದಿಢೀರ್‌ ಮಾಡುವ ತಿಂಡಿಗಳ ಪಟ್ಟಿ ಯಾವಾಗಲೂ ಇರಲೇಬೇಕು. ಅದುವೇ ಆರೋಗ್ಯಕರ, ಪೌಷ್ಟಿಕಾಂಶ ಭರಿತವಾಗಿರಬೇಕು. ಯಾವುದೇ ರುಬ್ಬಿಲ್ಲದ, ಹುದುಗುವಿಕೆ ಇಲ್ಲದ, ಪೌಷ್ಟಿಕಾಂಶ ಹೆಚ್ಚಿರುವ ಮತ್ತು ಕಡಿಮೆ ಕ್ಯಾಲೋರಿ ಇರುವ ಬೆಳಗಿನ ಉಪಾಹಾರಕ್ಕೆ ಹುಡುಕುತ್ತಿರುವ ಎಲ್ಲರಿಗೂ ಇದು ಪರಿಪೂರ್ಣವಾದ ಆಯ್ಕೆ ಇನ್ಸ್‌ಟಂಟ್‌ ಜೋಳದ ದೋಸೆ.

Instant Jowar dosa

ದೋಸೆ ಪ್ರಿಯರಿಗೆ ಜೋಳದ ದೋಸೆ ಖಂಡಿತ ಇಷ್ಟವಾಗುತ್ತದೆ. ನಿತ್ಯ ಸಾಮಾನ್ಯ ದೋಸೆ ತಿಂದು ಬೋರ್‌ ಆದವರಿಗೆ ಪರ್ಯಾಯವಾಗಿ ಪ್ರಯತ್ನಿಸಲು ಈ ದೋಸೆ ಉತ್ತಮ ಆಯ್ಕೆಯಾಗಿದೆ. ರೋಗನಿರೋಧಕಶಕ್ತಿ ಹೆಚ್ಚಿಸುವ, ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವ, ಹೆಚ್ಚು ಪ್ರೊಟೀನ್‌ ಇರುವ, ಗ್ಲುಟೇನ್‌ ಇಲ್ಲದ, ಹೃದಯದ ಸ್ವಾಸ್ಥ್ಯಕ್ಕೆ ಉತ್ತಮವಾದ ಜೋಳ ಸೇವಿಸದೇ ಇರುವವರುಂಟೆ. ಜೋಳ ದೋಸೆಯು ಅಂಗಡಿಯಲ್ಲಿ ಸಿಗುವ ಜೋಳದ ಹಿಟ್ಟಿನೊಂದಿಗೆ ತಯಾರಿಸಿದ ತ್ವರಿತ ದೋಸೆಯಾಗಿದೆ. ಇನ್ಸ್‌ಟಂಟ್‌ ಜೋಳದ ದೋಸೆ ತಯಾರಿಸುವ ವಿಧಾನ ಮುಂದೆ ನೋಡೋಣ:

Instant Jowar dosa/ ಇನ್ಸ್‌ಟಂಟ್‌ ಜೋಳದ ದೋಸೆ
Instant Jowar dosa/ ಇನ್ಸ್‌ಟಂಟ್‌ ಜೋಳದ ದೋಸೆ
Prep Time
5 Mins
Cook Time
5M
Total Time
10 Mins

Recipe By: Meghashree Devaraju

Recipe Type: Breakfast

Serves: 3

Ingredients
  • ಬೇಕಾಗುದ ಪದಾರ್ಥಗಳು

    ಜೋಳದ ಹಿಟ್ಟು -1 ಕಪ್

    ಅಕ್ಕಿ ಹಿಟ್ಟು - ½ ಕಪ್

    ಜೀರಿಗೆ - 1 ಚಮಚ

    ಕತ್ತರಿಸಿದ ಹಸಿರು ಮೆಣಸಿನಕಾಯಿ -1 ಚಮಚ

    ಕತ್ತರಿಸಿದ ಈರುಳ್ಳಿ - 1 ಕಪ್‌

    ಎಣ್ಣೆ - 1/4 ಕಪ್‌

    ಉಪ್ಪು - ರುಚಿಗೆ ತಕ್ಕಂತೆ

    ನೀರು - 2 ಕಪ್

Red Rice Kanda Poha
How to Prepare
  • ಮಾಡುವ ವಿಧಾನ

    1) ದೊಡ್ಡ ಮಿಕ್ಸಿಂಗ್ ಬೌಲ್‌ನಲ್ಲಿ ಜೋಳದ ಹಿಟ್ಟು, ಅಕ್ಕಿ ಹಿಟ್ಟು, ಉಪ್ಪು, ಜೀರಿಗೆ, ಹಸಿಮೆಣಸಿನಕಾಯಿ ಮತ್ತು ಕೊತ್ತಂಬರಿ ಹಾಕಿ.

    2) ಮಿಶ್ರಣಕ್ಕೆ ಅರ್ಧ ½ ಕಪ್ ನೀರನ್ನು ಸೇರಿಸಿ ಮತ್ತು ಎಲ್ಲವನ್ನೂ ಒಮ್ಮೆ ಮಿಶ್ರಣ ಮಾಡಿ ನಂತರ ಅಗತ್ಯಕ್ಕೆ ತಕ್ಕಂತೆ ನೀರನ್ನು ಸೇರಿಸಿ ದೋಸೆಯ ಹದಕ್ಕೆ ಮಿಶ್ರಣ ಸಿದ್ಧ ಮಾಡಿಕೊಳ್ಳಿ.

    3) ಈಗ ಮಿಶ್ರಣವನ್ನು ಅರ್ಧ ಗಂಟೆ ಪಕ್ಕಕ್ಕೆ ಇರಿಸಿ

    4) ಅರ್ಧ ಘಂಟೆಯ ನಂತರ ಈರುಳ್ಳಿ ಸೇರಿಸಿ ಮತ್ತು ಚೆನ್ನಾಗಿ ಬೆರೆಸಿ

    5) ದೋಸೆ ತವಾ ಚೆನ್ನಾಗಿ ಬಿಸಿ ಮಾಡಿಕೊಂಡು ಸ್ವಲ್ಪ ಎಣ್ಣೆ ಹಾಕಿ ಬ್ರಷ್ ಬಳಸಿ ಅದನ್ನು ಹರಡಿ ಇದರಿಂದ ಅದು ತವೆಯ ಎಲ್ಲಾ ಮೇಲ್ಮೈಯನ್ನು ಸಮವಾಗಿ ಎಣ್ಣೆ ಲೇಪಿಸುತ್ತದೆ ಮತ್ತು ಜ್ವಾಲೆಯು ಕಡಿಮೆಯಾಗಿದೆಯೆ ಎಂದು ಖಚಿತಪಡಿಸಿಕೊಳ್ಳಿ.

    6) ಹಿಟ್ಟನ್ನು ತವಾ ಮೇಲೆ ದೋಸೆಯಂತೆ ಹಾಕಿ, ಅಲ್ಲಲ್ಲಿ ಹಿಟ್ಟು ಅಂಟಿಕೊಳ್ಳುವುದಿಲ್ಲ ಆ ಅಂತರಗಳಲ್ಲಿ ಹೆಚ್ಚು ಹಿಟ್ಟನ್ನು ಸೇರಿಸುವ ಮೂಲಕ ದೊಡ್ಡ ರಂಧ್ರಗಳನ್ನು ತುಂಬಿಸಿ.

    7) ದೋಸೆಯ ಅಂಚಿಗೆ ಸ್ವಲ್ಪ ಎಣ್ಣೆಯನ್ನು ಸೇರಿಸಿ ಮತ್ತು ದೋಸೆಯ ಬಣ್ಣ ಬಿಳಿ ಬಣ್ಣದಿಂದ ಚಿನ್ನದ ಕಂದು ಬಣ್ಣಕ್ಕೆ ಬದಲಾಗುವವರೆಗೂ ಬೇಯಿಸಿ.

    8) ಈಗ ದೋಸೆಯನ್ನು ನಿಧಾನವಾಗಿ ತೆಗೆದು ಮತ್ತೊಂದು ಬದಿಯಲ್ಲಿ ಬೇಯಿಸಿ, ಎರಡು ಬದಿ ಬೆಂದ ನಂತರ ದೋಸೆ ಸವಿಯಲು ಸಿದ್ಧ.

    9) ತೆಂಗಿನಕಾಯಿ ಚಟ್ನಿ, ಕಡಲೆಬೀಜ, ಟಮೋಟ ಚಟ್ನಿ, ಬದನೆಕಾಯಿ ಎಣ್ಣೆಗಾಯಿ ಜೊತೆ ಸವಿಯಲು ಜೋಳದ ದೋಸೆ ತುಂಬಾ ರುಚಿಯಾಗಿರುತ್ತದೆ.

Instructions
  • ತೆಂಗಿನಕಾಯಿ ಚಟ್ನಿ, ಕಡಲೆಬೀಜ, ಟಮೋಟ ಚಟ್ನಿ, ಬದನೆಕಾಯಿ ಎಣ್ಣೆಗಾಯಿ ಜೊತೆ ಸವಿಯಲು ಜೋಳದ ದೋಸೆ ತುಂಬಾ ರುಚಿಯಾಗಿರುತ್ತದೆ
Nutritional Information
[ 4.5 of 5 - 98 Users]
Story first published: Monday, August 2, 2021, 12:18 [IST]
X
Desktop Bottom Promotion