Latest Updates
-
ತೀವ್ರ ಶಾಖದ ಅಲೆ: ಬಿಸಿಲಿನಲ್ಲಿ ವ್ಯಾಯಾಮ ಮಾಡುವ ಮುನ್ನ ಎಚ್ಚರ! -
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ
ಸ್ಪಾಗ್ಗೆಟ್ಟಿ ಟಾಕೋಸ್ ತಯಾರಿಸುವುದು ಹೇಗೆ?
ನಮ್ಮಲ್ಲಿ ಬಹುತೇಕ ಮಂದಿ ಟಾಕೋಸ್ (ಮೆಕ್ಕೆ ಜೋಳದಿಂದ ಸಿದ್ಧಪಡಿಸುವ ರೊಟ್ಟಿ, ಹಪ್ಪಳ ಅಥವಾ ದೋಸೆ) ಹಾಗೂ ಸ್ಪಾಗ್ಗೆಟ್ಟಿ (ನೂಡಲ್ಸ್) ಬಗ್ಗೆ ತಿಳಿದಿದ್ದೀರಿ. ಅಂದಹಾಗೆ, ತಾವು ಯಾವತ್ತಾದರೂ ಜನಪ್ರಿಯ ಖಾದ್ಯ "ಸ್ಪಾಗ್ಗೆಟ್ಟಿ ಟಾಕೋಸ್' ಬಗ್ಗೆ ಟಿವಿಯಲ್ಲಿ ಏನಾದರೂ ನೋಡಿದ್ದೀರಾ? ಇಲ್ಲಿದೆ ನೋಡಿ, ಸ್ವಾದಿಷ್ಟ ತಿಂಡಿಯನ್ನು ಸಿದ್ಧಪಡಿಸುವ ವಿಧಾನ.
ಬೇಕಾಗುವ ಸಾಮಗ್ರಿಗಳು
ಟಾಕೋಸ್ ಶೆಲ್‌ಗಳು (ಮೃದು ಶೆಲ್‌ಗಳಾಗಿದ್ದರೆ ಹಿಡಿದುಕೊಳ್ಳಲು ಸಹಕಾರಿಯಾಗಿರುತ್ತವೆ. ಸರಿಯಾಗಿ ಬಳಸುವ ವಿಧಾನ ತಿಳಿದಲ್ಲಿ ಗಡುಸಾದ ಶೆಲ್‌ಗಳನ್ನೂ ಉಪಯೋಗಿಸಬಹುದು)
ಮರಿಯನಾರಾ ಸಾಸ್ (ಟೊಮೇಟೊ ಹಾಗೂ ಪಾಸ್ತಾ ಸಾಸ್ ) ಅಥವಾ ಬೋಲೋಜೆನಿಸ್ ಸಾಸ್ ಬೆರೆಸಿದ ಮಾಂಸದ ತುಣುಕು ಅಥವಾ ಸಾಸೇಜ್ (ಮಾಂಸದಿಂದ ತಯಾರಿಸಿದ ವಸ್ತು).
ಸಿದ್ಧಪಡಿಸಿಟ್ಟುಕೊಂಡ ಸ್ಪಾಗ್ಗೆಟ್ಟಿ (ಆಯ್ಕೆ ಮಾಡಿಕೊಂಡ ವಿಧದ ನೂಡಲ್ಸ್, ಟೋಪಿಂಗ್ಸ್ ಹಾಗೂ ಸಾಸ್ )
ಉಪ್ಪು ಹಾಗೂ ಮೆಣಸಿನಪುಡಿ (ಹೆಚ್ಚುವರಿ ಪರಿಮಳಕ್ಕಾಗಿ)
ಇತರೆ ವಸ್ತುಗಳು (ಹೆಚ್ಚಿಟ್ಟ ದೊಣ್ಣೆ ಮೆಣಸಿನಕಾಯಿ, ಹೆಚ್ಚಿದ ತಾಜಾ ಕೊತ್ತಂಬರಿ ಸೊಪ್ಪು, ತುಪ್ಪ ಹಾಗೂ ಇತರೆ ಮಿಶ್ರಣ )

ಸಿದ್ಧಪಡಿಸುವ ಹಂತಗಳು
1. ಅದಾಗಲೇ ಸಿದ್ಧಪಡಿಸಿಟ್ಟುಕೊಂಡಿರುವ ಸ್ಪಾಗ್ಗೆಟ್ಟಿ ಎತ್ತಿಕೊಳ್ಳಿ. ನಿಮಗೆ ಯಾವ ವಿಧದ ನೂಡಲ್ಸ್, ಟೋಪಿಂಗ್ಸ್ ಹಾಗೂ ಸಾಸ್ ಬೇಕೋ ಆಯ್ಕೆ ಮಾಡಿಕೊಳ್ಳಿ.
2. ಒಂದು ಕಡೆ ಸಿದ್ಧಪಡಿಸಿಟ್ಟುಕೊಂಡ ಸ್ಪಾಗ್ಗೆಟ್ಟಿಯನ್ನು ಇರಿಸಿಕೊಳ್ಳಿ. ಇದನ್ನು ತಣ್ಣಗಾಗಲು ಬಿಡಿ. ಎಷ್ಟೆಂದರೆ ಇದು ಟಾಕೊವನ್ನು ಹಸಿಯಾಗಿಸುವ ಹಾಗೂ ಒಣದಾಗಿರಿಸುವ ಮಟ್ಟಿಗೆ ತಣ್ಣಗಾಗುವಷ್ಟು.
3. ಸಾಸ್ ಸಿದ್ಧಪಡಿಸಿಕೊಳ್ಳಿ ಹಾಗೂ ಅದನ್ನು ಬಿಸಿ ಮಾಡಿ. ಸ್ಪಾಗ್ಗೆಟ್ಟಿ ಬೆಂದು ಅರಳುವವರೆಗೂ ಕಲಕುತ್ತಲೇ ಇರಿ. ಸಾಸ್ ರೂಪಕ್ಕೆ ಬರುವವರೆಗೂ ಹಾಗೆಯೇ ಮಾಡುತ್ತಿರಿ. ಸಾಸ್‌ನ್ನು ನೀವೇ ಸಿದ್ಧಪಡಿಸಿಕೊಳ್ಳುವುದಾದರೆ, ನೀರಿನ ಬಳಕೆ ಪ್ರಮಾಣವನ್ನು ಅತ್ಯಂತ ಕಡಿಮೆ ಮಾಡಿಕೊಳ್ಳಿ. ತುಂಬಾ ನೀರು ಬಳಸಿ ಕೈಗೆ ಸಿಗದಂತೆ ತೇಲಾಡುತ್ತಿದ್ದರೂ ಕಷ್ಟ.
4. ಪಾಸ್ತಾದ ಜತೆ ಸಾಸ್‌ನ್ನು ಬೆರೆಸಿ. ಈಗ ನೀವು ಸ್ಪಾಗ್ಗೆಟ್ಟಿಗೆ ಸಾಸ್‌ನ ಫ್ಲೆವರ್‌ನ್ನು ಸಿಂಪಡಿಸಬೇಕು. ಇದು ಸರ್ವ್ ಗೆ ಸಿದ್ಧವಾಯಿತು. ಪ್ರತಿಯೊಂದು ಸರ್ವ್ ಗೂ ಪ್ರತ್ಯೇಕ ಬೌಲ್ ಬಳಸಿ. ಈ ರೀತಿ ಮಾಡುವುದರಿಂದ ಪ್ರತಿ ಟಾಕೊ ನಡುವೆಯೂ ಸಾಮ್ಯತೆ ಇದ್ದಂತಾಗುತ್ತದೆ. (ಸೂಚನೆ: ನೀವು ಬಯಸಿದಲ್ಲಿ ಮಾಂಸದ ತುಂಡುಗಳನ್ನು ಸ್ಪಾಗ್ಗೆಟ್ಟಿ ನೂಡಲ್ಸ್‌ಗೆ ಬೆರೆಸುವ ಮುನ್ನ ಮಾಂಸದ ಎಣ್ಣೆ ಅಂಶವನ್ನು ಚೀಸ್ ಬಟ್ಟೆ ಅಥವಾ ಬಸಿಯುವ ಸಾಧನ ಬಳಸಿ ತೆಗೆಯಬಹುದು. ಇದರಿಂದ ಸಾಸ್‌ನಲ್ಲಿ ನೀರಿನಂಶ ಕಡಿಮೆ ಆಗುತ್ತದೆ. ತೇಲಾಡುವ ಸಮಸ್ಯೆ ಎದುರಾಗದು.)
5. ಸಿದ್ಧಪಡಿಸಿಕೊಂಡ ಸ್ಪಾಗ್ಗೆಟ್ಟಿ ನೂಡಲ್ಸ್‌ಗಳನ್ನು ಟಾಕೊ ಶೆಲ್‌ಗಳ ನಡುವೆ ಚಮಚ ಬಳಸಿ ತುಂಬಿಕೊಳ್ಳಿ. ಅಗಲ ಬಾಯಿ ಉಳ್ಳ ಪ್ಯಾನ್‌ನ್ನು ತೆಗೆದುಕೊಂಡು ಅದರಲ್ಲಿ ಒಂದರ ಪಕ್ಕ ಒಂದನ್ನು ಇಡುತ್ತಾ ಬನ್ನಿ. ನಿಮ್ಮ ಅಗತ್ಯಕ್ಕೆ ತಕ್ಕಷ್ಟು ಅಗಲವಾದ ಪ್ಯಾನ್(ಬಾಲಿ)ಬಳಸುವುದು ಉತ್ತಮ.
6. ಟಾಕೋಸ್‌ಗಳನ್ನು ತುಂಬಿಕೊಂಡ ನಂತರ ಇದರ ಮೇಲೆ ಅದಾಗಲೇ ಸಿದ್ಧಪಡಿಸಿಕೊಂಡಿರುವ ಕಾರದ ಪುಡಿ ಮಿಶ್ರಣ ಚಿಮುಕಿಸಿ ಅಥವಾ ಸುರಿಯಿರಿ. ತುಪ್ಪ ಒಂದು ಉತ್ತಮ ಬಳಕೆ ವಸ್ತು ಇಲ್ಲಿ. ನೀವು ತುಪ್ಪವನ್ನು ಕರಗಿಸಿ ಟಾಕೊಸ್ ಶೆಲ್‌ಗೆ ಬಳಿದು, ಒದ್ದೆಯಾದ ಟಾಕೊಸ್ ಶೆಲ್‌ಗಳನ್ನು ಮೈಕ್ರೊವೇವ್ ಓವನ್‌ನಲ್ಲಿ ಇಟ್ಟು ಐದು ನಿಮಿಷ ಕ್ರಿಸ್ಪ್ ಆಗಲು ಬಿಡಿ. ನಂತರ ಹೊರ ತೆಗೆದು ಒಂದು ನಿಮಿಷ ತಣ್ಣಗಾಗಲು ಬಿಡಿ. ಅಲ್ಲಿಗೆ ತಿನ್ನಲು ಅದು ಸಿದ್ಧವಾಗುತ್ತದೆ.
7. ನಿಮ್ಮ ಸ್ಪಾಗ್ಗೆಟ್ಟಿ ಟಾಕೋಸ್ ತಿನ್ನಲು ಸಿದ್ಧವಾಗಿದ್ದು, ಸರ್ವ್ ಮಾಡಬಹುದು.
ಟಿಪ್ಸ್
ನಿಮ್ಮ ಅಡುಗೆ ಕೋಣೆ ಅಥವಾ ಬೇಯಿಸುವ ತಾಣವನ್ನು ನಂತರ ಸ್ವಚ್ಛಗೊಳಿಸಲು ಮರೆಯಬೇಡಿ. ನೀವು ಬಳಸಿದ ಎಲ್ಲಾ ವಸ್ತುವನ್ನೂ ಅಲ್ಲಿಂದ ಬೇರೆಡೆ ವರ್ಗಾಯಿಸಿ.
ವಿಭಿನ್ನ ಮಾದರಿಯ ನೂಡಲ್ಸ್ ಹಾಗೂ ಸಾಸ್‌ಗಳನ್ನು ಬಳಸಿ ತರಹೇವಾರಿ ಸ್ಪಾಗ್ಗೆಟ್ಟಿ ನೂಡಲ್ಸ್ ಸಿದ್ಧಪಡಿಸಲು ಪ್ರಯತ್ನಿಸಿ. ನೀವು ಸ್ಪಾಗ್ಗೆಟ್ಟಿ ನೂಡಲ್ಸ್ ಮಾಡಲು ಬಯಸದಿದ್ದರೆ ಅದರ ಬದಲು ಆಂಗಲ್ ಹೇರ್ ಪಾಸ್ತಾ ಅಥವಾ ನೀವು ನಿತ್ಯ ಬಯಸುವ ಯಾವುದೇ ವಸ್ತು ಉಪಯೋಗಿಸಬಹುದು. ಪರ್ಫೆಲೆ ಅಥವಾ ಪೆಣ್ಣೆ ಯಾವುದನ್ನಾದರೂ ಉಪಯೋಗಿಸಬಹುದು.
ತಾಜಾ ಮೆಕ್ಕೆ ಜೋಳದ ತೆನೆಯನ್ನೂ ಈ ಟಾಕೋಸ್ ಶೆಲ್‌ಗಳಲ್ಲಿ ಬಳಸಬಹುದು. ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ ಅಂಗಡಿಯಲ್ಲಿ ಕೊಳ್ಳುವ ಶೆಲ್‌ಗಳಿಗಿಂತ ಮನೆಯಲ್ಲಿಯೇ ಸಿದ್ಧಪಡಿಸಿಕೊಳ್ಳುವ ಮೆಕ್ಕೆ ಜೋಳದ ಶೆಲ್ ಬಳಸುವುದು ಉತ್ತಮ ಹಾಗೂ ಆರೋಗ್ಯಕಾರಿ. ಇದು ವಿಶೇಷ ಪರಿಮಳವನ್ನು ಕೂಡ ನೀಡುತ್ತವೆ.



Click it and Unblock the Notifications











