ಫ್ರೆಂಚ್‌ ಟೋಸ್ಟ್ ಮಾಡುವುದು ಹೇಗೆ?

By ಲೇಖಕ

ಬೆಳಗ್ಗೆ ತಡವಾಗಿ ಎದ್ದಾಗ, ಪಿಕ್‌ನಿಕ್‌ಗೆ ತೆರಳಿದ್ದಾಗ ಹಾಗೂ ಅತ್ಯವಸರದಲ್ಲಿ ಒಂದು ತಿಂಡಿ ಸಿದ್ಧಪಡಿಸಬೇಕಾಗಿ ಬಂದಾಗ ನಿಮಗೆ ಫ್ರೆಂಚ್‌ ಟೋಸ್ಟ್‌ ಸಹಕಾರಿಯಾಗುತ್ತದೆ. ಕೇವಲ ಅರ್ಧ ನಿಮಿಷದಲ್ಲಿ ಇದನ್ನು ತಯಾರಿಸಿಕೊಳ್ಳಬಹುದು. ಕ್ಷಿಪ್ರವಾಗಿ ತಿಂಡಿ ತಯಾರಿಸಬೇಕಾಗಿ ಬಂದಾಗ ಇದು ಉತ್ತಮವಾಗಿ ಕೆಲಸಕ್ಕೆ ಬರುತ್ತದೆ.

ವಿಶೇಷ ಅಂದರೆ ಇದನ್ನು ನಿಮ್ಮ ಮನೆಯಲ್ಲಿರುವ ವಸ್ತುಗಳನ್ನೇ ಬಳಸಿ ಸಿದ್ಧಪಡಿಸಬಹುದು. ಮಾರುಕಟ್ಟೆಯಿಂದ ತರಬೇಕಾದ್ದು ಬ್ರೆಡ್‌, ಮೊಟ್ಟೆ ಅಥವಾ ಬಾಳೆಹಣ್ಣು ಮಾತ್ರ. ಇಲ್ಲದಿದ್ದರೆ ಅತಿ ತ್ವರಿತವಾಗಿ ಇರುವ ವಸ್ತುಗಳನ್ನೇ ಬಳಸಿ ಸಿದ್ಧಪಡಿಸಬಹುದು.

ಫ್ರೆಂಚ್‌ ರೋಸ್ಟ್‌ನ್ನು ಮೊಟ್ಟೆ, ಬಾಳೆಹಣ್ಣು ಬಳಸಿ ಸಿದ್ಧ ಪಡಿಸಲಾಗುವುದು. ಧಾನ್ಯಗಳಿಂದ ಸಿದ್ಧಪಡಿಸಿದ ಬ್ರೆಡ್‌ ಬಳಕೆ ಉತ್ತಮ. ಏಕೆಂದರೆ ಸಾಮಾನ್ಯವಾಗಿ ಇದನ್ನು ಬೆಳಗ್ಗಿನ ಬ್ರೆಕ್‌ ಫಾಸ್ಟ್‌ಆಗಿ ಬಳಸುವುದರಿಂದ ಆರೋಗ್ಯಕಾರಿ ಹಾಗೂ ಸತ್ವಯುತವಾಗಿದ್ದರೆ ಅನುಕೂಲ. ಇದಾಗಿ ನಿಮಗೆ ಬೇಕಾಗುವುದು ಐದರಿಂದ ಆರು ಮೊಟ್ಟೆಗಳು. ಅಥವಾ ಬಾಳೆಹಣ್ಣಿನ ತುಂಡುಗಳು. ಬಳಸುವವರ ಅಗತ್ಯಕ್ಕೆ ತಕ್ಕಂತೆ ಇದನ್ನು ಉಪಯೋಗಿಸಬಹುದು. ಒಬ್ಬರಿಗೆ ಸಿದ್ಧಪಡಿಸುವುದಾದರೆ ಎರಡು ಮೊಟ್ಟೆ ಅಥವಾ ಮೂರ್ನಾಲ್ಕು ತುಂಡು ಬಾಳೆಹಣ್ಣು ಸಾಕು. ಮನೆಯಲ್ಲಿ ತಿನ್ನುವ ಜನರ ಸಂಖ್ಯೆ ಆಧರಿಸಿ ಇದು ಹೆಚ್ಚುತ್ತದೆ.

How To Make French Toast?

ಇದಾಗಿ ಬೇಕಾಗುವುದು ಅಗಲ ಬಾಯುಳ್ಳ ಬಾಣಲಿ. ಇದಕ್ಕೆ ಎಣ್ಣೆ ಅಥವಾ ತುಪ್ಪ ಸವರಿದ ಬ್ರೆಡ್‌ ಎತ್ತಿಟ್ಟುಕೊಳ್ಳಿ. ಪ್ಯಾನ್ ಒಳಗೆ ಬ್ರೆಡ್‌ ಪೀಸ್‌ ಹಾಕಿ ರೋಸ್ಟ್‌ ಮಾಡಿಕೊಳ್ಳಿ. ಇನ್ನೊಂದು ಬಾಣಲಿಯಲ್ಲಿ ಮೊಟ್ಟೆ ಹಾಗೂ ಅದಕ್ಕೆ ಸಿದ್ಧಪಡಿಸಿಕೊಂಡ ಸಾಂಬಾರು ಪದಾರ್ಥವನ್ನು ಹಾಕಿ ದೋಸೆಯ ರೀತಿ ಮಾಡಿಕೊಳ್ಳಿ. ಬಾಳೆ ಹಣ್ಣು ಬಳಸುವವರು ಕೂಡ ಹಣ್ಣಿನ ಪೀಸ್ ಅನ್ನು ಬೇಯಿಸಿಕೊಳ್ಳಿ. ಇನ್ನೊಂದೆಡೆ ಎರಡೂ ಭಾಗ ರೋಸ್ಟ್‌ ಆದ ಬ್ರೆಡ್‌ ನಡುವೆ ಈ ಮೊಟ್ಟೆಯ ದೋಸೆ ಅಥವಾ ಬಾಳೆಹಣ್ಣಿನ ಪೀಸ್‌ ಇಟ್ಟು ಬಿಸಿ ಇರುವಾಗಲೇ ತಿನ್ನಿ.

ಸಿಹಿ ಫ್ರೆಂಚ್‌ ಟೋಸ್ಟ್‌: ಮೊಟ್ಟೆ ಬಳಸಿ ಸಿಹಿ ಫ್ರೆಂಚ್‌ ಟೋಸ್ಟ್‌ ಕೂಡ ಮಾಡಬಹುದು. ಇದು ಕೂಡ ಸವಿಯಲು ಅತ್ಯಂತ ರುಚಿಕರವಾಗಿರುತ್ತದೆ.

ಇದಕ್ಕೆ ಬೇಕಾಗುವ ಸಾಮಗ್ರಿ ಒಂದು ದೊಡ್ಡ ಮೊಟ್ಟೆ, ಅರ್ಧ ಕಪ್‌ ಹಾಲು. ಒಬ್ಬರಿಗಿಂತ ಹೆಚ್ಚಿದ್ದರೆ ಸಂಖ್ಯೆ ಆಧರಿಸಿ ಇವುಗಳನ್ನು ಸಮನಾಗಿ ಹೆಚ್ಚಿಸಿಕೊಳ್ಳಿ. ಅಗಲವಾದ ಬಾಯಿಯ ಬೌಲ್‌ ಅಥವಾ ಪೈ ಡಿಶ್‌ ಬಳಕೆ ಉತ್ತಮ.

ಮಾಡುವ ವಿಧಾನದಲ್ಲಿ ಮೊದಲು ಬೌಲ್‌ಗೆ ಹದವಾಗಿ ಹಾಲಿನಲ್ಲಿ ಕದಡಿಕೊಂಡ ಮೊಟ್ಟೆಯನ್ನು ಸುರುವಿಕೊಳ್ಳಿ. ಬ್ರೆಡ್‌ ಪೀಸ್‌ ಕೈಗೆತ್ತಿಕೊಂಡು ಅದಕ್ಕೆ ಮೆಲುವಾಗಿ ಎರಡೂ ಭಾಗದಲ್ಲೂ ಬೆಣ್ಣೆ ಸವರಿಕೊಳ್ಳಿ. ಇದಕ್ಕೆ ಮೇಲಿಂದ ಆಗಲೇ ಕದಡಿಟ್ಟುಕೊಂಡಿರುವ ಫ್ರೆಂಚ್‌ ಬ್ರೀಡ್‌ ಮಿಕ್ಸ್‌ ಬಳಿದುಕೊಳ್ಳಿ. ತುಂಬಿ ತುಳುಕುವಷ್ಟು ಇರದಿರಲಿ.

ನೆಂದ ಬ್ರೆಡ್‌ನನ್ನು ತವಾ ಮೇಲಿಟ್ಟು ಒಂದು ಭಾಗವನ್ನು ಬೇಯಿಸಿಕೊಂಡು, ತಕ್ಷಣ ತಿರುವಿ ಹಾಕಿ ಇನ್ನೊಂದು ಭಾಗವನ್ನೂ ಬೇಯಿಸಿಕೊಳ್ಳಿ. ಬ್ರಡ್‌ ತುಂಡು ಒಂದು ಹದಕ್ಕೆ ಕೆಂಪಾಗುತ್ತಿದ್ದಂತೆ ತೆಗೆದು ಸೇವನೆಗೆ ಬಳಸಿ. ಬಿಸಿಯಾಗಿದ್ದಾಗಲೇ ತಿಂದರೆ ಬಲು ರುಚಿ.

ಕೆಲವರು ಇದನ್ನು ನಾನ್‌ವೆಜ್‌ ಆಹಾರದೊಂದಿಗೂ ಬಳಸುವುದುಂಟು. ಅವರಿಗಿಷ್ಟ ಬಂದ ರೀತಿ ಬಳಸುವ ವಿಶಿಷ್ಟ ತಿಂಡಿ ಇದಾಗಿದೆ. ಏನೇ ಇರಲಿ, ಅವಸರದಲ್ಲಿ ಉತ್ತಮವಾಗಿ ಸಿದ್ಧಪಡಿಸಿಕೊಳ್ಳಬಹುದಾದ ಸೂಪರ್‌ ಫಾಸ್ಟ್‌ ಬ್ರೆಕ್‌ ಫಾಸ್ಟ್‌ ಇದು.

X
Desktop Bottom Promotion