Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಟ್ರಿಫಲ್ ಚಾಕಲೇಟ್ ಮಿಲ್ಕ್ ಶೇಖ್ ಮಾಡುವುದು ಹೇಗೆ?
ಚಾಕಲೇಟ್ ಅಂದರೆ ಯಾರಿಗೆ ತಾನೇ ಬಾಯಲ್ಲಿ ನೀರೂರುವುದಿಲ್ಲ? ದಿನವಿಡೀ ಚಾಕಲೇಟ್ ನಲ್ಲೆ ಹೊಟ್ಟೆ ತುಂಬಿಸಿಕೊಳ್ಳುವವರೂ ಇದ್ದಾರೆ. ಇಂಥ 'ಚಾಕೋಹಾಲಿಕ್' ಗಳಿಗಾಗಿ ಇಲ್ಲಿದೆ ಟ್ರಿಫಲ್ ಮಿಲ್ಕ್ ಶೇಕ್ ಮಾಡುವ ಟಿಪ್ಸು.
ಈ ಚಾಕಲೇಟ್ ಪೇಯಕ್ಕೆ ಬ್ರೌನಿಗಳ ತುಣುಕನ್ನು ಸೇರಿಸಿ ಮತ್ತಷ್ಟು ಸವಿಯನ್ನು ಸವಿಯಬಹುದು. ತೀರಾ ಸುಲಭವಾಗಿ ಮನೆಯಲ್ಲೇ ಮಾಡಬಹುದಾದ ವಿಧಾನ ಇದು. ನೋಟ್ ಮಾಡಿಟ್ಟುಕೊಳ್ಳಿ.

ಸಾಮಾಗ್ರಿಗಳು:
ಒಂದು ಸೌಟ್ ನಷ್ಟು ಅಥವಾ ಎರಡು ಚಾಕಲೇಟ್ ಐಸ್ ಕ್ರೀಮ್
240 ಮಿ.ಲೀ. ಹಾಲು
ಹೀರುಕೊಳವೆ ಅಥವಾ ಚಾಕಲೇಟ್ ಕಡ್ಡಿಗಳು
2 ತುಣುಕು ಚಾಕಲೇಟ್ ಬ್ರೌನಿಗಳು
ಒಂದಿಷ್ಟು ಹಾಲಿನ ಕೆನೆ
ಚಾಕಲೇಟ್ ಸಿರಪ್
ಹೀಗೆ ಮಾಡಿ:
1. ಎಂಟು ಔನ್ಸ್ ಗಳಷ್ಟು ಅಂದರೆ 240 ಮಿ.ಲೀ. ಹಾಲನ್ನು ಮೊದಲು ಪಾತ್ರೆಗೆ ಸುರಿದುಕೊಳ್ಳಿ.
2. ಚಾಕಲೇಟ್ ಐಸ್ ಕ್ರೀಮನ್ನು ಹಾಲಿಗೆ ಹಾಕಿ, ಎರಡು ಅಥವಾ ಸಟ್ಟುಗದಷ್ಟು ಇದ್ದರೆ ತುಂಬಾ ಒಳ್ಳೆಯದು. ನಿಮ್ಮ ಬಯಕೆಯನ್ನು ಅವಲಂಬಿಸಿ ಈ ಪ್ರಮಾಣದಲ್ಲಿ ವ್ಯತ್ಯಾಸ ಮಾಡಿಕೊಳ್ಳಬಹುದು.
3. ಪಾತ್ರೆಯಲ್ಲಿ ಸುರುವಿದ ಹಾಲು ಮತ್ತು ಐಸ್ ಕ್ರೀಮನ್ನು ಮೆತ್ತಗಿನ ಮಿಶ್ರಣವಾಗುವರೆಗೂ ಕಲಕಿ.
4. ಈಗಾಗಲೇ ತುರಿದಿಟ್ಟುಕೊಂಡ ಚಾಕಲೇಟ್ ಭ್ರೌನಿಯ ಪುಡಿಯನ್ನು ಆ ಮಿಶ್ರಣಕ್ಕೆ ಹಾಕಿ. ಮೊದಲೇ ಹೇಳಿದ
ಎಲ್ಲ ಸಾಮಗ್ರಿಗಳನ್ನೂ ಇದರೊಂದಿಗೆ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ.
5. ಮಿಲ್ಕ್ ಶೇಖ್ ಮೆತ್ತಗಾಗುವವರೆಗೂ ಕಲಕುತ್ತಿರಿ.
6.ಕಲಕುವುದನ್ನು ನಿಲ್ಲಿಸಿ, ಗ್ಲಾಸಿಗೆ ಸುರಿಯಿರಿ. ನಿಮಗೂ, ನಿಮ್ಮ ಸ್ನೇಹಿತರಿಗೂ, ಮನೆಮಂದಿಗೂ ಬಾಯಲ್ಲಿ ನೀರೂರಿಸುವ ಮಿಲ್ಕ್‌ಶೇಕ್ ಸೇವಿಸುವುದಕ್ಕೆ ಸಿದ್ಧ.
7. ಪೇಯದ ಮೇಲ್ಭಾಗದಲ್ಲಿ ಕೆನೆ ಶೇಕರಣೆಯಾಗುವಂತೆ ನೋಡಿಕೊಳ್ಳಿ.
8. ಕೆನೆಯ ಮೇಲೆ ಚಾಕಲೆಟ್ ಸಿರಪ್ ಅಥವಾ ಸಾಸ್ ಅನ್ನು ನಿಮ್ಮ ಇಷ್ಟದಂತೆ ಸುರುರಿರಿ. ಚಿತ್ರ ಬಿಡಿಸಿ... ನೋಡುವುದಕ್ಕೂ ಅಂದವಾಗಿ ಕಾಣುತ್ತದೆ. ಬಾಯಿಗೂ ರುಚಿ!
9. ಹೀರುಕೊಳವೆ ಅಥವಾ ಐ ಸ್ಕ್ರೀಮ್ ಸ್ಪೂನಿನಿಂದ ಸೇವಿಸಿ ನೀವೂ, ನಿಮ್ಮ ಸ್ನೇಹಿತರೂ ಸಮಭ್ರಮಿಸಿ.
ಸಲಹೆ:
ಚಾಕಲೇಟ್ ಮೋಹ ತುಸು ಜಾಸ್ತಿಯೇ ಉಳ್ಳವರಾಗಿದ್ದರೆ ಹೆಚ್ಚು ಪ್ರಮಾಣದ ಭ್ರೌನಿಯನ್ನು ಹಾಕಿ. ಆದರೆ ಭ್ರೌನಿಯಲ್ಲಿ ಕಡಲೆ ಬೀಜ, ಗೋಡಂಬಿ ಮುಂತಾದವುಗಳಿಲ್ಲದಂತೆ ಎಚ್ಚರವಹಿಸಿ. ಇವು ಮಿಲ್ಕ್ ಷೇಕ್ ನ ರುಚಿಯನ್ನು ಕಡಿಮೆಮಾಡುತ್ತವೆ.
ಹೆಳೋಕೆ ಮರೆತಿದ್ದೆ: ಮಿಲ್ಕ್ ಷೇಕ್ ಮಾಡುವುದಕ್ಕೆ ಇವೆಲ್ಲಕ್ಕಿಂತ ಮೊದಲು ಬ್ಲೆಂಡರ್ ಹಾಗೂ ಗ್ಲಾಸುಗಳು ಬೇಕು!



Click it and Unblock the Notifications
