Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಸೊಪ್ಪನ್ನು ಸ್ವಚ್ಛಗೊಳಿಸುವುದು ಸುಲಭದ ಕೆಲಸವಲ್ಲ!
"ಸೊಪ್ಪು" ನಿಜಕ್ಕು ಒಳ್ಳೆಯದು, ತತ್‍ಕ್ಷಣಕ್ಕೆ ಹೇಳಬೇಕೆಂದರೆ ಇದೊಂದು ಎಲೆಗಳಿರುವ ತರಕಾರಿ ಎಂದು ಹೇಳಬಹುದು. ಲೆಟ್ಟೂಸ್, ಕೋಸು ಮತ್ತು ಪಾಲಕ್‍ಗಳಂತೆ ಇದು ಸಹ ತರಕಾರಿಯೆ. ಆದರೆ ಈ ಸೊಪ್ಪುಗಳು ನಿಮ್ಮ ದೇಹಕ್ಕೆ ಅಗತ್ಯವಿಲ್ಲದ ಕೀಟನಾಶಕಗಳು ಮತ್ತು ರಾಸಾಯನಿಕಗಳಿಗೆ ಹೆಚ್ಚಾಗಿ ಹಿಡಿದಿಟ್ಟುಕೊಳ್ಳುತ್ತವೆ.
ಇವು ಸಾವಯವ ಉತ್ಪನ್ನವಾಗಿದ್ದರು ಸಹ ಕೊಳೆ ಮತ್ತು ವಿಲೇವಾರಿಯ ಸಮಯದಲ್ಲಿ ಹೇಗೆ ಮಲಿನವಾಗಿರುತ್ತದೊ ಯಾರು ಬಲ್ಲರು. ಹಾಗಾಗಿ ಆ ಕೊಳೆ ಕಲ್ಮಶಗಳನ್ನು ನೀವು ಸ್ವಚ್ಛಗೊಳಿಸಬೇಕು. ಇದನ್ನು ಸ್ವಚ್ಛಗೊಳಿಸುವ ಅತ್ಯಂತ ಸುಲಭದ ಕೆಲಸವೆಂದರೆ ಸಿಂಕ್ ತುಂಬಾ ನೀರು ತುಂಬಿ ಸ್ವಚ್ಛಗೊಳಿಸಬೇಕು.

ಹಂತಗಳು
1. ನೀವು ಸೊಪ್ಪು ತೊಳೆಯುವ ಮೊದಲು ಸಿಂಕ್‍ನ ಒಳಗಡೆ ಮತ್ತು ಹೊರಭಾಗದಲ್ಲಿ ಸಂಪೂರ್ಣವಾಗಿ ಮತ್ತು ಸ್ವಚ್ಛವಾಗಿ ತೊಳೆಯಿರಿ. ಸಿಂಕ್‍ನಲ್ಲಿ ಯಾವುದೇ ಸೋಪ್‍ನ ಉಳಿಕೆಗಳು ಇಲ್ಲವೆಂದು ಖಾತ್ರಿ ಪಡಿಸಿಕೊಳ್ಳಿ. ನೀವು ಅದಕ್ಕಾಗಿ ಯಾವುದೇ ರೀತಿಯಲ್ಲಿ ಕ್ರಿಮಿಗಳಿಲ್ಲದಂತೆ ತೊಳೆಯುವ ಅವಶ್ಯಕತೆಯಿಲ್ಲ. ಬದಲಿಗೆ ಯಾವುದೇ ಆಹಾರದ ತುಣುಕುಗಳು ಅಥವಾ ಇನ್ನಿತರ ತ್ಯಾಜ್ಯಗಳು ಸಿಂಕಿನಲ್ಲಿ ಇಲ್ಲದಂತೆ ಎಚ್ಚರವಹಿಸಿ. ಸ್ವಲ್ಪ ದೊಡ್ಡದಾದ ಸಿಂಕ್ ಇದ್ದರೆ ಉತ್ತಮ.
2. ಸಿಂಕ್‍ನಲ್ಲಿ ಅಗತ್ಯಕ್ಕೆ ತಕ್ಕಷ್ಟು ನೀರು ತುಂಬಿಸಿ. ಹಾಗೆಂದು ಸಿಂಕ್ ತುಂಬ ನೀರು ತುಂಬಬೇಡಿ.
3. ಸೊಪ್ಪಿನ ಕಾಂಡ ಮತ್ತು ತುದಿಯನ್ನು ಬೇರ್ಪಡಿಸಲು ಇರುವ ಅತ್ಯುತ್ತಮ ಮಾರ್ಗವೆಂದರೆ, ಸೊಪ್ಪನ್ನು ತುದಿ ಮೇಲೆ ಮತ್ತು ಬುಡ ಕೆಳಗೆ ಇರುವಂತೆ ಹಿಡಿಯಿರಿ (ಆದರೆ ಹಿಂಡಬೇಡಿ) . ನಂತರ ಅದನ್ನು ಒಂದು ಹಲಗೆ ಅಥವಾ ಮಣೆಯ ಮೇಲೆ ಇಟ್ಟು ಕತ್ತರಿಸಿ. ಹೀಗೆ ಎರಡು ಅಥವಾ ಮೂರು ಬಾರಿ ಕತ್ತರಿಸಿದರೆ ಸಾಕು. ನಂತರ ಸೊಪ್ಪನ್ನು ಕಿತ್ತು ಬೇರ್ಪಡಿಸಿ, ( ಸೊಪ್ಪು ಮತ್ತು ಕಾಂಡಗಳ ನಡುವೆ ಏನು ಇರಬಾರದು) ನಂತರ ಅವುಗಳನ್ನು ಸಿಂಕ್‍ನಲ್ಲಿ ಹಾಕಿ. ಸಣ್ಣದಾಗಿರುವ ಸೊಪ್ಪಿನ ಕಾಂಡವನ್ನು ಹೆಬ್ಬೆರಳಿನಿಂದ ಚಿವುಟಿ ಬೇರ್ಪಡಿಸಬಹುದು. ದೊಡ್ಡದಾದ ದಂಟಿರುವ ಸೊಪ್ಪುಗಳನ್ನು ಕತ್ತರಿಸಬೇಕಾದಾಗ, ಅವುಗಳನ್ನು ಸರಿಯಾಗಿ ಅರ್ಧಭಾಗಕ್ಕೆ ಬರುವಂತೆ ಬಾಗಿಸಿ, ಅವೆರಡು ಭಾಗಗಳನ್ನು ಕೂಡಿಸಿ. ಬಲಿತ ಕಾಂಡಗಳನ್ನು ಬೇರ್ಪಡಿಸಿ. ( ನಿಮಗೆ ಬಲಿತ ಕಾಂಡಗಳೆ ಅಡುಗೆಗೆ ಬೇಕೆಂದರೆ ಮಾತ್ರ ಅದನ್ನು ಉಳಿಸಿಕೊಳ್ಳಿ).
4. ಸಿಂಕ್‍ನಲ್ಲಿ ತಣ್ಣನೆಯ ನೀರನ್ನು ತುಂಬಿ.
5. ಸೊಪ್ಪನ್ನು ನಿಧಾನವಾಗಿ ನೀರಿನಲ್ಲಿ ವೃತ್ತಾಕಾರವಾಗಿ ಜಾಲಿಸಿ. ಪ್ರತಿ ಸೊಪ್ಪು ಚೆನ್ನಾಗಿ ಮುಳುಗಿರುವಂತೆ ನೋಡಿಕೊಳ್ಳಿ. ಹಾಗು ಇವುಗಳನ್ನು ಸರಿಯಾಗಿ ಜಾಲಿಸಿಲಾಗಿದೆಯೆ ಎಂದು ಗಮನಿಸಿ.
6. ಸೊಪ್ಪು ಸಿಂಕ್‍ನಲ್ಲಿ ಸ್ವಲ್ಪ ಹೊತ್ತು ತಟಸ್ಥವಾಗಿ ಇರುವಂತೆ ಬಿಡಿ. ಏಕೆಂದರೆ ಕೊಳೆಯೇನಾದರು ಇದ್ದರೆ, ಅದು ಸಿಂಕ್‍ನ ತಳಭಾಗಕ್ಕೆ ತಲುಪುತ್ತದೆ.
7. ಸೊಪ್ಪನ್ನು ನಿಧಾನವಾಗಿ ಒಂದು ಅಥವಾ ಎರಡೆರಡಾಗಿ ತೆಗೆದು, ನಿಮಗೆ ಬೇಕಾದ ಗಾತ್ರಕ್ಕೆ ಕತ್ತರಿಸಿ ಇಲ್ಲವೆ ಹಾಗೆಯೆ ಬಳಸಲು ಯೋಚಿಸಿದ್ದರೆ ಬಿಟ್ಟು ಬಿಡಿ. ಸಿಂಕ್‍ನಿಂದ ತೆಗೆದ ಸೊಪ್ಪು ಈಗಲು ಗಲೀಜಾಗಿದ್ದರೆ, ಅದನ್ನು ಸ್ವಲ್ಪ ಮೃದುವಾಗಿ ಜಾಲಿಸಿ. ನಿಮ್ಮ ಮನೆಯಲ್ಲಿ ಎರಡು ಸಿಂಕ್ ಇದ್ದರೆ, ಅದನ್ನು ಇನ್ನೊಂದರ ಕೊಳಾಯಿಯ ಕೆಳಗೆ ನೀರು ಬಿಟ್ಟು ತೊಳೆಯಿರಿ. ನೀರಿನಲ್ಲಿ ಜಾಲಿಸುವಾಗ ನೀರನ್ನು ಹೆಚ್ಚಾಗಿ ಕದಡಬೇಡಿ.
8. ಸೊಪ್ಪನ್ನು ಬಸಿ ತಟ್ಟೆಯಲ್ಲಿ ಹಾಕಿ ನೀರನ್ನು ಸಂಪೂರ್ಣವಾಗಿ ಬಸಿಯಿರಿ. ಬಸಿ ತಟ್ಟೆಯನ್ನೇನಾದರು ಸಿಂಕ್‍ನಲ್ಲಿಡಬೇಕಾದರೆ ಸಿಂಕ್ ಯಾವುದೇ ಕೊಳೆ ಮತ್ತು ಕಲ್ಮಶಗಳಿಲ್ಲದೆ ಪೂರ್ತಿ ಖಾಲಿಯಾಗಿದೆಯೆ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ. ಸೊಪ್ಪಿನಿಂದ ಹೆಚ್ಚಾದ ನೀರನ್ನು ಹೊರಗೆ ತೆಗೆಯಲು, ಅವುಗಳನ್ನು ಒಂದು ದೊಡ್ಡ ಹತ್ತಿಯ ಮಸ್ಲಿನ್ (36' x 36')ಬಟ್ಟೆಯ ಮಧ್ಯೆ ಇಡಿ. ಆನಂತರ ಅದರ ನಾಲ್ಕು ತುದಿಗಳನ್ನು ಒಟ್ಟುಗೂಡಿಸಿ. ಹೊರಗೆ ಹೋಗಿ ಅಥವಾ ನಿಮ್ಮ ಮನೆಯ ಶವರ್ ಬಳಿ ಹೋಗಿ. ಆ ಗಂಟನ್ನು ದೊಡ್ಡ ವೃತ್ತಾಕಾರವಾಗಿ ತಿರುಗಿಸಿ. ಈ ಪ್ರಕ್ರಿಯೆಯಿಂದಾಗಿ ಸೊಪ್ಪಿನಲ್ಲಿರುವ ನೀರು ಹಾರಿ ಹೋಗುತ್ತದೆ.
ಸೊಪ್ಪನ್ನು ಸ್ವಚ್ಛ ಮಾಡುವಾಗ ಮುಂದಿನ ಲೇಖನದಲ್ಲಿ ಹೇಳಿರುವ ಸಲಹೆಗಳನ್ನು ಪಾಲಿಸಿದರೆ ಸೊಪ್ಪಿನಲ್ಲಿರುವ ಹುಳ ಹುಪ್ಪಟೆಗಳನ್ನು ಸಂಪೂರ್ಣವಾಗಿ ತೆಗೆಯಬಹುದು.



Click it and Unblock the Notifications
