Latest Updates
-
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್
ತಿರುಪತಿ ಲಾಡು ರುಚಿಯಲ್ಲಿ ಮನೆಯಲ್ಲೇ ಮಾಡಿ ಈ ಲಾಡು..! ಇಲ್ಲಿದೆ ರೆಸಿಪಿ
ಈಗ ತಿರುಪತಿ ಲಡ್ಡು ಬಗ್ಗೆ ಕೇಳಿಬರುತ್ತಿರುವ ಸುದ್ದಿ ಇಡೀ ದೇಶದ ಜನರಿಗೆ ಆಘಾತ ತಂದೊಡ್ಡಿದೆ. ತಿರುಪತಿ ದೇವಾಲಯ ಎಷ್ಟು ಪ್ರಸಿದ್ಧಿಯೋ ಅಲ್ಲಿ ಸಿಗುವ ಈ ಲಾಡು ಸಗ ಅಷ್ಟೇ ಖ್ಯಾತಿ ಪಡೆದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಖಾದ್ಯ ಹೆಸರು ಮಾಡಿದೆ. ಆದ್ರೆ ಈಗ ಕೇಳಿಬರುತ್ತಿರುವ ಆರೋಪ ಕೇಳಿ ಎಲ್ಲರಿಗೂ ಅಚ್ಚರಿಯ ಜೊತೆಗೆ ಶಾಕ್ ಸಹ ಆಗಿದೆ.
ಮನೆಯಲ್ಲಿ ನಾವು ಸಹ ಈ ಲಾಡು ಮಾಡಿ ಸವಿದಿರುತ್ತೇವೆ. ಆದ್ರೆ ಈ ತಿರುಪತಿ ದೇವಾಲಯದಲ್ಲಿ ಸಿಗುವ ಲಾಡು ರುಚಿ ಹೇಗೆ ಮಾಡಿದರು ಸಿಗುವುದಿಲ್ಲ. ಹಾಗೆ ಅಂಗಡಿ, ಬೇಕರಿಯಲ್ಲೂ ಈ ರೀತಿಯ ಲಡ್ಡು ಸಿಗುತ್ತವೆ, ಆದ್ರೆ ಇದ್ಯಾವುದೂ ತಿರುಪತಿಯ ಲಾಡುವಿನಂತಹ ರುಚಿ ನೀಡುವುದೆ ಇಲ್ಲ. ಆದ್ರೆ ನಾವು ಮನೆಯಲ್ಲಿ ಈ ರುಚಿಯ ಬೂಂದಿ ಲಾಡು ಮಾಡಬಹುದು.

ಬೂಂದಿ ಲಾಡು ಮನೆಯಲ್ಲಿ ಮಾಡುವುದು ತುಂಬಾನೆ ಸುಲಭ, ಹಾಗಾದ್ರೆ ನಾವಿಂದು ಈ ಬೂಂದಿ ಲಾಡು ಮಾಡುವುದು ಹೇಗೆ? ತಿರುಪತಿ ಲಾಡಿನಂತೆ ರುಚಿ ಹೋಲುವ ಲಾಡು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡುವ ಸರಿಯಾದ ವಿಧಾನವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಹಾಗ ಮನೆಯಲ್ಲಿ ನಾವು ಮಾಡುವ ಪ್ರಯತ್ನ ಮಾಡೋಣ.
ಲಾಡು ಮಾಡಲು ಬೇಕಾಗುವ ಪದಾರ್ಥಗಳು
- ಕಡಲೆ ಹಿಟ್ಟು- 1 ಕಪ್
- ಸೋಡಾ
- ಉಪ್ಪು
- ಕಲರ್ ಪುಡಿ
- ತುಪ್ಪ
- ಸಕ್ಕರೆ -ಅರ್ಧ ಕಪ್
- ಏಲಕ್ಕಿ ಪುಡಿ ಅಥವಾ ಕಾಳು
- ಲವಂಗ
- ದ್ರಾಕ್ಷಿ ಗೋಡಂಬಿ
ಲಾಡು ಮಾಡುವ ವಿಧಾನ
ಮೊದಲು ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಕಡಲೆ ಹಿಟ್ಟು, ಉಪ್ಪು, ಸೋಡಾ, ಕಲರ್, ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಕಲಸಿಕೊಳ್ಳಿ. ಗಂಟು ಇಲ್ಲದಂತೆ ತುಂಬಾನೆ ನುಣುಪಾಗಿ ಹಿಟ್ಟು ಬರುವಂತೆ ತಿರುಗಿಸಿಕೊಳ್ಳಿ. ಇದು ಬೋಂಡಾ ಹಿಟ್ಟಿನಂತೆ ಬರಬೇಕು. ಈಗ ಈ ಹಿಟ್ಟು ಬೂಂದಿ ಮಾಡಿಕೊಳ್ಳಲು ತಯಾರಾಗುತ್ತದೆ.
ಈಗ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಳ್ಳಿ. ಈ ಎಣ್ಣೆ ಕಾದ ಬಳಿಕ ನೀವು ಪೂರಿ ಕರಿಯಲು ಬಳಸುವ ಜರಡಿಯಂತಹ ಸೌಟನ್ನು ಬೂಂದಿ ಬಿಡಲು ಬಳಸಿಕೊಳ್ಳಿ. ಮೊದಲು ಒಂದು ಲೋಟದಲ್ಲಿ ಈ ಹಿಟ್ಟು ತೆಗೆದುಕೊಂಡು ಜರಡಿಯಂತಿರುವ ಸೌಟಿನ ಮೇಲೆ ಹಾಕಿ. ಈಗ ಕಾಳಿನಾಕಾರದಲ್ಲಿ ಬೂಂದಿ ಎಣ್ಣೆಗೆ ಬಿಡಬೇಕು. ಸಣ್ಣ ಉರಿಯಲ್ಲಿ ಈ ಬೂಂದಿಗಳು ಕರಿಯಬೇಕು.
2ರಿಂದ 3 ನಿಮಿಷ ಕರಿದುಕೊಳ್ಳಬೇಕು. ನಂತರ ಬೂಂದಿಯನ್ನು ಎತ್ತಿ ಎಣ್ಣೆ ಇಳಿಯಲು ಬಿಡಬೇಕು. ಹೀಗೆ ಎಲ್ಲಾ ಹಿಟ್ಟನ್ನು ಮಾಡಿಕೊಳ್ಳಿ. ಈಗ ಬೂಂದಿ ತಣ್ಣಗಾಗಲು ಬಿಡಿ. ಈಗ ಸಕ್ಕರೆ ಪಾಕ ಮಾಡಿಕೊಳ್ಳಿ.

ಇದಕ್ಕೆ ಒಂದು ಪಾತ್ರೆ ಒಲೆ ಮೇಲೆ ಇಟ್ಟು ಅದಕ್ಕೆ ಮುಕ್ಕಾಲು ಕಪ್ ಸಕ್ಕರೆ ಅರ್ಧ ಕಪ್ ನೀರು ಹಾಕಿ ಸಕ್ಕರೆ ಕರಗುವ ತನಕ ಮಿಕ್ಸ್ ಮಾಡಿಕೊಳ್ಳಿ. ಒಂದು ಎಳೆ ಪಾಕ ಬರುವವರೆಗೂ ಕಾಯಿಸಿಕೊಳ್ಳಿ. ಪಾಕ ರೆಡಿಯಾದ ಬಳಿಕ ಇದಕ್ಕೆ ಏಲಕ್ಕಿ ಪುಡಿ, ಏಲಕ್ಕಿ ಬೀಜ ಹಾಕಿಕೊಳ್ಳಿ. ಈಗ ಒಲೆ ಆಫ್ ಮಾಡಿಕೊಂಡು ಕರಿದುಕೊಂಡಿರುವ ಬೂಂದಿಯನ್ನು ಇದರ ಒಳಗೆ ಹಾಕಿ.
ನಂತರ ಇನ್ನೊಂದು ಕಡೆ ಒಂದು ಪಾತ್ರೆಯಲ್ಲಿ ತುಪ್ಪ ಹಾಕಿ ದ್ರಾಕ್ಷಿ ಗೋಡಂಬಿ, ಲವಂಗವನ್ನು ಕರಿದುಕೊಂಡು ಇದಕ್ಕೆ ಹಾಕಿ. ನಂತರ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಚೆನ್ನಾಗಿ ಮಿಕ್ಸ್ ಮಾಡಿ 15 ನಿಮಿಷ ಮುಚ್ಚಳ ಮುಚ್ಚಿ ಬಿಡಿ. 15 ನಿಮಿಷದ ಬಳಿಕ ಒಂದು ಮುಷ್ಟಿ ಬೂಂದಿಯನ್ನು ತೆಗೆದು ಮಿಕ್ಸಿಯಲ್ಲಿ ರುಬ್ಬಿಕೊಂಡು ಪಾತ್ರೆಗೆ ಹಾಕಿ.
ಈಗ ಬೂಂದಿ ಲಾಡು ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಉಂಡೆ ಕಟ್ಟಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಬೂಂದಿ ಲಾಡು ರೆಡಿಯಾಗುತ್ತದೆ. ತಿರುಪತಿ ಲಾಡು ಸವಿದ ರೀತಿ ಬರಬಹುದು. ನೀವು ಸಹ ಒಮ್ಮೆ ಮನೆಯಲ್ಲಿ ಈ ರೀತಿ ಮಾಡಿ ನೋಡಿ.



Click it and Unblock the Notifications
