Latest Updates
-
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
Headline for Deeplink -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ!
ಶಿವನಿಗೆ ಪ್ರಿಯ ಈ ತಂಬಿಟ್ಟು ಉಂಡೆ: ಮಾಡೋದು ತುಂಬಾ ಸುಲಭ
ಮಹಾ ಶಿವರಾತ್ರಿ ಆಚರಣೆಗೆ ಇಡೀ ಭಕ್ತ ಸಮೂಹ ಕಾದಿದೆ. ಇದೇ ಮಾರ್ಚ್ 8ರಂದು ದೇಶದೆಲ್ಲೆಡೆ ಸಂಭ್ರಮದ ಮಹಾ ಶಿವರಾತ್ರಿ ಹಬ್ಬ ಆಚರಿಸಲಾಗುತ್ತಿದೆ. ಈ ವಿಶೇಷ ದಿನವನ್ನು ಶಿವನ ಆರ್ಶೀವಾದ ಪಡೆಯಲು ಸಮರ್ಪಿತವಾಗಿದೆ. ಈ ದಿನ ಶಿವನ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಲಿದೆ. ಜೊತೆಗೆ ಜಾಗರಣೆಗಳು ನಡೆಯಲಿವೆ.
ಕೈಲಾಸನಾಥನು ಈ ದಿನದಂದು ಭೂಮಿಗೆ ಆಗಮಿಸಿ ಸಕಲ ಇಷ್ಟಾರ್ಥಗಳನ್ನು ಪೂರೈಸುತ್ತಾನೆಂಬ ನಂಬಿಕೆ ಹಿಂದೂ ಭಕ್ತರಲ್ಲಿದೆ. ಅಲ್ಲದೆ ರಾತ್ರಿ ಜಾಗರಣೆ, ಇಡೀ ದಿನ ಉಪವಾಸ ಮಾಡುವ ಹಿಂದೆಯೂ ಪುರಾಣ ಕಥೆಗಳವೆ. ಆದರೆ ನಾವಿಂದು ಶಿವನ ಪೂಜೆಗೆ, ಆತನ ಆರಾಧನೆಯ ಸಮಯದಲ್ಲಿ ಯಾವ ಆಹಾರ ಆತನಿಗೆ ಸಮರ್ಪಿಸಬೇಕು ಎಂಬುದನ್ನು ನೋಡೋಣ.

ಶಿವರಾತ್ರಿಯ ಸಮಯದಲ್ಲಿ ಹೆಚ್ಚಾಗಿ ಸಿಹಿಯಾದ ತಂಬಿಟ್ಟು ಮಾಡಿ ಶಿವನಿಗೆ ಅರ್ಪಿಸುವ ಆಚರಣೆ ಜಾರಿಯಲ್ಲಿದೆ. ತಂಬಿಟ್ಟು ಶಿವನಿಗೆ ಅತ್ಯಂತ ಶ್ರೇಷ್ಠ ಮತ್ತು ಪ್ರಿಯವಾದ ಆಹಾರ ಎನ್ನಲಾಗಿದೆ. ಹೀಗಾಗಿ ಶಿವನಿಗೆ ಆರತಿ ಮಾಡುವ ಸಮಯದಲ್ಲಿ ತಂಬಿಟ್ಟು ಇಟ್ಟು ನೈವೇದ್ಯ ಮಾಡಿ ಬಳಿಕ ಅದನ್ನು ಪ್ರಸಾದವಾಗಿ ಹಂಚಲಾಗುತ್ತದೆ.
ಹಾಗಾದರೆ ಶಿವರಾತ್ರಿಗೆ ಈ ಸಿಹಿಯಾದ ತಂಬಿಟ್ಟು ಮಾಡುವುದು ಹೇಗೆ? ತಂಬಿಟ್ಟು ಮಾಡಲು ಬೇಕಾಗುವ ಪದಾರ್ಥವೇನು? ತಂಬಿಟ್ಟು ಮಾಡುವ ಪಾಕವಿಧಾನ ಏನು? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ತಂಬಿಟ್ಟು ಉಂಡೆ ಮಾಡಲು ಬೇಕಾಗುವ ಪದಾರ್ಥಗಳು
- ಹುರಿಗಡಲೆ-100 ಗ್ರಾಂ
- ಅಕ್ಕಿ-ಅರ್ಧ ಕೆ.ಜಿ
- ಎಳ್ಳು-5 ಚಮಚ
- ಕಡಲೆಬೀಜ-50 ಗ್ರಾಂ
- ಬೆಲ್ಲ-ಅಚ್ಚು ಒಂದು
- ಕೊಬ್ಬರಿ-ತುರಿ ಅರ್ಧ ಕಪ್
- ಏಲಕ್ಕಿ-3
- ತುಪ್ಪ-5 ಚಮಚ
- ಶುಂಠಿ-ಸ್ವಲ್ಪ
ಮೊದಲು ಅಕ್ಕಿಯನ್ನು ಒಂದು ಪ್ಯಾನ್ನಲ್ಲಿ ಹಾಕಿ ಸ್ವಲ್ಪ ಬಿಸಿ ಮಾಡಿಕೊಳ್ಳಿ ಬಳಿಕ ಮಿಕ್ಸರ್ ಜಾರ್ ಗೆ ಹಾಕಿ ಚೆನ್ನಾಗಿ ಹುಡಿ ಮಾಡಿಕೊಳ್ಳಿ. ಅಕ್ಕಿಯ ಕಾಳು ಚೆನ್ನಾಗಿ ಹಿಟ್ಟಾಗಿರಬೇಕು. ನಂತರ ಪ್ಯಾನ್ಗೆ ಕಡಲೆ ಬೀಜ, ಎಳ್ಳು, ಹಾಕಿ ಬಿಸಿ ಮಾಡಿಟ್ಟುಕೊಳ್ಳಿ. ಬಳಿ ಕಡಲೆ ಬೀಜ, ಹುರಿಗಡಲೆ, ಏಲಕ್ಕಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.
ನಂತರ ಒಂದು ಪಾತ್ರೆಯನ್ನು ಒಲೆ ಮೇಲೆ ಇಟ್ಟು ಬೆಲ್ಲ, ಹಾಗೂ ಸ್ವಲ್ಪ ನೀರು ಹಾಕಿ ಸಾಧಾರಣ ಪಾಕ ರೆಡಿ ಮಾಡಿಕೊಳ್ಳಿ. ಇನ್ನೊಂದು ಕಡೆ ಪುಡಿ ಮಾಡಿರುವ ಅಕ್ಕಿಯ ಹಿಟ್ಟು, ಹುರಿದ ಎಳ್ಳು, ರುಬ್ಬಿಕೊಂಡಿರುವ ಎಲ್ಲಾ ಪದಾರ್ಥಗಳನ್ನು ಹಾಕಿ. ಇದನ್ನು ಪಾಕಕ್ಕೆ ಹಾಕಿ ತಿರುಗಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಪಾಕ ಬಿಸಿ ಇರುವಾಗಲೇ ಉಂಡೆ ಕಟ್ಟಲು ಪ್ರಾರಂಭಿಸಿ. ಬಳಿಕ ತಂಬಿಟ್ಟು ಉಂಡೆಗಳು ರೆಡಿಯಾಗುತ್ತವೆ.
ಸಾಮಾನ್ಯವಾಗಿ ಮಹಾಶಿವರಾತ್ರಿಯ ಪೂಜೆಯು ಬೆಳಗ್ಗೆ ಬೇಗನೆ ಆರಂಭವಾಗುವುದು. ಈ ದಿನ ಭಕ್ತರು ಸೂರ್ಯೋದಯಕ್ಕೆ ಮೊದಲು ಸ್ನಾನ ಮಾಡುವರು, ಹೊಸ ಬಟ್ಟೆ ಧರಿಸಿ, ಶಿವನ ಮಂದಿರಕ್ಕೆ ಭೇಟಿ ನೀಡುವರು. ಸಾಂಪ್ರದಾಯಿಕವಾಗಿ ನೀರು, ಹಾಲು, ಬಿಲ್ವ ಪತ್ರೆ, ಹಣ್ಣುಗಳೊಂದಿಗೆ ವ್ರತವನ್ನು ಆಚರಿಸುವಂತಹ ಮಹಿಳೆಯರಿಗೆ ಈ ದಿನವು ತುಂಬಾ ವಿಶೇಷವಾಗಿರುವುದು. ಇವರು ಶಿವಲಿಂಗಕ್ಕೆ 3ರಿಂದ 7 ಸುತ್ತು ಬರುವರು ಮತ್ತು ಇದರ ಬಳಿಕ ಲಿಂಗಕ್ಕೆ ನೀರು ಮತ್ತು ಹಾಲಿನ ಅಭಿಷೇಕ ಮಾಡಿ, ಬಳಿಕ ಬಿಲ್ವ ಪತ್ರೆಗಳು, ಹಣ್ಣುಗಳು, ಹೂವು ಅರ್ಪಿಸುವರು. ಇದರ ಬಳಿಕ ಅಗರಬತ್ತಿ ಬಳಸಿಕೊಂಡು ಪೂಜೆ ಮಾಡುವರು.
ಹಣ್ಣುಗಳಿಂದ ಮಾಡಿದ ಮಾಲ್ಪುವಾ ಅರ್ಪಿಸಿ
ಭಂಗಿ ಪುಡಿ ಮಿಶ್ರಿತ ಹಾಗೂ ಒಣ ಹಣ್ಣುಗಳಿಂದ ಮಾಡಲಾದ ಮಾಲ್ಪುವಾಸಿಹಿ ತಿಂಡಿಯು ಶಿವನಿಗೆ ಅತ್ಯಂತ ಪ್ರಿಯವಾದ ಆಹಾರವಾಗಿದೆ ಎಂದು ನಂಬಲಾಗಿದೆ. ಹೀಗಾಗಿ ಶಿವರಾತ್ರಿಯಂದು ಈ ಸಿಹಿ ತಿಂಡಿ ಮಾಡಿ ಶಿವನಿಗೆ ಅರ್ಪಿಸಿದರೆ ನಿಮ್ಮ ಪ್ರಾರ್ಥನೆಗೆ ಫಲ ಸಿಗುವುದು ಖಚಿತ.



Click it and Unblock the Notifications