Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಮಹಾಶಿವರಾತ್ರಿಗೆ ಮಾಡಿ ಕಡ್ಲೆ ತಂಬಿಟ್ಟು: ಬಹಳ ಸುಲಭದ ಸಿಹಿ ತಿಂಡಿ ಇದು!
ಶಿವರಾತ್ರಿ ಹಬ್ಬ ಆಗಮಿಸಿದೆ. ಶಿವನ ಆಶೀರ್ವಾದ ಪಡೆಯಲು ಈ ಸಮಯದಲ್ಲಿ ದೇವಾಲಯ ಭೇಟಿ ಮಾಡುವುದು, ಮನೆಯಲ್ಲಿ ಶಿವನ ಪೂಜೆ ಮಾಡುವುದು ಸಾಮಾನ್ಯ. ಈ ವಿಶೇಷ ಸಂದರ್ಭದಲ್ಲಿ ಶಿವನಿಗೆ ವಿಶೇಷ ಪೂಜೆಯಿಂದ ನಿಮಗೆ ಅದೃಷ್ಟ ಒಲಿಯಲಿದೆ. ಹಾಗೆ ನಿಮ್ಮ ಹಲವು ಸಮಸ್ಯೆಗಳಿಗೆ ಪರಿಹಾರ ಪಡೆಯುವ ಸಮಯವೂ ಇದಾಗುತ್ತದೆ. ಹಾಗೆ ಈ ಹಬ್ಬದ ಸಮಯದಲ್ಲಿ ನಾವು ವಿಶೇಷ ರೀತಿಯಲ್ಲಿ ಮಾಡುವಂತಹ ತಂಬಿಟ್ಟು ಮಾಡುವ ಕುರಿತು ತಿಳಿಯೋಣ. ಅದ್ರಲ್ಲೂ ಹಬ್ಬಕ್ಕೆ ಮಾಡುವ ವಿಭಿನ್ನ ರುಚಿಯ ಕಡ್ಲೆ ತಂಬಿಟ್ಟು ಮಾಡೋದು ಹೇಗೆ ಅನ್ನೋದು ನಿಮಗೆ ಗೊತ್ತಾ?
ನೀವು ಸಹ ಅಂಗಡಿಗಳಲ್ಲಿ ಸಿಗುವ ವಿವಿಧ ಬಗೆಯ ತಂಬಿಟ್ಟು ಉಂಡೆಯನ್ನು ಸವಿದಿರುತ್ತೀರಿ. ಅದ್ರಲ್ಲೂ ಹಬ್ಬಗಳಲ್ಲಿ ನೀವು ಮನೆಯಲ್ಲೂ ಮಾಡಿ ಸವಿದಿರುತ್ತೀರಿ. ಉತ್ತರ ಕರ್ನಾಟಕ ಭಾಗದಲ್ಲಿ ಈ ತಂಬಿಟ್ಟು ಉಂಡೆ ಬಹಳ ಫೇಮಸ್ ಖಾದ್ಯಗಳಲ್ಲಿ ಒಂದು. ಯಾವುದೇ ಹಬ್ಬವಾಗಿದ್ದರೂ ಈ ತಂಬಿಟ್ಟು ಉಂಡೆ ಮಾಡಿ ಸವಿದಿರುತ್ತಾರೆ. ಹಾಗೆ ಬಗೆ ಬಗೆಯ ತಂಬಿಟ್ಟು ಸವಿಯೋದು ಸಹ ಇದೆ.
ಈ ತಂಬಿಟ್ಟನ್ನು ನೀವು ಬಹಳ ಸಮಯ ಇಟ್ಟು ಸವಿಯಬಹುದು, ಬಹುಬೇಗ ಹಾಳಾಗುವುದೂ ಇಲ್ಲ. ಹೀಗಾಗಿ ಮನೆಯಲ್ಲಿ ಒಮ್ಮೆ ಮಾಡಿಟ್ಟು ಹಲವು ದಿನಗಳ ಕಾಲ ಸವಿಯೋದು ನೋಡಬಹುದು. ಮಕ್ಕಳಿಗೂ ಇದು ಬಹಳ ಇಷ್ಟವಾಗುವ ತಿಂಡಿ. ಇದಲ್ಲದೆ ಮಾಡುವುದು ಕೂಡ ಬಹಳ ಸುಲಭ. ಹೀಗಾಗಿ ನಾವಿಂದು ಈ ಹಬ್ಬದ ಸಮಯದಲ್ಲಿ ಕೂಡ ಈ ಕಡಲೆ ತಂಬಿಟ್ಟು ಮಾಡುವ ಕುರಿತಾಗಿ ತಿಳಿದುಕೊಳ್ಳೋಣ.
ಕಡ್ಲೆ ತುಂಬಿಟ್ಟು ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಹುರಿಗಡಲೆ
- ಕಡಲೆ ಬೀಜ
- ಏಲಕ್ಕಿ
- ಎಣ್ಣೆ
- ಎಳ್ಳು
- ಬೆಲ್ಲ
ಕಡ್ಲೆ ತುಂಬಿಟ್ಟು ಮಾಡುವ ವಿಧಾನವೇನು?
ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ 2 ಕಪ್ ಹುರಿಗಡಲೆ ಹಾಕಿ 1 ನಿಮಿಷ ಬಿಸಿ ಮಾಡಿಕೊಳ್ಳಿ. ನಂತರ ಒಲೆ ಆಫ್ ಮಾಡಿ ಹುರಿಗಡಲೆಯನ್ನು ಮಿಕ್ಸಿ ಜಾರ್‌ಗೆ ಹಾಕಿಕೊಳ್ಳಿ. ನಂತರ ಇದಕ್ಕೆ ಕಾಲು ಚಮಚ ಏಲಕ್ಕಿ ಬೀಜ ಸಹ ಹಾಕಿ ನುಣ್ಣಗೆ ಪುಡಿ ಮಾಡಿಕೊಂಡ ಪುಡಿಯನ್ನು ತೆಗೆದು ಬೌಲ್‌ಗೆ ಹಾಕಿಟ್ಟುಕೊಳ್ಳಿ. ಈಗ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಒಂದು ಕಪ್ ಕಡಲೆ ಬೀಜ ಹಾಕಿ ಹುರಿದುಕೊಳ್ಳಿ.
ಈಗ ಹುರಿದ ಕಾಳುಗಳಿಂದ ಸಿಪ್ಪೆ ಬೇರ್ಪಡಿಸಬೇಕು ಯಾವ ವಿಧಾನವನ್ನಾದರು ಬಳಸಿ ಚಿಪ್ಪೆ ತೆಗೆದು ಕಾಳನ್ನು ಒಡೆದುಕೊಳ್ಳಿ. ಈಗ ಈ ಕಡಲೆಯನ್ನು ಮಿಕ್ಸಿ ಜಾರ್‌ಗೆ ಹಾಕಿ ತರಿ ತರಿಯಾಗಿ ಪುಡಿ ಮಾಡಿಕೊಳ್ಳಬೇಕು. ಅನಂತರ ಈ ಪುಡಿಯನ್ನು ಸಹ ಹುರಿಗಡಲೆ ಪುಡಿಯೊಂದಿಗೆ ಸೇರಿಸಿ ಮಿಕ್ಸ್ ಮಾಡಿ. ಈಗ ಮತ್ತೆ ಬಾಣಲೆಗೆ ಅರ್ಧ ಕಪ್ ಬಿಳಿ ಎಳ್ಳು ಹಾಕಿ 2 ನಿಮಿಷ ಹುರಿದು ಇದನ್ನು ಸಹ ಹಿಟ್ಟಿನೊಂದಿಗೆ ಸೇರಿಸಿ ಮಿಶ್ರಣ ಮಾಡಿ.
ಈಗ 1 ಕಪ್ ಕೊಬ್ಬರಿ ತುರಿ ಹಾಕಿ ಮಿಶ್ರಣ ಮಾಡಿ. ಈಗ ಮತ್ತೆ ಬಾಣಲೆಗೆ ಒಂದೂವರೆ ಕಪ್ ಬೆಲ್ಲ ಹಾಕಿ ನೀರು ಹಾಕಿ ಕರಗಲು ಬಿಡಿ. ಬೆಲ್ಲ ಚೆನ್ನಾಗಿ ಕರಗುವರೆಗೂ ತಿರುಗಿಸಿಕೊಂಡು ಬಳಿಕ ಜರಡಿ ಹಿಡಿದು ಹಿಟ್ಟಿಗೆ ಹಾಕಿ ಮಿಕ್ಸ್ ಮಾಡಿ. ಎಷ್ಟು ಅಗತ್ಯವೋ ಅಷ್ಟು ಬೆಲ್ಲದ ನೀರು ಹಾಕಿ ಉಂಡೆ ಕಟ್ಟಿಕೊಳ್ಳಿ. ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಉಂಡೆ ಕಟ್ಟಿಕೊಳ್ಳಿ.
ಹಿಟ್ಟು ಗಟ್ಟಿಯಾದರೆ ಮತ್ತೆ ಬೆಲ್ಲದ ನೀರು ಹಾಕಿಕೊಂಡು ಉಂಡೆ ಕಟ್ಟಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯಾದ ತಂಬಿಟ್ಟು ಉಂಡೆ ಸಿದ್ದವಾಗುತ್ತೆ. ಈ ಹಬ್ಬದಲ್ಲಿ ನೀವು ಸಹ ಮಾಡಿ ಸವಿದು ನೋಡಿ.



Click it and Unblock the Notifications

