Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಮನೆಯಲ್ಲಿ ಸತ್ಯನಾರಾಯಣ ಪೂಜೆ ಪ್ರಸಾದ ಮಾಡುವುದು ಹೇಗೆ? ತುಂಬಾನೆ ಸಿಂಪಲ್
ಹಿಂದೂ ಸಂಸ್ಕೃತಿಯಲ್ಲಿ ಹಲವು ಪೂಜೆ ಪುನಸ್ಕಾರಗಳಿಗೆ ಅದರದ್ದೇ ಆದ ವೈಶಿಷ್ಟ್ಯವಿದೆ. ಪೂಜೆ ಸಮಯದಲ್ಲಿ ಮಾಡುವ ತೀರ್ಥ ಪ್ರಸಾದಕ್ಕೂ ಅದರದ್ದೇ ಆದ ಪ್ರಾಮುಖ್ಯತೆ ಇದೆ. ಕೆಲವು ಬಾರಿ ಪ್ರಸಾದವಾಗಿ ನೀಡುವ ತಿಂಡಿ ಎಷ್ಟು ರುಚಿಯಾಗಿರುತ್ತೆ ಅಂದ್ರೆ ಪದೇ ಪದೇ ಸವಿಯಬೇಕು ಎನಿಸುತ್ತೆ. ಇನ್ನು ಕೆಲವು ದೇವಸ್ಥಾನಗಳು ಈ ಪ್ರಸಾದಗಳಿಂದಲೇ ಫೇಮಸ್ ಆಗಿರುತ್ತವೆ.
ಈಗ ನಾವು ಹೇಳಹೊರಟಿರೋದು ಸತ್ಯನಾರಾಯಣ ಪೂಜೆ ವೇಳೆ ನೀಡುವ ಪ್ರಸಾದ. ನೀವು ಸತ್ಯನಾರಾಯಣ ಪೂಜೆ ಸಮಯದಲ್ಲಿ ನೀಡುವ ಪ್ರಸಾದವನ್ನು ಸವಿದಿರಬಹುದು. ಎಷ್ಟು ರುಚಿಯಾಗಿರುತ್ತೆ ಅಂದ್ರೆ ಎರಡು ಬಾರಿ ಮೂರು ಬಾರಿ ತೆಗೆದುಕೊಂಡು ಸವಿಯುವವರು ಇದ್ದಾರೆ. ನಾವು ಚಿಕ್ಕವರಿದ್ದಾಗ ಪ್ರಸಾದ ಸವಿಯಲೆಂದೇ ಸತ್ಯನಾರಾಯಣ ಪೂಜೆಗೆ ಹೋಗುತ್ತಿದ್ದ ನೆನೆಪು ಮತ್ತೆ ಕಣ್ಮುಂದೆ ಬರುತ್ತೆ.

ಈ ಸತ್ಯನಾರಾಯಣ ಪೂಜೆ ವೇಳೆ ನೀಡುವ ಪ್ರಸಾದ ಹೇಗೆ ಮಾಡುತ್ತಾರೆ? ಅದು ಇಷ್ಟೊಂದು ರುಚಿಯಾಗಿರಲು ಯಾವ ಪದಾರ್ಥ ಹಾಕುತ್ತಾರೆ. ಮಾಡುವುದು ಹೇಗೆ ಎಂಬ ಕುರಿತು ನಾವಿಂದು ತಿಳಿದುಕೊಳ್ಳೋಣ. ಜೊತೆಗೆ ನಾವೇ ಮನೆಯಲ್ಲಿ ಮಾಡಿ ಸವಿಯಲು ಪ್ರಯತ್ನಿಸೋಣ.
ಸತ್ಯನಾರಾಯಣ ಪೂಜೆ ಪ್ರಸಾದ ಮಾಡಲು ಬೇಕಾಗುವ ಪದಾರ್ಥಗಳು
- ಚಿರೋಟಿ ರವೆ - ಅರ್ಧ ಕಪ್ 100 ಗ್ರಾಮ್
- ಹಾಲು
- ನೀರು
- ತುಪ್ಪ
- ಸಕ್ಕರೆ
- ಲವಂಗ
- ಏಲಕ್ಕಿ ಪುಡಿ
- ಬಾಳೆಹಣ್ಣು
- ದ್ರಾಕ್ಷಿ
- ಗೋಡಂಬಿ
- ಬಾದಾಮಿ
ಸತ್ಯನಾರಾಯಣ ಪೂಜೆ ಪ್ರಸಾದ ಮಾಡುವುದು ಹೇಗೆ ?
ಮೊದಲು ಒಲೆ ಮೇಲೆ ಪಾತ್ರೆಯಿಟ್ಟು ಚಿರೋಟಿ ರವೆ ಹುರಿದುಕೊಳ್ಳಬೇಕು. ರವೆ ಬ್ರೌನ್ ಕಲರ್ ಬರುವವರೆಗೂ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಹುರಿಯುವಾಗ ತುಪ್ಪ ಬಳಸಿ. ಇನ್ನೊಂದು ಕಡೆ ಡ್ರೈ ಫ್ರೂಟ್ಸ್‌ಗಳನ್ನು ತುಪ್ಪದಲ್ಲಿ ಹುರಿದುಕೊಳ್ಳಿ. ಹುರಿದ ಬಳಿಕ ಬದಿಗಿಟ್ಟುಕೊಳ್ಳಿ.
ಇದೆಲ್ಲಾ ಆದ ಬಳಿಕ ರವೆಗೆ ಸರಿಯಾದ ಪ್ರಯಾಣದಲ್ಲಿ ನೀರು ಮತ್ತು ಕಾಯಿಸಿದ ಹಾಲನ್ನು ಹಾಕಿಕೊಳ್ಳಿ. ರವೆ ತೆಗೆದುಕೊಂಡ ಕಪ್‌ನಲ್ಲಿಯೇ ಒಂದೂವರೆ ಕಪ್ ನೀರು ಒಂದೂವರೆ ಕಪ್ ಹಾಲು ಹಾಕಿಕೊಳ್ಳಿ. ಈ ವೇಳೆ ಸಕ್ಕರೆ ಹಾಕಿಕೊಳ್ಳಿ. ಈ ಹದ ಇದು ಗಟ್ಟಿಯಾಗುವಷ್ಟು ಹಂತ ತಲುಪಿದ ಬಳಿಕ ಅದಕ್ಕೆ ಹುರಿದುಕೊಂಡಿರುವ ಡ್ರೈ ಫ್ರೂಟ್ಸ್ ಹಾಕಿಕೊಳ್ಳಿ.
ಡ್ರೈ ಫ್ರೂಟ್ಸ್ ಹಾಕಿ, ಜೊತೆಗೆ ಬಾಳೆಹಣ್ಣು ಚಿಕ್ಕದಾಗಿ ಕತ್ತರಿಸಿಕೊಂಡು ಅದಕ್ಕೆ ಹಾಕಿ, ಒಂದು ನಿಮಿಷ ಕಾಯಿಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಸತ್ಯನಾರಾಯಣ ಪ್ರಸಾದ ರೆಡಿಯಾಗುತ್ತದೆ. ಇದನ್ನು ಪೂಜೆ ವೇಳೆ ನೈವೇದ್ಯ ಮಾಡಿ ಬಳಿಕ ಸವಿಯಬಹುದು.
ಈ ಪ್ರಸಾದವನ್ನು ಸತ್ಯನಾರಾಯಣ ಪೂಜೆ ಬಳಿಕ ಭಕ್ತರಿಗೆ ನೀಡಲಾಗುತ್ತದೆ. ಇದರ ರುಚಿಗೆ ಚಿಕ್ಕವರು, ಹಿರಿಯರು ಅನ್ನದೆ ಮನಸೋಲುತ್ತಾರೆ. ಚಿಕ್ಕ ಮಕ್ಕಳಂತು ಈ ಪ್ರಸಾದದ ರುಚಿಗೆ ಮನಸೋಲುತ್ತಾರೆ. ನೀವು ಸಹ ಸಮಯ ಸಿಕ್ಕಾಗ ಈ ಖಾದ್ಯ ಮಾಡಿ ಸವಿಯಬಹುದು.
ಸತ್ಯನಾರಾಯಣ ಪೂಜೆ ಮಾಡಿಸುವುದು ಏಕೆ?
ಯಾವುದೇ ಶುಭ ಕಾರ್ಯಕ್ಕೆ ಮುನ್ನ ಮನೆಯಲ್ಲಿ ಸತ್ಯನಾರಾಯಣ ಪೂಜೆ
ಮಾಡಿಸುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ತುಂಬಿಕೊಳ್ಳುತ್ತದೆ ಎಂಬ ಬಲವಾದ
ನಂಬಿಕೆ ಇದೆ.
ಮದುವೆ, ನಿಧ್ಚಿತಾರ್ಥ ಈ ರೀತಿಯ ಕಾರ್ಯಕ್ರಮದ ಮುಂಚೆ ಸತ್ಯನಾರಾಯಣ ಪೂಜೆ
ಮಾಡಿಸುವುದರಿಂದ ಹೊಸ ಜೋಡಿಯ ಬದುಕಿಗೆ ಒಳಿತಾಗುತ್ತದೆ.
ಗೃಹ ಪ್ರವೇಶ ಮಾಡುವಾಗ ಈ ಪೂಜೆ ಮಾಡುವುದರಿಂದ ಮನೆಗೆ
ಒಳಿತಾಗುತ್ತದೆ.
ಯಾವುದಾದರೂ ವ್ಯವಹಾರ ಮಾಡುವ ಮುನ್ನ ಸತ್ಯ ನಾರಾಯಣ ಪೂಜೆ ಮಾಡಿಸಿದರೆ
ಅದರಲ್ಲಿ ಯಶಸ್ಸು ಲಭಿಸುವುದು. ಜೊತೆಗೆ ಸತ್ಯನಾರಾಯಣ ಸ್ವಾಮಿ ಅನುಗ್ರಹಕ್ಕೆ
ಕಾರಣರಾಗಬೇಕಾದರೆ ಈ ವ್ರತ ಮಾಡಿಸಬೇಕು ಎಂಬ ಮಾತಿದೆ.



Click it and Unblock the Notifications
