Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಬೇಸಿಗೆಯಲ್ಲಿ ದೇಹಕ್ಕೆ ತಂಪು, ಆರೋಗ್ಯಕ್ಕೆ ಪುಷ್ಠಿ ಈ ರಾಗಿ ಅಂಬಳಿ: ಹೀಗೆ ಮಾಡಿದರೆ ಸೂಪರ್ ಟೇಸ್ಟ್
Recipes
oi-Reena TK
Posted By: Reena TK
ಬೇಸಿಗೆಯಲ್ಲಿ ಪ್ರತಿದಿನ ಮನೆಯಲ್ಲಿ ಮಾಡಲೇಬೇಕಾದ ಪಾನೀಯ ರಾಗಿ ಅಂಬಳಿ, ರಾಗಿ ಅಂಬಳಿ ಕುಡಿಯಲು ತುಂಬಾ ರುಚಿಯಾಗಿರುತ್ತದೆ, ಹೊಟ್ಟೆಗೆ ತುಂಬಾನೇ ತಂಪು , ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು. ರಾಗಿ ಅಂಬಳಿ ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
1 ಕಪ್ ರಾಗಿ ಅಂಬಳಿ
ಅರ್ಧ ಲೀಟರ್ ಮೊಸರು
2 ಲೀಟರ್ ನೀರು
2 ಈರುಳ್ಳಿ
2 ಹಸಿ ಮೆಣಸು
ರುಚಿಗೆ ತಕ್ಕ ಉಪ್ಪು
ಮಾಡುವ ವಿಧಾನ
- ಅರ್ಧ ಲೀಟರ್ ಮೊಸರಿಗೆ ಅರ್ಧ ಲೀಟರ್ ನೀರು ಹಾಕಿ ಕಲೆಸಿ
- ನಂತರ ಸೌಟ್ನಿಂದ ತಿರುಗಿಸುತ್ತಾ ಕಲೆಸಿ
- ರಾಗಿ ಅಂಬಳಿ ಮಾಡುವುದು ಹೇಗೆ?
- ಒಂದು ಬಟ್ಟಲಿನಲ್ಲಿ ರಾಗಿ ಹಿಟ್ಟು ತೆಗೆದುಕೊಂಡು ಅದರಲ್ಲಿ ಅರ್ಧ ಕಪ್ ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ
- ಹೀಗೆ ಕಲೆಸುವಾಗ ರಾಗಿ ಗಂಟು-ಗಂಟಾಗಿ ಇರಬಾರದು, ಚೆನ್ನಾಗಿ ಕಲೆಸಿ
- ನಂತರ ನೀವು ಒಂದೂವರೆ ಕಪ್ ನೀರನ್ನು ಹಾಕಿ ಕುದಿಸಿ, ನೀರು ಕುದಿ ಬರಲು ಪ್ರಾರಂಭಿಸಿದಾಗ ಮಿಕ್ಸ್ ಮಾಡಿಟ್ಟ ಹಿಟ್ಟು ಹಾಕಿ ಕಲೆಸಿ, ನಂತರ ರುಚಿಗೆ ತಕ್ಕ ಉಪ್ಪು ಸೇರಿಸಿ
- ರಾಗಿ ಮಾಲ್ಟ್ ರೀತಿಯಾದಾಗ ಉರಿ ಆಫ್ ಮಾಡಿ, ರಾಗಿ ತಣ್ಣಗಾದ ಮೇಲೆ ಅದಕ್ಕೆ ಮೊಸರಿಗೆ ನೀರು ಹಾಕಿ ಮಿಕ್ಸ್ ಮಾಡಿ ಮಾಡಿದ ಮಜ್ಜಿಗೆಯನ್ನು ಸೇರಿಸಿ ಮತ್ತೆ ಕಲೆಸಿ.
- ನಂತರ ಇದನ್ನು ಮಣ್ಣಿನ ಗ್ಲಾಸ್ಗೆ ಸುರಿಯಿರಿ
- ನಂತರ ಚಿಕ್ಕದಾಗಿ ಕತ್ತರಿಸಿಟ್ಟು ಈರುಳ್ಳಿ-ಹಸಿಮೆಣಸು ನೀವು ರಾಗಿ ಅಂಬಳಿ ಮೇಲೆ ಹಾಕಿ ಸರ್ವ್ ಮಾಡಿ, ಈ ರಾಗಿ ಅಂಬಳಿ ಕುಡಿಯಲು ತುಂಬಾ ರುಚಿಯಾಗಿರುತ್ತದೆ.
ರಾಗಿ ಅಂಬಳಿಯ ಪ್ರಯೋಜನಗಳು
- ದೇಹಕ್ಕೆ ತುಂಬಾ ತಂಪು, ಹಾಗಾಗಿ ಬೇಸಿಗೆಯಲ್ಲಿ ದೇಹವನ್ನು ರಕ್ಷಣೆ ಮಾಡುತ್ತದೆ, ಉಷ್ಣಾಂಶ ಹೆಚ್ಚಾದಾರೆ ಉಂಟಾಗುವ ಆರೋಗ್ಯ ಸಮಸ್ಯೆ ತಡೆಗಟ್ಟಲು ಸಹಕಾರಿ
- ಸುಸ್ತು ದೂರಾಗುವುದು
- ಬಾಯಾರಿಕೆ ದೂರಾಗುವುದು
- ಹಸಿವು ನಿಯಂತ್ರಿಸುತ್ತದೆ
- ರೋಗ ನಿರೋಧಕ ಶಕ್ತಿ ಹೆಚ್ಚುವುದು
- ರಕ್ತಹೀನತ ಸಮಸ್ಯೆ ತಡೆಗಟ್ಟುತ್ತದೆ
- ಮಲಬದ್ಧತೆ, ಅಜೀರ್ಣ ಈ ಬಗೆಯ ಸಮಸ್ಯೆ ತಡೆಗಟ್ಟಲು ಸಹಕಾರಿ.
- ಮಕ್ಕಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
Comments
[ of 5 - Users]



Click it and Unblock the Notifications
