Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಮಧುಮೇಹಿಗಳಿಗೂ ಉತ್ತಮ ಈ ಮಸಾಲ ಓಟ್ಸ್ ಇಡ್ಲಿ: ಕ್ಷಣದಲ್ಲಿ ಮಾಡಿ ಮುಗಿಸಿ!
ಬೆಳಗ್ಗೆ ತಿಂಡಿಗೆ ನೀವು ರುಚಿ ರುಚಿಯಾದ ಖಾದ್ಯಗಳ ಮಾಡಿ ಸವಿಯುವುದು ಕಾಮನ್, ಹಾಗೆ ನಿತ್ಯ ಒಂದೇ ರೀತಿಯ ತಿಂಡಿಗಳ ಮಾಡಿ ಸವಿಯುವುದು ಅಂದ್ರೆ ಯಾರಿಗೂ ಕೂಡ ಇಷ್ಟವಾಗೋದಿಲ್ಲ. ಬಗೆ ಬಗೆಯ ಖಾದ್ಯಗಳ ಮಾಡುವುದು ಅಂದರೂ ಬಹಳ ಸಮಯ ಹಾಗೂ ವಸ್ತುಗಳು ಬೇಕಾಗುತ್ತವೆ. ಆದ್ರೆ ಸರಳವಾಗಿ ಹಾಗೆ ಆರೋಗ್ಯದ ದೃಷ್ಟಿಯಿಂದಲೂ ಉತ್ತಮವಾದ ಖಾದ್ಯದ ಕುರಿತಾಗಿ ನಾವಿಂದು ಹೇಳಲಿದ್ದೇವೆ.
ಇಡ್ಲಿಯನ್ನು ನಿಮ್ಮ ಮನೆಯಲ್ಲಿ ಮಾಡಿಯೇ ಮಾಡಿರುತ್ತೀರಿ. ವಾರದಲ್ಲಿ ಒಮ್ಮೆಯಾದರು ಇಡ್ಲಿ ರುಚಿ ಸವಿದಿರುತ್ತೀರಿ. ಹೋಟೆಲ್ಗಳಲ್ಲಿ ಸಿಗುವಂತಹ ವಿವಿಧ ಬಗೆಯ ಇಡ್ಲಿಯ ಹೆಸರು ಹೇಳಿದ್ರೆ ನಿಮ್ಮ ಬಾಯಲ್ಲಿ ನೀರು ಬರಬಹುದು. ಹಾಗೆ ಅಂತಹ ಯಾವುದಾದರು ಸ್ಪೆಷಲ್ ರುಚಿಯ ಇಡ್ಲಿ ಮಾಡಿ ಸವಿಯುವುದು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ.

ಆದ್ರೆ ನಾವಿಂದು ವಿಶೇವಾಗಿ ಮಾಡುವ ಓಟ್ಸ್ ಮಸಾಲೆ ಇಡ್ಲಿ ಕುರಿತು ತಿಳಿಯೋಣ. ಈ ಇಡ್ಲಿ ಮಧುಮೇಹಿಗಳಿಗೆ ಬಹಳ ಉತ್ತಮ ಹಾಗೆ ರುಚಿಯಲ್ಲೂ ಇದು ನಂಬರ್ ಒನ್ ಎನ್ನಬಹುದು. ಹಾಗಾದ್ರೆ ಈ ಇಡ್ಲಿ ಮಾಡಿ ಸವಿಯುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥವೇನು? ಸರಿಯಾದ ಮಾದರಿ ಯಾವುದು? ಎಂಬೆಲ್ಲಾ ಕುರಿತಾಗಿ ನಾವಿಂದು ತಿಳಿಯೋಣ.
ಓಟ್ಸ್ ಇಡ್ಲಿ ಮಾಡಲು ಬೇಕಾಗುವ ವಸ್ತುಗಳು
- ಓಟ್ಸ್
- ರವೆ
- ಮೊಸರು
- ನೀರು
- ಎಣ್ಣೆ
- ಜೀರಿಗೆ
- ಹಸಿ ಶುಂಠಿ
- ಕ್ಯಾರೆಟ್
- ಸಾಸಿವೆ
- ಇಂಗು
- ಉದ್ದಿನ ಬೇಳೆ
- ಸೋಡಾ ಪುಡಿ ಅಥವಾ ಇನೋ ಪೌಡರ್
ಓಟ್ಸ್ ಮಸಾಲ ಇಡ್ಲಿ ಮಾಡುವುದು ಹೇಗೆ?
ಮೊದಲು ಒಂದು ಅಳತೆ ಕಪ್ನಲ್ಲಿ 1 ಕಪ್ ಓಟ್ಸ್ ತೆಗೆದುಕೊಂಡು ಅದನ್ನು ಮಿಕ್ಸಿ ಜಾರ್ಗೆ ಹಾಕಿಕೊಂಡು ಪುಡಿ ಪುಡಿಯಾಗಿ ರುಬ್ಬಿಕೊಳ್ಳಬೇಕು. ರವೆಯಂತೆ ಈ ಓಟ್ಸ್ ಅನ್ನು ರುಬ್ಬಬೇಕು. ನಂತರ ಅದೇ ಕಪ್ನಲ್ಲಿ ಅರ್ಧ ಕಪ್ ಹುರಿದ ಬಾಂಬೆ ರವೆಯನ್ನು ಹಾಕಿಕೊಳ್ಳಿ. ಹಸಿ ರವೆಯನ್ನು ಹಾಕಬೇಡಿ. ಹುರಿದುಕೊಂಡು ಹಾಕಿಕೊಳ್ಳಿ.
ಈಗ ಇದಕ್ಕೆ ಅರ್ಧ ಕಪ್ ಮೊಸರನ್ನು ಕೂಡ ಸೇರಿಸಿಕೊಳ್ಳಿ. ಹಾಗೆ ಅರ್ಧ ಕಪ್ ನೀರು ಹಾಕಿಕೊಂಡು ಮಿಶ್ರಣ ಮಾಡಿ. ಇದು ಗಟ್ಟಿಯಾದರೆ ಮತ್ತೆ ನೀರು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಸ್ವಲ್ಪ ಮೃದುವಾದ ಹಿಟ್ಟು ಬಂದಾಗ ಕ್ಯಾರೆಟ್, ಹಸಿ ಶುಂಠಿ ಮಿಶ್ರಣ ಮಾಡಿಕೊಳ್ಳಿ. ಮತ್ತೆ ನೀರು ಹಾಕಿ ಮಿಕ್ಸ್ ಮಾಡಿ. ಇದನ್ನು ಬದಿಗೆ ಇಟ್ಟುಕೊಳ್ಳಿ.
ಈಗ ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ನಂತರ ಉದ್ದಿನ ಬೇಳೆ, ಸಾಸಿವೆ, ಜೀರಿಗೆ, ಇಂಗು ಹಾಕಿ ಬಿಸಿಯಾಗಲು ಬಿಡಿ. ಕತ್ತರಿಸಿಕೊಂಡ ಕರಿಬೇವು ಹಾಕಿಕೊಂಡು ಒಲೆ ಆಫ್ ಮಾಡಿಕೊಳ್ಳಿ. ನಂತರ ಇದನ್ನು ಹಿಟ್ಟಿಗೆ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ 10 ನಿಮಿಷ ಮುಚ್ಚಳ ಮುಚ್ಚಿ ಬಿಡಿ.
ಒಂದು ವೇಳೆ ಗಟ್ಟಿಯಾಗಿದ್ದರೆ ನೀರು ಹಾಕಿ ಮಿಕ್ಸ್ ಮಾಡಿ. ನಂತರ ಇದಕ್ಕೆ ಅಡುಗೆ ಸೋಡಾ ಇಲ್ಲವೆ ಇನೋ ಪೌಡರ್ ಹಾಕಿ ಮಿಕ್ಸ್ ಮಾಡಿಕೊಂಡು ಇಡ್ಲಿ ಪಾತ್ರೆಗೆ ಎಣ್ಣೆ ಹಚ್ಚಿಕೊಂಡು ಹಿಟ್ಟು ಹಾಕಿಕೊಂಡು ಇಡ್ಲಿ ಕುಕ್ಕರ್ನಲ್ಲಿ ಹಾಕಿ ಬೇಯಲು ಬಿಡಿ. 15 ನಿಮಿಷ ಬೇಯಲು ಬಿಡಬೇಕು. ಈ ರೀತಿಯ ಇಡ್ಲಿಯು ಎಲ್ಲರಿಗೂ ಇಷ್ಟವಾಗುತ್ತೆ, ಮಾಡೋದು ಸುಲಭ. ಏಕೆಂದರೆ ಹಿಂದಿನ ದಿನ ಹಿಟ್ಟು ರುಬ್ಬಿಕೊಳ್ಳುವುದು ಬೇಡ. ಹಾಗೆ ಆರೋಗ್ಯದ ದೃಷ್ಟಿಯಲ್ಲಿಯೂ ಇದು ಬಹಳ ಉತ್ತಮ ಇಡ್ಲಿಯಾಗಿದೆ. ಮಧುಮೇಹಿಗಳಿಗೆ ಇದು ಬಹಳ ಪ್ರಯೋಜನಕಾರಿ. ನೀವು ಸಹ ಮನೆಯಲ್ಲಿ ಇದನ್ನು ಟ್ರೈ ಮಾಡಿ ನೋಡಿ.



Click it and Unblock the Notifications
