Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಉರಿ ಶೀತ, ಗಂಟಲು ನೋವಿಗೆ ಸುಲಭದ ಕಷಾಯ ಮಾಡಿ! 2 ನಿಮಿಷ ಸಾಕು!
ಚಳಿಗಾಲದ ಆರಂಭದಿಂದಲೂ ಹಲವು ರೀತಿ ಅನಾರೋಗ್ಯಗಳು ಕಾಡುವುದು ನೋಡಬಹುದು. ಅದ್ರಲ್ಲೂ ಶೀತ, ಕೆಮ್ಮು, ಗಂಟಲು ನೋವಿನಂತಹ ಕಾಲೋಚಿತ ಸಮಸ್ಯೆಗಳು ಈ ಚಳಿಗಾಲದಲ್ಲಿ ಹೆಚ್ಚಾಗುತ್ತದೆ. ಚಳಿಯು ಹೆಚ್ಚಾಗಿರುವ ಪ್ರದೇಶದಲ್ಲಿ ತಲೆನೋವು, ಸಂಧಿವಾತ, ಕೀಲು ನೋವು, ಶೀತ, ಸಾಮಾನ್ಯ ಅನಾರೋಗ್ಯ ಸಮಸ್ಯೆಗಳಲ್ಲಿ ಒಂದಾಗಿರಲಿದೆ.
ಹಗಲಿನಲ್ಲಿ ಮಿತಿಮೀರಿದ ಬಿಸಿಲು ಹಾಗೆ ರಾತ್ರಿ, ಬೆಳಗ್ಗೆ ಸಮಯದಲ್ಲಿನ ವಿಪರೀತ ಚಳಿಯ ವಾತಾವರಣಕ್ಕೆ ನಿಮ್ಮ ದೇಹವು ಹೊಂದಿಕೊಳ್ಳುವುದು ಕಷ್ಟವಾಗಬಹುದು, ಅದ್ರಲ್ಲೂ ಹಲವು ಬಾರಿ ನೀವು ಅನಾರೋಗ್ಯಕ್ಕೆ ತುತ್ತಾಗಬಹುದು. ಇದು ಮಕ್ಕಳು ಮತ್ತು ಹಿರಿಯರ ಸಂಖ್ಯೆಯಲ್ಲಿ ಹೆಚ್ಚಾಗಿರಲಿದೆ. ಯಾರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರಲಿದ್ಯೋ ಅವರಲ್ಲಿ ಈ ಅನಾರೋಗ್ಯ ಸಮಸ್ಯೆ ಹೆಚ್ಚಾಗಿರಲಿದೆ.

ಅದ್ರಲ್ಲೂ ಈ ಚಳಿಗಾಲದ ಸಮಯದಲ್ಲಿ ಎಲ್ಲರಿಗೂ ಸಮಸ್ಯೆ ನೀಡುವುದು ಉರಿಶೀತದ ಸಮಸ್ಯೆ. ನೀವು ಬಿಸಿಲಿನಲ್ಲಿ ಹೆಚ್ಚು ಸಮಯ ಇದ್ದು ಬಳಿಕ ತಣ್ಣೀರು ಕುಡಿಯುವುದು, ಐಸ್ಕ್ರೀಮ್ ಅಥವಾ ದೇಹದ ಉಷ್ಣತೆಯಲ್ಲಿ ಏರುಪೇರು ಸಂಭವಿಸಿದಾಗ ಈ ಉರಿಶೀತ ಕಾಣಿಸಿಕೊಳ್ಳುತ್ತದೆ. ಇದು ಸಹಿಸಲಾಗದ ತಲೆನೋವು, ಕಿರಿಕಿರಿ ತರಬಹುದು. ಆದ್ರೆ ಇದನ್ನು ಮನೆಯಲ್ಲಿ ಸಿಂಪಲ್ ಕಷಾಯದ ಮೂಲಕ ನಿವಾರಣೆ ಮಾಡಿಕೊಳ್ಳಬಹುದು.
ಹಾಗಾದ್ರೆ ಉರಿಶೀತ ತಡೆಯಲು ಹೇಗೆ ಕಷಾಯ ಮಾಡಿಕೊಳ್ಳಬೇಕು? ಈ ಕಷಾಯ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಶುಂಠಿ ಕಾಳು ಮೆಣಸಿನ ಕಷಾಯ ಮಾಡುವ ವಿಧಾನವೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಶುಂಠಿ, ಕಾಳು ಮೆಣಸಿನ ಕಷಾಯ ಮಾಡಲು ಅಗತ್ಯ ವಸ್ತುಗಳು?
- ಶುಂಠಿ
- ಹಾಲು
- ತುಳಸಿ ಎಲೆ
- ಕಾಳು ಮೆಣಸು
- ಅರಿಶಿನ ಪುಡಿ
- ಲವಂಗ
- ಏಲಕ್ಕಿ
- ಬೆಲ್ಲ
ಶುಂಠಿ, ಕಾಳು ಮೆಣಸಿನ ಕಷಾಯ ಮಾಡುವ ಸುಲಭದ ವಿಧಾನವೇನು?
ಒಂದು ಪಾತ್ರೆ ತೆಗೆದುಕೊಂಡು ಅದಕ್ಕೆ ಒಂದು ಗ್ಲಾಸ್ ಹಾಲು ಹಾಕಿ ಬಳಿಕ ಅಷ್ಟೇ ಅಳತೆಯಲ್ಲಿ ನೀರು ಹಾಕಿಕೊಂಡು ಕುದಿಬರಲು ಬಿಡಿ. ಚೆನ್ನಾಗಿ ಕುದಿಬರುವಾಗ, 8 ತುಳಸಿ ಎಲೆ, 4 ಲವಂಗ, 6 ಕಾಳು ಮೆಣಸು, 1 ಏಲಕ್ಕಿ, 1 ಸ್ಪೂನ್ ಹೆಚ್ಚಿಕೊಂಡ ಶುಂಠಿ, ಸಣ್ಣ ಉಂಡೆ ಬೆಲ್ಲ (ಸಕ್ಕರೆ ಬಳಸಬೇಡಿ)
ಇಷ್ಟು ಪದಾರ್ಥ ಹಾಕಿಕೊಂಡು ಚೆನ್ನಾಗಿ ಕುದಿಬರಲು ಬಿಡಬೇಕು. ಹಾಗೆ ಕಾಲು ಚಮಚ ಅರಶಿಣ ಪುಡಿ ಹಾಕಿಕೊಂಡು 5 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿಕೊಳ್ಳಬೇಕು. ಈಗ ಒಂದು ಗ್ಲಾಸ್ಗೆ ಈ ಕಷಾಯವನ್ನು ಜರಡಿ ಹಿಡಿದು ಇಟ್ಟುಕೊಳ್ಳಿ.
ಇಷ್ಟಾದರೆ ನಿಮ್ಮ ಮುಂದೆ ಆರೋಗ್ಯಕರ ಕಷಾಯ ಸಿದ್ದವಾಗುತ್ತೆ. ಇದನ್ನು ನೀವು ದಿನದ ಯಾವುದೇ ಸಮಯದಲ್ಲಿ ಬೇಕಾದರೂ ಸೇವಿಸಬಹುದು. ಮಕ್ಕಳಿಗೆ ನೀಡುವುದಾದರೆ ಎಲ್ಲಾ ಪದಾರ್ಥಗಳನ್ನು ಅರ್ಧದಷ್ಟು ಬಳಸಿಕೊಳ್ಳಿ. ಇದು ಒಂದು ಗಂಟೆಯಲ್ಲಿ ನಿಮ್ಮ ಉರಿ ಶೀತ, ಕೆಮ್ಮು, ನೆಗಡಿ, ಗಂಟಲು ನೋವಿನಂತಹ ಸಮಸ್ಯೆಯನ್ನು ನಿವಾರಣೆ ಮಾಡಲಿದೆ. ಹಾಗೆ ಇದನ್ನು ಮಾಡಿಕೊಳ್ಳುವುದು ಸಹ ಬಹಳ ಸುಲಭವಾಗಿದೆ.
ನೀವು ಸಹ ಈ ಚಳಿಗಾಲದ ಸಮಯದಲ್ಲಿ ಯಾವುದಾದರು ಸಣ್ಣ ಪುಟ್ಟ ಅನಾರೋಗ್ಯ ಎದುರಿಸಿದ್ದರೆ ಈ ಕಷಾಯ ಮಾಡಿ ಸವಿದು ನೋಡಿ. ಸುಲಭವಾಗಿ ಅನಾರೋಗ್ಯ ನಿವಾರಣೆ ಮಾಡಬಹುದು.



Click it and Unblock the Notifications
