Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಬೇಸಿಗೆಯಲ್ಲೂ ಶೀತ ಕಾಡುತ್ತಿದ್ಯಾ..? ಈ ಜೀರಿಗೆ ರಸಂ ಮಾಡಿ ಸವಿಯಿರಿ..!!
ಬೇಸಿಗೆ ಆರಂಭದಲ್ಲಿ ಹಲವು ರೀತಿ ಅನಾರೋಗ್ಯ ಸಮಸ್ಯೆ ಎದುರಿಸುವುದು ಕಾಮನ್, ಅದ್ರಲ್ಲೂ ವಾತಾವರಣ ನಿತ್ಯ ಬದಲಾಗುವುದರಿಂದ ನಿಮ್ಮ ಆರೋಗ್ಯ ಕೂಡ ಬದಲಾಗುತ್ತಿರುತ್ತೆ. ಬೇಸಿಗೆಯ ನಡುವೆಯು ಹಲವು ರೀತಿಯ ಹಾಗೆ ಆರಂಭದಲ್ಲಿ ಒಂದಿಷ್ಟು ಅನಾರೋಗ್ಯ ಕಾಡುವುದು ನೋಡಬಹುದು. ಅದರಲ್ಲೂ ನೀವು ಶೀತ ಹಾಗೂ ಒಣ ಕೆಮ್ಮಿನಂತಹ ಸಮಸ್ಯೆಗೆ ಒಳಗಾಗುವುದು ನೋಡಬಹುದು.
ಈ ರೀತಿಯ ಸಮಸ್ಯೆಗೆ ಮನೆಯಲ್ಲೇ ಪರಿಹಾರ ಅಂದ್ರೆ ಅದು ಜೀರಿಗೆ ರಸ. ನೀವು ಊಟದ ಜೊತೆಗೆ ಸವಿಯಬಹುದಾದ ಈ ಜೀರಿಗೆ ರಸವು ನಿಮ್ಮ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡಲಿದೆ. ಇದರಿಂದ ನಿಮ್ಮ ಕಾಲೋಚಿತ ಅನಾರೋಗ್ಯ ಸಮಸ್ಯೆ ನಿವಾರಣೆಯಾಗಲಿದೆ. ಜೀರಿಗೆ ಎಲ್ಲಾ ಅಡುಗೆಯಲ್ಲು ಬಳಸುವುದು ಇದೇ ಕಾರಣಕ್ಕೆ.

ಜೀರಿಗೆಯಲ್ಲಿನ ಆರೋಗ್ಯಕರ ಅಂಶವು ನಿಮ್ಮ ದೇಹಕ್ಕೆ ಬಹಳ ಉತ್ತಮ. ಹೀಗಾಗಿ ಅಡುಗೆಯಲ್ಲಿ ಹೆಚ್ಚಾಗಿ ಜೀರಿಗೆ ಬಳಸುವುದು ನೋಡಬಹುದು. ಹಾಗಾದ್ರೆ ಜೀರಿಗೆ ರಸ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಜೀರಿಗೆ ರಸ ಮಾಡಲು ಬೇಕಾಗುವ ವಸ್ತುಗಳು
- ಜೀರಿಗೆ
- ತೊಗರಿಬೇಳೆ
- ಒಣ ಮೆಣಸು
- ಬ್ಯಾಡಗಿ ಮೆಣಸಿನಕಾಯಿ
- ಟೊಮೊಟೊ
- ಹುಣಸೆಹಣ್ಣು
- ಸಾಸಿವೆ
- ಇಂಗು
- ಬೆಳ್ಳುಳ್ಳಿ
- ಅರಿಶಿನ ಪುಡಿ
- ಬೆಲ್ಲ
- ಕೊತ್ತಂಬರಿ ಸೊಪ್ಪು
- ಕರಿಬೇವಿನ ಸೊಪ್ಪು
- ಉಪ್ಪು ರುಚಿಗೆ ತಕ್ಕಷ್ಟು
- ಎಣ್ಣೆ
ಜೀರಿಗೆ ರಸ ಮಾಡುವ ವಿಧಾನವೇನು?
ಮೊದಲು ಒಂದು ಬೌಲ್ಗೆ ನೀರು ಹಾಕಿ ಅದಕ್ಕೆ ಜಿರಿಗೆ, ಒಣ ಮೆಣಸು, ಬ್ಯಾಡಗಿ ಮೆಣಸು, ತೊಗರಿ ಬೇಳೆ ಹಾಕಿ ನೀರು ಹಾಕಿ ನೆನೆಸಿಡಬೇಕು. ಅರ್ಧ ಗಂಟೆಗಳ ಕಾಲ ನೆನೆಸಿಟ್ಟು ಬಳಿಕ ಅದನ್ನು ತೆಗೆದು ನೀರು ಸಮೇತವಾಗಿ ಒಂದು ಮಿಕ್ಸಿ ಜಾರ್ಗೆ ಹಾಕಿ ರುಬ್ಬಿಕೊಳ್ಳಬೇಕು. ನುಣ್ಣಗೆ ಖಾರದಂತೆ ರುಬ್ಬಿಕೊಳ್ಳಿ.
ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಳಿಕ ಸಾಸಿವೆ, ಇಂಗು, ಜಜ್ಜಿರುವ ಬೆಳ್ಳುಳ್ಳಿ, ಕರಿಬೇವು ಹಾಕಿ ಅರ್ಧ ನಿಮಿಷ ಫ್ರೈ ಮಾಡಿ. ನಂತರ ಇದಕ್ಕೆ ಒಂದು ಟೊಮೆಟೋ ಹಾಕಿ 2 ನಿಮಿಷ ಫ್ರೈ ಮಾಡಿ, ಅನಂತರ ರುಬ್ಬಿಕೊಂಡಿದ್ದ ಪೇಸ್ಟ್ ಇದಕ್ಕೆ ಹಾಕಿ 1 ನಿಮಿಷ ಫ್ರೈ ಮಾಡಿಕೊಳ್ಳಿ.
ಈಗ ಹುಣಸೆ ಹಣ್ಣಿನ ಹುಳಿಯನ್ನು ಹಾಕಿಕೊಳ್ಳಿ. ಹಾಗೆ ಅರಶಿಣ ಪುಡಿ, ಬೆಲ್ಲದ ಪುಡಿ, ಉಪ್ಪು ಹಾಕಿ ಮಿಕ್ಸ್ ಮಾಡಿಕೊಂಡು ಅರ್ಧ ಲೀಟರ್ ನೀರು ಸಹ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ನಂತರ ಮುಚ್ಚಳ ಮುಚ್ಚಿ ಕುದಿಬರಲು ಬಿಡಬೇಕು.
ಸಣ್ಣ ಉರಿಯಲ್ಲಿ ಕುದಿ ಬರಲು ಬಿಟ್ಟು 4ರಿಂದ 5 ನಿಮಿಷದಲ್ಲಿ ಜೀರಿಗೆ ರಸಂ ಆಗುತ್ತದೆ. ಕೊನೆಯದಾಗಿ ಇದಕ್ಕೆ ಸಣ್ಣದಾಗಿ ಹೆಚ್ಚಿಕೊಂಡಿರುವ ಕೊತ್ತಂಬರಿ ಸೊಪ್ಪುನ್ನು ಹಾಕಿಕೊಂಡು ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಘಮ ಘಮ ಎನ್ನುವಂತಹ ಜೀರಿಗೆ ರಸಂ ರೆಡಿಯಾಗುತ್ತದೆ. ಇದನ್ನು ಊಟದ ಜೊತೆಗೆ ಸವಿಯಲು ನೀಡಿದರೆ ಬಹಳ ರುಚಿ ನೀಡಲಿದೆ. ಹಾಗೆ ನಿಮ್ಮ ಆರೋಗ್ಯಕ್ಕೂ ಕೂಡ ಬಹಳ ಉತ್ತಮ ಸಾರು ಇದಾಗಿದೆ. ನೀವು ಕೂಡ ಮನೆಯಲ್ಲಿ ಇದನ್ನೊಮ್ಮೆ ಟ್ರೈ ಮಾಡಿ ನೋಡಿ. ಬಹಳ ಸುಲಭವಾಗಿ ಮಾಡಿ ಮುಗಿಸಬಹುದಾದ ರೆಸಿಪಿ ಇದು.
ಇದಕ್ಕೆ ನೀವು ಈರುಳ್ಳಿ ಬಳಸದೆ ಮಾಡುವುದರಿಂದ ರುಚಿ ಕೂಡ ಅದ್ಭುತವಾಗಿರುತ್ತೆ. ಊಟದ ಜೊತೆಗೆ ಮಾತ್ರವಲ್ಲ ಹಾಗೆ ಒಂದು ಲೋಟಕ್ಕೆ ಹಾಕಿಕೊಂಡು ಕುಡಿಯಬಹುದು, ಇದು ಶೀತ, ಕೆಮ್ಮು, ಒಣ ಕೆಮ್ಮಿನಂತಹ ಸಮಸ್ಯೆಗಳ ನಿವಾರಣೆಗೆ ಅದ್ಭುತ ಪರಿಹಾರವಾಗಿದೆ.



Click it and Unblock the Notifications