Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಇಡೀ ದೇಹವನ್ನು ಕೂಲ್ ಮಾಡಿ, ಪಾದದ ಉರಿ ಕಡಿಮೆ ಮಾಡುವ ಜ್ಯೂಸ್ ಇದು! ಮನೆಯಲ್ಲೇ ಮಾಡಿ!
ಬೇಸಿಗೆಯ ಈ ಸಮಯದಲ್ಲಿ ನಿಮ್ಮ ದೇಹವು ಸಮತೋಲನ ಕಾಪಾಡಿಕೊಳ್ಳುವುದು ಬಹಳ ಉತ್ತಮ. ಅದ್ರಲ್ಲೂ ನಿಮ್ಮ ದೇಹದ ಉಷ್ಣಾಂಶವನ್ನು ಒಂದೇ ರೀತಿ ಕಾಪಾಡಿಕೊಳ್ಳಬೇಕಾಗುತ್ತದೆ. ಈ ಬೇಸಿಗೆಯ ಸಮಯದಲ್ಲಿ ಹಲವರಿಗೆ ಬಿಸಿಲಿನ ಕಾರಣಕ್ಕೆ ಒಂದಿಷ್ಟು ಸಮಸ್ಯೆಗಳು ಎದುರಿಸಬೇಕಾಗುತ್ತದೆ. ಅದ್ರಲ್ಲೂ ನಿಮಗೆ ಪಾದ, ಹಸ್ತವು ಉರಿಯಾಗುವುದು ಸಹ ದೊಡ್ಡ ಸಮಸ್ಯೆ ಆಗಿರಬಹುದು.
ರಾತ್ರಿ ಮಲಗಿದ ಸಮಯದಲ್ಲಿ ಪಾದ ಉರಿಬರುವ ಕಾರಣ ಹಲವರಿಗೆ ನಿದ್ರೆ ಮಾಡುವುದು ಕಷ್ಟವಾಗುತ್ತೆ. ಹಾಗೆ ದಿನದ ಕೆಲಸಗಳ ಮಾಡುವಾಗಲು ಪಾದ ಉರಿ ಹಾಗೆ ಹಸ್ತ ಉರಿ ಬರುವ ಕಾರಣದಿಂದ ಕಿರಿಕಿರಿ ಅನುಭವಿಸಬೇಕಾಗುತ್ತೆ. ಅದ್ರಲ್ಲೂ ಬಿಸಿಲಿನಲ್ಲಿ ಇಲ್ಲವೆ ಹೊರಗೆ ಓಡಾಟದ ಮೂಲಕ ಅವರಲ್ಲಿ ಈ ಸಮಸ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇರುತ್ತದೆ.

ಇಂತಹ ಸಮಯದಲ್ಲಿ ಅವರು ಕೈಗಳಿಗೆ ಅಥವಾ ಪಾದಗಳಿವೆ ನೀರು ಹಾಕಿಕೊಳ್ಳುವುದು, ಐಸ್ ವಾಟರ್‌ನಿಂದ ತೊಳೆಯುವುದು, ಕೆಲವು ಕ್ರೀಮ್ ಹಚ್ಚಿಕೊಳ್ಳುವುದು ನೋಡಬಹುದು. ಇದೆಲ್ಲವೂ ತಾತ್ಕಾಲಿಕ ಪರಿಹಾರವಾಗಿರಬಹುದು. ಆದ್ರೆ ನಾವಿಂದು ಪಾದ ಉರಿ ಸೇರಿ ದೇಹದ ಉಷ್ಣಾಂಶವು ತಂಪಾಗಿಡಲು ಯಾವ ರೀತಿಯ ಜ್ಯೂಸ್ ಅನ್ನು ಮಾಡಿ ಕುಡಿಯಬೇಕು? ಇದಕ್ಕೆ ಸುಲಭದ ಪರಿಹಾರವೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ದೇಹದ ಉಷ್ಣಾಂಶ ಸಮತೋಲನದಲ್ಲಿರುವ ಹಾಗೆ ನಿಮ್ಮ ತಂಪಾಗಿಡುವ ಈ ಜ್ಯೂಸ್ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬೆಲ್ಲಾ ಮಾಹಿತಿ ನಾವಿಲ್ಲಿ ನೋಡೋಣ.
ದೇಹ ತಂಪಾಗಿಡುವ ಈ ಜ್ಯೂಸ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಸೋಂಪುಕಾಳು
- ಕಲ್ಲು ಸಕ್ಕರೆ
- ಬಾದಾಮಿ ಕಾಳು
ದೇಹ ತಂಪಾಗಿಡುವ ಈ ಜ್ಯೂಸ್ ಮಾಡುವ ವಿಧಾನವೇನು?
ಮೊದಲು ಮುಕ್ಕಾಲು ಕಪ್ ಸೋಂಪು ಕಾಳನ್ನು ಒಂದು ಪಾತ್ರೆಗೆ ಹಾಕಿ ಸಣ್ಣ ಉರಿಯಲ್ಲಿ ಬಿಸಿ ಮಾಡಿಕೊಳ್ಳಬೇಕು. ಗರಿ ಗರಿ ಆಗುವ ಅವಶ್ಯಕತೆ ಇಲ್ಲ. ಸ್ವಲ್ಪ ಬಿಸಿಯಾದರೂ ಸಾಕು. ನಂತರ ಇದನ್ನು ಒಂದು ತಟ್ಟೆಗೆ ಹಾಕಿ ತಣ್ಣಗಾಗಲು ಬಿಡಿ. ಈಗ ಅದೇ ಪಾತ್ರೆಗೆ ಬಾದಾಮಿ ಕಾಳುಗಳನ್ನು ಸಹ ಹಾಕಿಕೊಂಡು ಹುರಿದುಕೊಳ್ಳಬೇಕು. ನಂತರ ತೆಗೆದಿಟ್ಟುಕೊಳ್ಳಿ.
ಈಗ ಕಲ್ಲು ಸಕ್ಕರೆಯನ್ನ ಕುಟ್ಟಿ ಸ್ವಲ್ಪ ಪುಡಿ ಮಾಡಿಟ್ಟುಕೊಳ್ಳಿ. ಇನ್ನೊಂದು ಕಡೆ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಹುರಿದುಕೊಂಡಿದ್ದ ಎರಡು ಪದಾರ್ಥಗಳನ್ನು ಹಾಕಿ, ಹಾಗೆ ಇದಕ್ಕೆ ಕಲ್ಲು ಸಕ್ಕರೆ ಸಹ ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಬೇಕು. ರುಬ್ಬಿದ ಪುಡಿಯನ್ನು ತಣ್ಣಗಾಗಲು ಒಂದು ಪ್ಲೇಟ್‌ಗೆ ಹಾಕಿಟ್ಟುಕೊಳ್ಳಿ.
ಈಗ ಈ ಪುಡಿಗೆ ಚಿಟಿಕೆ ಅರಶಿಣ ಹಾಕಿ ಮಿಶ್ರಣ ಮಾಡಿ. ನಂತರ ಒಂದು ಲೋಟದಲ್ಲಿ ನೀರು ತೆಗೆದುಕೊಂಡು ಅದಕ್ಕೆ ತಯಾರಿಸಿಕೊಂಡ ಈ ಪುಡಿಯನ್ನು ಹಾಕಿ ಮಿಕ್ಸ್ ಮಾಡಬೇಕು. ನಂತರ ಇದನ್ನು ಕುಡಿಯಬೇಕು. ಬಿಸಿ ನೀರಿಗೆ ಹಾಕಿ ಕುಡಿಯಬೇಡಿ ಹಾಗೆ ಬಹಳ ತಂಪಿರುವ ನೀರಿನಲ್ಲೂ ಕುಡಿಯಬೇಡಿ. ಸಾಮಾನ್ಯ ನೀರಿನಲ್ಲಿ ಇದನ್ನು ಕುಡಿದುನೋಡಿ. ಇದಕ್ಕೆ ಒಂದು ನಿಂಬೆ ಹಣ್ಣಿನ ರಸ ಸಹ ಸೇರಿಸಬಹುದು, ಇದು ಸಪ್ಪೆ ಎನಿಸಿದರೆ ಬೆಲ್ಲ ಕೂಡ ಸೇರಿಸಿ ಸವಿಯಬಹುದು.
ನೀವು ಕೂಡ ಮನೆಯಲ್ಲಿ ಈ ರೀತಿ ಜ್ಯೂಸ್ ಒಮ್ಮೆ ಮಾಡಿ ಸವಿದು ನೋಡಿ. ದೇಹದ ತಂಪಾಗುವುದಲ್ಲದೆ, ಪಾದ, ಹಸ್ತದ ಉರಿ ಕಡಿಮೆಯಾಗುತ್ತದೆ. ಇದನ್ನು ಯಾವ ಸಮಯದಲ್ಲಿ ಬೇಕಾದರು ಕುಡಿಬಹುದು. ಸಂಜೆಯ ಸಮಯ ಅಥವಾ ಬೆಳಗ್ಗೆ ಉತ್ತಮವಾಗಿರಲಿದೆ. ಒಮ್ಮೆ ಇದರ ಪುಡಿ ಮಾಡಿಕೊಂಡಿದ್ದರೆ ನಿಮಗೆ ಯಾವಾಗ ಬೇಕೋ ಆವಾಗ ಸುಲಭವಾಗಿ ಜ್ಯೂಸ್ ತಯಾರಿಸಿ ಕುಡಿಯಬಹುದು.



Click it and Unblock the Notifications
