Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಬಾಳೆದಿಂಡು ಹಾಗೂ ಬಾಳೆಹೂ ಹಾಕಿ ಮಾಡುವ ಪಲ್ಯ:ಕಿಡ್ನಿ ಸ್ಟೋನ್ ಹೋಗಲಾಡಿಸಲು ತುಂಬಾ ಒಳ್ಳೆಯದು
ಬಾಳೆಹೂವು ಹಾಗೂ ಬಾಳೆದಿಂಡು ಮಿಕ್ಸ್ ಮಾಡಿ ಮಾಡುವ ಪಲ್ಯದ ರೆಸಿಪಿ, ಇವುಗಳು ತುಂಬಾ ಟೇಸ್ಟ್ ಆಗಿರುತ್ತದೆ, ಅಲ್ಲದೆ ರುಚಿಯೂ ಸೂಪರ್ ಆಗಿರುತ್ತದೆ, ಇದೊಂದು ಸಿಂಪಲ್ ರೆಸಿಪಿ, ಆದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:

ಬೇಕಾಗುವ ಸಾಮಗ್ರಿ
ಬಾಳೆದಿಂಡು 1 ಚಿಕ್ಕ ಪೀಸ್
ಬಾಳೆಹೂ 1
ಈರುಳ್ಳಿ 1
ಹಸಿ ಮೆಣಸು 2-3
ಎಣ್ಣೆ 2 ಚಮಚ
ಸ್ವಲ್ಪ ಕರಿಬೇವು
ಸ್ವಲ್ಪ ಸಾಸಿವೆ
ತೆಂಗಿನ ತುರಿ ಅಥವಾ 2 ಮೊಟ್ಟೆ
ಮಾಡುವ ವಿಧಾನ:
- ಬಾಳೆದಿಂಡು ಹಾಗೂ ಹೂವನ್ನು ಚಿಕ್ಕದಾಗಿ ಕತ್ತರಿಸಿ(ತುಂಬಾ ಚಿಕ್ಕದಾಗಿ ಕತ್ತರಿಸಬೇಕು)
- ನಂತರ ಅದನ್ನು ಒಂದು ಪಾತ್ರೆಗೆ ಹಾಕಿ ನೀರು ಹಾಕಿಡಿ, ಅದರ ಕರೆ ಹೋಗಬೇಕು.
- ಪಾತ್ರೆಗೆ ಎಣ್ಣೆ ಹಾಕಿ ಬಿಸಿ ಮಾಡಿ
- ನಂತರ ಸಾಸಿವೆ ಹಾಕಿ
- ಸಾಸಿವೆ ಚಟ್ಪಟ್ ಶಬ್ದ ಮಾಡುವಾಗ ಕರಿಬೇವು ಹಾಕಿ
- ನಂತರ ಈರುಳ್ಳಿ ಹಾಕಿ, ಹಸಿ ಮೆಣಸು ಹಾಕಿ 2 ನಿಮಿಷ ಫ್ರೈ ಮಾಡಿ
- ಈಗ ಕತ್ತರಿಸಿಟ್ಟ ಬಾಳೆಹೂವು ಹಾಗೂ ಬಾಳೆದಿಂಡು ಹಾಕಿ ಹಾಕಿ ಮಿಕ್ಸ್ ಮಾಡಿ
- ನಂತರ ಸ್ವಲ್ಪ ನೀರು ಹಾಕಿ ಬೇಯಿಸಿ
- ನೀರು ಡ್ರೈಯಾಗುವವರೆಗೆ ಬೇಯಿಸಿ
- ನೀರು ಆವಿಯಾದ ಮೇಲೆ ತೆಂಗಿನ ತುರಿ ಹಾಕಿ ಮಿಕ್ಸ್ ಮಾಡಿ
- ನೀವು ತೆಂಗಿನತುರಿ ಬದಲಿಗೆ ಮೊಟ್ಟೆ ಹಾಕಿ ಮಿಕ್ಸ್ ಮಾಡಿದರೆ ಇನ್ನೂ ರುಚಿಯಾಗಿರುತ್ತದೆ.
- ಈ ಪಲ್ಯ ಸೇವನೆಯ ಪ್ರಯೋಜನಗಳು
- ದೇಹವನ್ನು ಡಿಟಾ್ಸ್ ಮಾಡುತ್ತದೆ: ಇದಲ್ಲಿರುವ ನಾರಿನಂಶ ಹೊಟ್ಟೆಯನ್ನು ಡಿಟಾಕ್ಸ್ ಮಾಡಿ ದೇಹದಲ್ಲಿರುವ ಬೇಡದ ಕಶ್ಮಲವನ್ನು ಹೊರ ಹಾಕಲು ಸಹಕಾರಿ. ಹೊಟ್ಟೆ ಶುದ್ಧವಾಗಿದ್ದರೆ ಒಟ್ಟು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
ಮಲಬದ್ಧತೆ ಸಮಸ್ಯೆ ತಡೆಗಟ್ಟುತ್ತದೆ: ಈ ಮಲಬದ್ಧತೆ ಸಮಸ್ಯೆ ತಡೆಗಟ್ಟಲು ತುಂಬಾನೇ ಸಹಕಾರಿಯಾಗಿದೆ, ಇದರಲ್ಲಿರುವ ನಾರಿನಂಶ ಜೀರ್ಣಕ್ರಿಯೆ ಉತ್ತಮವಾಗಿ ನಡೆಯಲು ಸಹಕಾರಿಯಾಗಿದೆ.
ಕಿಡ್ನಿ ಸ್ಟೋನ್ ಹೊರ ಹಾಕಲು ಸಹಾಯ ಮಾಡುತ್ತದೆ: ಯಾರಿಗೆ ಕಿಡ್ನಿಸ್ಟೋನ್ ಸಮಸ್ಯೆ ಇದೆಯೋ ಅವರು ತಮ್ಮ ಆಹಾರಕ್ರಮದಲ್ಲಿ ಈ ಆಹಾರ ಸೇರಿಸಿದರೆ ತುಂಬಾ ಒಳ್ಳೆಯ ಪ್ರಯೋಜನ ಪಡೆಯಬಹುದು, ಮೂತ್ರದ ಮೂಲಕ ಕಿಡ್ನಿ ಸ್ಟೋನ್ ಹಾಕುತ್ತೆ, ಆರೋಗ್ಯ ವೃದ್ದಿಸಲು ತುಂಬಾನೇ ಸಹಕಾರಿಯಾಗಿದೆ. ಚಿಕ್ಕ ಕಿಡ್ನಿ ಸ್ಟೋನ್ ಯಾವುದೇ ಔಷಧಿ ತೆಗೆದುಕೊಳ್ಳದೆ ಈ ಆಹಾರ ಹೊರಹಾಕುತ್ತೆ, ಹಾಗಾಗಿ ಇಂಥ ಆಹಾರ ನಮ್ಮ ಆಹಾರಕ್ರಮದಲ್ಲಿ ಸೇರಿಸುವುದರಿಂದ ಕಿಡ್ನಿ ಸ್ಟೋನ್ ತಡೆಗಟ್ಟಲು ಸಹಕಾರಿಯಾಗಿದೆ.
ರಕ್ತದೊತ್ತಡ ನಿಯಂತ್ರಣದಲ್ಲಿಡುತ್ತದೆ: ಬಾಳೆದಿಂಡು ಹಾಗೂ ಹೂವು ರಕ್ತದೊತ್ತಡ ನಿಯಂತ್ರಣದಲ್ಲಿಡಲು ತುಂಬಾನೇ ಸಹಕಾರಿಯಾಗಿದೆ.
ಮಧುಮೇಹಿಗಳಿಗೂ ತುಂಬಾ ಒಳ್ಳೆಯದು: ಈ ಬಾಳೆದಿಂಡು ಹಾಗೂ ಅದರ ಹೂವು ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡಲು ಸಹಕಾರಿಯಾಗಿರುವುದರಿಂದ ಮಧುಮೇಹಿಗಳಿಗೆ ತುಂಬಾ ಒಳ್ಳೆಯದು.



Click it and Unblock the Notifications
