Just In
- 17 min ago
Beauty tips: ಮುಲೇತಿಯ ಈ ಫೇಸ್ಪ್ಯಾಕ್ ಬಳಸಿದರೆ ಮುಖದ ಕಾಂತಿ ಹೆಚ್ಚುತ್ತೆ ನೋಡಿ
- 47 min ago
ಪ್ರಸಿದ್ಧ ಗಾಯಕ ಅದ್ನಾನ್ ಸಾಮಿಯ ಮಾಲ್ಡೀವ್ಸ್ ಫೋಟೋಗಳು ವೈರಲ್, ಅದಕ್ಕೆ ಕಾರಣವೇ ಈ ಲುಕ್
- 2 hrs ago
ಯಮ್ಮೀ... ಯಮ್ಮೀ... ಚಿಕನ್ ಚಾಪ್ಸ್ ರೆಸಿಪಿ
- 4 hrs ago
ಮಕ್ಕಳು ವೈವಾಹಿಕ ಸಂಬಂಧದಲ್ಲಿ ದೌರ್ಜನ್ಯಕ್ಕೊಳಗಾದರೆ ಪೋಷಕರು ಹೇಗೆ ಪತ್ತೆ ಮಾಡಬೇಕು?
Don't Miss
- News
ಕುಮಾರಸ್ವಾಮಿಗೆ ಹತಾಶರಾಗಿ ಆರ್ಎಸ್ಎಸ್ ಬಗ್ಗೆ ಟೀಕೆ ಮಾಡುತ್ತಿದ್ದಾರೆ: ಎಸ್. ಟಿ.ಸೋಮಶೇಖರ್
- Automobiles
2026ರ ವೇಳಗೆ ಭಾರತದಲ್ಲಿ ಓಡಲಿದೆ ಮೊದಲ ಬುಲೆಟ್ ರೈಲು
- Technology
ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದೀರಾ? ಎಷ್ಟು ದಂಡ ಬಾಕಿ ಇದೆ?..ಹೀಗೆ ತಿಳಿಯಿರಿ!
- Sports
ಭಾರತದ ಮುಂದಿನ ಟೆಸ್ಟ್ ಸರಣಿಗೆ ಸರ್ಫರಾಜ್ ಖಾನ್ ಆಯ್ಕೆ ಆಗಲಿ: ಸುನಿಲ್ ಗವಾಸ್ಕರ್
- Movies
ಅಭಿಮಾನಿಗಳಿಗೆ ಮನವಿ ಮಾಡಿದ ಗೋಲ್ಡನ್ ಸ್ಟಾರ್ ಗಣೇಶ್
- Finance
ಜಿಎಸ್ಟಿ ಕೌನ್ಸಿಲ್ ಸಭೆ ಆರಂಭ: ಈ ಮಾಹಿತಿ ತಿಳಿದಿರಿ
- Education
Cochin Shipyard Limited Recruitment 2022 : 106 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಬನ್ನೇರುಘಟ್ಟ - ಹೈಟೆಕ್ ನಗರ ಬೆಂಗಳೂರಿನಲ್ಲಿರುವ ಒಂದು ನೈಸರ್ಗಿಕ ತಾಣ
ಮುದ್ದೆ ಜೊತೆ ತಿಂದು ನೋಡಿ ಹಿತ್ಕಿದ ಅವರೆಕಾಳಿನ ಚಿಕನ್ ಸಾಂಬಾರ್
ಕರ್ನಾಟಕದಲ್ಲಿ ಅದರಲ್ಲೂ ದಕ್ಷಿಣ ಕರ್ನಾಟಕದಲ್ಲಿ ಅತೀ ಹೆಚ್ಚು ಪ್ರಖ್ಯಾತಿ ಪಡೆದ ಹಾಗೂ ಅತ್ಯಂತ ರುಚಿಕರವಾದ ಆಹಾರ ಖಾದ್ಯಗಳಲ್ಲಿ ಒಂದು "ಹಿತ್ಕಿದ ಅವರೆಕಾಳಿನ ಚಿಕನ್ ಸಾಂಬಾರ್". ಈ ಖಾದ್ಯವನ್ನು ಮುದ್ದೆ ಜೊತೆ ತಿಂದರಿಗಷ್ಟೇ ಗೊತ್ತು ಇದರ ರುಚಿ, ಗಮ್ಮತ್ತು. ಹಿತ್ಕಿದ ಅವರೆಕಾಳೇ ಅತ್ಯಂತ ರುಚಿಯಾಗಿರುತ್ತದೆ ಇನ್ನು ಅದಕ್ಕೆ ಚಿಕನ್ ಸೇರಿಸಿದರೆ ಆಹಾ.....!
ಇದನ್ನು ಒಮ್ಮೆ ಸೇವಿಸಿದವರು ಖಂಡಿತ ಮತ್ತೆ ಬೇಕು ಎನಿಸದೇ ಇರದು, ಇಂಥಾ ರುಚಿಕರ ಪಕ್ಕಾ ಹಳ್ಳಿ ಶೈಲಿಯ ಹಿತ್ಕಿದ ಅವರೆಕಾಳಿನ ಚಿಕನ್ ಸಾಂಬಾರ್ ಮಾಡುವ ವಿಧಾನ ಹೇಗೆ, ಇದಕ್ಕೆ ಬೇಕಾಗುವ ಪದಾರ್ಥಗಳು ಯಾವುವು ಮುಂದೆ ವಿವರವಾಗಿ ತಿಳಿಸಿದ್ದೇವೆ ನೋಡಿ:
Recipe By: Meghashree Devaraju
Recipe Type: Nonveg
Serves: 5
-
ಬೇಕಾಗುವ ಪದಾರ್ಥಗಳು
ಹಿತ್ಕಿದ ಅವರೆ ಕಾಳು 3/4 ಕೆಜಿ
ಚಿಕನ್ 1 ಕೆಜಿ
ದೊಡ್ಡ ಗಾತ್ರದ ಈರುಳ್ಳಿ 2
ಟಮೋಟೊ 2
ಕೊಬ್ಬರಿ ಅಥವಾ ತೆಂಗಿನಕಾಯಿ 1/4 ಕಪ್
ದನಿಯಾ ಪುಡಿ 1 ಚಮಚ
ಖಾರದ ಪುಡಿ 2 ಚಮಚ
ಅರಿಶಿನ ಪುಡಿ 1/2 ಚಮಚ
ಗರಂ ಮಸಾಲ 1/4 ಚಮಚ
ಗಸಗಸೆ 1/4 ಚಮಚ
ಉಪ್ಪು ರುಚಿಗೆ
ಚಕ್ಕೆ, ಲವಂಗ, ಎಲೆ
ಎಣ್ಣೆ
-
ಮಾಡುವ ವಿಧಾನ
* ಒಂದು ದೊಡ್ಡ್ ಪಾತ್ರೆಗೆ ಎಣ್ಣೆ ಹಾಕಿ ಅದಕ್ಕೆ ಚಕ್ಕೆ, ಲವಂಗ, ಎಲೆ ಹಾಗೂ ಸ್ವಲ್ಪ ಎಣ್ಣೆ ಹಾಕಿ ಚೆನ್ನಾಗಿ ಬಾಡಿಸಿ.
* ಈರುಳ್ಳಿ ಕೆಂಪಗಾದ ನಂತರ ಅದಕ್ಕೆ ಚಿಕನ್ ಹಾಕಿ ಎರಡು ನಿಮಿಷ ಬಾಡಿಸಿ ನಂತರ ಹಿತ್ಕಿದ ಅವರೆ ಬೇಳೆ ಹಾಕಿ ಅರಿಶಿನ ಹಾಗೂ ಉಪ್ಪು ಹಾಕಿ ಬಾಡಿಸಿ ಮಧ್ಯಮ ಉರಿಯಲ್ಲಿ ಚೆನ್ನಾಗಿ ಬೇಯಿಸಿ.
* ಬೇಳೆ ಹಾಗೂ ಚಿಕನ್ ಅರ್ಧ ಮಾತ್ರ ಬೇಯಬೇಕು ಏಕೆಂದರೆ ಮಸಾಲೆಯಲ್ಲಿ ಉಳಿದದ್ದು ಬೇಯುತ್ತದೆ.
* ಮಿಕ್ಸಿ ಜಾರಿಗೆ ತೆಂಗಿನಕಾಯಿ, ದನಿಯಾ ಪುಡಿ, ಖಾರದ ಪುಡಿ, ಅರಿಶಿನ ಪುಡಿ, ಗರಂಮಸಾಲ, ಗಸಗಸೆ, ಟಮೋಟೊ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
* ಮಸಾಲೆ ಹಸಿಯಾಗಿರುವ ಕಾರಣ ಬಾಣಲೆಗೆ ಎಣ್ಣೆ ಹಾಕಿ ಉಳಿದ ಈರುಳ್ಳಿ ಹಾಕಿ ಚೆನ್ನಾಗಿ ಬಾಡಿಸಿ ನಂತರ ರುಬ್ಬಿದ ಮಸಾಲೆಯನ್ನು ಹಾಕಿ ಬೇಯಿಸಿ.
* ಮಸಾಲೆಯನ್ನು ತಿರುವುತ್ತಲೇ ಇರಬೇಕು, ಇಲ್ಲವಾದರೆ ತಳಕಟ್ಟುತ್ತದೆ.
* ಚೆನ್ನಾಗಿ ಬೆಂದ ಮಸಾಲೆ ಎಣ್ಣೆ ಬಿಡಲು ಆರಂಭಿಸುತ್ತದೆ ಆಗ ಮಸಾಲೆಯನ್ನು ಚಿಕನ್ ಹಾಗೂ ಅವರೆ ಬೇಳೆಯ ಪಾತ್ರೆಗೆ ಹಾಕಿ ನಿಧಾನವಾಗಿ ಕಲಸಿ ಅಗತ್ಯಕ್ಕೆ ಅನುಗುಣವಾಗಿ ನೀರು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಸಾರಿನಲ್ಲಿ ಎಣ್ಣೆ ಬಿಡುವವರೆಗೂ ಬೇಯಿಸಿ.
- ತೆಂಗಿನಕಾಯಿ ಹೆಚ್ಚು ಹಾಕಿದಷ್ಟು ಸಾಂರು ಗಟ್ಟಿಯಾಗುತ್ತದೆ, ನೀವು ಕಡಲೆಪಪ್ಪನ್ನು ಸಹ ಮಿಕ್ಸಿಗೆ ಹಾಕಿಕೊಳ್ಳಬಹುದು. ಮಸಾಲೆ ಹೆಚ್ಚು ಎನಿಸಿದರೆ ಗರಂ ಮಸಾಲೆಯನ್ನು ತಪ್ಪಿಸಬಹುದು.
ಮಾಡುವ ವಿಧಾನ
* ಒಂದು ದೊಡ್ಡ್ ಪಾತ್ರೆಗೆ ಎಣ್ಣೆ ಹಾಕಿ ಅದಕ್ಕೆ ಚಕ್ಕೆ, ಲವಂಗ, ಎಲೆ ಹಾಗೂ
ಸ್ವಲ್ಪ ಎಣ್ಣೆ ಹಾಕಿ ಚೆನ್ನಾಗಿ ಬಾಡಿಸಿ.
* ಮಸಾಲೆಯನ್ನು ತಿರುವುತ್ತಲೇ ಇರಬೇಕು, ಇಲ್ಲವಾದರೆ ತಳಕಟ್ಟುತ್ತದೆ.
* ಚೆನ್ನಾಗಿ ಬೆಂದ ಮಸಾಲೆ ಎಣ್ಣೆ ಬಿಡಲು ಆರಂಭಿಸುತ್ತದೆ ಆಗ ಮಸಾಲೆಯನ್ನು ಚಿಕನ್ ಹಾಗೂ ಅವರೆ ಬೇಳೆಯ ಪಾತ್ರೆಗೆ ಹಾಕಿ ನಿಧಾನವಾಗಿ ಕಲಸಿ ಅಗತ್ಯಕ್ಕೆ ಅನುಗುಣವಾಗಿ ನೀರು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಸಾರಿನಲ್ಲಿ ಎಣ್ಣೆ ಬಿಡುವವರೆಗೂ ಬೇಯಿಸಿ.