Just In
Don't Miss
- News
ಒನ್ಪ್ಲಸ್ ಸಹ ಸ್ಥಾಪಕನಿಂದ ''ನಂಥಿಂಗ್'' ಎಂಬ ಸಂಸ್ಥೆ ಸ್ಥಾಪನೆ
- Education
BEL Recruitment 2021: 22 ಸರಂಕ್ಷಣೆ ಅಧಿಕಾರಿ, ಕಿರಿಯ ಮೇಲ್ವಿಚಾರಕರು ಮತ್ತು ಹವಿಲ್ದಾರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
ICC ODI ranking: ಅಗ್ರ ಸ್ಥಾನದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ
- Automobiles
ಅನಾವರಣವಾಯ್ತು 2021ರ ಹ್ಯುಂಡೈ ಟ್ಯುಸಾನ್ ಎನ್ ಲೈನ್ ಎಸ್ಯುವಿ
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 27ರ ದರ
- Movies
ಚಿತ್ರಮಂದಿರ: 100% ಸೀಟು ಭರ್ತಿಗೆ ಕೇಂದ್ರ ಸರ್ಕಾರ ಅಸ್ತು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ರೆಸಿಪಿ: ಮೈದಾ ಹಾಕದ ಬಾಳೆಹಣ್ಣಿನ ಬ್ರೆಡ್
ಬಾಳೆಹಣ್ಣಿನ ಹಲ್ವಾ, ಪುಡ್ಡಿಂಗ್ ಇವೆಲ್ಲಾ ಮಾಡಿರುತ್ತೀರಾ, ಆದರೆ ಇದರಿಂದ ಬ್ರೆಡ್ ಟ್ರೈ ಮಾಡಿದ್ದೀರಾ, ಇದೊಂದು ತುಂಬಾ ಸರಳವಾದ ರೆಸಿಪಿಯಾಗಿದ್ದು ಒಂದು ಗಂಟೆಯ ಒಳಗೆ ನೀವು ಈ ಬ್ರೆಡ್ ರೆಡಿ ಮಾಡಬಹುದು.
ಇದನ್ನು ಮಾಡಿ ನೀವು ರೂಮ್ನ ಉಷ್ಣತೆಯಲ್ಲಿ ಇಟ್ಟು ಬಳಸಿ, ಫ್ರಿಡ್ಜ್ನಲ್ಲಿ ಇಡಬೇಡಿ. ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:
ಇದಕ್ಕೆ ನೀವು ಪಚ್ಚೆ ಬಾಳೆಹಣ್ಣು ಅಥವಾ ತುಂಬಾ ಹಣ್ಣಾದ ಕದಳಿ ಬಳಸಬಹುದು, ಕದಳಿಯಾದರೆ 8-10 ಬಾಳೆಹಣ್ಣು ಹಾಕಿ, ಸಕ್ಕರೆ ಬದಲಿಗೆ ಜೇನು ಬಳಸಿದರೆ ಹೆಚ್ಚು ಆರೋಗ್ಯಕರ.
Recipe By: Boldsky.com
Recipe Type: Bread
Serves: 5
-
ಬೇಕಾಗುವ ಸಾಮಗ್ರಿ
ತುಂಬಾ ಹಣ್ಣಾದ ಬಾಳೆಹಣ್ಣು 3
ಮೊಟ್ಟೆ 3
ವೆನಿಲ್ಲಾ ರಸ 1 ಚಮಚ
ಬಾದಾಮಿ ಪುಡಿ 2.5 ಕಪ್
ಕೋಕಾ ಪುಡಿ 1/2 ಕಪ್
ಅಡುಗೆ ಸೋಡಾ 1 ಚಮಚ
ಉಪ್ಪು ಅರ್ಧ ಚಮಚ
ಚಾಕೋ ಚಿಪ್ಸ್-1/2 ಕಪ್
ಅಲಂಕಾರಕ್ಕೆ
ಚಾಕೋಚಿಪ್ಸ್ 2 ಚಮಚ
ವಾಲ್ನಟ್ 1/4 ಕಪ್
-
{recipe}ಮಾಡುವ ವಿಧಾನ
* ಓವನ್ ಅನ್ನು 180 ಡಿಗ್ರಿ ಉಷ್ಣತೆಗೆ ಪ್ರೀಹೀಟ್ ಮಾಡಿ. ಬೇಕಿಂಗ್ ಟ್ರೇಗೆ ಬೆಣ್ಣೆ ಸವರಿ.
* ಒಂದು ದೊಡ್ಡ ಬೌಲ್ನಲ್ಲಿ ಬಾಳೆಹಣ್ಣು, ಮೊಟ್ಟೆ, ಜೇನು ಎಲ್ಲಾ ಹಾಕಿ ಮ್ಯಾಶ್ ಮಾಡಿ, ನಂತರ ವೆನಿಲ್ಲಾ ರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
* ನಂತರ ಬಾದಾಮಿ ಪುಡಿ, ಕೋಕಾ ಪುಡಿ, ಬೇಕಿಂಗ್ ಸೋಡಾ ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ತಿರುಗಿಸಿ. ಸಿಹಿ ಸರಿಯಾಗಿದೆಯೇ ನೋಡಿ.
* ಈಗ ಮಿಶ್ರಣವನ್ನು ಬೇಕಿಂಗ್ ಟ್ರೇಗೆ ಸುರಿದು ಅದರ ಮೇಲೆ ಚಾಕೋಚಿಪ್ಸ್ ಹಾಗೂ ವಾಲ್ನಟ್ ಹಾಕಿ 25-30 ನಿಮಿಷ ಬೇಯಿಸಿ. ನಂತರ ಓವನ್ನಿಂದ ತೆಗೆದು 10 ನಿಮಿಷ ತಣ್ಣಗಾಗಲು ಬಿಟ್ಟು ಕತ್ತರಿಸಿ.
- ಈ ಬ್ರೆಡ್ ಅನ್ನು 2 ದಿನ ಇಟ್ಟರೂ ಹಾಳಾಗುವುದಿಲ್ಲ.
- ಕ್ಯಾಲೋರಿ - 222ಕ್ಯಾ
- ಪ್ರೊಟೀನ್ - 77ಗ್ರಾಂ
- ಕಾರ್ಬ್ಸ್ - 209ಗ್ರಾಂ