ಗಣೇಶ ಚತುರ್ಥಿ ರೆಸಿಪಿ: ಓರಿಯೋ ಬಿಸ್ಕೆಟ್‌ನಿಂದ ಸುಲಭದಲ್ಲಿ ಮಾಡಬಹುದು ಈ ಮೋದಕ

Posted By:

ಈ ಗಣೇಶ ಚತುರ್ಥಿಗೆ ಎಷ್ಟು ಬಗೆಯ ಮೋದಕ ಮಾಡಬೇಕೆಂದು ಬಯಸಿದ್ದೀರಾ? ಗಣೇಶನಿಗೆ ಬಗೆ-ಬಗೆಯ ಮೋದಕಗಳನ್ನು ಅರ್ಪಿಸಿ ಪೂಜಿಸಲಾಗುವುದು. ಸೆಪ್ಟೆಂಬರ್ 18-19ರಂದು ಗಣೇಶ ಚತುರ್ಥಿಯನ್ನು ಆಚರಿಸಲಾಗುವುದು. ಕೆಲವೊಂದು ಮೋದಕಗಳನ್ನು ನೀವು ಸುಲಭವಾಗಿ ತಯಾರಿಸಬಹುದು. ನಾವಿಲ್ಲಿ ಓರಿಯೋ ಬಿಸ್ಕೆಟ್‌ ಬಳಸಿ ಮೋದಕ ಮಾಡುವ ರೆಸಿಪಿ ನೀಡಿದ್ದೇವೆ. ಇದನ್ನು ಮಾಡು 3 ಸಾಮಗ್ರಿ ಸಾಕು. ಬನ್ನಿ ಇದನ್ನು ಮಾಡುವುದು ಹೇಗೆ?

Ganesha Chathurti Recipe 2023

ಬೇಕಾಗುವ ಸಾಮಗ್ರಿ
* ಓರಿಯೋ ವೈಟ್‌ ಪ್ಯಾಕ್‌ ಬಿಸ್ಕೆಟ್‌ ( 2 ಚಿಕ್ಕ ಪ್ಯಾಕೆಟ್)
* ಗಟ್ಟಿ ಹಾಲು 2-3 ಚಮಚ (condensed milk)
* ತೆಂಗಿನತುರಿ 3 ಚಮಚ
* ತುಪ್ಪ

ಮಾಡುವ ವಿಧಾನ:
ಸ್ಟಫಿಂಗ್‌ ಮಾಡುವುದು ಹೇಗೆ?
* ಓರಿಯೋ ಮೋದಕ್‌ ಮಾಡುವ ಮುನ್ನ ನೀವು ಸ್ಟಫಿಂಗ್‌ಗೆ ರೆಡಿ ಮಾಡಬೇಕು.
* ಓರಿಯೋ ಬಿಸ್ಕೆಟ್‌ನ ಬಿಳಿ ಕ್ರೀಮ್‌ ತೆಗೆದು ಅದನ್ನು ತೆಂಗಿನ ತುರಿ ಜೊತೆ ಮಿಕ್ಸ್ ಮಾಡಿ.

ಮೋದಕದ ಹೊರಭಾಗವನ್ನು ತುಯಾರಿಸಲು
* ಓರಿಯೋ ಬಿಸ್ಕೆಟ್‌ ಅನ್ನು ಮಿಕ್ಸಿಯಲ್ಲಿ ನುಣ್ಣನೆ ಪುಡಿ ಮಾಡಿ
* ನಂತರ ಅದಕ್ಕೆ ಗಟ್ಟಿ ಹಾಲನ್ನು ಹಾಕಿ ಗಟ್ಟಿ ಪೇಸ್ಟ್‌ ಮಾಡಿ (ನೀರಾಗಬಾರದು)
ಮಾಡುವ ವಿಧಾನ
ನೀವು ಮೋದಕ ಮೌಲ್ಡ್‌ಗೆ ತುಪ್ಪ ಸವರಿ
* ಈಗ ಬಿಸ್ಕೆಟ್‌ ಪೇಸ್ಟ್‌ನಿಂದ ಚಿಕ್ಕ ಉಂಡೆ ಮಾಡಿ, ನಂತರ ಬೆರಳಿನಿಂದ ರಂಧ್ರ ಮಾಡಿ ಅದರಲ್ಲಿ ವೈಟ್‌ ಕ್ರೀಮ್ ಹಾಗೂ ತೆಂಗಿನತುರಿ ಮಿಶ್ರಣ ತುಂಬಿ ಉಂಡೆಕಟ್ಟಿ
* ನಂತರ ಮೋದಕ ಮೌಲ್ಡ್‌ನಲ್ಲಿ ಹಾಕಿ ಬಿಗಿ ಮಾಡಿ
* ನಂತರ ಮೆಲ್ಲನೆ ತೆಗೆದರೆ ಓರಿಯೋ ಮೋದಕ ರೆಡಿ.

[ of 5 - Users]
Story first published: Friday, September 15, 2023, 13:09 [IST]
X
Desktop Bottom Promotion