Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕಬ್ಬಿನ ಜ್ಯೂಸ್ ಅನ್ನು ಈ ಎರಡು ವಿಧಾನಗಳಲ್ಲಿ ಮಾಡಿ
ದೇಶಾದ್ಯಂತ ಬಹಳ ಜನಪ್ರಿಯವಾಗಿರುವ ಹೋದಲ್ಲೆಲ್ಲಾ ನಮಗೆ ದೊರೆಯುವಂತಹ ಬಾಯಾರಿದಾಗ ದಣಿವು ನೀಗುವ ಒಂದು ನೈಸರ್ಗಿಕ ಪೇಯ ಕಬ್ಬಿನ ಜ್ಯೂಸ್ ಆಗಿದೆ. ಕಬ್ಬಿನ ಜ್ಯೂಸ್ ಮಾಡುವ ಹಲವಾರು ಅಂಗಡಿಗಳು ಗಲ್ಲಿ ಗಲ್ಲಿಯಲ್ಲಿದ್ದು ಕಬ್ಬಿನಿಂದ ಹಿಂಡಿ ತೆಗೆಯುವ ನೈಸರ್ಗಿಕ ಸಿಹಿ ಬೆರೆತ ಪ್ರೋಟೀನ್ ಅಧಿಕವಾಗುಳ್ಳ ಜ್ಯೂಸ್ ಆಗಿದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕುತ್ತೆ ಈ ಜ್ಯೂಸ್
ಕಬ್ಬಿನ ಜ್ಯೂಸ್ ಅನ್ನು ಕುಡಿಯುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ವಿವಿಧ ರೀತಿಯ ಕಬ್ಬು ಮತ್ತು ಮಣ್ಣನ್ನು ಆಧರಿಸಿ, ಕಬ್ಬಿನಿಂದ ಹಿಂಡಿ ತೆಗೆದ ರಸ ಪ್ರತ್ಯೇಕವಾಗಿರುತ್ತದೆ. ಕಬ್ಬಿನ ಜ್ಯೂಸ್‌ನಲ್ಲಿ ಪ್ರೋಟೀನ್ ವಿಟಮಿನ್ ಮತ್ತು ಉತ್ಕರ್ಷಣ ಅಂಶಗಳಿವೆ. ನೀವು ಈ ಜ್ಯೂಸ್ ಅನ್ನು ಎರಡು ನಿಮಿಷಗಳಲ್ಲಿ ತಯಾರಿಸಬಹುದಾಗಿದೆ.
ಕಬ್ಬಿನ ಸಿಪ್ಪೆ ತೆಗೆಯಲು ಪರಿಣಿತರ ಅಗತ್ಯವಿದೆ. ಆದ್ದರಿಂದ ಸಿಪ್ಪೆ ತೆಗೆದ ಕಬ್ಬನ್ನು ಖರೀದಿಸಿ ಜ್ಯೂಸ್ ಮಾಡುವುದು ಉತ್ತಮವಾಗಿದೆ. ತಾಜಾ ಹಾಗೂ ರುಚಿ ಭರಿತ ಕಬ್ಬಿನ ಜ್ಯೂಸ್ ಅನ್ನು ನಿಮಗೆ ಮನೆಯಲ್ಲೇ ತಯಾರಿಸಬಹುದು ಅದು ಹೇಗೆ ಎಂಬುದನ್ನು ಈ ವಿಧಾನದ ಮೂಲಕ ತಿಳಿದುಕೊಳ್ಳಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: 3 ಪಾನೀಯಗಳ ರೆಸಿಪಿ-ರಾಮನವಮಿ ಸ್ಪೆಷಲ್

ಕಬ್ಬಿನ ಜ್ಯೂಸ್/ಶರ್ಬತ್
.ಕಬ್ಬು - 3-4 ಕಪ್
.ಶುಂಠಿ - 1 ಇಂಚು (ಸಿಪ್ಪೆ ತೆಗೆದದ್ದು)
.ಲಿಂಬೆ - 1/2
.ಸಕ್ಕರೆ - 2ಟೇಸ್ಪೂನ್
ಮಾಡುವ ವಿಧಾನ
. ಒಂದು ಪಾತ್ರೆಯಲ್ಲಿ, ಎಲ್ಲಾ ಸಾಮಾಗ್ರಿಗಳನ್ನು ಸ್ಪೂನ್‌ನೊಂದಿಗೆ ಮಿಶ್ರ ಮಾಡಿಕೊಳ್ಳಿ. 5 ನಿಮಿಷ ಬಿಟ್ಟು ನಂತರ ಪುನಃ ಮಿಶ್ರ ಮಾಡಿಕೊಳ್ಳಿ. ಸಕ್ಕರೆ ಕರಗುತ್ತದೆ.
.3-4 ಗಂಟೆಗಳಿಗಾಗಿ ರೆಫ್ರಿಜರೇಟ್ ಮಾಡಿ. ಒಮ್ಮೆ ಆದ ನಂತರ, ಪಾತ್ರೆಯನ್ನು ಹೊರತೆಗೆದು ಸ್ವಲ್ಪ ನೀರು ತೆಗೆದುಕೊಂಡು ಬ್ಲೆಂಡ್ ಮಾಡಿ.
.ಚೆನ್ನಾಗಿ ಕಡೆದ ನಂತರ ಜ್ಯೂಸ್ ಅನ್ನು ಲೋಟಕ್ಕೆ ಹಾಕಿಕೊಳ್ಳಿ ಮತ್ತು ತಕ್ಷಣವೇ ಸರ್ವ್ ಮಾಡಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಲೆಮನ್ ಜ್ಯೂಸ್ ಹೀಗೆ ಮಾಡಿದರೆ ರುಚಿ ಹೆಚ್ಚು
ದಾಳಿಂಬೆ ಕಬ್ಬು ಜ್ಯೂಸ್:
.ಕಬ್ಬು - 2 ಕಪ್
.ದಾಳಿಂಬೆ ಬೀಜಗಳು - 1 ಕಪ್
.ಲಿಂಬೆ ರಸ - 1ಟೇಸ್ಪೂನ್
ಮಾಡುವ ವಿಧಾನ
. ಸ್ವಲ್ಪ ನೀರಿನೊಂದಿಗೆ ಕಬ್ಬನ್ನು ಕಡೆದುಕೊಳ್ಳಿ
. ದಾಳಿಂಬೆ ಬೀಜಗಳನ್ನು ಸೇರಿಸಿ ಮತ್ತು ಪುನಃ ಕಡೆದುಕೊಳ್ಳಿ.
.ಲಿಂಬೆ ರಸ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ.
.ಒಮ್ಮೆ ಆದ ನಂತರ, ಲೋಟಗಳಿಗೆ ಐಸ್ ಕ್ಯೂಬ್ ಅನ್ನು ಹಾಕಿ ಜ್ಯೂಸ್ ಹಾಕಿಕೊಳ್ಳಿ. ತಕ್ಷಣ ಸರ್ವ್ ಮಾಡಿ.



Click it and Unblock the Notifications
