Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಪೈನಾಪಲ್ ಲೆಮನೆಡ್-ಅಂತಿಂಥ ಜ್ಯೂಸ್ ಇದಲ್ಲ
ಸಾಮಾನ್ಯವಾಗಿ ಜ್ಯೂಸ್ ಮಾಡುವಾಗ ಹಣ್ಣುಗಳನ್ನು ಮಿಕ್ಸಿಯಲ್ಲಿ ಹಾಕಿ ಆಡಿಸಿ, ದ್ರಾವಣ ರೀತಿ ಮಾಡಿ ಐಸ್ ಬೇಕಿದ್ದರೆ ಐಸ್ ಹಾಕಿ ಕುಡಿಯುತ್ತೇವೆ. ಆದರೆ ಇಲ್ಲಿ ನಾವು ಹೇಳಿರುವ ಜ್ಯೂಸ್ ಸಾಮಾನ್ಯವಾಗಿ ನಾವು ಮಾಡುವಂತಹ ಜ್ಯೂಸ್ ಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ.
ಈ ಜ್ಯೂಸ್ ಅನ್ನು ಬಿಸಿ ನೀರಿನಲ್ಲಿ ಮಾಡಲಾಗುವುದು ! ಈ ಬಿಸಿಲು ಕಾಲದಲ್ಲಿ ಬಿಸಿ ಜ್ಯೂಸ್ ಕುಡಿಯಲು ಸಾಧ್ಯವೇ ಎಂದು ಹುಬ್ಬೇರಿಸಬೇಡಿ. ಇದನ್ನು ಮಾಡುವುದು ಮಾತ್ರ ಕುದಿಸುವ ವಿಧಾನದಿಂದ, ಆದರೆ ಇದನ್ನು ಫ್ರಿಜ್ ನಲ್ಲಿಟ್ಟು ಕುಡಿಯಬೇಕು. ಬನ್ನಿ, ಇದನ್ನು ಮಾಡುವುದು ಹೇಗೆ ಎಂದು ತಿಳಿಯೋಣ:

ಬೇಕಾಗುವ ಸಾಮಾಗ್ರಿಗಳು
1 ಕಪ್ ತಾಜಾ ಪೈನಾಪಲ್ ಜ್ಯೂಸ್
2 ನಿಂಬೆ ಹಣ್ಣು
2 ಚಮಚ ಜೇನು
4 ಚಮಚ ಸಕ್ಕರೆ
2 ಕಪ್ ನೀರು
ಐಸ್
ತಯಾರಿಸುವ ವಿಧಾನ:
* ನೀರನ್ನು ಕುದಿಯಲು ಇಡಿ, ನೀರು ಕುದಿ ಬರುತ್ತಿರುವಾಗ ಈಗ ಪೈನಾಪಲ್ ಜ್ಯೂಸ್, ನಿಂಬೆ ರಸ, ಸಕ್ಕರೆ, ಜೇನು ಸೇರಿಸಿ. ಈಗ ಸಕ್ಕರೆ ಕರಗುವವರೆಗೆ ಸೌಟ್ ನಿಂದ ಆಡಿಸಿ. ಮತ್ತೆ ಈ ಪಾನೀಯಾವನ್ನು ಕುದಿಸಿ.
* ನಂತರ ಉರಿಯಿಂದ ತೆಗೆದು ತಣ್ಣಗಾದ ಮೇಲೆ 3-4 ಗಂಟೆಗಳ ಕಾಲ ಫ್ರಿಜ್ ನಲ್ಲಿಡಿ.
* ಈಗ ಇದನ್ನು ಐಸ್ ಕ್ಯೂಬ್ ಹಾಕಿ ಕುಡಿದು ನೋಡಿ, ಈ ಜ್ಯೂಸ್ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.



Click it and Unblock the Notifications
