Latest Updates
-
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ
ತೂಕ ಇಳಿಕೆಗಾಗಿ ಲಿಂಬೆ ಚಹಾ
ಹೊಟ್ಟೆಯನ್ನು ಸ್ವಚ್ಛಗೊಳಿಸಿ ಬೇಡದ ಅಂಶಗಳನ್ನು ಹೊರಹಾಕಲು ಲಿಂಬೆ ಸಹಕಾರಿಯಾಗಿದೆ. ಲಿಂಬೆಯಿಂದ ದೈಹಿಕ ಸ್ವಾಸ್ಥ್ಯ ಉತ್ತಮವಾಗಿರುತ್ತದೆ. ಲಿಂಬೆ ಚಹಾ ಕೂಡ ಈ ದಿಶೆಯಲ್ಲಿ ಚೆನ್ನಾಗಿ ಕಾರ್ಯನಿರ್ವಹಿಸುತ್ತದೆ. ತೂಕವನ್ನು ಇಳಿಸಿ ಉತ್ತಮ ಆರೋಗ್ಯವನ್ನು ಕಾಪಾಡುವಲ್ಲಿ ಲಿಂಬೆ ಚಹಾ ಉತ್ತಮ ಪಾತ್ರ ನಿರ್ವಹಿಸುತ್ತದೆ. ಲಿಂಬೆ ಚಹಾ ನಿಮ್ಮ ಮನಸ್ಸನ್ನು ತಾಜಾಗೊಳಿಸಿ ಆರೋಗ್ಯವಂತರನ್ನಾಗಿಸುತ್ತದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಚಳಿಯಲ್ಲಿ ಹಿತವಾದ ಅನುಭವಕ್ಕೆ 7 ಬಗೆಯ ಟೀಗಳು
ನೈಸರ್ಗಿಕ ಚಹಾವಾದ ಲಿಂಬೆಯುಕ್ತ ಚಹಾ ದೇಹದಿಂದ ಬೇಡವಾದ ಕೊಬ್ಬನ್ನು ಹೊರಹಾಕಿ ಸ್ವಾಸ್ಥ್ಯಗೊಳಿಸುತ್ತದೆ. ಹರ್ಬಲ್ ಲಿಂಬೆ ಚಹಾ ಯಾವುದೇ ಅಡ್ಡಪರಿಣಾಮಗಳನ್ನು ಹೊಂದಿರುವುದಿಲ್ಲ. ಶೀತ, ಕೆಮ್ಮು, ತಲೆನೋವು, ಸುಸ್ತು ಮುಂತಾದ ಕಾಯಿಲೆಗಳಿಗೂ ಲಿಂಬೆ ಚಹಾ ರಾಮಬಾಣವಾಗಿದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಕಬ್ಬಿನ ಜ್ಯೂಸ್ ಅನ್ನು ಈ ಎರಡು ವಿಧಾನಗಳಲ್ಲಿ ಮಾಡಿ
ನಿಮ್ಮ ದೈನಂದಿನ ಜೀವನದಲ್ಲಿ ಲಿಂಬೆ ಚಹಾವನ್ನು ಸೇವಿಸುವುದು ನಿಮ್ಮನ್ನು ಚಟುವಟಿಕೆಯಿಂದ ಇರಿಸಲು ಪ್ರಮುಖ ಪಾತ್ರವಹಿಸುತ್ತದೆ. ಇಂದು ನಾವು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವ ಲಿಂಬೆ ಚಹಾದ ತಯಾರಿ ವಿಧಾನ ಹೀಗಿದೆ:
ಪ್ರಮಾಣ: 3-4 ಜನರಿಗೆ ಸಾಕಾಗುವಷ್ಟು
ಸಿದ್ಧತಾ ಸಮಯ: 8-10 ನಿಮಿಷಗಳು
ಸಾಮಾಗ್ರಿಗಳು
.ಕಪ್ಪು ಚಹಾ ಎಲೆಗಳು - 1 ಟೇಸ್ಫೂನ್ (ನೀವು ಚಹಾ ಬ್ಯಾಗ್‌ಗಳನ್ನು ಕೂಡ ಬಳಸಬಹುದು)
.ಲಿಂಬೆ - 1
.ಏಲಕ್ಕಿ -1/2 ಇಂಚಿನ ಕೋಲು
.ಜೇನು - 1/2 ಟೇಸ್ಪೂನ್
.ಲಿಂಬೆ ಹೋಳು - 5-6 (ಅಲಂಕಾರಕ್ಕಾಗಿ)
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಯಮ್ಮೀ...ವೆನಿಲ್ಲಾ ಕಸ್ಟರ್ಡ್ ರೆಸಿಪಿ
ಮಾಡುವ ವಿಧಾನ:
.ಚಹಾ ಪಾತ್ರೆಯಲ್ಲಿ ನೀರನ್ನು ಇಡಿ.
.ಕಪ್ಪು ಚಹಾ ಎಲೆಗಳನ್ನು ಸೇರಿಸಿ ಅಥವಾ ಚಹಾ ಬ್ಯಾಗನ್ನು ಮುಳುಗಿಸಿ
.ಲಿಂಬೆ ರಸ, ಜೇನು ಮತ್ತು ಏಲಕ್ಕಿಯನ್ನು ಚಹಾ ಪಾತ್ರೆಗೆ ಹಾಕಿ. ಮೂರು ನಿಮಿಷಗಳಷ್ಟು ಕಾಲ ಕುದಿಸಿ.
.ಚೆನ್ನಾಗಿ ಕುದಿದ ನಂತರ, ಕಪ್‌ಗೆ ಸೋಸಿ ಮತ್ತು ಲಿಂಬೆ ಹೋಳುಗಳಿಂದ ಅಲಂಕರಿಸಿ.
ಲಿಂಬೆ ಚಹಾ ಸವಿಯಲು ಸಿದ್ಧವಾಗಿದೆ. ಈ ತೂಕ ಇಳಿಸುವ ಪೇಯವನ್ನು ಬಿಸಿ ಇಲ್ಲವೇ ತಣ್ಣಗೆ ಸವಿಯಬಹುದು. ಇದು ಕೊಬ್ಬಿನ ಅಂಶಗಳನ್ನು ದೇಹದಿಂದ ತೊಡೆದುಹಾಕಿ ಗಂಟಲನ್ನು ಸೋಂಕಿನಿಂದ ರಕ್ಷಿಸುತ್ತದೆ.



Click it and Unblock the Notifications
