Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಕ್ಯಾಪ್ಸಿಕಂ ರವಾ ಪಕೋಡ
ಕಾಕಾನ ಅಂಗಡಿಯಲ್ಲಿ ಕೆಟ್ಟ ಎಣ್ಣೆಯಲ್ಲಿ ಕರಿದ ಪಕೋಡಗಳಿಗಿಂತ ಮನೇಲೇ ಮಾಡಿದರೆ ವಾಸಿಯಲ್ಲವೇ? ಗರಂಗರಂ ಪಕೋಡ ಸಂಜೆಯ ಚಹಾಕ್ಕೆ ತಕ್ಕ ಜೋಡಿ.
ಬೇಕಾದ ಸಾಮಾಗ್ರಿಗಳು :
ಈರುಳ್ಳಿ -2
ಕ್ಯಾಪ್ಸಿಕಂ- 1(ದೊಡ್ಡ ಗಾತ್ರದ್ದು)
ರವೆ- 2 ಲೋಟ
ಶುಂಠಿ+ ಹಸಿ ಮೆಣಸು ಪೇಸ್ಟ್ - 1/4 ಚಮಚ
ಮೊಸರು- 1 ಲೋಟ
ಕೊತ್ತಂಬರಿ ಪುಡಿ- 1/4 ಚಮಚ
ಮೆಣಸಿನ ಪುಡಿ- 1/2 ಚಮಚ
ಸೋಡಾ - 1 ಚಿಟಿಕೆ
ಅರಿಶಿನ ಪುಡಿ- 1/4ಚಮಚ
ಅಕ್ಕಿ ಹಿಟ್ಟು - 1 ಚಮಚ
ಉಪ್ಪು ರುಚಿಗೆ ತಕ್ಕಷ್ಟು ಹಾಗೂ ಕರಿಯಲು ಶುದ್ಧ ಎಣ್ಣೆ
ಮಾಡುವ ವಿಧಾನ :
ಕ್ಯಾಪ್ಸಿಕಂ ಮತ್ತು ಈರುಳ್ಳಿಯನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ. ಈ ತುಂಡುಗಳೊಂದಿಗೆ ಇತರ ಪದಾರ್ಥಗಳನ್ನೂ ಸೇರಿಸಿ ಒಂದು ಪಾತ್ರೆಯಲ್ಲಿ ಹಾಕಿ. ಸ್ವಲ್ಪ -ಸ್ವಲ್ಪವೇ (ಚಮಚದಲ್ಲಿ ) ಮೊಸರು ಹಾಕುತ್ತಾ ಚೆನ್ನಾಗಿ ಕಲಸಿ. ಕಲಸಿದ ಮಿಶ್ರಣದ ಹಿಟ್ಟು ಗಟ್ಟಿಯಾಗಿರಬೇಕು. ಅಪ್ಪಿ-ತಪ್ಪಿಯೂ ಮೊಸರಿನ ಬದಲು ನೀರು ಹಾಕಬೇಡಿ.
ಗಟ್ಟಿ ಮತ್ತು ದಪ್ಪನಾದ ಹಿಟ್ಟನ್ನು ಉಂಡೆ ಮಾಡಿ. ನಂತರ ಅಂಗೈಯಲ್ಲಿ ತಟ್ಟಿ ಚಪ್ಪಟೆ ಮಾಡಿ. ಬಳಿಕ ಕುದಿ ಎಣ್ಣೆಯಲ್ಲಿ ಕರಿಯಲು ಬಿಡಿ. ಕೆಂಪಾಗಿ ಕಾದಾಗ ತೆಗೆಯಿರಿ. ಈಗ ಪಕೋಡ ರೆಡಿ. ಬಿಸಿಬಿಸಿ ಪಕೋಡಾದ ಜೊತೆ ನೆಂಚಿಕೊಳ್ಳಲು ಟೊಮೆಟೊ ಮತ್ತು ಮೆಣಸಿನ ಸಾಸ್ ಇದ್ದರೆ ಚೆನ್ನ.



Click it and Unblock the Notifications
