Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಕಣಿಲೆ ಪತ್ರೊಡೆ ಮತ್ತು ಪಲ್ಯ
ಹುಟ್ಟುತ್ತ ಹುಲ್ಲಾದೆ, ಬೆಳೆಯುತ್ತ ಮರವಾದೆ... ನೀನಾರಿಗಾದೆ ಬಿದಿರು, ಎಳೆ ಬಿದಿರು..!!
- ಸುಮತಿ ಕೆ. ಸಿ. ಭಟ್, ಅದೂರು
ಬೇಕಾಗುವ ಸಾಮಗ್ರಿ :
ಒಂದು ಫೂಟ್ ಉದ್ದದ ಕಣಿಲೆ (ಎಳೆ ಬಿದಿರು),
ಕುಚ್ಚಲಕ್ಕಿ 1 ಪಾವು, ಬೆಳ್ತಿಗೆ ಅಕ್ಕಿ- 1 ಪಾವು
ಕೊತ್ತಂಬರಿ ಬೀಜ 2 ಚಮಚ,
ಜೀರಿಗೆ ಅರ್ಧ ಚಮಚ,
ಚಿಟಿಕೆ ಅರಸಿನ ಪುಡಿ,
ಒಣಮೆಣಸು- 4,
ನೆಲ್ಲಿ ಕಾಯಿ ಗಾತ್ರದ ಹುಳಿ,
ನಿಂಬೆ ಗಾತ್ರದ ಬೆಲ್ಲ ಹಾಗೂ ರುಚಿಗೆ ತಕ್ಕಷ್ಟು ಉಪ್ಪು .
ಮಾಡುವ ವಿಧಾನ : ಕಣಿಲೆಯ ಮೆದುಭಾಗವನ್ನು ಸಣ್ಣಗೆ ತುರಿದು ನೀರು ಹಾಕಿ ಬೇಯಿಸಿ. ನೀರು ಸೋಸಿಟ್ಟುಕೊಳ್ಳಿ. ನೆನೆಯಿಸಿದ ಅಕ್ಕಿ ತೊಳೆದು, ಉಪ್ಪು, ಹುಳಿ, ಮೆಣಸು, ಕೊತ್ತಂಬರಿ, ಜೀರಿಗೆ, ಅರಸಿನ ಹುಡಿ, ಬೆಲ್ಲ ಹಾಕಿ ತುಸು ನೀರು ಹಾಕಿ ತರಿ ತರಿಯಾಗಿ ಗಟ್ಟಿಯಾಗಿ ರುಬ್ಬಿ. ಬೇಯಿಸಿದ ಕಣಿಲೆ ಸೇರಿಸಿ. ನಂತರ ದೊಡ್ಡ ಉಂಡೆ ಮಾಡಿ ಹಬೆಯಲ್ಲಿ ಬೇಯಿಸಿ. ಬೆಂದ ಮೇಲೆ ತುಪ್ಪ ಹಾಕಿ ತಿನ್ನಬಹುದು. ಇಲ್ಲವೇ ಪುಡಿ ಒಗ್ಗರಣೆ ಹಾಕಿ ಬೆಲ್ಲ, ತೆಂಗಿನ ತುರಿ ಸೇರಿಸಿಯೂ ತಿನ್ನಬಹುದು.
*
ಕಣಿಲೆಯ ಪಲ್ಯ
ಬೇಕಾಗುವ ಸಾಮಗ್ರಿ :
ಕಣಿಲೆ ತುರಿ - 2 ಕಪ್,
ಬೆಲ್ಲ - ನೆಲ್ಲಿಕಾಯಿ ಗಾತ್ರದ್ದು ,
ಮೆಣಸಿನ ಹುಡಿ 1 ಚಮಚ,
ಚಿಟಿಕೆ ಅರಸಿನ ಪುಡಿ,
ಸ್ವಲ್ಪವೇ ಹುಳಿ,
ಒಗ್ಗರಣೆ ವಸ್ತು,
ತೆಂಗಿನ ತುರಿ ಕಾಲು ಕಪ್ ಹಾಗೂ ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ : ಕಣಿಲೆ ತುರಿಯನ್ನು ಬೇಯಿಸಿ ನೀರು ಸೋಸಿಟ್ಟುಕೊಳ್ಳಿ. ನೀರು ಬಸಿದ ನಂತರ ಮೆಣಸಿನ ಪುಡಿ, ಅರಸಿನ ಪುಡಿ, ಬೆಲ್ಲ, ಹುಳಿ, ಉಪ್ಪು ಹಾಕಿ. ಬಾಣಲೆಯಲ್ಲಿ ಉದ್ದಿನ ಬೇಳೆ ಒಗ್ಗರಣೆಗಿಟ್ಟು, ಸಾಸಿವೆ ಸಿಡಿದ ನಂತರ ಎಲ್ಲವನ್ನೂ ಹಾಕಿ, ತುಸು ನೀರು ಹಾಕಿ ಮುಚ್ಚಿಡಿ. ನೀರು ಆರುತ್ತಾ ಬಂದಾಗ ತೆಂಗಿನ ತುರಿ ಹಾಕಿ ಎರಡು ಚಮಚ ಎಣ್ಣೆ ಹಾಕಿ ಗೊಟಾಯಿಸಿ ಕೆಳಗಿಳಿಸಿ.



Click it and Unblock the Notifications
