Latest Updates
-
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ?
ಹೊಸ ವರ್ಷಕ್ಕಾಗಿ 10 ಕಾಕ್ ಟೈಲ್ ರೆಸಿಪಿ
ಪ್ರತೀ ಜನವರಿಗೆ ಹೊಸ ವರ್ಷ ಪ್ರಾರಂಭವಾಗುತ್ತದೆ. ಪ್ರತೀ ವರ್ಷವು ಹೊಸ ವರ್ಷವನ್ನು ಬರಮಾಡಿಕೊಳ್ಳಲು ಸಡಗರ, ಸಂಬ್ರಮದಿಂದ ಸಿದ್ಧರಾಗುತ್ತೇವೆ ಅಲ್ಲವೇ? ಹೊಸ ಪ್ರತಿಜ್ಞೆಯನ್ನು ಮಾಡುವುದು, ಭವಿಷ್ಯದ ಬಗ್ಗೆ ಸ್ಕೆಚ್ ಹಾಕುವುದು ಹೀಗೆ ಅನೇಕ ಯೋಚನೆಗಳು ಪ್ರತಿಯೊಬ್ಬರ ತಲೆಯಲ್ಲಿರುತ್ತದೆ. ಹೊಸ ವರ್ಷದಲ್ಲಿ ಕೇಕ್ ಕಟ್ ಮಾಡುವುದು, ಪಾರ್ಟಿ ಮಾಡುವುದು ಸಾಮಾನ್ಯ.
ಅದರಲ್ಲೂ ನ್ಯೂ ಇಯರ್ ಪಾರ್ಟಿಯಲ್ಲಿ ಬಣ್ಣ-ಬಣ್ಣದ ಕಾಕ್ ಟೈಲ್ ಗಳು ಪ್ರಮುಖ ಆಕರ್ಷಣೆಯಾಗಿರುತ್ತದೆ. 2013 ಹೊಸ ವರ್ಷವನ್ನು ಪಾರ್ಟಿ ಮುಖಾಂತರ ಸ್ವಾಗತಿಸಲು ನೀವು ಬಯಸುವುದಾದರೆ ಬೋಲ್ಡ್ ಸ್ಕೈ ನಿಮಗೆ ಕೆಲವೊಂದು ಕಾಕ್ ಟೈಲ್ ರೆಸಿಪಿಗಳನ್ನು ನೀಡುತ್ತಿದೆ.
ಈ ಕಾಕ್ ಟೈಲ್ ಗಳು ನೋಡಲು ಆಕರ್ಷವಾಗಿದೆ ಮತ್ತು ರುಚಿಯಲ್ಲಿ ಆಲ್ಕೋಹಾಲ್ ಪ್ರಿಯರ ಮೆಚ್ಚುಗೆಯನ್ನು ಗಳಿಸುವಂತಿವೆ.

1. ಫ್ರೂಟ್ ಪಂಚ್ ಕಾಕ್ ಟೈಲ್
ಸಾಮಾಗ್ರಿಗಳು-ಕಿತ್ತಳೆ ಜ್ಯೂಸ್ 300ml, ನಿಂಬೆ ರಸ 2 ಚಮಚ, ವೋಡ್ಕಾ, 4 ನಿಂಬೆ ಹಣ್ಣಿನ ತುಂಡುಗಳು, ಸಕ್ಕರೆ 2 ಚಮಚ, ಪುದೀನಾ ಎಲೆ 4, ಐಸ್ ಕ್ಯೂಬ್
ತಯಾರಿಸುವ ವಿಧಾನ-ಕಿತ್ತಳೆ ರಸ, ನಿಂಬೆ ರಸ ಮತ್ತು 4 ತಂಡು ಐಸ್ ಅನ್ನು ಮಿಕ್ಸಿಯಲ್ಲಿ ಹಾಕಿ ಒಂದು ಸಲ ತಿರುಗಿಸಿ. ನಂತರ ಪ್ರತಿಯೊಂದು ಗ್ಲಾಸ್ ಗೆ 40ml ವೋಡ್ಕಾ, ಹಾಕಿ ನಂತರ ಕಿತ್ತಳೆ ರಸವನ್ನು ಲೋಟಕ್ಕೆ ಸುರಿಯಬೇಕು. ಈಗ ಗ್ಲಾಸ್ ತುದಿಯನ್ನು ಸ್ವಲ್ಪ ತೇವ ಮಾಡಿ ಅದರಲ್ಲಿ ಸಕ್ಕರೆಯನ್ನು ಉದುರಿಸಿ, ನಂತರ ಪುದೀನಾ ಎಲೆ ಮತ್ತು ನಿಂಬೆ ಹಣ್ಣಿನಿಂದ ಅಲಂಕರಿಸಿದರೆ ಫ್ರೂಟ್ ಪಂಚ್ ಕಾಕ್ ಟೈಲ್ ರೆಡಿ.

2. ಜೋಂಬೈ ಕಾಕ್ ಟೈಲ್
ಬೇಕಾಗುವ ಸಾಮಾಗ್ರಿಗಳು-30ml ವೋಡ್ಕಾ, 30ml ಡಾರ್ಕ್ ರಮ್, 30ml ಕಿತ್ತಳೆ ರಸ, ಪೈನಾಪಲ್ ರಸ ಮತ್ತು ನಿಂಬೆ ರಸ, 1 ಚಮಚ ಸಕ್ಕರೆ, ಐಸ್ ಕ್ಯೂಬ್, ಅಲಂಕಾರಕ್ಕೆ ನಿಂಬೆ ಹಣ್ಣಿನ ತುಂಡುಗಳು
ತಯಾರಿಸುವ ವಿಧಾನ- ನಿಂಬೆ ಹಣ್ಣಿನ ತುಂಡುಗಳನ್ನು ಬಿಟ್ಟು ಎಲ್ಲಾ ಸಾಮಾಗ್ರಿಗಳನ್ನು ಮಿಕ್ಸಿಯಲ್ಲಿ ಹಾಕಿ , ನಂತರ ಗ್ಲಾಸ್ ಗೆ ಸುರಿದು ನಿಂಬೆ ಹಣ್ಣಿನ ತುಂಡು ಮತ್ತು ಪುದೀನಾ ಎಲೆಯಿಂದ ಅಲಂಕರಿಸಿದರೆ ಜೋಂಬೈ ಕಾಕ್ ಟೈಲ್ ರೆಡಿ.

3. ರೋಸ್ ಕಾಕ್ ಟಲ್
ಸಾಮಾಗ್ರಿಗಳು-1 ಔನ್ಸ್ ವೈನ್, 1 ಔನ್ಸ್ ಜಿನ್, 1 ಔನ್ಸ್ ಆಪ್ರಿಕಾಟ್ ಬ್ರಾಂಡಿ, 1 ಚಮಚ ಗ್ರೆನಡೈನೆ ಸಿರಪ್, 1 ಚಮಚ ನಿಂಬೆ ರಸ, ಸಕ್ಕೆರೆ ಪುಡಿ, ಐಸ್ ಕ್ಯೂಬ್ಸ್
ತಯಾರಿಸುವ ವಿಧಾನ -ಐಸ್ ಕ್ಯೂಬ್ಸ್ ಬಿಟ್ಟು ಉಳಿದೆಲ್ಲಾ ಸಾಮಾಗ್ರಿಗಳನ್ನು ಮಿಕ್ಸಿಯಲ್ಲಿ ಹಾಕಿ, ನಂತರ ಗ್ಲಾಸ್ ಐಸ್ ಕ್ಯೂಬ್ಸ್ ಹಾಕಿ ಈ ಮಿಶ್ರಣವನ್ನು ಸುರಿದರೆ ರೋಸ್ ಕಾಕ್ ಟೈಲ್ ರೆಡಿ.

4. ಫೆನಿ ಕಾಕ್ ಟೈಲ್
ಸಾಮಾಗ್ರಿಗಳು-1 ಬಾಟಲ್ ಬಿಗ್ ಬಾಸ್ ಫೆನಿ,1 ಬಾಟಲ್ ಕೋಕಾ ಕೋಲಾ,1 ಚಿಲ್,ಚಿಟಿಕೆಯಷ್ಟು ಉಪ್ಪು, ಐಸ್ ಕ್ಯೂಬ್ಸ್
ತಯಾರಿಸುವ ವಿಧಾನ: ಆಕರ್ಷಕವಾದ ಗ್ಲಾಸ್ ನಲ್ಲಿ 2-3 ಐಸ್ ಕ್ಯೂಬ್ಸ್ ಹಾಕಬೇಕು. ನಂತರ 30ml ಬಿಗ್ ಬಾಸ್ ಕಾಜೂ ಸೇರಿಸಬೇಕು. ನಂತರ ಚಿಲ್ ಹಾಕಿ ಕೋಕಾ ಕೋಲಾದಿಂದ ಗ್ಲಾಸ್ ತುಂಬಿಸಿ, ಚಿಟಿಕೆಯಷ್ಟು ಉಪ್ಪು ಹಾಕಿದರೆ ಸರ್ವ್ ಮಾಡಲು ಫೆನಿ ಕಾಕ್ ಟೈಕ್ ರೆಡಿ.

5. ಬ್ಲೂ ಲಗೂನ್ ಕಾಕ್ ಟೈಲ್
ಸಾಮಾಗ್ರಿಗಳು-ವೋಡ್ಕಾ, ಶಾಟ್ ಗ್ಲೋಸ್ 1,ಬ್ಲೂ ಕ್ಯೂರಕೊ ಶಾಟ್ ಗ್ಲಾಸ್ 1( Blue Curacoa shot glass 1), ಹೈ ಬಾಲ್ ಗ್ಲಾಸ್ 1, ನಿಂಬೆ ಹಣ್ಣಿನ ತುಂಡು 1, ಚೆರ್ರಿ 2
ತಯಾರಿಸುವ ವಿಧಾನ:ಗ್ಲಾಸ್ ಗೆ ಐಸ್ ಕ್ಯೂಬ್ ಹಾಕಿ ಅದರ ಅರ್ಧದಷ್ಟು ಹೈ ಬಾಲ್ ಗ್ಲಾಸ್ ಹಾಕಬೇಕು. ನಂತರ ವೋಡ್ಕಾ, ಬ್ಲೂ ಕ್ಯೂರಕೊ ಶಾಟ್ ಸುರಿಯಬೇಕು. ನಂತ ನಿಂಬೆ ರಸ ಮತ್ತು ಆಲ್ಕೋಹಾಲ್ ಹಾಕಿ ಮಿಶ್ರಣ ಮಾಡಬೇಕು. ನಂತರ ಈ ಕಾಕ್ ಟೈಲ್ ಅನ್ನು ಚೆರ್ರಿಯಿಂದ ಅಲಂಕರಿಸಿದರೆ, ಕುಡಿಯಲು ಈ ಕಾಕ್ ಟೈಲ್ ರೆಡಿ.

6. ಕಿವಿ ಮಾರ್ಗರೇಟ್
ಸಾಮಾಗ್ರಿಗಳು: 2 ದೊಡ್ಡ ಕಿವಿ (ಸಿಪ್ಪೆ ಸುಲಿದಿರಬೇಕು), 1ಕಪ್ ನಿಂಬೆ ರಸ, ಚಿಟಿಕೆಯಷ್ಟು ಟೆಕ್ಯೂಲಾ 1 ಕಪ್ ಸಕ್ಕರೆ, ಐಸ್ ಕ್ಯೂಬ್ಸ್, 2 ಕಪ್ ಸಕ್ಕರೆ
ತಯಾರಿಸುವ ವಿಧಾನ-ಕಿವಿ, ಟೆಕ್ಯೂಲಾ, ಸಕ್ಕರೆ ಮತ್ತು ನಿಂಬೆ ರಸ ಹಾಕಿ ಮಿಕ್ಸಿಯಲ್ಲಿ ಹಾಕಬೇಕು, ನಂತರ ಐಸ್ ಕ್ಯೂಬ್ಸ್ ಹಾಕಿ ಮತ್ತೊಮ್ಮೆ ಆಡಿಸಿ. ನಂತರ ಕಾಕ್ ಟೈಲ್ ಗ್ಲಾಸ್ ಗೆ ಹಾಕಿದರೆ ಕಿವಿ ಮಾರ್ಗರೇಟ್ ಕಾಕ್ ಟೈಲ್ ರೆಡಿ.

7. ಆಪಲ್ ಮಾರ್ಟಿನ್
ಸಾಮಾಗ್ರಿಗಳು- ಆಪಲ್ ಜ್ಯೂಸ್, ಜಿನ್, 6-7 ಹಿಸುಕಿದ ತುಳಸಿ ಎಲೆಗಳು, 2 ಚಮಚ ನಿಂಬೆ ರಸ, ಸಕ್ಕರೆ ಸಿರಪ್ 1 ಚಮಚ, ಐಸ್ ಕ್ಯೂಬ್
ತಯಾರಿಸು ವಿಧಾನ -ಐಸ್ ಕ್ಯೂಬ್ ಬಿಟ್ಟು ಎಲ್ಲಾ ಸಾಮಾಗ್ರಿಗಳನ್ನು ಮಿಕ್ಸಿಯಲ್ಲಿ ಹಾಕಿ 2 ಸೆಕೆಂಡ್ ಆಡಿಸಿ ಗ್ಲಾಸ್ ಗೆ ಸುರಿದರೆ ಆಪಲ್ ಮಾರ್ಟಿನ್ ಕಾಕ್ ಟೈಲ್ ರೆಡಿ.

8. ಚಾಕಲೇಟ್ ಮಾರ್ಟಿನ್
ಸಾಮಾಗ್ರಿಗಳು-180ml ವೆನಿಲ್ಲಾ ವೋಡ್ಕಾ, 120ml ಐರಿಷ್ ಕ್ರೀಮ್ ಲಿಕ್ಕರ್, 4 ಔನ್ಸ್ ಚಾಕಲೇಟ್ ಮಿಲ್ಕ್, ಚಾಕಲೇಟ್ ಸಿರಪ್, ಐಸ್ ಕ್ಯೂಬ್ಸ್, ವೈಪ್ಡ್ ಕ್ರೀಮ್, 1 ಚಾಕಲೇಟ್
ತಯಾರಿಸುವ ವಿಧಾನ-ಕಾಕ್ ಟೈಲ್ ಗ್ಲಾಸ್ ಅನ್ನು ಫ್ರಿಜ್ ನಲ್ಲಿಡಬೇಕು, ಒಂದು ದೊಡ್ಡ ಚಮಚ ಚಾಕಲೇಟ್ ಸಿರಪ್ ಅನ್ನು ಗ್ಲಾಸ್ ನಲ್ಲಿ ಹಾಕಬೇಕು.
ಮಿಕ್ಸಿಯಲ್ಲಿ ಚಾಕಲೇಟ್ ಲಿಕ್ಕರ್, ಐರಿಷ್ ಕ್ರೀಮ್ ಲಿಕ್ಕರ್, ಚಾಕಲೇಟ್ ಮಿಲ್ಕ್, ವೆನಿಲ್ಲಾ ವೋಡ್ಕಾ, ಐಸ್ ಕ್ಯೂಬ್ಸ್ ಹಾಕಿ ಆಡಿಸಬೇಕು. ನಂತರ ಅದನ್ನು ಕಾಕ್ ಟೈಲ್ ಗ್ಲಾಸ್ ಗೆ ಸುರಿದು ವೈಪ್ಡ್ ಕ್ರೀಮ್ ನಿಂದ ಅಲಂಕರಿಸಿ, ಚಾಕಲೇಟ್ ಅನ್ನು ಪುಡಿ ಮಾಡಿ ಹಾಕಿದರೆ ಮಾರ್ಟಿನ್ ಚಾಕಲೇಟ್ ರೆಡಿ.

9.ರೋಮಿಯೋ ಜೂಲಿಯೆಟ್
ಬೇಕಾಗುವ ಸಾಮಾಗ್ರಿಗಳು-60ml ಜಿನ್, 1 ಚಮಚ ನಿಂಬೆ ರಸ, 2-3 ಚಮಚ ಸಕ್ಕರೆ ಪಾಕ, 3 ಹನಿ ರೋಸ್ ವಾಟರ್, 3 ಹನಿ ಪಿಂಕ್ ಜಿನ್, 3 ತುಂಡು ಸೌತೆಕಾಯಿ, 6 ಪುದೀನಾ ಎಲೆ, ಚಿಟಿಕೆಯಷ್ಟು ಉಪ್ಪು
ತಯಾರಿಸುವ ವಿಧಾನ- ಪುದೀನಾ ಎಲೆ ಬಿಟ್ಟು ಉಳಿದೆಲ್ಲಾ ಸಾಮಾಗ್ರಿಗಳನ್ನು ಕಾಕ್ ಟೈಲ್ ಗ್ಲಾಸ್ ಗೆ ಹಾಕಿ ಸ್ವಲ್ಪ ಇಡಬೇಕು. ನಂತರ ಒಮ್ಮೆ ತಿರುಗಿಸಿ, ಪುದೀನಾ ಎಲೆಯಿಂದ ಅಲಂಕರಿಸಿದರೆ ರೋಮಿಯೋ ಜೂಲಿಯೆಟ್ ಕಾಕ್ ಟೈಲ್ ರೆಡಿ

10.ಎಗ್ ನೋಗ್ ಕಾಕ್ ಟೈಲ್
ಸಾಮಾಗ್ರಿಗಳು- ಮೊಟ್ಟೆ 12( ಹಳದಿಯನ್ನು ಬಿಳಿಯಿಂದ ಪ್ರತ್ಯೇಕಿಸಿರಬೇಕು), ಹಾಲು 6 ಕಪ್, ಫ್ರೆಶ್ ಕ್ರೀಮ್ 2 ಕಪ್, ಬ್ರಾಂಡಿ 1 ಕಪ್, ಬೋರ್ ಬೋನ್ ವಿಸ್ಕಿ 2 ಕಪ್, ನಟ್ ಮಗ್ 2 ಚಮಚ
ತಯಾರಿಸುವ ವಿಧಾನ-ಮೊಟ್ಟೆಯ ಹಳದಿಗೆ ಸಕ್ಕರೆ ಹಾಕಿ ಅದು ಹಳದಿ, ಕಂದು ಬಣ್ಣ ಬರುವವರೆಗೆ ಕದಡಬೇಕು. ನಂತರ ನಿಧಾನಕ್ಕರ ಬೋರ್ ಬೋನ್ ಮತ್ತು ಬ್ರಾಂಡಿ ಅದಕ್ಕೆ ಹಾಕಿ ತಿರುಗಿಸಬೇಕು. ನಂತರ ಈ ಮಿಶ್ರಣವನ್ನು 4-5 ಗಂಟೆಗಳ ಕಾಲ ಫ್ರಿಜ್ ನಲ್ಲಿಡಬೇಕು.
ಇದನ್ನು ಸರ್ವ್ ಮಾಡುವ ಸ್ವಲ್ಪ ಮೊದಲು ಹಾಲನ್ನು ನಿಧಾನಕ್ಕೆ ಮಿಶ್ರಣಕ್ಕೆ ಸುರಿದು ನಕ್ಷತ್ರಮೊಗ್ಗು (ನಟ್ ಮಗ್) ಅನ್ನು ಹುರಿದು ಹಾಕಬೇಕು. ಈಗ ಬೇರೆ ಪಾತ್ರೆಯಲ್ಲಿ ಮೊಟ್ಟೆಯ ಬಿಳಿ ಮತ್ತು ಕ್ರೀಮ್ ಹಾಕಿ ವೇಗವಾಗಿ ಕದಡಬೇಕು. ನಂತರ ಮೊದಲು ಮೊಟ್ಟೆಯ ಬಿಳಿಯನ್ನು, ನಂತರ ಕ್ರೀಮ್ ಅನ್ನು ಡ್ರಿಂಕ್ ಮಿಶ್ರಣಕ್ಕೆ ಸುರಿಯಬೇಕು. ನಂತರ ಉಳಿದ ನಟ್ ಮಗ್ ಪುಡಿ ಮತ್ತು ಸಕ್ಕರೆ ಉದುರಿಸಿದರೆ ಎಗ್ ನೋಗ್ ಕಾಕ್ ಟೈಲ್ ರೆಡಿ.



Click it and Unblock the Notifications











