Latest Updates
-
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ!
ಕಾಫಿ ಮಾಡುವ ವಿಧಾನದಲ್ಲೂ ಅದೆಷ್ಟು ಬಗೆ!

ಬಟ್ಟೆಯಲ್ಲಿ ಕಾಫಿ ಸೋಸುವ ವಿಧಾನ : ಮೊದಲು ನೀರನ್ನು ಹಿಡಿ ಮೂತಿ ಇರುವ ಪಾತ್ರೆಯಲ್ಲಿ ಕುದಿಸಿ, ಕಾಫಿ ಸೋಸಲೆಂದೇ ಇರುವ ಶುಭ್ರಬಟ್ಟೆಯನ್ನು ಖಾಲಿ ಪಾತ್ರೆಯ ಮೇಲೆ ಹರಡಿ ಕೈಯಿಂದ ಸಣ್ಣ ಹಳ್ಳ ಮಾಡಿ, ಅಗತ್ಯಕ್ಕೆ ತಕ್ಕಷ್ಟು ಕಾಫಿ ಪುಡಿ ಹಾಕಿ ಅದರ ಮೇಲೆ ಬಿಸಿನೀರು ಸುರಿದು ಚೆನ್ನಾಗಿ ಹಿಂಡಿ ಕಾಫಿ ಡಿಕಾಕ್ಷನ್ ತಯಾರಿಸಿ. ಹಾಲು, ಸಕ್ಕರೆ ಬೆರೆಸಿ ಅಷ್ಟೆ ಹಬೆಯಾಡುವ ಬಿಸಿಬಿಸಿ ಕಾಫಿ ಸಿದ್ಧ.
ಪರ್ಕ್ಯೂಲೇಟರ್ ಪದ್ಧತಿ : ಅಂಗಡಿಯಲ್ಲಿ ದೊರೆಯುವ ಕಾಫಿ ಡಿಕಾಕ್ಷನ್ ತಯಾರಿಸುವ ಒಂದು ಸಾಧನ 'ಪರ್ಕ್ಯೂಲೇಟರ್' . ಇದರಲ್ಲಿ ಎರಡು ಭಾಗ ಇರುತ್ತದೆ. ಕೆಳ ಭಾಗದಲ್ಲಿ ನೀರು ಹಾಕಿ, ಮಧ್ಯಭಾಗದಲ್ಲಿರುವ ಜಾಗದಲ್ಲಿ ಕಾಫಿ ಪುಡಿ ಹಾಕಿ, ಉರಿಯುವ ಒಲೆಯ ಮೇಲಿಟ್ಟರೆ, ನೀರು ಚೆನ್ನಾಗಿ ಕಾದ ನಂತರ ಮೇಲ್ಭಾಗದ ಕೋನದಾಕಾರದ ಕೊಳವೆಯಿಂದ ಹದವಾದ ಡಿಕಾಕ್ಷನ್ ಮೇಲೆ ಬರುತ್ತದೆ ಹಾಗೂ ಮೇಲ್ಭಾಗದ ಜಾರ್‌ನಲ್ಲಿ ಶೇಖರವಾಗುತ್ತದೆ. ಇದಕ್ಕೆ ಮಾಮೂಲಿನಂತೆ ಹಾಲು ಸಕ್ಕರೆ ಬೆರೆಸಿದರೆ ಕಾಫಿ ರೆಡಿ.
ಫಿಲ್ಟರ್ ವಿಧಾನ : ಫಿಲ್ಟರ್ ವಿಧಾನ ಬಹು ಜನಜನಿತ. ಪಾತ್ರೆ ಅಂಗಡಿಯಲ್ಲಿ ದೊರಕುವ ಫಿಲ್ಟರ್ ತಂದು ಮೇಲ್ಭಾಗದ ಫಿಲ್ಟರ್ ಜಾರ್‌ಗೆ ಕಾಫಿ ಪುಡಿ ಹಾಕಿ, ಅದರ ಮೇಲೆ ರಂಧ್ರಗಳಿರುವ ಒತ್ತಡದ ಜಾಲರಿ ಇಟ್ಟು ಬಿಸಿನೀರು ಹಾಕಿ ಮುಚ್ಚಳ ಮುಚ್ಚಿಟ್ಟರೆ ತಾನಾಗೇ ಕಾಫಿ ಡಿಕಾಕ್ಷನ್ ಕೆಳ ಭಾಗದ ಪಾತ್ರೆಗೆ ಇಳಿದಿರುತ್ತದೆ.
ಸಿದ್ಧವಾದ ಕಾಫಿ ಡಿಕಾಕ್ಷನ್‌ಗೆ ಹಾಲು, ಸಕ್ಕರೆ ಬೆರೆಸಿದರೆ ಕಾಫಿ ಕುಡಿಯಲು ರೆಡಿ.
ಸ್ಟ್ರಾಂಗ್ ಕಾಫಿ : ಯಾವುದೇ ವಿಧಾನ ಬಳಸಿದರೂ 20 ಗ್ರಾಂ ಕಾಫಿ ಪುಡಿಗೆ 300 ಮಿ.ಲೀಟರ್ ಕುದಿಯುವ ನೀರು ಹಾಕಬೇಕು. ಈ ಪ್ರಮಾಣ ಕಾಯ್ದುಕೊಂಡಲ್ಲಿ ರುಚಿಯಾದ ಕಾಫಿ ತಯಾರಿಸುವುದು ಸುಲಭ. ನಿಮಗೆ ಲೈಟ್, ಸ್ಟ್ರಾಂಗ್, ಎಕ್ಸ್ಟ್ರಾ ಸ್ಟ್ರಾಂಗ್ ಕಾಫಿ ಅಗತ್ಯ ಇದ್ದರೆ, ನಿಮ್ಮ ರುಚಿಗೆ ತಕ್ಕಂತೆ ಕಾಫಿ ಪೌಡರ್ ಬಳಸಬೇಕು. ಎಲೆಕ್ಟ್ರಿಕ್ ಫಿಲ್ಟರ್ ಬಳಸುವವರು ಕೈಪಿಡಿಯಲ್ಲಿನ ಸೂತ್ರ ಅನುಸರಿಸಬೇಕು.
ಉತ್ತಮ ಕಾಫಿ ತಯಾರಿಕೆಗೆ ಸರಳ ಸೂತ್ರಗಳು :
* ಕಾಫಿ ಪುಡಿ ಕೊಳ್ಳುವಾಗಲೇ ತಾಜಾ ಹಾಗೂ ಉತ್ತಮ ಕಾಫಿ ಪುಡಿ ಕೊಳ್ಳಿ.
* ನೀವು ಕೊಂಡ ಕಾಫಿಯ ಪರಿಮಳ ಹಾಳಾಗದಂತೆ ಭದ್ರವಾಗಿ ಗಾಳಿಯಾಡದಂತೆ ಮುಚ್ಚಿಡಿ.
* ಕಾಫಿ ಡಿಕಾಕ್ಷನ್ ಮಾಡುವ ಮುನ್ನ ಫಿಲ್ಟರ್ ಅನ್ನು ಚೆನ್ನಾಗಿ ಬಿಸಿನೀರಲ್ಲಿ ತೊಳೆಯಿರಿ. ಇದರಿಂದ ರಂಧ್ರಗಳು ತೆರೆದು ಡಿಕಾಕ್ಷನ್ ಸರಾಗವಾಗಿ ಇಳಿಯುತ್ತದೆ.
* ತಾಜಾ ಹಾಲು, ತಾಜಾ ಕಾಫಿ ಪೌಡರ್, ತುಸು ಕಂದು ಬಣ್ಣ ಮಿಶ್ರಿತ ಸಕ್ಕರೆಯ ಕಾಫಿ ಬಲು ರುಚಿ.
* ಒಮ್ಮೆ ಬಳಸಿದ ಕಾಫಿ ಪೌಡರ್ ಮತ್ತೊಮ್ಮೆ ಬಳಸಬೇಡಿ. ಫಿಲ್ಟರ್‌ನಲ್ಲಿರುವ ಹಳೆ ಪೌಡರ್ ಮೇಲೆ ಹೊಸ ಪೌಡರ್ ಹಾಕಿ ಡಿಕಾಕ್ಷನ್ ತಯಾರಿಸಬೇಡಿ.
* ಫಿಲ್ಟರ್‌ನಲ್ಲಿ ಕಾಫಿ ಪೌಡರ್ ಜತೆ ಪುಡಿ ಮಾಡಿದ ದಾಲ್ಚಿನಿ, ಏಲಕ್ಕಿ, ತುಳಸಿ ಕುಡಿ ಸೇರಿಸಿದರೆ, ಕಾಫಿಯ ಸ್ವಾದ ಮತ್ತಷ್ಟು ಹೆಚ್ಚುತ್ತದೆ.
* ಜಜ್ಜಿದ ಶುಂಠಿಯನ್ನೂ ಪೌಡರ್ ಜತೆ ಬಳಸಿದರೆ, ನೆಗಡಿ ಕಡಿಮೆ ಆಗುತ್ತದೆ.
* ಡಿಕಾಕ್ಷನ್ ಮಾಡುವ ಮುನ್ನ ಕಾಫಿ ಪುಡಿಯ ಮೇಲೆ ಸ್ವಲ್ಪ ಬಿಸಿನೀರು ಇಲ್ಲವೆ ತಣ್ಣೀರು ಚುಮುಕಿಸಿದರೆ, ಏಕಪ್ರಕಾರ ಪಾನೀಯ ಪಡೆಯಬಹುದು.
* ತುಂಬಾ ಸ್ಟ್ರಾಂಗ್ ಕಾಫಿ ಬೇಕಿದ್ದರೆ ಕಾಫಿ ಪುಡಿ ಜತೆ ಕೆಲವು ಹರಳು ಸಕ್ಕರೆ ಬೆರೆಸಿ.
* ಒಮ್ಮೆ ಮಾಡಿದ ಕಾಫಿಯನ್ನು ಯಾವುದೇ ಕಾರಣಕ್ಕೂ ಮತ್ತೆ ಬಿಸಿ ಮಾಡಿ ಕುಡಿಯಬೇಡಿ.
(ದಟ್ಸ್‌ಕನ್ನಡ ಪಾಕಶಾಲೆ)
ಪೂರಕ ಓದಿಗೆ:



Click it and Unblock the Notifications
