Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಎಲ್ಲರೂ ಬಾದಾಮಿ ಹಾಲೇ ಕುಡಿಯಿರಿ-ಸಂಪಾದಕ

ಈಗೇನು ಎಲ್ಲ ಕಡೆ ಬಾದಾಮಿ ಪೌಡರ್ ಸಿಗುತ್ತೆ. ಮನೆಗೆ ತಂದು ಒಂದೇ ಕ್ಷಣಕ್ಕೆ ಮಾಡಿ ಜಂ ಅಂತ ಕುಡಿದುಬಿಡಬಹುದು ಅಂತ ನೀವು ಮನಸಲ್ಲೇ ಲೆಕ್ಕಾಚಾರ ಹಾಕೋತಿರಬಹುದು. ಆದ್ರೆ ಆ ಯೋಚನೆನ ಸ್ವಲ್ಪ ಹಿಂದಕ್ಕೆ ಸರಿಸಿ. ಅಲ್ಲಿ ಇಲ್ಲಿ ಸಿಗೋ ಕೃತಕ ವಸ್ತು ಬೆರೆಸಿ ಮಾಡೊ ಬಾದಾಮಿ ಹಾಲು ಬಿಟ್ಟು, ಮನೆಯಲ್ಲೇ ರುಚಿಕಟ್ಟಾದ, ಆರೋಗ್ಯಪೂರ್ಣವಾದ ಬಾದಾಮಿ ಪೌಡರ್ ಮಾಡಿ ಕುಡಿಯೋದರ ಬಗ್ಗೆ ಯೋಚನೆ ಮಾಡಿ.
ಮನೆಯಲ್ಲೇ ಹೇಗೆ ರುಚಿಕರವಾದ ಬಾದಾಮಿ ಹಾಲು ತಯಾರಿಸಬಹುದು? ತುಂಬಾ ಸಮಯ ಹಿಡಿಯುತ್ತೇನೊ ಅಂತ ಅಂದ್ಕೊಬೇಡಿ. ಅದು ತುಂಬಾ ಸರಳ. ಬಾದಾಮಿ ಹಾಲು ಮಾಡಲು ಬೇಕಾಗುವ ಸಾಮಾನುಗಳು: ಒಳ್ಳೆ ಗುಣಮಟ್ಟದ ಬಾದಾಮಿ ಬೀಜ, ಸ್ವಲ್ಪ ಪಿಸ್ತ, ಕಲ್ಲುಸಕ್ಕರೆ, ಯಾಲಕ್ಕಿ, ಕೇಸರಿ, ಸ್ವಲ್ಪ ಉಪ್ಪು. .
ಮಾಡುವ ವಿಧಾನ: ಚೆನ್ನಾಗಿರುವ ಬಾದಾಮಿ ಬೀಜವನ್ನು ಆರಿಸಿಕೊಂಡು ಬಾಣಲೆಯಲ್ಲಿ ಬೆಚ್ಚಗೆ ಹುರಿದುಕೊಳ್ಳಬೇಕು. ಹುರಿದುಕೊಂಡ ಬಾದಾಮಿ ಸಿಪ್ಪೆಯನ್ನು ಸುಲಿದು ಅದರೊಂದಿಗೆ ಪಿಸ್ತ, ಸಿಪ್ಪೆ ಬಿಡಿಸಿದ ಯಾಲಕ್ಕಿ, ಕೇಸರಿ, ಸ್ವಲ್ಪ ಉಪ್ಪು ಬೆರೆಸಿ ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿಕೊಳ್ಳಬೇಕು. ಆ ನಂತರ ಮುಂಚೆಯೇ ಪುಡಿಮಾಡಿಟ್ಟುಕೊಂಡಿದ್ದ ಕೆಂಪು ಕಲ್ಲುಸಕ್ಕರೆಯನ್ನು ಬೆರೆಸಬೇಕು. ಈಗ ಹಾಲಿಗೆ ಈ ಬಾದಾಮಿ ಮಿಶ್ರಣ ಹಾಕಿ ಕುಡಿದು ನೋಡಿ. ಆಹಾ ಅಂತ ಬಾಯಿ ಚಪ್ಪರಿಸಿಕೊಂಡು ಫುಲ್ ಖುಷ್ ಆಗಿ ಹೋಗ್ತೀರ. ಚಳಿಗಾಲಕ್ಕೆ ಬಿಸಿ ಬಿಸಿಯಾಗಿ, ಬೇಸಿಗೆಯಲ್ಲಿ ಫ್ರೀಜರ್ ನಲ್ಲಿಟ್ಟು ತಣ್ಣಗೆ ಬಾದಾಮಿ ಹಾಲು ಕುಡಿದು ಹೊಟ್ಟೆ ತಣ್ಣಗೆ ಮಾಡಿಕೊಳ್ಳಬಹುದು..
ಒಳ್ಳೇದು ಮಾಡಿದವರಿಗೆ ಹೊಟ್ಟೆ ತುಂಬಾ ಹಾಲು ಕುಡಿದು ಸಂತೋಷವಾಗಿರು ಅಂತ ಹಾರೈಸುತ್ತಿದ್ದರು ನಮ್ಮ ಹಿರಿಯರು. ಇದೀಗ ಹೊಟ್ಟೆ ತುಂಬಾ ಬಾದಾಮಿ ಹಾಲು ಕುಡಿದು ಸಂತೋಷವಾಗಿರಿ ಅನ್ನೋದು ನಮ್ಮ ಸರದಿ.
;


Click it and Unblock the Notifications
