For Quick Alerts
ALLOW NOTIFICATIONS  
For Daily Alerts

ದೀಪಾವಳಿ ಸ್ಪೆಷಲ್ ರೆಸಿಪಿ: ಬುಲುಶಾಹಿ ಸ್ವೀಟ್ಸ್ ಮಾಡುವುದು ಬಲು ಸುಲಭ

Posted By:
|

ದೀಪಾವಳಿ ಸಡಗರ ಕಳೆಗಟ್ಟಿದೆ. ದೀಪಾವಳಿಗೆ ಎಷ್ಟು ಬಗೆಯ ಸ್ವೀಟ್ಸ್‌ ಮಾಡಿದರು ಸಾಕೆನಿಸುವುದಿಲ್ಲ. ತುಂಬಾ ಬಗೆಯ ಸ್ವೀಟ್ಸ್‌ ಇದ್ದರೆ ಹಬ್ಬಕ್ಕೊಂದು ಕಳೆ. ಅಲ್ಲದೆ ಹಬ್ಬದ ಸಮಯದಲ್ಲಿ ತುಂಬಾ ನೆಂಟರಿಷ್ಟರು ಬರುತ್ತಾರೆ, ಅವರಿಗೆಲ್ಲಾ ನೀಡಲು ತುಂಬಾ ಸ್ವೀಟ್ಸ್ ಬೇಕು. ಬೇಕರಿಯಲ್ಲಿ ಕೊಂಡು ತರುವುದಕ್ಕಿಂತ ನಾವೇ ಸ್ವೀಟ್ಸ್‌ ಮಾಡಿದರೆ ಹಬ್ಬದ ಅಡುಗೆ ಅನಿಸುವುದು ಅಲ್ವಾ? ಈ ದೀಪಾವಳಿ ನೀವು ಮಾಡುವ ಸಿಹಿ ಅಡುಗೆಗಳ ಲಿಸ್ಟ್‌ನಲ್ಲಿ ಬಲುಸಾಹಿ ರೆಸಿಪಿ ಸೇರಿಸಬಹುದು. ಇದನ್ನು ತಯಾರಿಸುವುದು ತುಂಬಾ ಸುಲಭವಾಗಿದ್ದು ರುಚಿಯೂ ಸೂಪರ್ ಆಗಿರುತ್ತೆ.

Deepavali Special Recipe

ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

Balushahi Recipe, ಬಲುಶಾಹಿ ಸ್ವೀಟ್ಸ್ ರೆಸಿಪಿ
Balushahi Recipe, ಬಲುಶಾಹಿ ಸ್ವೀಟ್ಸ್ ರೆಸಿಪಿ
Prep Time
30 Mins
Cook Time
1H0M
Total Time
1 Hours30 Mins

Recipe By: Reena TK

Recipe Type: sweets

Serves: 10

Ingredients
  • ಬೇಕಾಗುವ ಸಾಮಗ್ರಿ

    ಮೈದಾ 4 ಕಪ್

    ತುಪ್ಪ 3/4 ಕಪ್

    ಬೇಕಿಂಗ್‌ ಸೋಡಾ 1/2 ಚಮಚ

    ಮೊಸರು 1/2 ಚಮಚ

    ಸಕ್ಕರೆ 3 ಕಪ್

    ನೀರು 6 ಕಪ್‌

    ಡೀಪ್‌ ಫ್ರೈಗೆ ಎಣ್ಣೆ

    ಸ್ವಲ್ಪ ಪಿಸ್ತಾ

Red Rice Kanda Poha
How to Prepare
  • ಬೇಕಾಗುವ ಸಾಮಗ್ರಿ

    * ಮೈದಾ, ತುಪ್ಪ, ಅಡುಗೆ ಸೋಡಾ, ಮೊಸರು , ಬಿಸಿ ನೀರು ಹಾಕಿ ಚೆನ್ನಾಗಿ ಕಲೆಸಿ.

    * ಮಿಶ್ರಣವನ್ನು ತುಂಬಾ ಚೆನ್ನಾಗಿ ಕಲೆಸಬೇಡಿ, ನಂತರ 20 ನಿಮಿಷ ಇಡಿ.

    * ಸಕ್ಕರೆ ಪಾಕ ತಯಾರಿಸಿ ಇಡಿ.

    * ಈಗ ಬಾಣಲೆಗೆ ಎಣ್ಣೆ ಹಾಕಿ ಕುದಿಸಿ.

    * ಈಗ ಮಿಶ್ರಣದಿಂದ ಸ್ವಲ್ಪ ಹಿಟ್ಟು ತೆಗೆದು ನಿಂಬೆ ಹಣ್ಣು ಗಾತ್ರದಲ್ಲಿ ಉಂಡೆ ಕಟ್ಟಿ ಮೆಲ್ಲನೆ ತಟ್ಟಿ ಮಧ್ಯದಲ್ಲಿ ರಂಧ್ರ ಮಾಡಿ ಎಣ್ಣೆಗೆ ಬಿಡಿ. ಈ ರೀತಿ ಪ್ರತೀ ಉಂಡೆಯನ್ನು ತಟ್ಟಿ ಮಧ್ಯದಲ್ಲಿ ರಂಧ್ರ ಮಾಡಿ ಎಣ್ಣೆಯಲ್ಲಿ ಕರಿಯಿರಿ.

    * ಈಗ ಕರಿದ ತಿಂಡಿಗಳನ್ನು ಮಂದವಾದ ಸಕ್ಕರೆ ಪಾಕದಲ್ಲಿ ಸ್ವಲ್ಪ ಹೊತ್ತು ಹಾಕಿಡಿ.

    * ನಂತರ ಅದನ್ನು ತೆಗೆದು ತಟ್ಟೆಗೆ ಹಾಕಿ ಅದರ ಮೇಲೆ ಸ್ವಲ್ಪ ಪಿಸ್ತಾ ಚೂರುಗಳು ಹಾಗೂ ಒಣ ರೋಸ್ ದಳಗಳನ್ನು ಉದುರಿಸಿದರೆ ಬಲುಶಾಹಿ ಸ್ವೀಟ್ಸ್ ರೆಡಿ.

Instructions
  • ಸಲಹೆ: ಬಲುಶಾಹಿ ಮೊಸರನ್ನು ಸೇರಿಸುವ ಮುನ್ನ ಚೆನ್ನಾಗಿ ಕದಡಬೇಕು. ಇದರಿಂದ ಬಲುಶಾಹಿ ಒಳಗಡೆ ತುಂಬಾ ಮೃದು- ಮೃದುವಾಗಿರುತ್ತೆ.
Nutritional Information
[ 4 of 5 - 46 Users]
Story first published: Friday, October 29, 2021, 11:08 [IST]
X
Desktop Bottom Promotion