Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಹಸಿರು ಟೊಮ್ಯಾಟೋ ಚಟ್ನಿ : ರೊಟ್ಟಿ-ಚಪಾತಿಗೆ ಸಾಥ್
ನಿಮಗೆ ಈ ಚಟ್ನಿ ತುಂಬಾ ಖಾರವೆನಿಸಿದರೆ, ಸ್ವಲ್ಪ ಬೆಲ್ಲ ಹಾಕಿ ಖಾರ ಕಡಿಮೆ ಮಾಡಿಕೊಳ್ಳಬಹುದು.
ಬೇಕಾಗುವ ಸಾಮಗ್ರಿಗಳು :
- 4 ಮಧ್ಯಮ ಗಾತ್ರದ ಟೊಮ್ಯಾಟೋ ಕಾಯಿಗಳು
- 2 ಚಮಚ ಕತ್ತರಿಸಿದ ಕೋತಂಬರಿ
- 2-4 ಚಮಚ ಕಡಲೇಕಾಯಿ ಎಣ್ಣೆ
- 1 ಚಮಚ ಜೀರಿಗೆ
- 1 ಚಮಚ ಎಳ್ಳು
- 4-5 ಎಸಳು ಬೆಳ್ಳುಳ್ಳಿ(ಕಚ್ಚರಿಸಿದ್ದು)
- 2-3 ಹಸಿಮೆಣಸಿನಕಾಯಿ
- 1 ಚಮಚ ಸಾಸಿವೆ
- 1 ಚಿಟಿಕೆ ಇಂಗು
- 1 ಕಡ್ಡಿ ಕರಿಬೇವು
ಮಾಡುವ ವಿಧಾನ :
ಟೊಮ್ಯಾಟೋಗಳನ್ನು ಸ್ವಲ್ಪ ಮಧ್ಯಮ ಗಾತ್ರದಲ್ಲಿ ಕತ್ತರಿಸಿಕೊಳ್ಳಿ. ಒಲೆಯ ಮೇಲೆ ಹಂಚು ಕಾಯಲು ಇಡಿ. ಕಾದ ಹಂಚಿನಲ್ಲಿ ಕತ್ತರಿಸಿದ ಟೊಮ್ಯಾಟೋ ಹಾಕಿ, ಕಂದು ಬಣ್ಣ ಬರುವವರೆಗೆ ಹುರಿದುಕೊಳ್ಳಿ. ಟೊಮ್ಯಾಟೋ ಜೊತೆಗೆ ಕೊತ್ತಂಬರಿ, ಬೆಳ್ಳುಳ್ಳಿ, ಎಳ್ಳು, ಜೀರಿಗೆ, ಹಸಿಮೆಣಸಿನಕಾಯಿ ಹುರಿದುಕೊಳ್ಳಿ.
ಈ ಪದಾರ್ಥಗಳನ್ನು ಹುರಿದುಕೊಳ್ಳುವಾಗ ಆಗಷ್ಟು-ಈಗಿಷ್ಟು ಕಡಲೇಕಾಯಿ ಎಣ್ಣೆ ಬಳಸಿಕೊಳ್ಳಿ. ಹುರಿದುಕೊಂಡ ಎಲ್ಲ ಪದಾರ್ಥಗಳನ್ನು ಮಿಕ್ಸರ್ಗೆ ಹಾಕಿ ಹದವಾಗಿ ರುಬ್ಬಿಕೊಳ್ಳಿ.
ಆನಂತರ ಒಂದೆರಡು ಚಮಚ ಕಡಲೇಕಾಯಿ ಎಣ್ಣೆಯಲ್ಲಿ ಎಳ್ಳು, ಜೀರಿಗೆ, ಸಾಸಿವೆ, ಇಂಗು ಹಾಕಿ ಒಗ್ಗರಣೆ ಹಾಕಿ. ಒಗ್ಗರಣೆಗೆ ಕರಿಬೇವು ಬೇಕಿದ್ದರೆ ಬಳಸಿಕೊಳ್ಳಿ. ರುಬ್ಬಿಕೊಂಡ ಮಿಶ್ರಣಕ್ಕೆ ಒಗ್ಗರಣೆ ಹಾಕಿ ಬೆರಸಿಕೊಳ್ಳಿ. ಈಗ ಚಟ್ನಿಯೇನೋ ರೆಡಿ. ಆದರೆ ನಿಮಗೆ ತುಂಬಾ ಖಾರವೆನಿಸಿದರೆ, ಸ್ವಲ್ಪ ಬೆಲ್ಲ ಹಾಕಿ ಖಾರ ಕಡಿಮೆ ಮಾಡಿಕೊಳ್ಳಬಹುದು.
ಈ ಚಟ್ನಿ ರೊಟ್ಟಿ, ಚಪಾತಿ, ದೋಸೆ ಜೊತೆಯಲ್ಲಿ ತಿನ್ನಲು ರುಚಿಕಟ್ಟಾಗಿರುತ್ತದೆ. ಅನ್ನದೊಂದಿಗೂ ನೆಂಜಿಕೊಂಡು ತಿನ್ನಬಹುದು.



Click it and Unblock the Notifications
