Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಟೊಮೊಟೊ ಗೊಜ್ಜು
ಟೊಮೊಟೊ ಹಣ್ಣಿನಿಂದ ತುಂಬಾ ಡಿಶಸ್ ಮಾಡಬಹುದು, ಅದರಲ್ಲಿ ಇದು ಒಂದು. ಇದು ಚಪಾತಿಗೆ ನೆಂಚಿಕೊಳ್ಳಲು ಬಲು ಚೆಂದ. ಬೇಗ ತಯಾರಿಸಬಹುದು.
- ಹೊಸಮನೆ ಕುಮುದಾ ಶಂಕರ್, ಜೆಡ್ಡಾ, ಸೌದಿ ಅರೇಬಿಯಾ
ಬೇಕಾಗುವ ಪದಾರ್ಥಗಳು :
ಹಣ್ಣಾಗಿರುವ ಟೊಮೊಟೊ 4ರಿಂದ 5
ಈರುಳ್ಳಿ 2
ಹಸಿಮೆಣಸಿನಕಾಯಿ 2
ಕರಿಬೇವು(ಬೇಕಾದರೆ)
ಎಣ್ಣೆ
ಸಾಸಿವೆ
ಉದ್ದಿನ ಬೇಳೆ
ಕೆಂಪುಮೆಣಸಿನ ಪುಡಿ
ಉಪ್ಪು
ಕೊತ್ತುಂಬರಿ ಸೊಪ್ಪು
ಮಾಡುವ ವಿಧಾನ :
ಮೊದಲಿಗೆ ಈರುಳ್ಳಿ, ಹಸಿಮೆಣಸಿನಕಾಯಿ , ಕೊತ್ತುಂಬರಿ ಹೆಚ್ಚಿಕೊಳ್ಳಿ.
ಒಗ್ಗರಣೆಗೆ ಪಾತ್ರೆ ಇಟ್ಟು ಎಣ್ಣೆ ಹಾಕಿ, ಕಾದ ಬಳಿಕ ಸಾಸಿವೆ,ಉದ್ದಿನಬೇಳೆ, ಕರಿಬೇವು, ಹೆಚ್ಚಿದ ಈರುಳ್ಳಿ, ಮೆಣಸಿನಕಾಯಿ ಹಾಕಿ ಬಾಡಿಸಿ, ನಂತರ ಟೊಮೊಟೊ ಹಾಕಿ ಚೆನ್ನಾಗಿ ತಿರುವಿ. ಟೊಮೊಟೊ ಬೇಯಲು ಬಿಡಿ.
ಸ್ವಲ್ಪ ಹೊತ್ತು ಎಣ್ಣೆಯಲ್ಲಿ ಬೆಂದ ನಂತರ ತೆಳುವಾಗಿ, ಹೆಚ್ಚಾಗಿ ಬೇಕಾಗಿದ್ದರೆ ಸ್ವಲ್ಪ ನೀರು ಹಾಕಿ, ಉಪ್ಪು ಮತ್ತು ಕೆಂಪುಮೆಣಸಿನಪುಡಿ ಹಾಕಿ ಚೆನ್ನಾಗಿ ತಿರುವಿ. ಸ್ವಲ್ಪ ಹೊತ್ತು ಹಾಗೆ ಬಿಟ್ಟು ನಂತರ ಕೊತ್ತುಂಬರಿ ಉದುರಿಸಿ. ಇದಕ್ಕೆ ಬೇಕಾದರೆ ಕೊಬ್ರಿ ತುರಿ ಇಲ್ಲಾ ಹಸಿಕಾಯಿತುರಿ ಹಾಕಿ ಬೆರಸಿ. ಇದು ಚಪಾತಿ ಮತ್ತು ಬ್ರೆಡ್ ಜೊತೆ ತಿನ್ನಲು ಚೆನ್ನಾಗಿರುತ್ತದೆ. ಬೇಗ ಕೂಡಾ ಆಗುತ್ತದೆ. ಉಪ್ಪು , ಖಾರ ಹೆಚ್ಚಾಗಿ ಹಾಕಿದರೆ ಅನ್ನಕ್ಕೂ ಕಲಸಿಕೊಂಡು ತಿನ್ನಬಹುದು.



Click it and Unblock the Notifications
